'ಲಿಂಗಲೀಲಾವಿಲಾಸಚಾರಿತ್ರ' ವಚನಗಳು
| ಪರಶಿವನ ಚಿತ್ಕರಣಂಗಳು ಈ ಜಗತ್ತಿನ ಶಿರೋಮಧ್ಯಕ್ಕೆ ಬಿಂಬಿಸಿ, ಅದಕ್ಕೆ ಚೈತನ್ಯಗೊಳಿಸಿದಲ್ಲಿ, ಅದೇ ಪರಮಾತ್ಮನಾಯಿತ್ತು. ಆ ಪರಮಾತ್ಮನಾ ಜಗತ್ತಿನ ಭ್ರೂಮಧ್ಯಕ್ಕೆ ಬಿಂಬಿಸಿದಲ್ಲಿ ಅದೇ ಅಂತರಾತ್ಮನಾಯಿತ್ತು. ಆ ಅಂತರಾತ್ಮನಾ ಜಗತ್ತಿನ ಹೃನ್ಮಧ್ಯಕ್ಕೆ ಬಿಂಬಿಸಿದಲ್ಲಿ ಅದೇ ಜೀವಾತ್ಮನಾಯಿತ್ತು. ಆ ಜೀವಾತ್ಮನೆ ಘಟ, ಅಂತಾರಾತ್ಮನೇ ಪ್ರಾಣ, ಪರಮಾತ್ಮನೆ ಪ್ರಾಣ, ಪರಮಾತ್ಮನ ಸರ್ವಸಾಕ್ಷಿಕ. ಆ ಸಾಕ್ಷಿಕನೇ ವಸ್ತು. ಆ ಪರವಸ್ತು. ಈ ಜೀವಾಂತರಾದಿಗಳೆಂಬ ಅಂಗಪ್ರಾಣಕ್ಕೆ ಪಂಚವಿಂಶತಿ ತತ್ವಂವಂಗಳೆಂಬ ತುಷಾಪಾಶಮಂ ತೊಡಿಸಿ, ಅಂತದನೆ ಪಶುವೆನಿಸಿ, ತಾನದಕ್ಕೆ ಪತಿಯಾಗಿ, ಅಲ್ಲಿ ನಾನಾ ವಿನೋದಂಗಳಂ ನೋಡಿ ವಿನೋದಿಸಿತ್ತ ಬಸವಪ್ರಿಯ ಕೂಡಲಚೆನ್ನಸಂಗಯ್ಯನಿಂತೀಪರಿಯಲ್ಲಿ ಅಡಿಸುತಿರ್ದ, ಸರ್ವಜಗತ್ತಾ. |
322.09 |
309 56‖01*/B44 |
ಸಂಗಮೇಶ್ವರದ ಅಪ್ಪಣ್ಣ | ಬಸವಪ್ರಿಯ ಕೂಡಲಚೆನ್ನಸಂಗಯ್ಯ |
|
|
| ಅಕಲ್ಪಿತ ನಿತ್ಯ ನಿರಂಜನ ನಿಸ್ಸೀಮ ನಿರವಯ ಅಖಂಡಪರಿಪೂರ್ಣ ಪರಂಜ್ಯೋತಿಯಾದ ಮಹಾ ಘನವಸ್ತುವಿನಲ್ಲಿ ಪರಮಾತ್ಮನುತ್ಪತ್ಯ. ಆ ಪರಮಾತ್ಮನಿಂದ ಅಂತರಾತ್ಮನುತ್ಪತ್ಯ. ಆ ಅಂತರಾತ್ಮನಿಂದ ಜೀವಾತ್ಮನುತ್ಪತ್ಯ. ಈ ತ್ರಯಾತ್ಮರೊಳಗೆ ಜೀವಾಂತರಾತ್ಮಾದಿಗಳೆ ಪಾಶಬದ್ಧರು ಪರಮಾತ್ಮನೆ ಪಾಶಮುಕ್ತನು. ಈ ಸಂಚವನಱಿದ ದ್ವಂದ್ವರಹಿತ ತಾನೆ ನಮ್ಮ ಗುಹೇಶ್ವರ ಲಿಂಗದಲ್ಲಿ ಯಂತ್ರವಾಹಕನೆನಿಸುವನು. |
741.02 |
310 56‖02*/B45 |
ಅಲ್ಲಮ | ಗುಹೇಶ್ವರ |
|
|
| ಪರಮಾತ್ಮನ ಪ್ರತಿಲಹರಿಯಿಂದ ಅಂತರಾತ್ಮನುತ್ಪತ್ಯ. ಅಂತರಾತ್ಮನ ಪ್ರತಿಲಹರಿಯಿಂದ ಜೀವಾತ್ಮನುತ್ಪತ್ಯ. ಅಂತಪ್ಪ ಜೀವಾಂತರಾತ್ಮಾದಿಗಳು ಅಂಗ ಪ್ರಾಣವಾದಲ್ಲಿ ಒಂದೆಯೆನಿಸಿದರು. ಆ ಒಂದೆಯೆಂಬ ತಾಮಸ ಜೀವನು ಅಂಗನೆಯರ ಸಂಗ ಮೊದಲಾದ ನಾನಾ ದುಃಖಗಳಲ್ಲಿ ನೋವುತ್ತ, ನಾನಾಯೋನಿಗಳಲ್ಲಿ ಜನಿಸುತ್ತ, ರೌರವನರಕ ಆಳುತ್ತ ಮುಳುಗುತ್ತಲಿಹನು. ಆ ಪರಮಾತ್ಮನು ಜೀವಾತ್ಮನ ಶಿರೋಮಧ್ಯದಲ್ಲಿರ್ದು ನಾಹಂ ಎನ್ನದೆ ಸೋಹಂ ಎನ್ನುತ್ತ ಸಿಮ್ಮಲಿಗೆಯ ಚನ್ನರಾಮನೆಂಬ ಅಖಂಡ ಲಿಂಗದೊಳಗೆ ನಿತ್ಯತ್ವವನೆಯ್ದಿ ಎಡೆಬಿಡುವಿಲ್ಲದೆ ಪರಮಸಂತೋಷದೊಳಿದ್ದಿತ್ತು. |
646.07 |
311 57‖03*/B46 |
ಚಂದಿಮರಸ | ಸಿಮ್ಮಲಿಗೆಯ ಚನ್ನರಾಮ |
|
|
| ಜಗತ್ತೆಂಬ ಯಂತ್ರದ ಹಾಹೆಗೆ ಅಜ್ಞಾನವೆಂಬ ತುಷವ ತೊಡಿಸಿ, ಅಹಂ ಮಮತೆಯೆಂಬ ಸೊಕ್ಕನಿಕ್ಕಿ, ಬಾರದ ಬಟ್ಟೆಯಲ್ಲಿ ಬರಿಸಿ, ಕಾಣದ ದುಃಖವ ಕಾಣಿಸಿ, ಉಣ್ಣದ ಅಪ್ಯಾಯವನುಣಿಸಿ, ಮಾರಾರಿ ವಿನೋದಿಸಿದೆ ನೀ ಕೂಡಲಸಂಗಮದೇವಾ. |
1193.01 |
312 58‖04*/B47 |
ಬಸವಣ್ಣ | ಕೂಡಲಸಂಗಮದೇವಾ |
|
|
| ತನುವಿಕಾರ ಮನವಿಕಾರ ಜನನಮರಣಸ್ಥಿತಿ ಕಾರಣ ಹೊನ್ನ ತೋಱಿದೆ ಜಗದ ಕಣ್ಣ ಮೊದಲಿಗೆ, ಹೆಣ್ಣ ಸುಳಿಸಿದೆ, ಜಗದ ಕಣ್ಣ ಮೊದಲಿಗೆ. ಮಣ್ಣ ಹರವಿದೆ, ಜಗದ ಕಣ್ಣ ಮೊದಲಿಗೆ. ತನುವ ತಪ್ಪಿಸಿ, ಜಗವ ಸಂಸಾರಕ್ಕೊಪ್ಪಿಸಿ, ನುಣ್ಣನೆ ಹೋದನುಪಾಯದಿ ಸೊಡ್ಡಳ.
|
765.09 |
313 58‖05*/B48 |
ಸೊಡ್ಡಳ ಬಾಚರಸ | ಸೊಡ್ಡಳ |
|
|
| ವಾರಿ ಬಲಿದು ವಾರಿ ಕಲ್ಲಾದಂತೆ ಶೂನ್ಯವೆ ಸ್ವಯಂಭುವಾಯಿತ್ತು. ಆ ಸ್ವಯಂಭುಲಿಂಗದಿಂದಾಯಿತ್ತು ಮೂರ್ತಿವತ್ತು, ಆ ಮೂರ್ತಿಯಿಂದಾಯಿತ್ತು ವಿಶ್ವೋತ್ಪತ್ತಿ, ಆ ವಿಶ್ವೋತ್ಪತ್ತಿಯಿಂದಾಯಿತ್ತು ಸಂಸಾರ, ಆ ಸಂಸಾರದಿಂದಾಯಿತ್ತು ಮಱವೆ. ಆ ಮಱವೆಯೆಂಬ ಮಹಾಮಾಯೆ ವಿಶ್ವವ ಮುಸುಕಿದಲ್ಲಿ ನಾ ಬಲ್ಲೆ ಬಲ್ಲಿದರೆಂಬ ಅರುಹಿರಿಯರೆಲ್ಲಾ ತಾಮಸಕ್ಕೊಳಗಾಗಿ ಮೀನಕೇತನನ ಬಲೆಗೆ ಸಿಲುಕಿ ಮಾಯೆಯ ಬಾಯ ತುತ್ತಾದರಲ್ಲಾ ಗುಹೇಶ್ವರಾ! |
1524.02 |
314 58‖06*/B49 |
ಅಲ್ಲಮ | ಗುಹೇಶ್ವರಾ |
|
|
| ಕಾಯದ ಮೊದಲಿಂಗೆ ಬೀಜವಾವುದೆಂದಱಿಯದೀ ಲೋಕ. ಇಂದ್ರಿಯಂಗಳು ಬೀಜವಲ್ಲ, ಆ ಕಳಾಭೇದವಲ್ಲ. ಸ್ವಪ್ನ ಬಂದೆರಗಿತ್ತಲ್ಲಾ! ಇದಾವಂಗೂ ಶುದ್ಧ ಸುಯಿಧಾನವಲ್ಲ ಕಾಣಾ ಗುಹೇಶ್ವರಾ. |
12.02 |
315 59‖08*/B50 |
ಅಲ್ಲಮ | ಗುಹೇಶ್ವರಾ |
| ಇತರ ಆಕರ ಗ್ರಂಥಗಳು |
ಮಹದೇವಯ್ಯನ ಶೂನ್ಯಸಂಪಾದನೆ 7
|
| ಗಗನದ ಮೇಲೊಂದು ಅಭಿನವ ಗಿಳಿ ಹುಟ್ಟಿ ಸಯ ಸಂಭ್ರಮದಲ್ಲಿ ಮನೆಯ ಮಾಡಿತ್0. ಒಂದು ಗಿಳಿ ಇಪ್ಪತೈದು ಗಿಳಿಯಾಯಿತ್ತು. ಬ್ರಹ್ಮನಾ ಗಿಳಿಗೆ ಪಂಜರವಾದ, ವಿಷ್ಣು ಆ ಗಿಳಿಗೆ ಕೊಱೆಕೂಳಾದ ರುದ್ರನಾ ಗಿಳಿಗೆ ತಾ |ಕೋಳುವೋದ‖ ಕೊಳುವಾಯಿದ| ಇಂತೀ ಮೂವರ ಮುಂದಣ ಕಂದನ ನುಂಗಿ ದೃಷ್ಟನಾಮ ನಷ್ಟವಾಯಿತ್ತುಇದೆಂತೊ ಗುಹೇಶ್ವರಾ |
15.02 |
326 59‖08*/C15 |
ಅಲ್ಲಮ | ಗುಹೇಶ್ವರಾ |
| ಇತರ ಆಕರ ಗ್ರಂಥಗಳು |
ಮಹದೇವಯ್ಯನ ಶೂನ್ಯಸಂಪಾದನೆ 17
|
| ಬ್ರಹ್ಮಪಾಶ, ವಿಷ್ಣುಮಾಯೆ ಎಂಬ ಬಲೆಯ ಬೀಸಿ, ಹೊನ್ನು ಹೆಣ್ಣು ಮಣ್ಣು ತೋಱಿ, ಮುಕ್ಕಣ್ಣನಾಡಿದ ಬೇಂಟೆಯ. ಆಸೆಯೆಂಬ ಕುಟುಕನಿಕ್ಕಿ, ಹೇಸದೆ ಕೊಂದೆಯಲ್ಲಾ ಗುಹೇಶ್ವರಾ. |
21.02 |
425 60‖09*/B51 |
ಅಲ್ಲಮ | ಗುಹೇಶ್ವರಾ |
|
|
| ನಾನೆಂಬಹಂಕಾರ ತಲೆದೋఱిದಲ್ಲಿ ಅಟಮಟ ಕುಟಿಲ ಕುಹಕವೆಂಬ ಬಿఱుಗಾಳಿ ಹುಟ್ಟಿತ್ತು. ಆ ಬಿఱుಗಾಳಿ ಹುಟ್ಟಲೊಡನೆ ಜ್ಞಾನಜ್ಯೋತಿ ಕೆಟ್ಟಿತ್ತು. ಜ್ಞಾನಜ್ಯೋತಿ ಕೆಡಲೊಡನೆ, ನಾ ಬಲ್ಲೆ, ಬಲ್ಲಿದರೆಂಬ ಅఱుಹಿರಿಯರೆಲ್ಲರು ತಾಮಸಕ್ಕೊಳಗಾಗಿ ಸೀಮೆದಪ್ಪಿ ಕೆಟ್ಟರು ಕಾಣಾ ಗುಹೇಶ್ವರಾ |
1290.02 |
426 61‖10*/B52 |
ಅಲ್ಲಮ | ಗುಹೇಶ್ವರಾ |
|
|
ಟಿಪ್ಪಣಿ; * ಪುಟ ಸಂಖ್ಯೆ ‖ ವಚನ ಸಂಖ್ಯೆ [ಮೊದಲ ಪುಟ] 1 2 3 4 5 6 7 8 [ಕೊನೆ ಪುಟ]
ಸಿಕ್ಕ ಪಲಿತಾಂಶಗಳು 75 ಇದು ಪುಟ 6 ಈ ಪುಟದಲ್ಲಿ ಪಲಿತಾಂಶಗಳು 51 ರಿಂದ 60 ವರೆಗೆ |
|
|