checking data baseConnected successfully! Sample Image
  •  

'ಲಿಂಗಲೀಲಾವಿಲಾಸಚಾರಿತ್ರ' ವಚನಗಳು

search:
ವಿಪುಳ ವೇದ ವೇದಾಂತಸಾರ. ಸಕಲಲೋಕಜನಹಿತಾಧಾರ. ಸಪ್ತ ಕೋಟಿ ಮಹಾಮಂತ್ರಂಗಳ ತವರುಮನೆ, ಭಕ್ತಜನಜೀವಾನಂದ. ಅಖಿಳಾಗಮಸಂತಾನದ ಹರಣ. ಮುಕ್ತಿಗೆ ಆಕಾರದ ಸೋಪಾನ. ಪ್ರಣವಾಂಕುರ ಪಲ್ಲವ ಫಲರೂಪು. ತ್ರಿಣಯನನೊಲಿಸುವ ಕರ್ಣಾ ಭರಣ. ಹರನ ನಾಮದ ಸಾಕಾರದ ನಿಲವು. ಪರಮಪಂಚಬ್ರಹ್ಮಾ ನಂದ. ಪರತತ್ತ್ವದ ನಿತ್ಯದ ನೆಲೆ. ಹಂಪೆಯ ವಿರೂಪನ ತೋಱುವ ಗುರು ಪಂಚಾಕ್ಷರಿ! 291.06 62
14464*/A62
ಅಗ್ಘವಣ್ಣಿಹಂಪಯ್ಯ ಚೆನ್ನಹಂಪೆಯ ವಿರುಪಯ್ಯ????
ಇತರ ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ 14464
ಅಂತ್ಯಜನಾಗಲಿ ಅಗ್ರಜನಾಗಲಿ ಮೂರ್ಖನಾಗಲಿ ಪಂಡಿತನಾಗಲಿ ಜಪಿಸುವುದು ಪಂಚಾಕ್ಟರಿಯ. ಜಪದಿಂದ ರುದ್ರನಪ್ಪುದು ತಪ್ಪದು.
ಶೋ. ಅಂತ್ಯಜೋಪ್ಯಗ್ರಜೋ ವಾಪಿ ಮೂರ್ಖೋ ವಾ ಪಂಡಿತೋಪಿ ವಾ
ಜಪೇತ್‌ ಪಂಚಾಕ್ಷರೀಂ ನಿತ್ಯಂ ಸ ರುದ್ರೋ ನಾತ್ರ ಸಂಶಯಃ
ಇದಕ್ಕೆ ಸಪಥವಸ ಮಾಡಿದೆನು ಉರಿಲಿಂಗಪೆದ್ದಿ ಪ್ರಿಯ ನಿಶ್ವೇಶ್ವರಾ!
1272.06 66
14465*/A66
ಉರಿಲಿಂಗಪೆದ್ದಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ
ಇತರ ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ 14465
ಎಂಬತ್ತುನಾಲ್ಕು ಲಕ್ಷಜೀವರಾಶಿಗಳೊಳು ಜನಿಸುವುದೇ ಜನಿತವೆಲ್ಲರಿಗೆ. ಆ ಜನ್ಮಾಂತರದ ಯೋನಿಗಳೊಳು ಜನಿಸದಾತನೆ ಯೋಗಿ ಆ ಯೋಗಿಯ ಜನ್ಮಾಂತರವ ಕಳೆದ ಪರಿಯೆಂತೆಂದಡೆ : ಶ್ರೀಗುರು ಕಾರುಣ್ಯಕರಪಲ್ಲವಕ್ಕೆ ಬೆಸಲಾಯಿತ್ತಾಗಿ. ಅಂಥಾ ಯೋನಿಮುಖಿ: ಜನ್ಮಾಂತರವ ಕಳೆದ ಶರಣಂಗೆ ಭವಮಾಲೆಯುಂಟೇ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ 1325.06 28
14772*/A28
ಉರಿಲಿಂಗಪೆದ್ದಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
ಇತರ ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ 14772
ಇನ್ನು ಮುಕ್ತನೆಂದಡೆ ಮುನ್ನವೇನು ಬದ್ಧನೇ? ಮುನ್ನ ಮುನ್ನವೆ ಮುಕ್ತನು, ಒಂದು ಕಾರಣದಿಂದ ಬದ್ಧ ನಾದಡೇನು ಗುರುಕಾರುಣ್ಯದಿಂದ ಮುಕ್ತನು. ಗುರುಕರುಣದಿಂದ ಗುರುವಾದ ಬಳಿಕ ಬದ್ಧ ಮುಕ್ತನೆನಲುಂಟೇ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ? 1320.06 35
15284*/A35
ಉರಿಲಿಂಗಪೆದ್ದಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
ಇತರ ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ 15284
ಮಣ್ಣ ಮಡಕೆ ಮಣ್ಣಾಗದು ಕ್ರೀಯಳಿದು. ಬೆಣ್ಣೆ ಕರಗಿ ತುಪ್ಪವಾಗಿ ಮರಳಿ ಬೆಣ್ಣೆಯಾಗದು ಕ್ರೀಯಳಿದು. ಕಬ್ಬುನ ಹೊನ್ನಾಗಿ? ಹೊನ್ನು ಕಬ್ಬುನವಾಗದು ಕ್ರೀಯಳಿದು. ಮುತ್ತು ನೀರಲ್ಲಿ ಹುಟ್ಟಿ ಮತ್ತೆ ನೀರಾಗದು ಕ್ರೀಯಳಿದು, ಕೂಡಲಸಂಗನ ಶರಣರು ಮರಳಿ ಮಾನವರಾಗರು ಕ್ರೀಯಳಿದು. 870.01 190
39613*/A190
ಬಸವಣ್ಣ ಕೂಡಲಸಂಗ
ಇತರ ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ 39613

ಟಿಪ್ಪಣಿ; * ಪುಟ ಸಂಖ್ಯೆವಚನ ಸಂಖ್ಯೆ

[ಮೊದಲ ಪುಟ]  12345678[ಕೊನೆಯ ಪುಟ]


ಸಿಕ್ಕ ಪಲಿತಾಂಶಗಳು 75 ಇದು ಪುಟ 8 ಈ ಪುಟದಲ್ಲಿ ಪಲಿತಾಂಶಗಳು 71 ರಿಂದ 80 ವರೆಗೆ