checking data baseConnected successfully!
| ಮೇಲಿನ ವಚನ ಕಾಣಿಸಿಕೊಳ್ಳುವ ಆಕರಗಳು | ||||||
| ವಚನ ಸಂಖ್ಯೆ: 1431 (ಸಮಗ್ರ ವಚನ ಸಂಪುಟ 6) | ಪಂಚಾಕ್ಷರಿಯೆ ಸರ್ವಮಂತ್ರವೆಲ್ಲವಕ್ಕೆಯು, ಉತ್ಪತ್ತಿ, ಸ್ಥಿತಿ, ಲಯಸ್ಥಾನ, ಸರ್ವಕಾರಣವೆಲ್ಲವಕ್ಕೆಯು ಮೂಲ. ಅದೆಂತೆಂದಡೆ: ಸಪ್ತಕೋಟಿ ಮಹಾಮಂತ್ರಂ ಉಪಮಂತ್ರಸ್ತನೇಕತಃ ಪಂಚಾಕ್ಷರ ಪ್ರತಿಲೀಯಂತೇ ಪುನಸ್ತಸ್ಯವಸರ್ಗತಃ ತಸ್ಮಿನ್ ವೇದಶ್ಚ ಶಾಸ್ತ್ರಾಣಿ ಮಂತ್ರೇ ಪಂಚಾಕ್ಷರಿ ಸ್ಥಿತಂ |
|||||
| ಏಕೋತ್ತರ ಶತಸ್ಥಲ ಜಕ್ಕಣ, ವಚನ ಸಂ 63 ಶ್ರೀಪಂಚಾಕ್ಟರಿಯೆ ಸರ್ವಮಂತ್ರವೆಲ್ಲವಕ್ಕೆಯೂ ಉತ್ಪತ್ತಿ ಸ್ಥಿತಿ ಲಯ ಸ್ಥಾನ; ಸರ್ವಕಾರಣವೆಲ್ಲಕ್ಕೆಯೂ ಮೂಲಮಂತ್ರ. ಗ್ರಂಥ: ಸಪ್ತಕೋಟಿಮಹಾಮಂತ್ರಾ ಉಪಮಂತ್ರಾಸ್ತ್ವ ನೇಕಥಾ ಪಂಚಾಕ್ಷರ್‍ಯಾಂ ಪ್ರಲೀಯಂತೇ ಪುನಸ್ತತ್ರೈವ ನಿರ್ಗತಿಃ ತಸ್ಮಿನ್ ವೇದಾಶ್ಚ ಶಾಸ್ತ್ರಾಣಿ ಮಂತ್ರ ಪಂಚಾಕ್ಷರಿ ಸ್ಥಿತಂ[ಃ] ಎಂದುದಾಗಿ, ಇದು ಕಾರಣ, ಶ್ರೀಪಂಚಾಕ್ಷರಿಯುಳ್ಳ ಶಿವಭಕ್ತನೆ ವೇದವಿತ್ತು. ಆ ಸದ್ಭಕ್ತನೆ ಶಾಸ್ತ್ರವಾನ್. ಆ ಮಹಾಮಹಿಮನೆ ಪರಾಣಿಕನು; ಆಗಮಿಕನು. ಆತನೆ ಸರ್ವಜ್ಞನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
×
ಪಠ್ಯಗಳಲ್ಲಿನ ವ್ಯತ್ಯಾಸ
| ||||||
| ಲಿಂಗಲೀಲಾವಿಲಾಸಚಾರಿತ್ರ, ಕಲ್ಲುಮಠದ ಪ್ರಭುದೇವ ಪು ಸಂ‖ ವಚನ ಸಂಖ್ಯೆ 143‖63 ಶ್ರೀಪಂಚಾಕ್ಷರಿಯೆ ಸರ್ವಮಂತ್ರವೆಲ್ಲಕ್ಕೆ ಉತ್ಪತ್ತಿ ಸ್ಥಿತಿ ಲಯಸ್ಥಾನ. ಸರ್ವಕಾರಣವೆಲ್ಲವಕೈಯೂ ಮೂಲ. ಶ್ರುತಿ: ಸಪ್ತಕೋಟಿ ಮಹಾಮಂತ್ರಾ ಉಪಮಂತ್ರಾಸ್ತ್ವನೇಕಶಃ ಪಂಚಾಕ್ಷರೇ ಪ್ರಲೀಯಂತೇ ಪುನಸ್ತತ್ರೈವ ನಿರ್ಗತಾಃ ತಸ್ಮಿನ್ ವೇದಾಶ್ಚ: ಶಾಸಾಣಿ ಮಂತ್ರೇ ಪಂಚಾಕ್ತರೇ ಸಿತಾಃ ಎಂದುದಾಗಿ, ಇದುಕಾರಣ ಶ್ರೀಪಂಚಾಕ್ಷರಿಯುಳ್ಳ ಭಕ್ತನೇ ವೇದ ವಿತ್ತ. ಆತನೇ ಶಾಸ್ತ್ರವಾನ್. ಆ ಮಹಾಮಹಿಮನೇ ಪುರಾಣಿಕನುಂ, ಆತನೇ ಆಗಮಿಕನು. ಆತನೇ ಸರ್ವಜ್ಞಾನಿಯು ಉರಿಲಿಂಗಪೆದ್ದಿ ಪ್ರಿಯವಿಶ್ವೇಶ್ವರಾ. ಗಮನಿಸಿ:
×
ಪಠ್ಯಗಳಲ್ಲಿನ ವ್ಯತ್ಯಾಸ
|
| ವಚನ ಆಕರಗಳ ಬಗೆಗೆಆಕರಗಳ ಕಾಲಮಾನ:15ನೇ ಶತಮಾನದ ವಚನ ಆಕರಗಳು ಇಂದು ತಿಳಿದಂತೆ ತೀರ ಹಿಂದಿನ ಪ್ರತಿ ಎಂದರೆ 1412ರ ಜಕ್ಕಣನ ಏಕೋತ್ತರಶತಸ್ಥಲ (ಕಲಬುರ್ಗಿ, ಸಮಗ್ರ ಸಾಹಿತ್ಯ, ಪು 425, 2020??). ಲಿಂಗಲೀಲಾವಿಲಾಸಚಾರಿತ್ರ ಹಾಗೂ ಮಹದೇವಯ್ಯನವರ ಶೂನ್ಯಸಂಪಾದನೆ ಗಳೆರಡನ್ನೂ ಸುಮಾರು 15ನೆಯ ಶತಮಾನದ ನಡುವಿಗೆ ಇರಿಸಲಾಗುತ್ತದೆ (1430). ಸಕಲ ಪುರಾತನರ ವಚನಗಳುನ ಮೂರುಕಟ್ಟುಗಳ ಕಾಲಮಾನವನ್ನು 15ನೆಯ ಶತಮಾನದ ಕೊನೆಗೆ ಎನ್ನುತ್ತಾರೆ ವೀರಣ್ಣ ರಾಜೂರ (ಪು.xxx, ಎಲ್ಲ ಪುರಾತನರ ವಚನಗಳು, 2006; 1420 ರಿಂದ 1495ರ ನಡುವೆ ಎನ್ನುತ್ತಾರೆ ಅವರು ). ನಂತರದ ಶತಮಾನದ ಆಕರಗಳಲ್ಲಿ ಗುಬ್ಬಿ ಮಲ್ಲಣ್ಣನ ಗಣಭಾಷಿತರತ್ನಮಾಲೆ ಮತ್ತು ಹಲಗೆಯಾರ್ಯನ ಶೂನ್ಯಸಂಪಾದನೆ ಬರುತ್ತವೆ (ಇವುಗಳ ಬಗೆಗೆ ವೀರಶೈವಾಮೃತ ಪುರಾಣದ ಕಾಲಮಾನವೇ 1530 ಆಧಾರ. ಹೀಗಾಗಿ ಗುಬ್ಬಿ ಮಲ್ಲಣ್ಣ ರಚಯತನ ತಾತನಾದ್ದರಿಂದ ಅವನನ್ನು 15ನೆಯ ಶತಮಾನದಲ್ಲಿ ಇರಿಸ ಬಹುದು. ಆದರೆ ಹಲಗೆಯಾರ್ಯನದು 15ರ ಕೊನೆ ಅಥವಾ 16ನೇ ಶತಮಾನದ ಆರಂಭ ಎನ್ನಲಾಗಿದೆ ) ಇಲ್ಲಿ ಕೆಲವು ಜನಪ್ರಿಯ ಕೃತಿಗಳನ್ನು ತೆಗೆದುಕೊಳ್ಳಲಾಗಿದೆ. ಇತರ ವಚನ ಹೊತ್ತಿಗೆಗಳನ್ನು ಸೇರಿಸಿಕೊಳ್ಳ ಬೇಕಿದೆ. |