ಪದ್ಯದ ಸಾಲುಗಳನ್ನು ಹಚ್ಚಲಾಗಿಲ್ಲ ಅಥವಾ ಅವು 6 ಸಾಲುಗಳನ್ನು ಮೀರಿವೆ
ಮರೆಯ ಬೇಡಿ ಪದ್ಯದ ಒಟ್ಟು ಸಾಲಿನ ಒಂದು ಭಾಗ ಹಚ್ಚ ಬೇಕಾದರೆ ಅದರ ನಂತರದ ಸಾಲಿನ ಮೊದಲ ಅಕ್ಕರ ಒತ್ತಕ್ಷರವಾಗಿದ್ದರೆ, ಹಚ್ಚಬೇಕಾದ ಸಾಲಿನ ಕೊನೆಯ ಅಕ್ಕರವು ಗುರು ಎಂದು ಪರಿಗಣಿಸದಿದ್ದರೆ ಸರಿಯಾದ ಗುರು-ಲಘು (ಪ್ರಸ್ತಾರ) ಸರಿ ತೋರಿಸದಿರ ಬಹುದು.
ಬಳಸುವುದು ಹೇಗೆ?
ಪದ್ಯವೊಂದರ ಛಂದಸ್ಸಿನ ವಿವರಗಳು ಬೇಕೆಂದರೆ ಆ ಪದ್ಯದ ಸಾಲುಗಳನ್ನು ಮೇಲಿನ ಪಠ್ಯ ಬಾಕ್ಸ್‌ನಲ್ಲಿ ಹಚ್ಚಿ ಪದ್ಯದ ಸಾಲುಗಳು ಹಚ್ಚಿ, ಮತ್ತು ಹಾಗೆಯೇ ಮೇಲಿನ ಎರಡು ರೇಡಿಯೋ ಬಟನ್ ಆಯ್ಕೆಯಲ್ಲಿ ಒಂದನ್ನು ಆಯ್ದುಕೊಳ್ಳಿ. ಮೊದಲನೆಯದು ಮಾತ್ರಾ, ಅಕ್ಕರ ಗಣ, ಅಂಶಗಣ ಮತ್ತು ಸಂಸ್ಕೃತ ಛಂದಸ್ಸು ಬೇಕಾದಲ್ಲಿ ಆಯ್ಕೆ ಮಾಡಿಕೊಳ್ಳಿ. ಅಶಗಣ ಛಂದಸ್ಸು ಬೇಕೆಂದಾದಲ್ಲಿ ಪಕ್ಕದ ಇನ್ನೊಂದು ರೇಡಿಯೋ ಬಟನ್ ಪ್ರತಿ ಛಂದಿಸ್ಸಿಗೂ ನಿರ್ದಿಶ್ಟ ಸಂಖ್ಯೆ ಸಾಲುಗಳನ್ನು (ಕನಿಶ್ಟ, ಗರಿಶ್ಚ) ಹಚ್ಚಬೇಕು.
ಗಮನಕ್ಕೆ
ಇಲ್ಲಿ ಯತಿ, ಪ್ರಾಸ ಮುಂ. ಹೆಚ್ಚುವರಿ ಅಂಶಗಳನ್ನು ಗಣನೆ ತೆಗೆದುಕೊಂಡಿಲ್ಲ ಮಾತ್ರಗಣದಲ್ಲಿ ಗಣ ವಿಭಜನೆ ತೆಗೆದುಕೊಳ್ಳಲಾಗಿದೆ. ಅಂಶ ಛಂದಸ್ಸಿನಲ್ಲಿ ಹೆಚ್ಚುವರಿಯಾಗಿ ಬಂದ ಲಘು, ಗುರುಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಕೊನೆಯ ಎರಡರ ಪರಿಣಾಮವೆಂದರೆ ಕೆಲವು ಸಲ ಒಂದಕ್ಕೂ ಹೆಚ್ಚು ಛಂದಸ್ಸುಗಳು ಆಯ್ಕೆಯಾಗ ಬಹುದು. ಇದರ ಹೊರತಾಗಿಯೂ ಕೆಲವೊಂದು ಇಲ್ಲಿ ಬಳಸಿದ ಛಂದಸ್ಸು ಪ್ರಕಾರದ ಉದಾಹರಣೆಗಳು ಒಂದಕ್ಕೂ ಹೆಚ್ಚು ಛಂದಸ್ಸು ಸಾಧ್ಯತೆಯನ್ನು ತೋರಬಹುದು. ಅಂಶಗಣ ಪ್ರಕಾರದ ಛಂದಸ್ಸು ನಡುವಕ್ಕರಕ್ಕೆ ಬಳಸಿದ ಸಾಲು “ನುಡಿಗು|ಮೋಪನ|ಪಡೆಮಾತ|ನಾತನಿ|ರ್ದೆಡೆಗೆ ವಕ್ಕುಂ|” ನಡುವಕ್ಕರಕ್ಕಲ್ಲದೆ ಉತ್ಸಾಸಹಕ್ಕೂ ಪೂರ್‍ತಿಯಾಗಿ ಹೊಂದುತ್ತದೆ.
ಸಂಸ್ಕತ ಛಂದಸ್ಸಿನ ಉಷ್ಣಿಕ್ ನಂತರದ ಪ್ರಕಾರಗಳನ್ನು ವರ್ಣಗಣದ ಆಯ್ಕೆಯಲ್ಲಿಯೂ ಹಚ್ಚಿ ನೋಡಿ. ಆಸಕ್ತಿದಾಯಕ ಹೆಚ್ಚಿನ ವಿವರಗಳು ತಿಳಿಯಬಹುದು
ಉಲ್ಲೇಖದ ವಿವರಗಳ ಮಾಹಿತಿ ಪುಟದ ಭಾಗಕ್ಕೆ ಹೋಗಲು ಇಲ್ಲಿ ಕ್ಲಿಕ್ಕಿಸಿ
ಲಘು-ಗುರು ಅಕ್ಕರಗಳನ್ನು ಗುರುತಿಸುವುದು ಹೇಗೆ? ದೀರ್ಘ ಅಕ್ಕರಗಳಿಗೆ ಗುರು ಬರುತ್ತದೆ ಮತ್ತು ಹರ್ಸ್ವ ಅಕ್ಕರಗಳಿಗೆ ಲಘು
ಲಘು-ಗುರು ದೀರ್ಘ ಅಕ್ಷರಗಳು
- u - u , - u , - - u ಶಾಲೆ, ಈಟಿ, ಏಣಿ, ಓಡಾಟ (ಈ,ಊ,ಏ, ಓ)
ಲಘು-ಗುರು ಐ, ಔ ಅಕ್ಷರಗಳು
- u u, - u u ನೈದಿಲೆ, ಔಡಲ
ಲಘು-ಗುರು ಅನುಸ್ವಾರ, ವಿಸರ್ಗ
- u u, - u ಬಂದನು, ದುಃಖ
ಲಘು-ಗುರು ಒತ್ತಕ್ಷರದ ಹಿಂದಿನ ಅಕ್ಷರ
- u, u - u, u - u ಒತ್ತು, ನಿಸರ್ಗ, ಸುಖಾಂತ್ಯ
ಅರ್ಧ ವ್ಯಂಜನ
u -, - - ಕೊರಳ್, ಮತ್ತರ್
ಷಟ್ಪದಿಯ 3, 6 ನೆಯ ಸಾಲುಗಳ ಕೊನೆಯ ಅಕ್ಷರ
ವರ್ಣ|ಅಕ್ಕರ ಗಣ ಛಂದಸ್ಸು
ಯ: u – -
ಮ: – – -
ತ: – – u
ರ: – u -
ಜ: u – u
ಭ: – u u
ನ: u u u
ಸ: u u -
ಅಂಶ ಗಣ ಛಂದಸ್ಸು
ಅಂಶಗಣದ ಆಧಾರ ಬ್ರಹ್ಮ, ವಿಷ್ಣು, ರುದ್ರ ಲೆಕ್ಕ ಹೀಗಿದೆ. ಇವು ಜನಪ್ರಿಯ ಹೆಸರುಗಳಾದರು ಜಯಕೀರ್ತಿ ಇವನ್ನು ಮದನ, ರತಿ, ಶರ ಎಂದು ಕ್ರಮವಾಗಿ ಕರೆಯುತ್ತಾನೆ (ತೆಲುಗುನಲ್ಲಿ ಸೂರ್ಯ, ಇಂದ್ರ, ಚಂದ್ರ ಎಂದು ಕರೆಯಲಾಗಿದೆ).
ಬ್ರಹ್ಮ ಗಣ -- ,-u, uu-,uuu ಒಟ್ಟು 4 ವಿಷ್ಣು ಗಣ -uu,--u,---,-u-,uu--,uu-u,uuu-,uuuu ಒಟ್ಟು 8 ರುದ್ರ ಗಣ ----,uu---, -u--,uuu--, --u-,uu-u-, -uu-,uuuu-, ---u,uu--u, -u-u,uuu-u, --uu,uu-uu,-uuu,uuuuu ಒಟ್ಟು 16
ಲಲಿತ ರಗಳೆ: (2) ಸಾಲುಗಳಿಗೆ ಮಿತಿಯಿಲ್ಲ (ಇಲ್ಲಿ 2 ಸಾ. ಬಳಸಲಾಗಿದೆ), ಪ್ರತಿ ಸಾಲಿನಲ್ಲಿ 5 ಮಾತ್ರೆಗಳ 4 ಗಣಗಳು
5|5|5|5 5|5|5|5;
ವಿಷಯ ವಿಷವಲ್ಲಿಯಂ ಪೆರ್ಚಿಸುವ ಜಲಧಾರೆ ಸಾಧುತ್ವಮಂ ಕಿಡಿಸಿ ನಡೆಸುವ ದುರಾಚಾರೆ
×
ಶರ ಷಟ್ಪದಿ (3/6) ಪ್ರತಿ ಪಾದದಲ್ಲಿಯೂ 4 ಮಾತ್ರೆಯ ಗಣ, 1,2,4,5ರಲ್ಲಿ ಎರಡು ಗಣಗಳು ಮತ್ತು 3,6ನೆಯ ಸಾಲುಗಳಲ್ಲಿ ಮೂರು ಗಣಗಳು ಮತ್ತು ಒಂದು ಗುರು (ಅಥವಾ ಲಘು) ಹೆಚ್ಚುವರಿ. ‘U – U’ (ಜಗಣ) ಯಾವ ಗಣದಲ್ಲಿಯೂ ಬರಕೂಡದು.
4|4 4|4 4|4|4| 4|4 4|4 4|4|4|
ಈಶನ |ಕರುಣೆಯ ನಾಶಿಸು | ವಿನಯದಿ ದಾಸನ | ಹಾಗೆಯೆ | ನೀ ಮನ | ವೇ ಕ್ಲೇಶದ | ವಿಧ ವಿಧ ಪಾಶದ | ಹರಿದು ವಿ ಲಾಸದಿ | ಸತ್ಯವ | ತಿಳಿ ಮನ | ವೇ
ತ್ರಿಷ್ಟುಪ್ಪು : 4 ಪಾದಗಳು, ಪ್ರತಿಪಾದಕ್ಕೆ 11 ಅಕ್ಕರಗಳು,ಪ್ರತಿ ಸಾಲಿನ ಕೊನೆಯ 3 ಅಕ್ಕರಗಳು ಯಗಣ ಆಗಿರಬೇಕು (u--) (ಮಳಿಗಿ, 2006, ಪು 24-25)
ಕಸ್ಯನೂನಂ ಕತಮಸ್ಯಾ ಮೃತಾನಾಂ
ಮನಾಮಹೇ ಚಾರುದೇವ ಸ್ಯನಾಮಂ
ಕೋನೋಮಹ್ಯಾ ಅದಿತಯೇ ಪುನರ್ದಾತ್
ಪಿತರಂಚ ದೃಶೇಯಂ ಮಾ ತರಂಚಂ
(ರಾಘವಾಚಾರ್ಯರು, 1988, ಪು 120)
ಮೇಲಿನ ಮಾತ್ರಾಗಣ,ಅಕ್ಕರ ಗಣ ಮತ್ತು ಅಂಶಗಣ ಉದಾಹರಣೆಗಳಲ್ಲಿ ಕಂಸದಲ್ಲಿ ಕೊಡಲಾದವು ಕನಿಶ್ಟ/ಗರಿಶ್ಟ (ಕಡಿಮೆ/ಹೆಚ್ಚೆಂದರೆ) ನಮೂದಿಸ ಬೇಕಾದ ಸಾಲು/ಗಳು. ಉದಾಹರಣೆ ರಗಳೆ 2 ಕ್ಕಿಂತ ಹೆಚ್ಚು ಪದ್ಯದ ಸಾಲುಗಳನ್ನು ಹಚ್ಚಿದರೆ ಬೇರೇನೋ ತೋರಿಸ ಬಹುದು. ಆದರೆ, ಎಲ್ಲ (2-6) ರ ನಡುವಿನ ಪದ್ಯದ ಸಾಲುಗಳಿಗೆ ಲಘ-ಗುರು ವಿಭಜನೆ ಟೇಬಲ್ (ಮಾತ್ರೆಗಳ ಮೊತ್ತ ಹಾಗೂ ಒಟ್ಟು ಅಕ್ಕರಗಳ ವಿವರಗಳೊಂದಿಗೆ) ಕಾಣಿಸಿಕೊಳ್ಳುತ್ತದೆ. ನೆನಪಿರಲಿ ಇಲ್ಲಿ ಕೆಲವು ಹೊತರು ಪಡಿಸಿ ಪೂರ್ಣ ಪದ್ಯದ ಸಾಲುಗಳಿಗೆ ಛಂದಸ್ಸು ಗುರುತಿಸಲಾರದು. ಇದಕ್ಕೆ ಬದಲಿಯಾಗಿ ಬೇರೆ ಇಂತಹ (ಉದಾ ಕವನ ತಂತ್ರಾಶ ಅಥವಾ ಅನೂಪ್ ಶೆಟ್ಟಿಯವರ ವೆಬ್ ಬಳಸಿ. ಹೆಚ್ಚಿನ ವಿವರಗಳಿಗೆ ನೋಡಿ) ತಂತ್ರಾಶಗಳನ್ನು ಬಳಸಿ. ಬೇರೆ ಇಂತಹ ನನ್ನ ಗಮನಕ್ಕೆ ಬರದ ಛಂದಸ್ಸಿನ ಬಗೆಗಿನ ತಂತ್ರಾಶಗಳಿದ್ದರೆ ತಿಳಿಸಿ. ಇಲ್ಲಿ ಲಿಂಕ್ ಕೊಡಲು ಅನುಕೂಲವಾಗುತ್ತದೆ.
ನಿಮ್ಮ ಪದ್ಯದ ಪಠ್ಯವ ನುಡಿಯಲ್ಲಿದ್ದರೆ ಅದನ್ನು ಯುನಿಕೋಡ್‌ಗೆ ಬದಲಿಸಿ ಕೊಳ್ಳಬೇಕು. ಅರವಿಂದ್ ಅವರ ಸಂಕ ಅಥವಾ ಕಸಾಪ ವೆಬ್‌ಸೈಟಿನಲ್ಲಿ ಯುನಿಕೋಡಿಗೆ ಬದಲಾಯಿಸಿಕೊಳ್ಳಿ.
ಗ್ರಂಥ ಸೂಚಿ*
ಕರ್ಕಿ ಡಿ ಎಸ್, 1956, ಕನ್ನಡ ಛಂದೋವಿಕಾಸ, (ಪ್ರಕಾಶಕರು) ಡಿ ಎಸ್ ಕರ್ಕಿ, ಹುಬ್ಬಳ್ಳಿ.
ಕರ್ಕಿ ಡಿ ಎಸ್, 1973, "ಛಂದೋಂಬುಧಿ", ರಲ್ಲಿ; ಒಂದನೆಯ ನಾಗವರ್ಗ, ಸಂ. ಸೀತಾರಾಮಯ್ಯ ವಿ, ಐ ಬಿ ಹೆಚ್ ಪ್ರಕಾಶನ, ಬೆಂಗಳೂರು.
ದಶಾವತಾರ ಚರಿತೆ, 1978, (ಮಲ್ಲರಸ ವಿರಚಿತ), ಸಂ. ಭಾನುಮತಿ ವೈ ಸಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
ರಾಮಾನುಜಯಂಗಾರ್‍ಯ, 1909, ನಂದಿಛಂದಸ್ಸು (ವಿವರಣ ಸಹಿತ), ಜಿ ಟಿ ಎ ಮುದ್ರಾಶಾಲೆ, ಮೈಸೂರು.
ಪಂಪಭಾರತಂ, 2016, (ಪಂಪಮಹಾಕವಿ ವಿರಚಿತ) ಗಧ್ಯಾನುವಾದ: ಅನಂತರಂಗಾಚಾರ್ ಎನ್, 2016, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು.
ಮದನತಿಲಕಂ, 1953, (ಚಂದ್ರಕವಿ ವಿರಚಿತ), ಸಂ. ಪಂಚಮುಖಿ ಆರ್ ಎಸ್, ಕನ್ನಡ ಸಂಶೋಧನ ಸಂಸ್ಥೆ, ಧಾರವಾಡ.
ಮಳಿಗಿ ಎಸ್ ಆರ್, 2006, ಕನ್ನಡ ಛಂದಸ್-ಶಾಸ್ತ್ರ, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು.
ರಂಗಾನಾಥಶರ್ಮ ಎನ್, 1973, “ಅನುಬಂಧ -1, ಜಯಕೀರ್ತಿಯ ಛಂದೋನುಶಾಸನ”, ರಲ್ಲಿ; ಒಂದನೆಯ ನಾಗವರ್ಗ, ಸಂ. ಸೀತಾರಾಮಯ್ಯ ವಿ, ಐ ಬಿ ಹೆಚ್ ಪ್ರಕಾಶನ, ಬೆಂಗಳೂರು
ರಾಘವಾಚಾರ್ಯರು ಟಿ, 1988, “ಕರ್ನಾಟಕ ಛಂದಸ್ಸು”, 2ನೆಯ ಭಾಗ, ಕರ್ನಾಟಕ ಕೈಪಿಡಿ, ಸಂಪುಟ -1, ಸಂ. ಕೆ. ವಿ. ಪುಟ್ಟಪ್ಪ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
ರಾಜಶೇಖರವಿಳಾಸಂ,1976, (ಷಡಕ್ಷರದೇವ ವಿರಚಿತ), ಗಧ್ಯಾನುವಾದ ಎರಸೀಮೆ ಚನ್ನಪ್ಪ, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು.
ರಾಮಚಂದ್ರಚರಿತ ಪುರಾಣಂ, 1920, (ಪಂಪರಾಮಾಯಣಂ ಎಂಬ ನಾಗಚಂದ್ರ ಕವಿ ವಿರಚಿತಮಾದ), ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು.
ವೆಂಕಟಾಚಲ ಶಾಸ್ತ್ರೀ ಟಿ ವಿ, 2018, ಕನ್ನಡ ಛಂದಸ್ಸು, ಡಿ ವಿ ಕೆ ಮೂರ್ತಿ ಪ್ರಕಾಶನ, ಮೈಸೂರು.
ಹಾಲಾಸ್ಯ ಪುರಾಣಂ, 1975, (ಇಮ್ಮಡಿ ಗುರುಸಿದ್ಧ ವಿರಚಿತ), ಸಂ ಜಿ ಜಿ ಮಂಜುನಾಥನ್, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
* ಇಲ್ಲಿ ಹೆಸರಿಸಿದ ಹಲವು ಹೊತ್ತಿಗೆಗಳು ಇಟರ್‌ನೆಟ್‌ನಲ್ಲಿ ದೊರಕುತ್ತವೆ (archive.org ನೋಡಿ). ಇವುಗಳಿಂದ ಉಲ್ಲೇಖಿತ ಮಾಹಿತಿ ಬಳಸುವಾಗ ಮೂಲ ಲೇಖಕರ ಕೃತಿಗಳನ್ನು ಹೆಸರಿಸಿ. ಹಿಂದಿನವರ ಕೃತಿ ಸಂಗ್ರಹಗಳಲ್ಲಿ ಕೃತಿಯ ಹೆಸರನ್ನು ಮೊದಲು ಮತ್ತು ಛಂದಸ್ಸಿನ ಬಗೆಗಿನ ಕೃತಿಯಲ್ಲಿ ಲೇಖಕರ ಹೆಸರನ್ನು ಮೊದಲು ತೋರಿಸಲಾಗಿದೆ.
Disclaimer: Author of the page (or/and the host) is not responsible for the loss/harm caused to the user by using the information, answers given here. Users are adivsed to verify and use the information provided here.
This work is licensed under a Creative Commons Attribution 4.0 International License.
ಇಲ್ಲಿಯ ಬರಹಗಳು ಕ್ರಿಯೇಟಿವ್ ಕಾಮನ್ಸ್ ಅಟ್ರಿಬ್ಯೂಷನ್ 4.0 ಅಂತರಾಷ್ಟ್ರೀಯ ಪರವಾನಗಿ ಅಡಿಯಲ್ಲಿ ಪ್ರಕಟಿಸಲಾಗಿದೆ.
(ಮಾಹಿತಿಗೆ ಲೈಸನ್ಸ್ ಕಟ್ಟಳೆಗಳನ್ನು ನೋಡಿ. )
ಹಕ್ಕು ನಿರಾಕರಣೆ: ಈ ಪುಟದ ಮಾಹಿತಿಯನ್ನು ಬಳಸಿದವರು ಹಾಗೆ ಮಾಡುವುದರಿಂದ ಎದುರಿಸಿದ ನಶ್ಟ, ಕಶ್ಟಗಳಿಗೆ ಈ ಪುಟವನ್ನು ಬರೆದವರಾಗಲೀ ಮತ್ತು/ಅಥವಾ ಇದನ್ನು ಹೋಸ್ಟು ಮಾಡಿದವರಾಗಲೀ ಹೊಣೆಗಾರರಲ್ಲ. ಬಳಕೆದಾರರು ಇಲ್ಲಿಯ ಮಾಹಿತಿಯನ್ನು ತಾಳೆ ನೋಡಿ ಬಳಸಬೇಕು.