ಬ್ಲಾಗ್ ಬಗೆಗೆಇಲ್ಲಿ ನನ್ನ ಸಂಕಥನ ಅಥವಾ ಡಿಸ್ಕೋರ್ಸು ಎಂದು ಬಳಸುತ್ತಿದ್ದೇನೆ. ಬ್ಲಾಗ್ ಹೆಸರು ಅದೇ. ಈಗ ನಾವು ಕಥನ, ಮಹಾಕಥನ, ಸಂಕಥನ ಪದಗಳನ್ನು ಇಂಗ್ಲೀಶ್ ಜಗತ್ತಿನಲ್ಲಿ ವಿವರಿಸಲಾದ ಬಗೆಗೆಯನ್ನು ಅವುಗಳ ಸಾಧ್ಯ ಅರ್ಥವನ್ನೂ ಚರ್ಚಿಸಿ ಮುಂದೆ ಹೋಗೋಣ. ಇವು ಕ್ರಮವಾಗಿ narrative, metanarrative and discourse ಪದಗಳ ಅನುವಾದಗಳು ಮತ್ತು ಇಲ್ಲಿನ ಬಳಕೆಯನ್ನು ಅವು ಇಂಗ್ಲೀಶ್ ಭಾಶಿಕ ಜಗತ್ತಿನಲ್ಲಿ ಹೇಗೆ ಬಳಸಲಾಗುತ್ತಿದೆಯೋ ಅದೇ ಅರ್ಥದಲ್ಲಿ ಇಲ್ಲಿ ಬಳಸಲಾಗಿದೆ. ಆದರೆ, ಅಲ್ಲಿ ಅವುಗಳಿಗೆ ಗೊತ್ತುಪಡಿಸಿದ ವ್ಯಾಖ್ಯಾನವಿದೆಯೇ ಅಥವಾ ಹಲವು ವ್ಯಾಖ್ಯಾನಗಳಿವೆಯೇ? « »ಕಥನ ಎಂಬುದು ಹಳೆಯ ಕಾಲದ್ದೂ (ಅಥವಾ ಆಧುನಿಕ ಪೂರ್ವದಲ್ಲಿ ಅದೇ ಅರ್ಥದಲ್ಲಿ ಬಳಸಿದ್ದು) ಕಥೆ ಎಂದು. ಇದನ್ನು ಯಾವುದೇ ಘಟನೆ/ಘಟನಾವಳಿಗಳ ವಿವರಣೆಗೂ ಬಳಸಲಾಗುತ್ತದೆ. ಹೀಗಾಗಿ ಅಲ್ಲಿ narrative ಮತ್ತು narration ಎಂಬ ಎರಡು ಪದಗಳಿವೆ. ಇವೆರಡೂ "ಕಥೆಯೊಂದರ ಹೇಳುವಿಕೆ" ಅಥವಾ ಯಾವುದರ "ಬಗೆಗೆ ವಿವರಣೆ" ಎನ್ನುವ ಅರ್ಥದಲ್ಲಿ ಬಳಸಲಾಗುತ್ತಿದೆ. ಮೊದಲನೆಯ ಪದದ ಹೂರಣ ‘ಕಥೆ’ ಎಂದು ಬಳಸುವ ಕಾರಣಕ್ಕೆ ಯಾವ ‘ವಾಸ್ತವಕ್ಕೂ’ ಸಂಬಂಧಿಸದ್ದು ಎಂದು ಅರ್ಥ ಪಡೆದರೆ ಎರಡನೆಯ ಪದದ ಹೂರಣ "ವಿವರಣೆ" ಯಾಗಿದ್ದು ಅದು ಏನಾದರೂ ಘಟಿಸಿದ ಬಗೆಗೆ ಹೇಳುವುದು ಎಂಬ ಅರ್ತ ಪಡೆದಿದೆ. ಮೆಟಾನರೇಟಿವ್ ಅಥವಾ metanarrative ನ್ನು ಮಹಾಕಥನ ಎಂದು ಅನುವಾದಿಸಿಕೊಂಡಿದ್ದೇನೆ. (ವಸುಹಾತೋತ್ತರ ಬಗೆಗೆ ತಮ್ಮ ಹೊತ್ತಿಗೆಯಲ್ಲಿ ವಿವರವಾಗಿ ಚರ್ಚಿಸಿದ್ದಾರೆ. ಅದರ ಭಾಗವಾಗಿ ಮಹಾಕಥನವನ್ನೂ. ಆದರೆ ಅವರ ಒಂದೆಡೆ ವಸುಹಾತೋತ್ತರವನ್ನು ರಾಚನಿಕೋತ್ತರದೊಂದಿಗೆ ಸೇರಿಸುತ್ತಾರೆ. ಅಲ್ಲಿ ಅವರು ಬಳಸುವುದು ಮಹಾನ್ ಕಥನ ಎಂದು. ಆದರೆ ಅದು ಕೊನೆಯಲ್ಲಿ ಅವರು ಕೊಟ್ಟ ಪಾರಿಭಾಶಿಕ ಪದಗಳ ಪಟ್ಟಿಯಲ್ಲಿ ಬರುವುದಿಲ್ಲ. ) ಇದನ್ನು ಲಾಯಟಾರ್ಡ್ (French philosopher Jean-François Lyotard 1979ರಲ್ಲಿ ಮೊದಲು ಬಳಕೆಗೆ ತಂದ ಎನ್ನಲಾಗಿದೆ) ಬಳಸಿದ್ದು ವಿಜ್ಞಾನದ ದರ್ಶನಗಳಲ್ಲಿನ ಬೆಳವಣಿಗೆ (ಮುಖ್ಯವಾಗಿ ಥಾಮಸ್ ಕೂನ್ ಮತ್ತು ಪಾಲ್ ಫೇಯರಾಬೆಂಡ್ ಬಗೆಗೆ ಅವರು ತಮ್ಮ ಕೃತಿಯಲ್ಲಿ ಚರ್ಚಿಸಿದ್ದಾರೆ. ಅಲ್ಲಿಯೇ ಮೆಟಾನರೇಟಿವ್ ಪ್ರಸ್ತಾಪವೂ ಬರುತ್ತದೆ.). ಆದರೆ, ಸಮಾಜಶಾಸ್ತ್ರದಲ್ಲಿ ಇದನ್ನು ಬಳಸುವ ರೀತಿ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ಉದಾ. ವಿಕಿಪಿಡಿಯಾ ಹೀಗೆ ಉಲ್ಲೇಸಬಹುದು.
ಇಂತಹ ಮಹಾಕಥನಗಳ ಬಗೆಗೆ ಅಪನಂಬಿಕೆಯು ರಾಚನಿಕೋತ್ತರ ಚಿಂತನೆ ಮೂಲಭೂತ ಅಂಶ ಎಂದು ಕರೆಯಲಾಗಿದೆ. ಹಲವು ಸಲ ಇದನ್ನು ಇಂತಹ ಮಹಾಕಥನಗಳಿಗೆ ಸ್ಥಳೀಯ ಅಥವಾ ನಿರ್ದಿಶ್ಟ ಅಧ್ಯನವೇ ಮುಖ್ಯ ಎಂದು ವಿವರಿಸಲಾಗಿದೆ. ಇದನ್ನು ಹಲವು ಸಲ ರಾಶ್ಟ್ರೀಯತೆಯ ಮಹಾಕಥನವನ್ನು ತಿರಸ್ಕರಿಸುತ್ತವೆ. ಇಲ್ಲಿ ನಾನು ಮಹಾಕಥನದ ಸತ್ಯ/ಸುಳ್ಳು, ಬೇಕು/ಬೇಡಗಳ ಬಗೆಗೆ ವಾದಿಸಹೊಗುವುದಿಲ್ಲ. ಭಾರತೀಯ ರಾಶ್ಟ್ರೀಯತೆ ಕಟ್ಟಿಕೊಂಡಿರುವ ಹಿನ್ನೆಲೆಯಲ್ಲಿ ಕರಗಿಹೋದ ಕನ್ನಡಿಗ, ತೆಲುಗು, ತಮಿಳು ಇತ್ಯಾದಿ ಐಡೆಂಟಿಗಳ ಬಗೆಗೆ ಚರ್ಚೆಯಾಗುತ್ತಿರುವ ಸಮಯದಲ್ಲಿ ಈ ವಾದ ನಮ್ಮನ್ನು ಎಲ್ಲಿಗೆ ಕೊಂಡಯ್ಯಬಹುದು ಎಂದು ಬೇರೆ ಹೇಳಬೇಕಾದ ಅಗತ್ಯವಿಲ್ಲ ಎಂದು ಕೊಳುತ್ತೇನೆ. ಕೊನೆಯದಾಗಿ ಡಿಸ್ಕೋರ್ಸು ಅಥವಾ ಸಂಕಥನದ ಬಗೆಗೆ (ಆಧುನಿಕೋತ್ತರ, ವಸುಹಾತೋತ್ತರ ಮತ್ತು ರಾಚನಿಕೋತ್ತರಗಳನ್ನು ರಾಮಚಂದ್ರನ್ ಅವರು ಚರ್ಚಿಸಿದ್ದಾರೆ. ವಿವರಗಳನ್ನು ಈ ಲೇಖನ (href)ದಲ್ಲಿ ನೋಡಿ). ರಾಮಚಂದ್ರನ್ (ಈಹಬ್ ಹಸನ್ರನ್ನು ಉಲ್ಲೇಖಿಸುತ್ತಾ) ಆಧುನಿಕೋತ್ತರ ಚಿಂತನೆಯ "ವ್ಯಾಪಕ ಛತ್ರಿ"ಯಡಿಯಲ್ಲಿ ಬರುವ ಚಿಂತಕರಲ್ಲಿ ಮಿಶೆಲ್ ಫುಕೋ (ಹಾಗೂ ಹೇಡನ್ ವೈಟ್)ರನ್ನು ಇತಿಹಾಸ ವಿಭಾಗದಲ್ಲಿ ಗುರುತಿಸುತ್ತಾರೆ.2 ಇಂದು ಫುಕೋನ ಚಿಂತನೆಗಳು ಪಡುವಣ ದೇಶಗಳ ಅಕೆಡೆಮಿ ಅಧ್ಯಯನಗಳ ಭಾಗವಾಗಿವೆ. ಫುಕೋ ಸಂಕಥನ ವಿಶ್ಲೇಸಣೆ (Foucauldian Discourse Analysis) ಇನ್ನೂ ಹತ್ತಾರು ಭಿನ್ನ ಹೆಸರುಗಳಲ್ಲಿ (ಕೆಲವು ಸಲ ತುಸು ಭಿನ್ನ ವ್ಯಾಖ್ಯಾನದ ನೆಲೆಯಲ್ಲಿ ಸಂಸ್ಥೆಗಳ ಉದ್ಯೋಗಿಗಳ (ವಿದ್ಯಾರ್ಥಿ/ಸದಸ್ಯ) ಬಗೆಗಿನ ಅಧ್ಯಯನಗಳಲ್ಲಿ ಬಳಸಲಾಗುತ್ತಿದೆ. ಫುಕೋನ ಇತಿಹಾಸದ ಬಗೆಗಿನ ಚಿಂತನೆಗಳ ಮಹತ್ವ ಈಗಾಗಲೇ ತಿಳಿದರಿಗೆ ಅದರ ಹೊರಗೂ (ಅಥವಾ ಅದನ್ನು ಹೊರಗಿನಿಂದ ನಿಯಂತ್ರಿಸ/ಪ್ರಭಾವ ಬೀರಬಹುದಾದ) ಕೆಲವು ಬೆಳವಣಿಗೆಗಳಾಗಿವೆ. ಅವನ್ನು ಪಟ್ಟಿಮಾಡುವುದು ಒಳಿತೆಂದು ತೋರುತ್ತದೆ. ಅ) ಹಾಲ್ಬವಾಕ್ಸನ (Maurice Halbwachs-1877-1945) ಸಾಮೂಹಿಕ ನೆನಪುಗಳು (collective memory) ಇದು ಬದಲಾದ ಅರ್ಥದಲ್ಲಿ ಇತಿಹಾಸದೊಂದಿಗೂ ಸಂಬಂಧ ಬೆಸೆದುಕೊಂಡಿದೆ.
ಆ) ಸಾಮಾಜಿಕ ಐಡೆಂಟಿಟಿ ಸಿದ್ಧಾಂತ (ಮತ್ತು ಸ್ವವರ್ಗೀಕರಣ ಸಿದ್ಧಾಂತ)ಗಳ ಪರಿಣಾಮವಾಗಿ ಐಡೆಂಟಿಟಿ ರೂಪಗೊಳ್ಳುವಿಕೆ ಬಗೆಗೆ ಸಿದ್ಧಾಂತಗಳು ಒಂದು ಕಡೆ ಐಡೆಂಟಿಟಿ ಮತ್ತು ಇತಿಹಾಸದ ಮೇಲೆ ಪರಿಣಾಮ ಬೀರಿದೆ (ಅಲ್ಲದೆ ಇದು ಗುಂಪು-ಒಲವು ಹೇಗಾಗುತ್ತದೆ ಎಂದು ಪ್ರಯೋಗಗಳ ಮೂಲಕ ಸಿದ್ಧಮಾಡಿ ತೋರಿಸಿ ಕೊಟ್ಟಿದೆ).
ಇ) ಐಡೆಂಟಿಟಿ ಏನು ಸರಿ. ನಮಗೆ ಬಹು-ಐಡೆಂಟಿಟಿಗಳೂ ಇರುತ್ತವೆ ಎಂಬುದೂ ಸರಿ. ಆದರೆ, ಅಲ್ಲಿಯೂ ಐಡೆಂಟಿಟಿ ಜಾತಿ, ಧರ್ಮ, ಭಾಶಿಕ.... ಹಲವೇನೂ ಇವೆ. ಹುಟ್ಟಿನಿಂದ ಒಂದನ್ನೂ ಪಡೆದಿದ್ದರೂ ಬೇರೆಯೊಂದನ್ನು ಆರಿಸಿಕೊಂಡು ಗುರುತಿಸಿಕೊಳ್ಳ ಬಹುದಲ್ಲವೇ? ಹಾಗಿದ್ದಲ್ಲಿ ಅಂತಹವರನ್ನು ಏನೆಂದು ಕರೆಯ ಬೇಕು, «ಡೋಗಿ» ಐಡೆಂಟಿಟಿ ಹೊಂದಿದವರೆಂದೇ?
ಇಲ್ಲಿ ನಮ್ಮನ್ನು ಸರಿದಾರಿಗೆ ತರುವುದು ಅಡರ್ಸನ್ ಅವರ «ಕಲ್ಪಿತ ಸಮುದಾಯಗಳು» (imagined communities) ಚಿಂತನೆ. ಭಾಗಶಹ ಇದು ಸ್ವ-ಗುರುತಿಸಿಕೊಳ್ಳುವಿಕೆಯನ್ನೂ ವಿವರಿಸುತ್ತದೆ. ಇದನ್ನು ವಿವರಿಸುವ ಬದಲು ರಾಶ್ಟ್ರೀಯತೆಯ ಚರ್ಚೆಯ ಒಂದು ತುಣಕನ್ನು ಉಲ್ಲೇಖಿಸುತ್ತೇನೆ. ಬೆನೆಡಿಕ್ಟ್ ಅಂಡರ್ಸನ್ ಈ ಬಗೆಗೆ ಹೀಗೆ ವಾದಿಸುತ್ತಾರೆ. ಆವರು ಮೊದಲು ಈ ಕೆಳಗಿನ ಅರ್ನೆಸ್ಟ್ ಗೆಲ್ನರ್ನನ್ನು ಹೀಗೆ ಉಲ್ಲೇಖಿಸುತ್ತಾರೆ. ರಾಶ್ಟ್ರೀಯತೆ ದೇಶವೊಂದರ ಸ್ವ-ಪ್ರಗ್ನೆಯನ್ನು ಎಚ್ಚರಿಸುವುದಿಲ್ಲ: ಅದು ಎಲ್ಲಿ ಇಲ್ಲವೋ ಅಲ್ಲಿ ದೇಶವೊಂದನ್ನು ಹುಟ್ಟು ಹಾಕುತ್ತದೆ1 (Anderson 1991: 6) ಈ ಬಗೆಗೆ ಆಡರ್ಸನ್ ಅವರ ವಾದ ಹೀಗಿದೆ. ಇಲ್ಲಿ ಗೆಲ್ನರ್ ರಾಶ್ಟ್ರೀಯತೆಯನ್ನು «ಹುಟ್ಟುಹಾಕಲಾಗುತ್ತದೆ», « ಹೊಸೆಯಲಾಗುತ್ತದೆ» ಎಂಬ ಅರ್ಥ ಅವರ ವಾದ ಹುಟ್ಟು ಹಾಕುತ್ತದೆ. ಆದರೆ, ಹಾಗೆನ್ನಬೇಕಾದರೆ ಯಾವುದಾದರೂ ಒಂದು «ನಿಜ» ಐಡೆಂಟಿಟಿಯ ಬದಲಾಗಿ ಅದನ್ನು ಬದಲಾಯಿಸ ಬೇಕಾಗುತ್ತದೆ. ಆದರೆ ಅಂತಹ ಯಾವ «ನಿಜ» ಐಡೆಂಟಿಟಿಯೂ ಇಲ್ಲ. ಎಲ್ಲಾ ಐಡೆಂಟಿಟಿಗಳೂ, ತೀರ ಆರಂಭಿಕ ಎಲ್ಲರೂ ಒಬ್ಬರಿಗೊಬ್ಬರು ಮುಖ-ಪರಿಚಯ ಉಳ್ಳ ಹಳ್ಳಿಯನ್ನು ಹೊರತು ಪಡಿಸಿ (ಬಹುಶ ಅದೂ ಸಹ) ಕಲ್ಪಿತವೇ (ಅಥವಾ ನಾವು ಕಟ್ಟಿಕೊಂಡದ್ದೇ) ಎನ್ನುತ್ತಾರೆ. (ಅದೇ: 6). ಇದನ್ನು ಸ್ಥೂಲವಾಗಿ ಐಡೆಂಟಿಟಿ ವಿಶಯ ಚರ್ಚಿಸುವಾಗ ಇದನ್ನು ಒಂದು ಕೆವಿಟ್ ಎಂದು ಭಾವಿಸ ಬಹುದು. ಸರಿ ಐಡೆಂಟಿಟಿ ಹಾಗೂ ಇತಿಹಾಸಗಳ ನಡುವಿನ ಸಂಬಂಧ? ಈ ಬಗೆಗೆ ಎಡ್ವರ್ಡ್ ಬರ್ಕ್ ಹೇಗೆ ಹೇಳುತ್ತಾರೆ.
ಫುಕೋ ಅಂತಹ ಗುಂಪು ಅಥವಾ ವಸ್ತು (ಅವರು ಅದನ್ನು ವಸ್ತು ಅಥವಾ ಆಬ್ಜೆಕ್ಟು ಎನ್ನುತ್ತಾರೆ) ಅಂದಿನ ಕಾಲಮಾನದಲ್ಲಿ ಇತ್ತೇ ಎಂಬುದನ್ನು ಫುಕೋ ಒಂದು ಸಮಸ್ಯೆಯಾಗಿಸಿ ನೋಡುತ್ತಾರೆ. ಹಾಗಾದರೆ ನಾವೇಕೆ ತಮಿಳು ನಾಡು ಅಯ್ಯಂಗಾರಿಗಳು ಬರೆದ ಇತಿಹಾಸ ಅಥವಾ ತಮಿಳರು, ಆಂಧ್ರರು, ಕನ್ನಡಿಗರು ಬರೆದ ಇತಿಹಾಸ ಎಂದೇಕೆ ಚರ್ಚಿಸುವದಿಲ್ಲ. ಹಾಗೇನೂ ಇಲ್ಲ. ಚರ್ಚಿಸಲಾಗಿದೆಯೂ ಸಹ. 1982ರಲ್ಲಿ ಷ ಶೆಟ್ಟರ್ ತಮ್ಮ 1982ರ ಕುರುಕ್ಷೇತ್ರದಲ್ಲಿ ನಡೆದ "ಭಾರತೀಯ ಇತಿಹಾಸ ಕಾಂಗ್ರೆಸ್"ನ 43ನೆ ಗೋಷ್ಟಿಯಲ್ಲಿ ಮಂಡಿಸಿದ "Twentieth Century in Ancient India"ದಲ್ಲಿ ಈ ಬಗೆಗೆ ಚರ್ಚಿಸುತ್ತಾರೆ. ಹೀಗೆ ಹೇಳುವಾಗ ಅವರು ಹಿಂದಿನ ಸಂಪ್ರದಾಯ (ಕಾಂಗ್ರೆಸ್ನ ಅಧ್ಯಕ್ಷರು ಸಾಮಾನ್ಯವಾಗಿ ತುಳಿದ ಹಾದಿ) ವೊಂದನ್ನು ಮುರಿದ ಬಗೆಗೆ ಅವರಿಗೆ ತಿಳಿದಿದೆ. ಅಶ್ಟೇ ಅಲ್ಲ ಕೊನೆಗೆ ಅವರು ಇನ್ನೊಂದು ಪ್ರಶ್ನೆಯನ್ನು ಕೇಳಿಕೊಳ್ಳೋಣ. ಶೆಟ್ಟರ್ ಅವರ ಮಾತುಗಳು ಅಂದು (1982ರಲ್ಲಿ) ಅಶ್ಟು ಅಸಂಗತವಾಗಿದ್ದವೇ ಅಥವಾ ಅಚ್ಚರಿ ತರಿಸುವಂತಹವಾಗಿದ್ದವೇ? ಭಾಗಶಹ ಉತ್ತರ ಬರ್ಕ್ ಕೊಡುತ್ತಾರೆ. ಅವರ Varieties of Cultural History ಕೃತಿಯ ಮೊದಲ ಅಧ್ಯಾಯದಲ್ಲಿ ಗುರುತಿಸಿದಂತೆ 1997ರಲ್ಲಿಯೂ ಸಾಂಸ್ಕೃತಿಕ ಇತಿಹಾಸ ಚಿಂತನೆ ಹೊಸದು ಮತ್ತು ಈ ಐಡೆಂಟಿಟಿ ಇನ್ನಿತರ (ಉದಾಹರಣೆಗೆ ಫುಕೋನ ಡಿಸ್ಕರ್ಸು ಅನಾಲೈಸಿಸಿ) ಚಿಂತನೆಗಳು ನಂತರವೇ ಅಕೆಡೆಮಿಕ್ ಮಾನ್ಯತೆ ಪಡೆದುಕೊಂಡವು. ನಾವು ಸಂಕಥನ ಎಂದು ಬಳಸುತ್ತಿರುವುದು ಬಹಳ ಸಡಿಲ ಅರ್ಥದಲ್ಲಿ (ರಾಮಚಂದ್ರನ್ ಅವರು ಫುಕೋ ಸಂಕಥನವನ್ನು ವಿವರವಾಗಿ ಚರ್ಚಿಸಿದ್ದಾರೆ). ವಾಸ್ತವದ ಸಂಕಥನ ಅನಾಲೈಸಿಸ್ ಒಂದು ವಿಶಿಸ್ಟ ಪದ್ಧತಿಯಾಗಿ ಬೆಳವಣಿಗೆಯಾಗಿದೆ. ಇಂದು ಶೆಟ್ಟರ್ ಅವರ ಮಾತುಗಳು ಪ್ರಸ್ತುತವಶ್ಟೇ ಅಲ್ಲ ಅನಿವಾರ್ಯವೂ ಚಿಂತನೆಗಳ ಭಾಗವಿಗಿರ ಬೇಕು. ಆಗಿವೆಯೇ? ಬಹುಶ ಇನ್ನೂ ಇಲ್ಲ. ಇದಕ್ಕೆ ಭಾಗಶಹ ಕಾರಣವನ್ನು ನಾವು ಭಾರತದ ಬಹುಸಂಖ್ಯಾತ ವಿದ್ವಾಂಸರ ಐಡೆಂಟಿಟಿಯಲ್ಲಿಯೇ ಹುಡುಕ ಬೇಕು ಎಂದು ನಾನು ವಾದಿಸುತ್ತೇನೆ. ಭಾಗಶಹ ಇಂತಹವನ್ನು ಪ್ರಶ್ನಿಸಿಲ್ಲವೆಂದಲ್ಲ ಪೂರ್ತಿಯಾಗಿ ಒಟ್ಟಾರೆ ಚಿಂತನೆಯನ್ನೇ ಜಾಲಾಡಿ ಅಲ್ಲಿ ಹೊಕ್ಕಿರುವ ಪ್ರತಿ ಗ್ರಹೀತ ಅಥವಾ assumption ನ್ನೂ ಪ್ರಶ್ನಿಸಿ, ತರ್ಕಿಸಿ, ತಾಳೆ ನೋಡಬೇಕಾಗಿದೆ. ಅಂತಹ ಒಂದು ಸಣ್ಣ ಇತ್ತೀಚಿನ ಪ್ರಶ್ನೆ ಅಥವಾ ಪ್ರಶ್ನಿತವಾದ ಗೃಹಿತವೆಂದರೆ (ನಾನು ಮೊದಲು ಓದಿದ್ದು ಇಂಗ್ಲೀಶ್ ದಿನಪತ್ರಿಕೆ ದಿ ಹಿಂದೂ ನಲ್ಲಿ) ಭಾರತೀಯ ಸಂಸ್ಕೃತಿ ಮೂಲತಹ ಸಸ್ಯಾಹಾರಿಯೇ? ಎಂಬುದು, ಬಹುಶ ಸುಮಾರು ಎರಡು ದಶಕಗಳ ಹಿಂದೆ. ಜೊತೆಗೆ ಅಲ್ಲಿ ಭಾರತೀಯರ ಆಹಾರಭ್ಯಾಸ ವಿವರಗಳೂ ಇದ್ದವು. ಈಗ ನಾವು ರಾಜ್ಯವಾರು ವಿವರಗಳನ್ನೂ ನೋಡುತ್ತಿದ್ದೇವೆ. ಅದಿರಲಿ ಪ್ರತಿಶ್ಟಿತ ದಿನ/ವಾರ ಪತ್ರಿಕೆಯಲ್ಲಿ ಯಾವುದಾದರೋ ತಿಂಡಿ ಹೇಗೆ ಮಾಡಬೇಕು ಎಂಬ ತಲೆಬರಹದಡಿ ಮಾಂಸಹಾರದ ತಿಂಡಿಗಳ ಬಗೆಗೆ ಬರತೊಡಗಿದು ಯಾವಾಗಿನಿಂದ. ನನಗೆ ನೆನಪಿರುವಂತೆ ಹಿಂದೆ ಕೇವಲ ಸಸ್ಯಾಹಾರಗಳನ್ನು ಮಾತ್ರ ಕೊಡಲಾಗುತ್ತಿತ್ತು. ಇದನ್ನು ಪತ್ತೆ ಮಾಡುವುದು ಅಂತಹ ಕಶ್ಟವಾಗಲಿಕ್ಕಿಲ್ಲ, ಎಲ್ಲಕ್ಕಿಂತ ಹೆಚ್ಚಾಗಿ ಅದು ಕಾಲಮಾನದಲ್ಲಾದ ಚಿಂತನೆಯ ಪಲ್ಲಟ ಅಥವಾ ಬದಲಾವಣೆಯನ್ನು ಸೂಚಿಸುತ್ತದೆ. ವಿಜಯನಗರ ಇತಿಹಾಸದ ಬಗೆಗೆ ಆರಂಭಿಕ ಎರಡು ಸಮಸ್ಯೆಗಳ ಬಗೆಗೆ ಸುಬ್ಬರಾಯಲು ಹೇಳುತ್ತಾರೆ. ಒಂದು ಅದರ ಹುಟ್ಟಿನ ಬಗೆಗೆ ಅದರಲ್ಲೂ ವಿಶೇಸವಾಗಿ ಅದರ ಸ್ಥಾಪಕರ ಭಾಶಿಕ ಐಡೆಂಟಿಟಿ ಬಗೆಗೆ ಮತ್ತು ಇನ್ನೊಂದು ಅದರ ಇಸ್ಲಾಂ ವಿರೋಧಿ ನಿಲುವಿನ ಬಗೆಗೆ. ((Subbarayulu 2008: 84). ಮೊದಲನೆಯದು ಈಗಾಗಲೇ ಒಪ್ಪಿತವಾದಂತೆ ಸಂಗ ವಂಶದ ಹಕ್ಕ-ಬುಕ್ಕ ಅಣ್ಣತಮ್ಮಂದರು ಹಲವು ಪ್ರಾಂತಗಳನ್ನು ಹೊಯ್ಸಳರ ಕೆಳಗೆ ಆಳುತ್ತಿದ್ದರು ಮತ್ತು ಅವರ ಶಾಸಗಳು ನಮಗೆ ದೊರೆಯುತ್ತವೆ. ಆದರೆ ಎರಡನೆಯದು ಅಶ್ಟು ಸುಲಭದ ತುತ್ತಲ್ಲ. ಲಿಸೆಟ್ ಅವರು ಚರ್ಚಿಸುವಂತೆ ಕರ್ನಾಟಕದ ಹಲವು ಕೃತಿಗಳಲ್ಲಿಯೂ ಭಿನ್ನವಾಗಿಯಾದರೂ ಸುಲ್ತಾನರು ಒಂದಾಗಿ ತಾಲಿಕೋಟ ಯುದ್ಧದಲ್ಲಿ ವಿಜಯನಗರ ಪಡೆಯನ್ನು (1565, ಆ ಯುದ್ಧದಲ್ಲಿ ರಾಮರಾಯ ಸಾಯುತ್ತಾನೆ) ಸೋಲಿಸಿದರು ಎನ್ನುತ್ತವೆ ಮತ್ತು ಅದರೊಂದಿಗೆ ವಿಜಯನಗರ (ಸಾಮ್ರಾಜ್ಯ ಇಲ್ಲವಾಯಿತು ಅಥವಾ ಹೆಸರಿಗೆ ಮಾತ್ರ ಜೀವ ಉಳಿಸಿಕೊಂಡಿತು ಎನ್ನುತ್ತವೆ). ಸಾಮಾಜಿಕ ನೆನಪುಗಳ ಬಗೆಗೆ ವಿಶೇಸವಾಗಿ ಚರ್ಚಿಸುವ ಲಿಸೆಟ್ ಮತ್ತು ಮಾರಿಸನ್ ವಾಸ್ತವದ ಹಲವು ಹೊಳಹುಗಳನ್ನು ನೀಡುತ್ತಾರೆ (Lycett and Morison 2013: 84). ಆದರೆ ವಿಜಯನಗರದ ಹುಟ್ಟಿನ ಬಗೆಗಿನ ಎರಡನೆಯ ನಿಲುವು ಅಷ್ಟು ಸುಲಭದ ತುತ್ತಲ್ಲ ಎಂದು ಇತಿಹಾಸಕಾರರು ಭಾವಿಸತೊಡಗಿದ್ದಾರೆ. ಈ ಬಗೆಗೆನ ಲೇಖನ ಹಿಂದೂ ಮತ್ತು ಟರ್ಕ್. ಲಿಸೆಟ್ ಸರಿಯಾಗಿಯೇ ವಿಜಯನಗರದಲ್ಲಿ ಹಲವು ಹಿಂದೂ ಪಂಗಡಗಳು, ಜೈನ್ಯ ಹಾಗೂ ಮುಸ್ಲಿಂರೂ ಇದ್ದರು ಎಂದು ಹೇಳಿದರೆ ಅದೇನು ಹಿಂದೂ ಧರ್ಮದ ರಕ್ಷಣೆಗೆ ಹುಟ್ಟಿದುದು ಎಂಬ ಚಿಂತನೆಯನ್ನು ತಿರಸ್ಕರಿಸುವುದಿಲ್ಲ. ಬದಲಾಗಿ ಲಿಸೆಟ್ ಮತ್ತು ಮಾರಿಸನ್ ಗುರುತಿಸಿದಂತೆ "(ಮುಸ್ಲಿಂಮರ) ಮಂತಾಧ ಮತ್ತು ಅಪಾಯದ ಸಮುದ್ರದ ನಡುವೆ ಇದ್ದ ಎಲ್ಲವನ್ನೂ ಒಳಗೊಳ್ಳುವ (cosmopolitan), ಸಹಿಸಿಕೊಳ್ಳುವ ಒಂದು ದ್ವೀಪ" ಎನ್ನಲಾಗುತ್ತದೆ (ಉಲ್ಲೇಖ Lycett and Morison 2013: 438). ಈ ಹಿನ್ನೆಲೆಯಲ್ಲಿನ ಲೇಖನ "ವಿಜಯನಗರ ಮತ್ತು ಟರ್ಕರು". ಅಲ್ಲಿ ಐಡೆಂಟಿಟಿ ಇಸ್ಯೂ ಬಗೆಗೆ ಚರ್ಚಿಸಿದ್ದೇನಾದರೂ ವಿವರವಾಗಿ ಅಲ್ಲ. ಅದಕ್ಕೆಕ ಟರ್ನರ್ ಮತ್ತು ಟಫೆಲ್ ಅವರ ಚಿಂತನೆಗಳ ಆಧಾರದ «ಸ್ವ-ಐಡೆಂಟಿಟಿ ಸಿದ್ಧಾಂತ» (Self identity Theory) ಬಗೆಗೆ ಚರ್ಚಿಸ ಬೇಕಾದ ಅಗತ್ಯ ಉಂಟಾಗುತ್ತದೆ. ಇತಿಹಾಸದಲ್ಲಿ ಇದು ಎಶ್ಟು ಮುಖ್ಯವೋ ಹಾಗೆಯೇ ಸಮಕಾಲೀನ ಚಿಂತನೆಗಳಲ್ಲಿಯೂ ಸಹ. ಈ ಹಿನ್ನೆಲೆಯಲ್ಲಿಯೇ ವಿಜಯನಗರದ ಇತಿಹಾಸದ ಬಗೆಗೆ ಮರು ಚಿಂತನೆಗೆ ಅಡ್ಡಿಯೆಂದರೆ ಇತಿಹಾಸಕಾರರ ಐಡೆಂಟಿಟಿ ಎಂದು ಹೇಳಲೇಬೇಕಾಗುತ್ತದೆ. ಏಕೆಂದರೆ ಈ ಚಿಂತನೆಯು ಹೊರಹೊಮ್ಮೆ ಸುಮಾರು ಕಾಲು ಶತಮಾನವಾಗಿದೆ.4 ಮೇಲೆ ಬರ್ಕ್ ಅವರನ್ನು "ಹಿಂದೆಯು (past, ಇಂದಿನಂತೆ)" ಇದನ್ನು "ಹಿಂದೆಯೂ ಸಹ ಇಂದಿನಂತೆ" (in the past as in the present) ಎಂದು ಬರೆಯ ಬಹುದಲ್ಲವೇ? ಅಡಿಟಿಪ್ಪಣಿ1‘Nationalism is not the awakening of nations to self-consciousness: it invents nations where they do not exist.’!! (Anderson 1991: 9)
2 ಆದರೆ ಅವರ ಅಧ್ಯಾಯ «ಆಧುನಿಕ ವಾದಗಳು ಮತ್ತು ಫುಕೋ» ಇಲ್ಲಿಯ ಫುಕೋನ ಚಿಂತನೆಗಳ ಮಹತ್ವ ಅರುಹುತ್ತದೆ. ಅದನ್ನು ವಿಸ್ತಾರವಾಗಿ ಚರ್ಚಿಸುತ್ತಾರೆ ಸಹ. ಅವರು ಗುರುತಿಸುವ ಭಾರತೀಯರಲ್ಲಿ ಪಾರ್ಥೋ ಚಟರ್ಜಿಯೂ ಒಬ್ಬರು. ಆದರೆ ಭಾರತೀಯ ಮೂಲದ ವಿದ್ವಾಂಸರಲ್ಲಿ ಅವರು ಗುರುತಿಸುವುದು ಹೋಮಿ ಬಾಬಾ ಮತ್ತು ಗಾಯತ್ರಿ ಸ್ಪಿವಾಕ್
3‘
ಇಂಗ್ಲೀಶ್ ಮೂಲ ...how could a century that colored th perspective of the majority of scholars of South Keep a student of history like me untouched? (settar:87) ಈ ವಾಕ್ಯದ ಭಾಗವನ್ನು ಸುಬ್ಬಣ್ಣ ರೈ ತುಸು ಬೇರೆಯಾಗಿ ಅನುವಾದಿಸಿದ್ದಾರೆ. ಅದು ಹೀಗಿದೆ; ದಕ್ಷಿಣದ ಬಹುಪಾಲು ವಿದ್ಯಾಂಸರ ಪರಿಪ್ರೇಕ್ಷವನ್ನು ವರ್ಣರಂಜಿತವಾಗಿಸಿದ ಶತಮಾನವೊಂದು ನನ್ನಂತಹ ಇತಿಹಾಸ ವಿದ್ಯಾರ್ಥಿಯನ್ನು ಅಸ್ಪರ್ಶವನ್ನಾಗಿಸಲು ಹೇಗೇ ತಾನೆ ಸಾಧ್ಯ? (settar:98) ಅವರ ಮತ್ತು ನನ್ನ ಅನುವಾದದಲ್ಲಿನ ವ್ಯತ್ಯಾಸದ ಕಾರಣಕ್ಕೆ ಮೂಲ ಮತ್ತು ಅವರ ಅನುವಾದವನ್ನೂ ಇಲ್ಲಿ ಕೊಟ್ಟಿದ್ದೇನೆ.
4‘
ನನಗೆ ನೆನಪಿರುವಂತೆ ಈ ಬಗೆಗಿನ ಮೊದಲ ಮಾಹಿತಿಯುತ ಲೇಖನ ಫಿಲಿಪ್ ವ್ಯಾಗನರ್ ಅವರ
‘"Sultan among Hindu Kings": Dress, Titles, and the Islamicization of Hindu Culture at Vijayanagara’ ಲೇಖನ ಮೊದಲು 1996ರಲ್ಲಿ ಪ್ರಕಟವಾಯಿತು. (http://www.jstor.org/stable/2646526, The Journal of Asian Studies, Vol. 55, No. 4 (Nov., 1996), pp. 851-880). ಇಲ್ಲಿ ಮೊದಲು ಅವರು ಇಸ್ಲಾಮಿಕೇಟ್ ಎಂಬ ಚಿಂತನೆಯನ್ನು ವಿಜಯನಗರದ ಮೇಲಿನ ಇಸ್ಲಾಂ ಪ್ರಭಾವವನ್ನು ಗಣಿಸಲು ಬಳಸುತ್ತಾರೆ
ಗ್ರಂಥಸೂಚಿBurke Peter, 2011, From "History as Social Memory", in: The Collective Memory Reader , ed. by Olick Jafre K, Vinitzky-Seroussi Vered, and Levy Daniel, New York, Oxford University Press, pp. 188– 192.
Hegde Rajaram and Sandeep Kumar Shetty, 2008, Reapraisal of the History of Fall of Viyayanagara,in: Journal of Karnataka Studies 5.2, May-October 2008, pp. 101–124.
|
ಟಿಪ್ಪಣಿಗಳು |