'ಲಿಂಗಲೀಲಾವಿಲಾಸಚಾರಿತ್ರ' ವಚನಗಳು
| ವೇದಾತೀತ ಸಡುವರ್ಣರಹಿತ ಅಪ್ಪಿ ತ್ರಿಂಶತ್ಯಳಾತೀತ ವ್ಯೋಮಾತೀತ ಕೂಡಲ ಸಂಗಮದೇವಾ |
954.01 |
261 7‖01*/B1 |
ಬಸವಣ್ಣ | ಕೂಡಲ ಸಂಗಮದೇವಾ |
|
|
| ನಾಮ ಅನಾಮನಿಲ್ಲ. |ನಾನು‖ತಾನು| ತಾನು ಮುನ್ನವೆ ಇಲ್ಲ. ಈ ಉಭಯ ನಾಮವಾವ ಸೀಮೆಯೊಳಗು ಇಲ್ಲ. ಒಡಲು ಇಲ್ಲ ನೆಳಲು ಇಲ್ಲ. ಏನೆಂಬುದೇನು ತಾನು ಮುನ್ನಿಲ್ಲ. ಚಿಕ್ಕಯ್ಯಪ್ರಿಯ ಸಿದ್ದಲಿಂಗ ನಾನು ಇಲ್ಲ ನೀನುಇಲ್ಲ. |
5.00 |
262 7‖02*/B2 |
ಘಟಿವಾಳಯ್ಯ | ಚಿಕ್ಕಯ್ಯಪ್ರಿಯ ಸಿದ್ದಲಿಂಗ |
|
|
| ಏನೆಂದೆನಲಿಲ್ಲ. ನುಡಿದು ಹೇಳಲಿಕಿಲ್ಲ. ನಿಜದಲ್ಲಿರ್ದ ಬೆಜಗ ಕುಜುಹು ಅಜ್ವುದೇ ? ಅದು ತನ್ನಲ್ಲಿ ತಾನಿಲ್ಲ. ಏನೆಂದೆನಲಿಲ್ಲದ ಬಯಲು. ಅಲಿ ಏನನೂ ಅಱಸಲಿಲ್ಲ ಇದಿರಿಲ್ಲ, ತಾನಿಲ್ಲ. ಚಿಕ್ಷಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ. |
440.07 |
269 7‖03*/B3 |
ಘಟ್ಟಿವಾಳಯ್ಯ | ಚಿಕ್ಕಯ್ಯಪ್ರಿಯ ಸಿದ್ಧಲಿಂಗ |
|
|
| ಆದಿಯಾಧಾರವಿಲ್ಲದಂದು, ಹಮ್ಮು ಬಿಮ್ಮಗಳಿಲ್ಲದಂದು, ಸುರಾಳ ನಿರಾಳವಿಲ್ಲದಂದು, ಶೂನ್ಯ ನಿಶ್ಶೂನ್ಯವಿಲ್ಲದಂದು, ಸಚರಾಚರವೆಲ್ಲಾ ರಚನೆಗೆ ಬಾರದಂದು ಗೊಹೇಶ್ವರಾ ನೀನೊಬ್ಬನೇ ಇದ್ದೆಯಲ್ಲಾ ಇಲ್ಲದಂತೆ |
5.02 |
263 8‖04*/C1 |
ಅಲ್ಲಮ | ಗುಹೇಶ್ವರಾ |
| ಇತರ ಆಕರ ಗ್ರಂಥಗಳು |
ಮಹದೇವಯ್ಯನ ಶೂನ್ಯಸಂಪಾದನೆ 3
|
| ಆದಿಅನಾದಿಯಿಲ್ಲದಂದು, ಮಹಾಶೂನ್ಯವಿಲ್ಲದಂದು, ಸಾಧ್ಯಅಸಾಧ್ಯವಿಲ್ಲದಂದು, ರೂಪು ನಿರೂಪಿಲ್ಲದಂದು, ಸ್ಥೂಲ ಸೂಕ್ಷ್ಮವಿಲ್ಲದಂದು, ಸಾಕಾರ ನಿರಾಕಾರವೆಂಬ ವಾಕು ಹುಟ್ಟದಂದು, ದ್ವೈತಾದ್ವೈತ ನಾಗದಂದು, ಶಂಕರ ಶಶಿಧರ ಈಶ್ವರನೆಂಬ ಗಣಾಧೀಶ್ವರರಿಲ್ಲದಂದು,ಉಮೆಯ ಕಲ್ಯಾಣವಾಗದಂದು, ಇವರಾರು ಒಬ್ಬರ ನಾಮಸೀಮೆಯಿಲ್ಲದಂದು ನೀನು ಉಲುಹಡಗಿರ್ದೆಯಲ್ಲ |ಕಲಿದೇವಯ್ಯಾ‖ಕಲಿದೇವರ ದೇವಯ್ಯಾ| |
498.08 |
270 8‖06*/B4 |
ಮಡಿವಾಳಮಾಚಿದೇವ | ಕಲಿದೇವರ |
|
|
| ಶೂನ್ಯ ಹುಟ್ಟದಂದು, ನಿಶ್ಶೂನ್ಯವಿಲ್ಲದಂದು, ಬ್ರಹ್ಮ ನಿಷ್ಣು ಮಹೇಶ್ವರ ರಿಲ್ಲದಂದು, ಹದಿ ದಿನಾಲ್ಕು ಭುವನ ದಿಕ್ಕು ವಿದಿಕ್ಕು ವಳಯಂಗಳಿಲ್ಲ ದಂದು, ಕೂಡಲಚೆನ್ನಸಂಗಯ್ಯ ಹೆಸರಿಲ್ಲದಿರ್ದನಂದು. |
830.03 |
271 9‖07*/B5 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಯ್ಯ |
|
|
| ದೇವಿಯರಿಬ್ಬರು ಇಲ್ಲದಂದು, ಪ್ರಧಾನ ಮಂತ್ರಿಗಳು ಇಲ್ಲದಂದು, ಆರು ಆರು ಇಲ್ಲದಂದು, ಸಂಕಲ್ಪ ನಿಕಲ್ಪವಿಲ್ಲದಂದು, ಆವ ಉತ್ಪ ತ್ಯಂಗಳಿಲ್ಲದಂದು ನಿನ್ನಲ್ಲಿ ನೀನೆಂಬುದು ಶೂನ್ಯವಾಗಿದ್ದೆ ಎನ್ನ | ಕಪಿಲಸಿದ್ಧಮಲ್ಲಿಕಾರ್ಜುನ‖ ಕಪಿಲಸಿದ್ಧಮಲ್ಲಿನಾಥ|
|
659.04 |
272 9‖08*/B6 |
ಸಿದ್ಧರಾಮ | ಕಪಿಲಸಿದ್ಧಮಲ್ಲಿಕಾರ್ಜುನ |
|
|
| ಸರ್ಪನ ಮೇಲೆ ಪೃಥ್ವಿ ರಚಿಸದಂದು ಸಮುದ್ರಂಗಳೇಳೂ ಹಾಸದಂದು ಅಷ್ಟದಿಗುದಂತಿಗಳು ಹೂಡದಂದು ಸ್ವಯಂಭು ಶಕ್ತಿಗಳು ಇಲ್ಲದಂದು ಗಂಗೆಗೌರೀವಲ್ಲಭರಿಲ್ಲದಂದು ಬ್ರಹ್ಮ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ ಈ ಐವರೂ ಇಲ್ಲದಂದು ನಿಜಗುರು ಕಪಿಲಸಿದ್ಧಮಲ್ಲಿನಾಥ ಅತ್ತತ್ತ ನಿಮಗೆ ಹೆಸರಿಲ್ಲವಯ್ಯಾ |
1076.04 |
8 10‖10*/A8 |
ಸಿದ್ಧರಾಮ | ಕಪಿಲಸಿದ್ಧಮಲ್ಲೇಶ್ವರಾ |
| ಇತರ ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ 10‖10
ಹಲಗೆಯಾರ್ಯನ ಶೂನ್ಯಸಂಪಾದನೆ 245
|
| ದ್ವೀಪಾದ್ವೀಪವಿಲ್ಲದಲ್ಲಿಂದತ್ತತ್ತ, ಕಾಲಕರ್ಮವಿಲ್ಲದಲ್ಲಿಂದತ್ತತ್ತ, ಮಾಯಾಮೋಹವಿಲ್ಲದಲ್ಲಿಂದತ್ತತ್ತ, ಏನು ಏನು ಇಲ್ಲದಲ್ಲಿಂದತ್ತತ್ತ, ಆದಿಮೂವರಿಲ್ಲದಲ್ಲಿಂದತ್ತತ್ತ, ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವಿಲ್ಲದಲ್ಲಿಂದತ್ತತ್ತ! |
625.07 |
273 10‖11*/B8 |
ಚಂದರಸ | ಸಿಮ್ಮಲಿಗೆಯ ಚೆನ್ನರಾಮ |
|
|
| ಅಪರವಿಲ್ಲದಂದು, ಪರಬ್ರಹ್ಮವಿಲ್ಲದಂದು, ಅನಾದಿಯಿಲ್ಲದಂದು ಆದಿಯಿಲ್ಲದಂದು ಸದಾಶಿವನಿಲ್ಲದಂದು ಶಿವನಿಲ್ಲದಂದು ಆನು ನೀನೆಂಬುದು ತಾನು ಇಲ್ಲದಂದು ಕೂಡಲಚೆನ್ನಸಂಗಯ್ಯ ಏನು ಎನ್ನದಿರ್ದನಂದು |
911.03 |
274 10‖12*/B9 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಯ್ಯ |
|
|
ಟಿಪ್ಪಣಿ; * ಪುಟ ಸಂಖ್ಯೆ ‖ ವಚನ ಸಂಖ್ಯೆ [ಮೊದಲ ಪುಟ] 1 2 3 4 5 6 7 8 [ಕೊನೆ ಪುಟ]
ಸಿಕ್ಕ ಪಲಿತಾಂಶಗಳು 75 ಇದು ಪುಟ 1 ಈ ಪುಟದಲ್ಲಿ ಪಲಿತಾಂಶಗಳು 1 ರಿಂದ 10 ವರೆಗೆ |
|
|