ಜಕ್ಕಣ್ಣನ 'ಏಕೋತ್ತರಶತಸ್ಥಲ' ವಚನಗಳು
| ಕಲ್ಲೊಳಗಣ ಪಾವಕನಂತೆ, ಉದಕದೊಳಗಣ ಪ್ರತಿಬಿಂಬದಂತೆ, ಬೀಜದೊಳಗಣ ವ್ಯಕ್ತದಂತೆ,
ಶಬ್ದದೊಳಗಣ ನಿಃಶಬ್ದದಂತೆ, ನೋಡಾ ಗೊಗೇಶ್ವರಾ, ನಿಮ್ಮ ಶರಣ ಸಂಬಂಧ. |
1.02 |
1 |
ಅಲ್ಲಮ | ಗುಹೇಶ್ವರಾ |
| ಇತರ ಆಕರ ಗ್ರಂಥಗಳು |
ಮಹದೇವಯ್ಯನ ಶೂನ್ಯಸಂಪಾದನೆ 1
ಹಲಗೆಯಾರ್ಯನ ಶೂನ್ಯಸಂಪಾದನೆ 1
|
ಉದಕದೊಳಗೆ ಬೈಚಿಟ್ಟ |ಬಯ್ಕೆ✻ಬಯಕೆ✻|ಯ ಕಿಚ್ಚಿನಂತಿದ್ದಿತ್ತು. |ಸಸಿ||ಶಶಿ| ಯೊಳಗಣ ಫಲದ ರುಚೆಯಂತಿದ್ದಿತ್ತು. ನನೆಯೊಳಗಣ ಪರಿಮಳದಂತಿದ್ದಿತ್ತು. ಕೂಡಲಸಂಗಮದೇವ ಕನ್ನೆಯ ಸ್ನೇಹದಂತಿದ್ದಿತ್ತು.
|
1.01 |
2 |
ಬಸವಣ್ಣ | ಕೂಡಲಸಂಗಮದೇವ |
| ಇತರ ಆಕರ ಗ್ರಂಥಗಳು |
ಲಿಂಗಲೀಲಾವಿಲಾಸ ಚಾರಿತ್ರ 71.03
|
| ಫಲದೊಳಗಣ
ಮಧುರ
ಗೋಪ್ಯದಂತ್ತಿದ್ದಿತ್ತು. ಚಂದ್ರಕಾಂತದ
ಉದಕದ
ಪರಿಯಂತಡಿದ್ದಿತ್ತು.
ಮಯೂರನ
ತತ್ತಿಯ
ಚಿತ್ರದಂತಿದ್ದಿತ್ತು.
ಶಿಶು
ಕಂಡ
ಕನಸಿನ
ತೆಱದಂತಿದ್ದಿತ್ತು.
ಇದು
ಕಾರಣ.
ಕೂಡಲಚೆನ್ನಸಂಗಯ್ಯಾ,
ಸದ್ಗುರುವಿನ ಚಿತ್ತದ ಪದದಂತಿದ್ದಿತ್ತು.
|
1.03 |
3 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಯ್ಯಾ |
|
|
| ಮರೀ[ಚಿ]ಯೊಳಡಗಿದ ಬಿಸಿಲಿನಂತಿದ್ದಿತ್ತು. ಕ್ಷೀರದೊಳಗಡಗಿದ ತುಪ್ಪದಂತಿದ್ದಿತ್ತು. ಚಿತ್ರಕನೊಳಡಗಿದ ಚಿತ್ರದಂತಿದ್ದಿತ್ತು ಆಲಿಯೊಳಡಗಿದ ತೇಜದ ಗೋಪ್ಯದಂತಿದ್ದಿತ್ತು ನುಡಿಯೊಳಡಗಿದ ಅರ್ಥದಂತಿದ್ದಿತ್ತು. ಕೂಡಲಸಂಗಯ್ಯಾ, ನಿಮ್ಮ ನಿಲವು.
|
1458.03 |
4 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಯ್ಯಾ |
| ಇತರ ಆಕರ ಗ್ರಂಥಗಳು |
ಲಿಂಗಲೀಲಾವಿಲಾಸ ಚಾರಿತ್ರ 72.04
|
| ಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ? ಬೀಜದೊಳಗಣ ವೃಕ್ಷ ಉಲಿಯಬಲ್ಲುದೆ?
ತೋಱಲಿಲ್ಲಾರಿಗೆಯೂ. ಗುಹೇಶ್ವರ ನಿಂದ ನಿಲವ ಅನುಭವಸುಖಿ ಬಲ್ಲ.
|
2.02 |
5 |
ಅಲ್ಲಮ | ಗುಹೇಶ್ವರ |
| ಇತರ ಆಕರ ಗ್ರಂಥಗಳು |
ಮಹದೇವಯ್ಯನ ಶೂನ್ಯಸಂಪಾದನೆ 2
ಹಲಗೆಯಾರ್ಯನ ಶೂನ್ಯಸಂಪಾದನೆ 2
|
| ಅಂಕುರ ಪಲ್ಲವ ತರು ಕುಸುಮ ಪರಿಮಳ ಫಲರಸ ಸಾರಾಯ ಇನಿತಿನಿತೆಲ್ಲಿದ್ದುರೊ-ಬೀಜ ಮೊಳೆಯಾಗದಂದು? ನಾಭಿ ಕಳೆಯದ ಪಶುವಿನ ಅಮೃತವೆಲ್ಲಿದ್ದುದೊ-ವೃಷಭ ಮುಟ್ಟದಂದು? ಘನಕುಚ ಯೌವನೆಯರ ಅವಸ್ಥಾಂತರದಲುದಿಸಿದ ಶಿಶುವೆಲ್ಲಿದ್ದುದೊ-ಕೊಡಗೂಸು ಕನ್ನೆಯಳಿಯದಂದು? ಶರಧಿಯ ಸಿಂಪಿನ ರತ್ನವೆಲ್ಲಿದ್ದುದೊ-ಸ್ವಾತಿಯ ಸಲಿಲವಿಲ್ಲದಂದು? ಸಪ್ತಸ್ವರ ಅಕ್ಷರ ವಸ್ತುಕ ವರ್ಣಕವೆಲ್ಲಿದ್ದುದೊ-ಜ್ಞಾನ ಉದಯಿಸದಂದು? ತ್ರಿಜಗದುತ್ಪತ್ತಿ ಸ್ಥಿತಿಕಾರಣ ಸಚರಾಚರಗಂಭೀರವೆಲ್ಲಿದ್ದುದೊ-ಶಿವನ ಅಷ್ಟತನುಮೂರ್ತಿ ಗಳಿಲ್ಲದಂದು? ಶರಣಪಥ ಲಿಂಗೈಕ್ಯವೆಲ್ಲಿದ್ದುದೊ-ಆರಾಧ್ಯಲಿ೦ಗ ಸಕಳೇಶ್ವರ ಮಹಾಘನಲಿಂಗವಿದ್ದಾನೆಂದು ಸದ್ಗುರುಸ್ವಾಮಿ ಕೃಪೆಮಾಡಿ ತೋಅದಂದು? |
369.09 |
6 |
ಸಕಳೇಶಮಾದರಸ | ಸಕಳೇಶದೇವರು |
|
|
| ಅ೦ಡಜ ಪೃಥ್ವಿ ರಚಿಸದಂದು, ಭೂಮಂಡಲವಾಗದಂದು,
ಪಿಂಡದ ಬೀಜವ ನವಬ್ರಹ್ಮರು
ತಾರದಂದು, ನವಖಂಡವು
ರಚಿಸದಂದು, ಪೃಥ್ವಿಯಪ್ಪು ತೇಜ ವಾಯುವಾಕಾಶ ಸ್ಥಲವಿಡಿಯದಂದು.
ಅನುಕರಿಸದಂದು, ರೂಹಿಸದಂದು, ಎನಗೆ ತನಗೆಂಬ ಚೈತನ್ಯ ತಲೆದೋಜದ೦ದು, ಖಷಿಗಳಾಶ್ರಯ
ಲೋಕಕ್ಕೆ ಹರಿಯದಂದು, ಅಂದು ಬಸವನಿದ್ದ ಕಾಣಾ! ರೇಕಣ್ಣಪ್ರಿಯನಾಗಿನಾಥ |
126.08 |
7 |
ಬಹುರೂಪಿಚೌಡಯ್ಯ | ರೇಕಣ್ಣಪ್ರಿಯ ನಾಗಿನಾಥಾ. |
|
|
| ಸರ್ಪನ ಮೇಲೆ ಪೃಥ್ವಿ ರಚಿಸದಂದು, ಸಮುದ್ರಂಗಳೇಳೂ ಹಾಸದಂದು, ಅಷ್ಟದಿಗುದಂತಿಗಳು
ಹುಟ್ಟದಂದು, ಶಂಕು ಶಲಾಕೆಯಿಲ್ಲದಂದು, ಗಂಗೆ ಗೌರೀವಲ್ಲಭರಿಲ್ಲದಂದು, ಬ್ರಹ್ಮ ವಿಷ್ಟು ರುದ್ರ
ಈಶ್ವರ ಸದಾಶಿವ-ಈ ಐವರು ಹುಟ್ಟದಂದು, ಇವರೈವರ ತಾಯಿತಂದೆ ಇಲ್ಲದಂದು, ನಿಜಗುರು
ಸ್ವತಂತ್ರ ಕಪಿಲಸಿದ್ಧಮಲ್ಲೇಶ್ವರಾ, ನಿಮ್ಮ ಹೆಸರೇನಯ್ಯ |
1076.04 |
8 |
ಸಿದ್ಧರಾಮ | ಕಪಿಲಸಿದ್ಧಮಲ್ಲೇಶ್ವರಾ |
| ಇತರ ಆಕರ ಗ್ರಂಥಗಳು |
ಲಿಂಗಲೀಲಾವಿಲಾಸ ಚಾರಿತ್ರ 10.10
ಹಲಗೆಯಾರ್ಯನ ಶೂನ್ಯಸಂಪಾದನೆ 245
|
| ಕಾಳಾಂಧರ ಧರೆ ವಾರುಧಿ ಸಹಿತ ಏನೂ ಏನೂ ಇಲ್ಲದಂದು ಪ್ರಮಥನೊಬ್ಬನಿದ್ದ ನೊಂದನಂತಕಾಲ, ನಿರವಯ ನಿರ್ಮಾಯನಾಗಿದ್ದನೊಂದು ಕೋಟ್ಯಾನುಕೋಟಿ ವರುಷ. ಅಲ್ಲಿ ಅನಾಗತವುಂಟು. ಮನವು ಮಹದಲ್ಲಿ ನಿಂದು ಉತ್ಪತ್ಯವೆ೦ದರೆ, ಬಯಲು ಬೆಸಲಾಯಿತ್ತು. ನರರು ಸುರರು ಮೊದಲಾದ ಚೌರಾಸಿ ಜೀವಂಗಳು ಉದಿಸಿದವಯ್ಯಾ-ಇಂತಿವೆಲ್ಲವೂ, ಕೂಡಲಚೆನ್ನಸಂಗಾ, ನಮ್ಮ ಬಸವಣ್ಣ ನೆನೆದಡೆ. |
4.03 |
9 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಯ್ಯಾ |
|
|
| ಅಯ್ಯಾ, ನೀನು ನಿರಾಳ ನಿರ್ಮಾಯನಾಗಿಪ್ಪೆಯಾಗಿ, ಆಕಾಶ ಪ್ರಕಾಶವಿಲ್ಲದಂದು, ಸಾಕ್ಷಿ ಸಭೆಗಳಿಲ್ಲದಂದು, ಆಧಾರದೊಳಗಣ ವಿಭೂತಿಯನೆ ತೆಗೆದು ಭೂಮಿಯ ನೆಲೆಗೊಳಿಸಿ, ಪಂಚಾಶತಕೋಟವಿಸ್ತೀರ್ಣ ಭೂಮಂಡಲಕ್ಕೆ ಸುತ್ತಿ ಹರಿದವು ಸಪ್ತಸಾಗರಂಗಳು. ಎ೦ಬತ್ತಾಱುಕೋಟಿಯು೦ ತೊಂಬತ್ತೇಳುಲಕ್ಷ ಕಾಲ ಭುವನಮಂಡಲಕ್ಕೆ ಉದಯಬ್ರಹ್ಮಾಂಡವಱುವತ್ತಾಱು ಕೋಟಿ ತಾರಾಮಂಡಲವೆಂದರೆ, ಬೆಳಗಿ ತೋಱಿದ ಹನ್ನೆರಡು ಜ್ಯೋತಿಯ; ನಿಲಿಸಿ ತೋಱಿದ ಹದಿನಾಲ್ಕು ಭುವನವ; ಈ ಜಗದ ಜಂಗುಳಿಯ ಕಾವ ಗೋವಳ ತಾನಾಗಿ, ಚೌರಾಸಿ ಲಕ್ಷ ಜೀವರಾಸಿಗಳಿಗೆ ರಾಸಿವಾಳ ತಾನಾಗಿ. ಸಕಲದ ಅಳಿವಿನ ಉಳಿವಿನಿ೦ದ ನಿಲವ ನೋಡಿ ಕಂಡೆ, ಗೊಗೇಶ್ವರಾ, ನಿಮ್ಮ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು. |
8.02 |
10 |
ಅಲ್ಲಮ | ಗುಹೇಶ್ವರಾ |
|
|
| |