'ಲಿಂಗಲೀಲಾವಿಲಾಸಚಾರಿತ್ರ' ವಚನಗಳು
| ಬಣ್ಣ ಹಲವಪ್ಪಲ್ಲಿ ಬಣ್ಣ ತಾನೊಂದಾಗಿ, ಬಣ್ಣ ಮೂಜಗಕೆ ಮುಕ್ಕಣ್ಣ ತಾನು, ಬಣ್ಣಕರು ಬಣ್ಣದೊಳಗಾಳುವದನೆ ಕಂಡು ಅಣ್ಣ ನಗುತಿರ್ದನಯ್ಯ ಯೋಗಿನಾತ |
7.00 |
427 62‖11*/B53 |
ಸಿದ್ಧರಾಮ | ಯೋಗಿನಾಥ |
|
|
| ಶೂಲದ ಮೇಲಣ ಹೆಣನ ಭೋಗವೇನಾದರೇನೋ? ನಾನಾ ವರ್ಣದ ಸಂಸಾರ ಸುಖವು ಹಾವು ಹಾವಡಿಗನ ಸ್ನೇಹದಂತೆ. ತನ್ನಾತ್ಮ ತನಗೆ ಹಗೆಯಾದ ಮತ್ತೆ ಬಿನ್ನಾಣವುಂಟೆ ಮಹಾದಾನಿ ಕೂಡಲ ಸಂಗಮ ದೇವ |
12.01 |
26 66‖20*/A26 |
ಬಸವಣ್ಣ | ಕೂಡಲಸಂಗಮದೇವಾ |
| ಇತರ ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ 66‖20
|
| ಉದಕದೊಳಗೆ ಬೈಚಿಟ್ಟ ಬಯಕೆಯ ಕಿಚ್ಚಿನಂತೆ ಇದ್ದಿತ್ತು. ಶಶಿಯೊಳಗಣ ರಸದ ರುಚಿಯಂತೆ ಇದ್ದಿತ್ತು. ನನೆಯೊಳಗಣ ಪರಿಮಳ ದಂತೆ ಇದ್ದಿತ್ತು. ಕೂಡಲ ಸಂಗಮದೇವರ ನಿಲವು ಕನ್ಯೆಯ ಸ್ನೇಹದಂತೆ ಇದ್ದಿತ್ತು. |
1.01 |
2 71‖03*/A2 |
ಬಸವಣ್ಣ | ಕೂಡಲಸಂಗಮದೇವ |
| ಇತರ ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ 71‖03
|
| ಮರೀಚಿಯೊಳಡಗಿದ ಬಿಸಿಲಿನಂತೆ ಇದಿತ್ತು. ಕ್ಸೀರದೊಳಗಣ ತುಪ್ಪದಂತೆ ಇದ್ದಿತ್ತು ಚಿತ್ರಿಕನೊಳಡಗಿದ ಚಿತ್ರದ ಪಟದಂತೆ ಇದ್ದಿತು ಆಲಿಯೊಳಗಣ ತೇಜದ ಗೌಪ್ಯದಂತೆ ಇದ್ದಿತು ನುಡಿಯೊಳಡಗಿದ ಅರ್ಥದಂತಿದ್ದಿತ್ತು ಕೂಡಲಸಂಗಯ್ಯ ನಿಮ್ಮ ನಿಲವು |
1458.03 |
4 72‖04*/A4 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಯ್ಯಾ |
| ಇತರ ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ 72‖04
|
| ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯ ! ಇಂದೆನ್ನ ದೇಹಕ್ಕೆ ಗ್ರಹಣವಾಯಿತ್ತು ಇನ್ನೆಂದಿಗೆ ಮೋಕ್ಷವಹುದೋ ಕೂಡಲಸಂಗಮದೇವಾ! |
9.01 |
16 95‖01*/A16 |
ಬಸವಣ್ಣ | ಕೂಡಲಸಂಗಮದೇವಾ |
| ಇತರ ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ 95‖01
|
| ಎಂದೋ ಸಂಸಾರದಂದುಗ ಹಿಂಗೂದೆನಗೆಂದೋ ? ಮನದಲ್ಲಿ ಪರಿಣಾಮವೆನಗಹುದೆಂದೋ ? ಕೂಡಲಸಂಗಮದೇವಾ ಇನ್ನೆಂದೋ ಪರಮಸಂತೋಷದೊಳಿಹುದೆನಗೆಂದೋ? |
22.01 |
27 102‖14*/A27 |
ಬಸವಣ್ಣ | ಕೂಡಲಸಂಗಮದೇವಾ |
| ಇತರ ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ 102‖14
|
| ಒಂದು ಯೋನಿಯಲ್ಲಿ ಬಂದ ದುಃಖವ ನಾನು ಎಂದೆಂದಿಗೂ ಕಳೆಯಲಾರೆ ಇನ್ನು ಎಂಬತ್ತು ನಾಲ್ಕು ಲಕ್ಷವೆಂದರೆ ನಾನಿನ್ನೇವೆನಯ್ಯಾ ಒಂದು ವನಱಿಯದ ಶಿಶು ನಾ ನೊಂದೆನಯ್ಯಾ ! ಎನ್ನ ಕಂದ ಬಾ ಎಂದು ಕಂಬನಿಯ ತೊಡದತ್ತಿ ಆನಂದತಿಂದ ಕಣ್ದೆಱೆ ಉಳಿಯುಮೇಶ್ವರಾ
|
1634.06 |
18 103‖20*/A18 |
ಉಳಿಯುಮೇಶ್ವರಚಿಕ್ಕಣ್ಣ | ಉಳಿಯುಮೇಶ್ವರಾ |
| ಇತರ ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ 103‖20
ಗುಬ್ಬಿ ಮಲ್ಲಣ್ಣನ ಗಣಭಾಷಿತ ರತ್ನಮಾಲೆ 49
|
| ಭವಬಂಧನ ಭವಪಾಶಂಗಳಾದ ಕಾರಣವೇನಯ್ಯಾ? ಹಿಂದಣ ಜನ್ಮದಲ್ಲಿ ಲಿಂಗವ ಮಱೆದೆನಾಗಿ ಹಿಂದಣ ಸಿರಿಯಲ್ಲಿ ಜಂಗಮವ ಮಱೆದೆನಾಗಿ. ಅಱಿದಡೆ ಸಂಸಾರವ ಹೊದ್ದಲೀವೆನೇ ಕೂಡಲ ಸಂಗಮದೇವಾ? |
7.01 |
25 104‖24*/A25 |
ಬಸವಣ್ಣ | ಕೂಡಲಸಂಗಮದೇವಾ |
| ಇತರ ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ 104‖24
|
| ಗುರುಕರುಣವ ಪದೆದುದಕ್ಕೆ ಚಿಹ್ನವಾವುದೆಂದಡೆ : ಅಂಗದ ಮೇಲೆ ಲಿಂಗಸ್ವಾಯತವಾಗಿರಬೇಕು. ಆಂಗದ ಮೇಲೆ ಲಿಂಗಸ್ವಾಯತವಿಲ್ಲದೆ ಬಱೆದೆ ಗುರುಕರುಣವಾಯಿತ್ತೆಂದಡೆ ಅದೆಂತೊ? ಲಿಂಗ ವಿಹೀನವಾಗಿ ಗುರುಕರುಣವುಂಟಿ? ಇಲ್ಲ. ಆ ಮಾತ ಕೇಳಲಾಗದು, ಇದುಕಾರಣ ಲಿಂಗಧಾರಣವುಳ್ಳುದೆ ಸದಾಚಾರ. ಇಲ್ಲದಿರೆ ಅನಾಚಾರವೆಂಬೆನ ಯ್ಯಾ |
1045.07 |
47 116‖09*/A47 |
ತೆಲುಗೇಶಮಸಣಯ್ಯ | ತೆಲುಗೇಶ್ವರಾ |
| ಇತರ ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ 116‖09
|
ಶ್ರೀಪಂಚಾಕ್ಷರಿಯೆ ಸರ್ವಮಂತ್ರವೆಲ್ಲಕ್ಕೆ ಉತ್ಪತ್ತಿ ಸ್ಥಿತಿ ಲಯಸ್ಥಾನ. ಸರ್ವಕಾರಣವೆಲ್ಲವಕೈಯೂ ಮೂಲ.
ಶ್ರುತಿ: ಸಪ್ತಕೋಟಿ ಮಹಾಮಂತ್ರಾ ಉಪಮಂತ್ರಾಸ್ತ್ವನೇಕಶಃ
ಪಂಚಾಕ್ಷರೇ ಪ್ರಲೀಯಂತೇ ಪುನಸ್ತತ್ರೈವ ನಿರ್ಗತಾಃ
ತಸ್ಮಿನ್ ವೇದಾಶ್ಚ: ಶಾಸಾಣಿ ಮಂತ್ರೇ ಪಂಚಾಕ್ತರೇ ಸಿತಾಃ
ಎಂದುದಾಗಿ, ಇದುಕಾರಣ ಶ್ರೀಪಂಚಾಕ್ಷರಿಯುಳ್ಳ ಭಕ್ತನೇ ವೇದ ವಿತ್ತ. ಆತನೇ ಶಾಸ್ತ್ರವಾನ್. ಆ ಮಹಾಮಹಿಮನೇ ಪುರಾಣಿಕನುಂ, ಆತನೇ ಆಗಮಿಕನು. ಆತನೇ ಸರ್ವಜ್ಞಾನಿಯು ಉರಿಲಿಂಗಪೆದ್ದಿ ಪ್ರಿಯವಿಶ್ವೇಶ್ವರಾ. |
1431.06 |
63 143‖63*/A63 |
ಉರಿಲಿಂಗಪೆದ್ದಿ | ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ |
| ಇತರ ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ 143‖63
|
ಟಿಪ್ಪಣಿ; * ಪುಟ ಸಂಖ್ಯೆ ‖ ವಚನ ಸಂಖ್ಯೆ [ಮೊದಲ ಪುಟ] 1 2 3 4 5 6 7 8 [ಕೊನೆ ಪುಟ]
ಸಿಕ್ಕ ಪಲಿತಾಂಶಗಳು 75 ಇದು ಪುಟ 7 ಈ ಪುಟದಲ್ಲಿ ಪಲಿತಾಂಶಗಳು 61 ರಿಂದ 70 ವರೆಗೆ |
|
|