checking data baseConnected successfully! Sample Image
  •  

'ಲಿಂಗಲೀಲಾವಿಲಾಸಚಾರಿತ್ರ' ವಚನಗಳು

search:
ಅಯ್ಯ ತತ್ವವಿತತ್ವಗಳಿಲ್ಲದಂದು, ಪ್ರಕೃತಿ ಪುರುಷರಿಲ್ಲದಂದು, ಜೀವ ಪರಮರೆಂಬ ಭಾವ ತಲೆದೋಱದಂದು, ಏನೂ ಏನೂ ಇಲ್ಲದಂದು ಬಯಲು ಒಲಿದೊಂದು ಬಿಂದುವಾಯಿತ್ತು ನೋಡಾ. ಆ ಬಿಂದು ಅಕ್ಷರತ್ರಯದ ಗದ್ದುಗೆಯಲ್ಲಿ ಕುಳ್ಳಿರಲು ಓಂಕಾರ ಉತ್ಪತ್ತಿಯಾಯಿತ್ತು. ಆ ನಾದದಲ್ಲಿ ಮೂರ್ತಿಗೊಂಡನೊಬ್ಬ ಶರಣನು. ಆ ಶರಣನಿಂದಾಯಿತ್ತು ಪ್ರಕೃತಿ, ಆ ಪ್ರಕೃತಿಯಿಂದಾಯಿತ್ತು ಲೋಕ. ಈ ಲೋಕ ಲೌಕಿಕವನತಿಗಳೆದು ನಿಜದಲ್ಲಿ ನಿವಾಸಿಯಾಗಿಪ್ಪ ಗೊಹೇಶ್ವರನ ಶರಣ ಚೆನ್ನಬಸವಣ್ಣನ ಘನವನು ಬಸವಣ್ಣನ ಕೃಪೆಯಿಂದಲರಿದು ನಮೋ ನಮೋ ಎನುತಿರ್ದೆನು. 785.02 292
3205*/B27
ಅಲ್ಲಮ ಗುಹೇಶ್ವರ
ಪ್ರಣವಾರೂಢನು ಪ್ರಣವಸ್ವರೂಪನು ಪ್ರಣವಪ್ರಕೃತಿಸಂಜ್ಞನು, ಪ್ರಣವಷಡಂಗಸಮರಸ ನಮ್ಮ ಕೂಡಲಸಂಗಮದೇವರು. 1270.01 293
3306*/B28
ಬಸವಣ್ಣ ಕೂಡಲಸಂಗಮದೇವ
ಬಯಲು ಮೂರ್ತಿಯಾಗಿ ನಿಂದನೊಬ್ಬ ಶರಣ. ಆತನ ವಿದ್ಯೆಬುದ್ಧಿಯಿಂದ ಹುಟ್ಟಿದಾತ ಬ್ರಹ್ಮ. ಆತನ ಶಾಂತಿ ಸೈರಣೆಯಿಂದ ಹುಟ್ಟಿದಾತ ವಿಷ್ಣು. ಆತನ ಕೋಪ ಕ್ರೋಧದಿಂದ ಹುಟ್ಟಿದಾತ ರುದ್ರ. ಈ ಮೂವರ ಪೀಠವಂತಿರಲಿ, ಆ ಶರಣನನಱಿದು ಶರಣೆನುತ್ತಿರ್ದೆನು, ಕೂಡಲಸಂಗಮದೇವಾ. 3.03 294
3407*/B29
ಚೆನ್ನಬಸವಣ್ಣ ಕೂಡಲಚೆನ್ನಸಂಗಮದೇವಾ
ಸಹಜದಿಂದ ನಿರಾಲಂಬವಾಯಿತ್ತು. ನಿರಾಲಂಬದಿಂದ ನಿರಾಳವಾಯಿತ್ತು. ನಿರಾಳದಿಂದ ನಿರವಯವಾಯಿತ್ತು, ನಿರವಯದಿಂದ ಅನಾದಿಯಾಗಿತ್ತು. ಅನಾದಿಯಲ್ಲಿ ಮೂರ್ತಿಯಾದನೊಬ್ಬ ಶರಣ. ಆ ಶರಣನ ಮೂರ್ತಿಯಿಂದ ಸದಾಶಿವನಾದ, ಆ ಸದಾಶಿವನ ಮೂರ್ತಿಯಿಂದ ಶಿವನಾದ, ಆ ಶಿವನ ಮೂರ್ತಿಯಿಂದ ರುದ್ರನಾದ, ಆ ರುದ್ರನ ಮೂರ್ತಿಯಿಂದ ವಿಷ್ಣುವಾದ. ಆ ವಿಷ್ಣುವಿನ ಮೂರ್ತಿಯಿಂದ ಬ್ರಹ್ಮನಾದ. ಆ ಬ್ರಹ್ಮನ ಮೂರ್ತಿಯಿಂದಾದವು ಸಕಲ ಜಗತ್ತುಗಳೆಲ್ಲಾ_ ಇವರೆಲ್ಲ ನಮ್ಮ ಗುಹೇಶ್ವರನ ಕರಸ್ಥಲದ ಹಂಗಿನಲ್ಲಿ ಹುಟ್ಟಿ ಬೆಳೆದರು 1576.02 295
3508*/B30
ಅಲ್ಲಮ ಗುಹೇಶ್ವರ
ಆದಿಯಲೊಬ್ಬ ಮೂರ್ತಿಯಾದ. ಆ ಮೂರ್ತಿಯಿಂದ ಸದಾಶಿವನಾದ, ಆ ಸದಾಶಿವನ ಮೂರ್ತಿಯಿಂದ ಜ್ಞಾನಶಕ್ತಿಯಾದಳು. ಆ ಸದಾಶಿವಂಗೆಯೂ ಜ್ಞಾನಶಕ್ತಿಯಿಬ್ಬರಿಗೆಯೂ ಶಿವನಾದ, ಆ ಶಿವಂಗೆ ಇಚ್ಛಾಶಕ್ತಿಯಾದಳು. ಆ ಶಿವಂಗೆಯೂ ಇಚ್ಛಾಶಕ್ತಿಯಿಬ್ಬರಿಗೆಯೂ ರುದ್ರನಾದ. ಆ ರುದ್ರಂಗೆ ಕ್ರಿಯಾಶಕ್ತಿಯಾದಳು. ಆ ರುದ್ರಂಗೆಯೂ ಕ್ರಿಯಾಶಕ್ತಿಯಿಬ್ಬರಿಗೆಯೂ ವಿಷ್ಣುವಾದ. ಆ ವಿಷ್ಣುವಿಂಗೆ ಮಹಾಲಕ್ಷ್ಮಿಯಾದಳು. ಆ ವಿಷ್ಣವಿಂಗೆಯೂ ಮಹಾಲಕ್ಷ್ಮಿಯಿಬ್ಬರಿಗೆಯೂ ಬ್ರಹ್ಮನಾದ. ಆ ಬ್ರಹ್ಮಂಗೆ ಸರಸ್ವತಿಯಾದಳು. ಆ ಬ್ರಹ್ಮಂಗೆಯೂ ಸರಸ್ವತಿಯರಿಬ್ಬರಿಗೆಯೂ ನರರು ಸುರರು ದೇವರ್ಕಳು ಹೆಣ್ಣು ಗಂಡು ಸಚರಾಚರಂಗಳು ಸಹಿತವಾಗಿ ಎಂಬತ್ತುನಾಲ್ಕುಲಕ್ಷ ಜೀವಜಂತುಗಳು, ತೋಱುವ ತೋಱಿಕೆಯೆಲ್ಲಾ ಹುಟ್ಟಿತ್ತು ಕೂಡಲ ಚೆನ್ನಸಂಗಯ್ಯಾ. 985.03 296
3609*/B31
ಚೆನ್ನಬಸವಣ್ಣ ಕೂಡಲಚೆನ್ನಸಂಗಯ್ಯಾ
ಹರನ ಕೊರಳಲಿರ್ದ ಕರೋಟಿಮಾಲೆಯ ಶಿರದ ಲಿಖಿತವ ಕಂಡು ಮರುಳ ತಂಡಗಳೋದಿ ನೋಡಿ ಇವನಜ ಇವ ಹರಿ ಇವ ಸುರಪತಿ ಇವ ಧರಣೀಂದ್ರ ಇವನಂತಕನೆಂದು ಹರುಷದಿಂದೋದಿ ನೋಡಿ ಸರಸವಾಡುವದ ಹರ ನೋಡಿ ಕಂಡು ಮುಗುಳು ನಗೆಯ ನಗುತಿರ್ದನು ನಮ್ಮ ಕೂಡಲಸಂಗಮದೇವ. ಹರನ ಕೊರಳಲಿರ್ದ ಕರೋಟಿಮಾಲೆಯ ಶಿರದ ಲಿಖಿತವ ಕಂಡು ಮರುಳ ತಂಡಗಳೋದಿ ನೋಡಿ ಇವನಜ ಇವ ಹರಿ ಇವ ಸುರಪತಿ ಇವ ಧರಣೀಂದ್ರ ಇವನಂತಕನೆಂದು ಹರುಷದಿಂದೋದಿ ನೋಡಿ ಸರಸವಾಡುವದ ಹರ ನೋಡಿ ಕಂಡು ಮುಗುಳು ನಗೆಯ ನಗುತಿರ್ದನು ನಮ್ಮ ಕೂಡಲಸಂಗಮದೇವ. 538.01 297
3710*/B32
ಬಸವಣ್ಣ ಕೂಡಲಸಂಗಮದೇವ
ಐದುದೇ ಬ್ರಹ್ಮನ ಕಪಾಲ ಕರದಲ್ಲಿ, ಐದುದೇ ವಿಷ್ಣುವಿನ ನಯನ ಚರಣದಲ್ಲಿ, ಐದುದೇ ಕಾಮನ ಸುಟ್ಟ ಭಸ್ಮ ಮೈಯಲ್ಲಿ. ಮುಖ ಮೂದಲೆಯೇಕಯ್ಯಾ, ಕೂಡಲಸಂಗಮದೇವಾ. 537.01 298
3711*/B33
ಬಸವಣ್ಣ ಕೂಡಲಸಂಗಮದೇವಾ
ಅನಾದಿಯ ಮಗನು ಆದಿ. ಆದಿಯ ಮಗನತೀತ. ಅತೀತನ ಮಗನು ಆಕಾಶ. ಆಕಾಶನ ಮಗನು ವಾಯು,.ವಾಯುವಿನ ಮಗನಗ್ನಿ. ಅಗ್ನಿಯ ಮಗನು ಅಪ್ಪು. ಅಪ್ಪುವಿನ ಮಗನು ಪೃಥ್ವಿ. ಪೃಥ್ವಿಯಿಂದ ಸಕಲ ಜೀವರೆಲ್ಲರೂ ಉದ್ಭವ ಗುಹೇಶ್ವರಾ 760.02 299
3812*/B34
ಅಲ್ಲಮ ಗುಹೇಶ್ವರಾ
ಏನೆಂದನಲಿಲ್ಲದ ಮಹಾಘನವು ತನ್ನ ಲೀಲೆಯಿಂದ ತಾನೇ ಸ್ವಯಂಭುಲಿಂಗವಾಯಿತ್ತು. ಆ ಲಿಂಗದಿಂದಾಯಿತ್ತು ಶಿವಶಕ್ತ್ಯಾತ್ಮಕ, ಆ ಶಿವಶಕ್ತ್ಯಾತ್ಮಕದಿಂದಾದುದು ಆತ್ಮ, ಆತ್ಮನಿಂದಾದುದು ಆಕಾಶ. ಆಕಾಶದಿಂದಾದುದು ವಾಯು, ವಾಯುವಿನಿಂದಾದುದು ಅಗ್ನಿ. ಅಗ್ನಿಯಿಂದಾದುದು ಅಪ್ಪು. ಅಪ್ಪುವಿನಿಂದಾದುದು ಪೃಥ್ವಿ. ಪೃಥ್ವಿಯಿಂದಾದುದು ಸಕಲ ಜೀವವೆಲ್ಲಾ. ಇವೆಲ್ಲಾ ನಿಮ್ಮ ನೆನಹುಮಾತ್ರದಿಂದಾದವು ಸಿಮ್ಮಲಿಗೆಯ ಚೆನ್ನರಾಮಾ. 573.07 300
3813*/B35
ಚಂದಿಮರಸ ಸಿಮ್ಮಲಿಗೆಯ ಚೆನ್ನರಾಮಾ
ಓಂಕಾರ ಪ್ರಥಮದಲ್ಲಿ ದಿವ್ಯ ನಿರಾಲಂಬಮೂರ್ತಿ ಜಗತ್ ಸೃಷ್ಟ್ಯರ್ಥ ಕಾರಣವಾಗಿ ತತ್ತಾದಲ್ಲಿ ಪಂಚಬ್ರಹ್ಮ ಸಾಕಾರಮೂರ್ತಿಯಾದ ಲೀಲಾ ಸಂಭವವಾದಲ್ಲಿ ಅಣುವಿಂಗೆ ಅಣು, ಮಹತ್ತಿಂಗೆ ಮಹತ್ತು. ಅಂಗ ಕರಂಡ ಆತ್ಮ ಸುಗಂಧ ನೀನಾದೆಯಲ್ಲಾ ಏಣಾಂಕಧರ ಸೋಮೇಶ್ವರಲಿಂಗ. 291.08 301
4401*/B36
ಬಿಬ್ಗಿ ಬಾಚಯ್ಯ ಸೋಮೇಶ್ವರಲಿಂಗ

ಟಿಪ್ಪಣಿ; * ಪುಟ ಸಂಖ್ಯೆವಚನ ಸಂಖ್ಯೆ

[ಮೊದಲ ಪುಟ]  12345678[ಕೊನೆ ಪುಟ]


ಸಿಕ್ಕ ಪಲಿತಾಂಶಗಳು 75 ಇದು ಪುಟ 4 ಈ ಪುಟದಲ್ಲಿ ಪಲಿತಾಂಶಗಳು 31 ರಿಂದ 40 ವರೆಗೆ