checking data baseConnected successfully! Sample Image
  •  

'ಲಿಂಗಲೀಲಾವಿಲಾಸಚಾರಿತ್ರ' ವಚನಗಳು

search:
ಏನೂ ಏನೂ ಇಲ್ಲದ ಬಯಲೊಳಗೊಂದು ಬಗೆಗೊಳಗಾದ ಬಣ್ಣ ತಲೆದೋಱಿತ್ತು. ಆ ಬಣ್ಣವನಾ ಬಯಲು ಶೃಂಗರಿಸಲು, ಬಯಲು ಸ್ವರೂಪಗೊಂಡಿತ್ತು. ಅಂತಪ್ಪ ಸ್ವರೂಪಿನ ಬೆಡಗು ತಾನೆ, ನಮ ಗುಹೇಶ್ವರಲಿಂಗದ ಪ್ರಥಮ ಭಿತ್ತಿ 1000.02 275
1401*/B10
ಅಲ್ಲಮ ಗುಹೇಶ್ವರ
ಒಂದು ಇಲ್ಲದ ಬಿಂದುವ, ತಂದೆಯಿಲ್ಲದ ಕಂದನ, ಮಾತೆ ಇಲ್ಲದ ಜಾತನ, ಗಮನವಿಲ್ಲದ ಗಮ್ಯನ, ಮೂವರಱಿಯದ ಮುಗ್ಧನ ಠಾವ ತೋರಿಸು ಗುಹೇಶ್ವರಾ 457.02 276
1502*/B11
ಅಲ್ಲಮ ಗುಹೇಶ್ವರಾ
ಹುಟ್ಟು ಮೆಟ್ಟೆಂಬುದು ನಿಮಗಿಲ್ಲವಯ್ಯಾ, ನಿಮ್ಮಿಂದ ನೀವೆ ಸ್ವಯಂಭುವಯ್ಯಾ. ಇಂತಾದಿರಯ್ಯಾ, ಹರುಷದಿಂದ ನೀವಿಂತಾದಿರಯ್ಯಾ. ನಿಮ್ಮ ಮಹಾತ್ಮೆಯ ನೀವೆ ಬಲ್ಲಿರಯ್ಯಾ, ನಿಜಗುರು ಕಪಿಲಸಿದ್ಧಮಲ್ಲಿನಾಥಾ 1158.04 277
1600*/B12
ಸಿದ್ಧರಾಮ ಕಪಿಲಸಿದ್ಧಮಲ್ಲಿಕಾರ್ಜುನಾ
ಅಮೂಲ್ಯನಪ್ರಮಾಣನಗೋಚರಲಿಂಗ, ಆದಿಮಧ್ಯಾವಸಾನಗಳಿಲ್ಲದ ಸ್ವತಂತ್ರಲಿಂಗ, ನಿತ್ಯನಿರ್ಮಳಲಿಂಗ, ಅಯೋನಿಸಂಭವ ನಮ್ಮ ಕೂಡಲಸಂಗಮದೇವರು. 982.01 278
1605*/B13
ಬಸವಣ್ಣ ಕೂಡಲಸಂಗಮದೇವ
ತರುಗಳ ಮುರಿದು ಗಗನಕ್ಕೀಡಾಡುವ ಅನಿಲ ರೂಪೋ ನಿರೂಪೋ? ಬಲ್ಲಡೆ ನೀವು ಹೇಳಿ ಭೋ! ಗಜ ಸಿಂಹ ಶಾರ್ದೂಲವೆಂಬ ಅಧಿಕ ಮೃಗಂಗಳ ಮುರಿದೊತ್ತಿ ಕೆಡಹುತಿಪ್ಪ ವ್ಯಾಧಿ ರೂಪೋ ನಿರೂಪೋ? ಬಲ್ಲಡೆ ನೀವು ಹೇಳಿ ಭೋ! ಕಾಣಲೀಯದೆ ಕೇಳಲೀಯದೆ ಅವಧಾನಂಗಳ ಕೆಡಿಸುತ್ತಿರ್ಪ ನಿದ್ರೆ ರೂಪೋ ನಿರೂಪೋ? ಬಲ್ಲಡೆ ನೀವು ಹೇಳಿ ಭೋ! ಇಂತು ಆಳಿನಾಳಿನ ಅಂತಸ್ಥವನಾರಿಗೂ ಅರಿಯಬಾರದು. ಅನಾದಿಮೂಲದೊಡೆಯನ ಬಲ್ಲೆನೆಂಬ ಪರಿ ಎಂತೋ? ರೂಪೆಂದಡೆ ಶಬ್ದ, ನಿರೂಪೆಂದಡೆ ಶೂನ್ಯ; ಈ ಎರಡರ ಆದಿಯಿಂದತ್ತತ್ತ ಕಾಣಾ. ಎನ್ನ ತಂದೆ ಕಪಿಲಸಿದ್ಧಮಲ್ಲಿಕಾರ್ಜುನಲಿಂಗವು ಗುರುಕಾರುಣ್ಯವುಳ್ಳವರಿಗಲ್ಲದೆ ಅರಿಯಬಾರದು. 606.04 279
1606*/B14
ಸಿದ್ಧರಾಮ ಕಪಿಲಸಿದ್ಧಮಲ್ಲಿಕಾರ್ಜುನ
ನಿಮ್ಮ ತೇಜವ ನೋಡಲೆಂದು ಹೆಱಸಾರಿ ನೋಡುತ್ತಿರಲು ಶತಕೋಟಿ ಸೂರ್ಯರು ಮೂಡಿದಂತೆ ಇರ್ದುದಯ್ಯಾ ! ಮಿಂಚಿನಬಳ್ಳಿಯ ಸಂಚವ ಕಂಡಡೆ, ಎನಗಿದು ಸೋಜಿಗವಾಯಿತ್ತು ! ಗುಹೇಶ್ವರಾ ನೀನು ಜ್ಯೋತಿರ್ಲಿಂಗವಾದಡೆ ಉಪಮಿಸಿ ನೋಡಬಲ್ಲವರಿಲ್ಲಯ್ಯ! 1302.02 280
1707*/B15
ಅಲ್ಲಮ ಗುಹೇಶ್ವರಾ
ಮಹಾಕಾಲದಲ್ಲಿ ನಿಮ್ಮಿಂದ ನೀವೆ ಸ್ವಯಂಭುವಾಗಿರ್ದಿರಯ್ಯಾ ಒಂದನಂತಕಾಲ ಮಹವು ಮಹಾನಂದದಲಕ್ಕಾಡಿ, ಮತ್ತಲ್ಲಿಯೆ ತಲ್ಲಿಯವಾಗಿರ್ದೆಯೊಂದನಂತಕೋಟಿ ವರುಷ! ಕೂಡಲ ಚೆನ್ನಸಂಗಮದೇವ ವಿಪರೀತ ಚಾರಿತ್ರ. 1464.03 281
1708*/B16
ಚೆನ್ನಬಸವಣ್ಣ ಕೂಡಲಚೆನ್ನಸಂಗಮದೇವ
ತನಗೆ ತಾನೆ ಹುಟ್ಟಿದನಾಗಿ, ತಾನೆ ಸ್ಥಾವರವಾದ ಆ ಲಿಂಗವು, ತನ್ನಲ್ಲಿರ್ದ ರುಚಿಯ ಅವ್ಯಕ್ತಕ್ರೀಯಿಂದ ಮನವೆ ಬಾಯಾಗಿ ಉಂಬ ಲಿಂಗವು ಇತರರ ಸುಖವ ಬಲ್ಲುದೆ ಕೂಡಲಚೆನ್ನಸಂಗಮದೇವಾ 1238.03 282
1809*/B17
ಚೆನ್ನಬಸವಣ್ಣ ಕೂಡಲಚೆನ್ನಸಂಗಮದೇವಾ
ತಾಯಿ_ತಂದೆಯಿಲ್ಲದ ಕಂದಾ, ನಿನಗೆ ನೀನೆ ಹುಟ್ಟಿ ಬೆಳೆದೆಯಲ್ಲಾ ! ನಿನ್ನ ಪರಿಣಾಮವೆ ನಿನಗೆ ಪ್ರಾಣತೃಪ್ತಿಯಾಗಿರ್ದೆಯಲ್ಲಾ ! ಭೇದಕರಿಗೆ ಅಭೇದ್ಯನಾಗಿ ನಿನ್ನ ನೀನೆ ಬೆಳಗುತ್ತಿರ್ದೆಯಲ್ಲಾ ! ನಿನ್ನ ಚರಿತ್ರ ನಿನಗೆ ಸಹಜ ಗುಹೇಶ್ವರಾ. 1249.02 283
1810*/B18
ಅಲ್ಲಮ ಗುಹೇಶ್ವರಾ
ಒಡಲಿಲ್ಲದಾತ ಜಂಗಮ ಪ್ರಾಣವಿಲ್ಲದಾತ ಭಕ್ತನಯ್ಯಾ. ಆಚಾರವೇ ಜಂಗಮ, ವಿಚಾರವೇ ಭಕ್ತನಯ್ಯಾ. ಆಚಾರವಿಚಾರವೆಂಬುದು ಸ್ವಾನುಭಾವ ಸಂಭಾಷಣೆ ಕೂಡಲಚೆನ್ನ ಸಂಗಮದೇವಾ, 1069.03 93
1905*/A93
ಚೆನ್ನಬಸವಣ್ಣ ಕೂಡಲಚೆನ್ನಸಂಗಯ್ಯಾ
ಇತರ ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ 1905

ಟಿಪ್ಪಣಿ; * ಪುಟ ಸಂಖ್ಯೆವಚನ ಸಂಖ್ಯೆ

[ಮೊದಲ ಪುಟ]  12345678[ಕೊನೆ ಪುಟ]


ಸಿಕ್ಕ ಪಲಿತಾಂಶಗಳು 75 ಇದು ಪುಟ 2 ಈ ಪುಟದಲ್ಲಿ ಪಲಿತಾಂಶಗಳು 11 ರಿಂದ 20 ವರೆಗೆ