checking data baseConnected successfully! Sample Image
  •  

'ಲಿಂಗಲೀಲಾವಿಲಾಸಚಾರಿತ್ರ' ವಚನಗಳು

search:
ವೇದಾತೀತ ಸಡುವರ್ಣರಹಿತ ಅಪ್ಪಿ ತ್ರಿಂಶತ್ಯಳಾತೀತ ವ್ಯೋಮಾತೀತ ಕೂಡಲ ಸಂಗಮದೇವಾ 954.01 261
701*/B1
ಬಸವಣ್ಣ ಕೂಡಲ ಸಂಗಮದೇವಾ
ನಾಮ ಅನಾಮನಿಲ್ಲ. |ನಾನು‖ತಾನು| ತಾನು ಮುನ್ನವೆ ಇಲ್ಲ. ಈ ಉಭಯ ನಾಮವಾವ ಸೀಮೆಯೊಳಗು ಇಲ್ಲ. ಒಡಲು ಇಲ್ಲ ನೆಳಲು ಇಲ್ಲ. ಏನೆಂಬುದೇನು ತಾನು ಮುನ್ನಿಲ್ಲ. ಚಿಕ್ಕಯ್ಯಪ್ರಿಯ ಸಿದ್ದಲಿಂಗ ನಾನು ಇಲ್ಲ ನೀನುಇಲ್ಲ. 5.00 262
702*/B2
ಘಟಿವಾಳಯ್ಯ ಚಿಕ್ಕಯ್ಯಪ್ರಿಯ ಸಿದ್ದಲಿಂಗ
ಏನೆಂದೆನಲಿಲ್ಲ. ನುಡಿದು ಹೇಳಲಿಕಿಲ್ಲ. ನಿಜದಲ್ಲಿರ್ದ ಬೆಜಗ ಕುಜುಹು ಅಜ್‌ವುದೇ ? ಅದು ತನ್ನಲ್ಲಿ ತಾನಿಲ್ಲ. ಏನೆಂದೆನಲಿಲ್ಲದ ಬಯಲು. ಅಲಿ ಏನನೂ ಅಱಸಲಿಲ್ಲ ಇದಿರಿಲ್ಲ, ತಾನಿಲ್ಲ. ಚಿಕ್ಷಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ. 440.07 269
703*/B3
ಘಟ್ಟಿವಾಳಯ್ಯ ಚಿಕ್ಕಯ್ಯಪ್ರಿಯ ಸಿದ್ಧಲಿಂಗ
ಆದಿಯಾಧಾರವಿಲ್ಲದಂದು, ಹಮ್ಮು ಬಿಮ್ಮಗಳಿಲ್ಲದಂದು, ಸುರಾಳ ನಿರಾಳವಿಲ್ಲದಂದು, ಶೂನ್ಯ ನಿಶ್ಶೂನ್ಯವಿಲ್ಲದಂದು, ಸಚರಾಚರವೆಲ್ಲಾ ರಚನೆಗೆ ಬಾರದಂದು ಗೊಹೇಶ್ವರಾ ನೀನೊಬ್ಬನೇ ಇದ್ದೆಯಲ್ಲಾ ಇಲ್ಲದಂತೆ 5.02 263
804*/C1
ಅಲ್ಲಮ ಗುಹೇಶ್ವರಾ
ಇತರ ಆಕರ ಗ್ರಂಥಗಳು
ಮಹದೇವಯ್ಯನ ಶೂನ್ಯಸಂಪಾದನೆ 3
ಆದಿಅನಾದಿಯಿಲ್ಲದಂದು, ಮಹಾಶೂನ್ಯವಿಲ್ಲದಂದು, ಸಾಧ್ಯಅಸಾಧ್ಯವಿಲ್ಲದಂದು, ರೂಪು ನಿರೂಪಿಲ್ಲದಂದು, ಸ್ಥೂಲ ಸೂಕ್ಷ್ಮವಿಲ್ಲದಂದು, ಸಾಕಾರ ನಿರಾಕಾರವೆಂಬ ವಾಕು ಹುಟ್ಟದಂದು, ದ್ವೈತಾದ್ವೈತ ನಾಗದಂದು, ಶಂಕರ ಶಶಿಧರ ಈಶ್ವರನೆಂಬ ಗಣಾಧೀಶ್ವರರಿಲ್ಲದಂದು,ಉಮೆಯ ಕಲ್ಯಾಣವಾಗದಂದು, ಇವರಾರು ಒಬ್ಬರ ನಾಮಸೀಮೆಯಿಲ್ಲದಂದು ನೀನು ಉಲುಹಡಗಿರ್ದೆಯಲ್ಲ |ಕಲಿದೇವಯ್ಯಾ‖ಕಲಿದೇವರ ದೇವಯ್ಯಾ| 498.08 270
806*/B4
ಮಡಿವಾಳಮಾಚಿದೇವ ಕಲಿದೇವರ
ಶೂನ್ಯ ಹುಟ್ಟದಂದು, ನಿಶ್ಶೂನ್ಯವಿಲ್ಲದಂದು, ಬ್ರಹ್ಮ ನಿಷ್ಣು ಮಹೇಶ್ವರ ರಿಲ್ಲದಂದು, ಹದಿ ದಿನಾಲ್ಕು ಭುವನ ದಿಕ್ಕು ವಿದಿಕ್ಕು ವಳಯಂಗಳಿಲ್ಲ ದಂದು, ಕೂಡಲಚೆನ್ನಸಂಗಯ್ಯ ಹೆಸರಿಲ್ಲದಿರ್ದನಂದು. 830.03 271
907*/B5
ಚೆನ್ನಬಸವಣ್ಣ ಕೂಡಲಚೆನ್ನಸಂಗಯ್ಯ
ದೇವಿಯರಿಬ್ಬರು ಇಲ್ಲದಂದು, ಪ್ರಧಾನ ಮಂತ್ರಿಗಳು ಇಲ್ಲದಂದು, ಆರು ಆರು ಇಲ್ಲದಂದು, ಸಂಕಲ್ಪ ನಿಕಲ್ಪವಿಲ್ಲದಂದು, ಆವ ಉತ್ಪ ತ್ಯಂಗಳಿಲ್ಲದಂದು ನಿನ್ನಲ್ಲಿ ನೀನೆಂಬುದು ಶೂನ್ಯವಾಗಿದ್ದೆ ಎನ್ನ | ಕಪಿಲಸಿದ್ಧಮಲ್ಲಿಕಾರ್ಜುನ‖ ಕಪಿಲಸಿದ್ಧಮಲ್ಲಿನಾಥ| 659.04 272
908*/B6
ಸಿದ್ಧರಾಮ ಕಪಿಲಸಿದ್ಧಮಲ್ಲಿಕಾರ್ಜುನ
ಸರ್ಪನ ಮೇಲೆ ಪೃಥ್ವಿ ರಚಿಸದಂದು ಸಮುದ್ರಂಗಳೇಳೂ ಹಾಸದಂದು ಅಷ್ಟದಿಗುದಂತಿಗಳು ಹೂಡದಂದು ಸ್ವಯಂಭು ಶಕ್ತಿಗಳು ಇಲ್ಲದಂದು ಗಂಗೆಗೌರೀವಲ್ಲಭರಿಲ್ಲದಂದು ಬ್ರಹ್ಮ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ ಈ ಐವರೂ ಇಲ್ಲದಂದು ನಿಜಗುರು ಕಪಿಲಸಿದ್ಧಮಲ್ಲಿನಾಥ ಅತ್ತತ್ತ ನಿಮಗೆ ಹೆಸರಿಲ್ಲವಯ್ಯಾ 1076.04 8
1010*/A8
ಸಿದ್ಧರಾಮ ಕಪಿಲಸಿದ್ಧಮಲ್ಲೇಶ್ವರಾ
ಇತರ ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ 1010
ಹಲಗೆಯಾರ್ಯನ ಶೂನ್ಯಸಂಪಾದನೆ 245
ದ್ವೀಪಾದ್ವೀಪವಿಲ್ಲದಲ್ಲಿಂದತ್ತತ್ತ, ಕಾಲಕರ್ಮವಿಲ್ಲದಲ್ಲಿಂದತ್ತತ್ತ, ಮಾಯಾಮೋಹವಿಲ್ಲದಲ್ಲಿಂದತ್ತತ್ತ, ಏನು ಏನು ಇಲ್ಲದಲ್ಲಿಂದತ್ತತ್ತ, ಆದಿಮೂವರಿಲ್ಲದಲ್ಲಿಂದತ್ತತ್ತ, ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವಿಲ್ಲದಲ್ಲಿಂದತ್ತತ್ತ! 625.07 273
1011*/B8
ಚಂದರಸ ಸಿಮ್ಮಲಿಗೆಯ ಚೆನ್ನರಾಮ
ಅಪರವಿಲ್ಲದಂದು, ಪರಬ್ರಹ್ಮವಿಲ್ಲದಂದು, ಅನಾದಿಯಿಲ್ಲದಂದು ಆದಿಯಿಲ್ಲದಂದು ಸದಾಶಿವನಿಲ್ಲದಂದು ಶಿವನಿಲ್ಲದಂದು ಆನು ನೀನೆಂಬುದು ತಾನು ಇಲ್ಲದಂದು ಕೂಡಲಚೆನ್ನಸಂಗಯ್ಯ ಏನು ಎನ್ನದಿರ್ದನಂದು 911.03 274
1012*/B9
ಚೆನ್ನಬಸವಣ್ಣ ಕೂಡಲಚೆನ್ನಸಂಗಯ್ಯ

ಟಿಪ್ಪಣಿ; * ಪುಟ ಸಂಖ್ಯೆವಚನ ಸಂಖ್ಯೆ

[ಮೊದಲ ಪುಟ]  12345678[ಕೊನೆ ಪುಟ]


ಸಿಕ್ಕ ಪಲಿತಾಂಶಗಳು 75 ಇದು ಪುಟ 1 ಈ ಪುಟದಲ್ಲಿ ಪಲಿತಾಂಶಗಳು 1 ರಿಂದ 10 ವರೆಗೆ