checking data baseConnected successfully! Sample Image
  •  

'ಲಿಂಗಲೀಲಾವಿಲಾಸಚಾರಿತ್ರ' ವಚನಗಳು

search:
ಕಾಲ ಕಲ್ಪಿತಂಗಳಿಲ್ಲದೆ ನಿನ್ನಿಂಜ ನೀನೆಯಾಗಿ ಇರ್ದೆಯಲ್ಲಾ! ನಿಮ್ಮ ಪರಮಾನಂದ ಪ್ರಭಾವದ ಪರಿಣಾಮದಲ್ಲಿ ಅನಂತಕಾಲವಿರ್ದಿರಲ್ಲಾ ! ನಿಮ್ಮ ಆದ್ಯಂತವ ನೀವೇ ಅರಿವುತಿದ್ದಿರಲ್ಲಾ! ನಿಮ್ಮ ನಿಜಸ್ವಭಾವವ ನೀವೇ ಬಲ್ಲಿರಿ ಕೂಡಲಚೆನ್ನಸಂಗಮದೇವಾ 1115.03 284
1911*/B19
ಚೆನ್ನಬಸವಣ್ಣ ಕೂಡಲಚೆನ್ನಸಂಗಮದೇವಾ
1405.02 285
1920*/B20
ಅಲ್ಲಮ ಗುಹೇಶ್ವರ
ಲಿಕಾರವೆ ಶೂನ್ಯ, ಬಿಂದುವೆ ಲೀಲೆ, ಗಕಾರವೆ ಚಿತ್ತು. ಈ ತ್ರಿವಿಧದೊಳಗಿದೆ ಲಿಂಗವೆಂಬ ಸಕೀಲ. ಇದರ ಸಂಚವನಾವಾತ ಬಲ್ಲ ಆತನೆ ಲಿಂಗಸಂಗಿ. ಕೂಡಲಚೆನ್ನಸಂಗಮದೇವಾ ಲಿಂಗಾನುಭವಿಗಳ ಶ್ರೀಚರಣಕ್ಕೆ ನಮೋ ನಮೋ ಎಂಬೆ! 1547.03 286
2013*/B21
ಚೆನ್ನಬಸವಣ್ಣ ಕೂಡಲಚೆನ್ನಸಂಗಮದೇವಾ
ಲಿಂಗವೆಂಬುದು ಪರಶಕ್ತಿಯುಕ್ತ ಲಿಂಗವೆಂಬುದು ಪರಶಿವನ ನಿಜದೇಹ, ಲಿಂಗವೆಂಬುದು ಪರಶಿವನ ಘನತೇಜ, ಲಿಂಗವೆಂಬುದು ಪರಶಿವನ ನಿರತಿಶಯಾನಂದಸುಖವು, ಲಿಂಗವೆಂಬುದು ಪರಶಿವನ ಪರಮಜ್ಞಾನ, ಲಿಂಗವೆಂಬುದು ಪರಶಿವನು ತಾನು. ಲಿಂಗವೆಂಬುದು ಷಡಧ್ವಮಯ ಜಗಜ್ಜನ್ಮಭೂಮಿ ತಾನು, ಲಿಂಗವೆಂಬುದು ಅಖಂಡಿತ ಅಭೇದ ಪಂಚಸಂಜ್ಞೆ ತಾನು, ಲಿಂಗವೆಂಬುದು ಹರಿಬ್ರಹ್ಮರ ನಡುವೆ ನೆಗಳ್ಧ ಜ್ಯೋತಿರ್ಮಯಲಿಂಗ,
ಶ್ರುತಿ: «ಆಲಯಂ ಸರ್ವಭೂತಾನಾಂ ಲಯಾನಾಮ್ ಲಿಂಗಮುಚ್ಯತೆ»
ಎಂದುದಾಗಿ. ಇದು ಲಿಂಗದ ಮರ್ಮ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. ಲಿಂಗದೊಳಿಂತು ತಿಳಿಯಬಲ್ಲಾತನೆ ಬಲ್ಲವನು.
1524.06 287
2014*/B22
ಉರಿಲಿಂಗಪೆದ್ದಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
ಹೊಲೆಯುಂಟೇ ಲಿಂಗವಿದ್ದೆಡೆಯಲ್ಲಿ? ಕುಲವುಂಟೀ ಜಂಗಮನಿದ್ದೆಡೆ ಯಲ್ಲಿ? ಎಂಜಲುಂಜಟೆ ಪ್ರಸಾದವಿದೆಡೆಯಲ್ಲಿ? ಅಪವಿತ್ರದ ನುಡಿಯ ನುಡಿವ ಸೂತಕವೇ ಪಾತಕ. ನಿಃಕಳಂಕ ನಿಜೈಕ್ಯ ತ್ರಿವಿಧ ನಿರ್ಣಯ ಗಕೂಡಲಸಂಗಾಗ ನಿಮ್ಮ ಶರಣ 770.01 99
2206*/A99
ಬಸವಣ್ಣ ಕೂಡಲಸಂಗಮದೇವಾ
ಇತರ ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ 2206
ಶುದ್ಧವ ಗುರುವಿಂಗೆ ಕೊಟ್ಟು ಶುದ್ಧವಾಯಿತ್ತೆಂಬೆನಯ್ಯಾ, ಸಿದ್ಧವ ಲಿಂಗಕ್ಕೆ ಕೊಟ್ಟು ಸಿದ್ಧವಾಯಿತ್ತೆಂಬೆನಯ್ಯಾ. ಪ್ರಸಿದ್ದವ ಜಂಗಮಕ್ಕೆ ಕೊಟ್ಟು ಪ್ರಸಿದ್ಧವಾಯಿತ್ತೆಂಬೆನಯ್ಯಾ. ಗುರುಲಿಂಗಜಂಗಮವನೇಕಾರ್ಥವಾಗಿ ಕಾಣಲಱಿಯದಿರ್ದಡೆ ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವೊಡನೆ ನುಡಿವುತ್ತೈದಾವೆ. ತನು ಮನ ಧನವ ನಿವೇದಿಸಲಱಿಯೆನಾಗಿ ಕೂಡಲಸಂಗಮದೇವರು ಒಲಿಯೆಂದಡೆಂತೊಲಿವ? 1262.03 116
2509*/A116
ಚೆನ್ನಬಸವಣ್ಣ ಕೂಡಲಚೆನ್ನಸಂಗಮದೇವಾ
ಇತರ ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ 2509
ಚಿತ್ತುವೆಂಬ ಬಿತ್ತು ಬಲಿದು ಎರಡಾದಲ್ಲಿ ಲಿಂಗವೆಂಬ ಕಳೆ ಅಂಕುರಿಸಿ ಮೂರ್ತಿಯಾಯಿತ್ತು. ಆ ಮೂರ್ತಿಯ ಘನತೆಯನೇನೆಂದು ಉಪಮಿಸಬಾರದು. ನೋಡಿದಡೆ ಮೂರ್ತಿ ಹಿಡಿದಡೆ ಬಯಲು. ಆ ಮೂರ್ತಿಯೊಳಗದೆ ಈರೇಳು ಲೋಕದ ಪ್ರಾಣಕಳೆ. ಆ ಕಳೆಯ ಬೆಳಗು ತಾನೆ ನಮ್ಮ ಗುಹೇಶ್ವರಲಿಂಗದ ಲೀಲಾಮೂಲದ ಪ್ರಥಮ ಭಿತ್ತಿ. 1187.02 288
3001*/B23
ಅಲ್ಲಮ ಗುಹೇಶ್ವರ
ಮರದೊಳಗಣ ಪತ್ರೆ ಫಲಂಗಳು, ಮರಕಾಲವಶದಲ್ಲಿ ತೋಱುವಂತೆ, ಹರನೊಳಗಣ ಪ್ರಕೃತಿಸ್ವಭಾವಂಗಳು ಹರಲೀಲಾವಶದಲ್ಲಿ ತೋಱುವವು. ಲೀಲೆಯಾದಡೆ ಉಮಾಪತಿ, ಲೀಲೆ ತಪ್ಪಿದಡೆ ಸ್ವಯಂಭು ನಮ್ಮ ಗುಹೇಶ್ವರಲಿಂಗವು. 145.02 289
3102*/B24
ಅಲ್ಲಮ ಗುಹೇಶ್ವರಾ
ಶಿವಶಕ್ತಿ ಸಂಪುಟವೆಂಬುದೆಂತು ಹೇಳಿರಣ್ಣಾ! ಶಿವನೆ ಚೈತನ್ಯಾತ್ಮಕನು, ಶಕ್ತಿಯೆ ಚಿತ್ತು. ಇಂತು ಚೈತನ್ಯಾತ್ಮಕನೆ ಚಿತ್‍ಸ್ವರೂಪನಾದ, ಆತನೆ ಶರಣ ಗುಹೇಶ್ವರಾ. 589.02 290
3103*/B25
ಅಲ್ಲಮ ಗುಹೇಶ್ವರಾ
ಶೃತಿತತಿಯ ಮಸ್ತಕದ ಅತಿಶಯದ ಬೆಳಗಿನೊಳು ಸಕಲ ಲೋಕಂಗಳು ಬೆಟ್ಟವಾಗಿ ಒಸರುವಾ ಸಾನಂದ ಬೆಳಗು ಬಿಂದುಗಳಾಗೆ ಬೆಳಗುತ್ತಿದ್ದಿತ್ತು ಬ್ರಹ್ಮ ಯೋಗಿನಾಥ 6.00 291
3200*/B26
ಬ್ರಹ್ಮ ಯೋಗಿನಾಥ? ಬ್ರಹ್ಮ ಯೋಗಿನಾಥ

ಟಿಪ್ಪಣಿ; * ಪುಟ ಸಂಖ್ಯೆವಚನ ಸಂಖ್ಯೆ

[ಮೊದಲ ಪುಟ]  12345678[ಕೊನೆ ಪುಟ]


ಸಿಕ್ಕ ಪಲಿತಾಂಶಗಳು 75 ಇದು ಪುಟ 3 ಈ ಪುಟದಲ್ಲಿ ಪಲಿತಾಂಶಗಳು 21 ರಿಂದ 30 ವರೆಗೆ