checking data baseConnected successfully! Sample Image
  •  

'ಲಿಂಗಲೀಲಾವಿಲಾಸಚಾರಿತ್ರ' ವಚನಗಳು

search:
ನಿಜವಸ್ತುವೊಂದೆ, ತನ್ನ ಲೀಲಿಯಿಂದ ಎರಡಾಗಬಲ್ಲುದದೊಂದೇ, ಬೇಱೆ ತೋರಬಲ್ಲುದದೊಂದೇ, ತನ್ನ ಮಱೆಯಬಲ್ಲುದದೊಂದೇ, ಆ ಮಱವೆಯ ಬಲ್ಲುದದೊಂದೇ, ತಾನಲ್ಲದನ್ಯವಿಲ್ಲೆಂದಱಿದಱಿವು ತಾನೇ, ಸಿಮ್ಮಲಿಗೆಯ ಚೆನ್ನರಾಮಾ. 629.07 302
4502*/B37
ಚಂದಿಮರಸ ಸಿಮ್ಮಲಿಗೆಯ ಚೆನ್ನರಾಮಾ
ರುದ್ರ ಮುಖದಲ್ಲಿ ,ವಿಷ್ಣು ಭುಜದಲ್ಲಿ, ಜಂಘೆಯಲ್ಲಿ ಅಜಜನನವು. ಇಂದ್ರ ಪಾದದಲ್ಲಿ, ಚಂದ್ರ ಮನದಲ್ಲಿ, ಚಕ್ಷುವಿನಲ್ಲಿ ಸೂರ್ಯ ಜನನವು. ನೊಸಲಗ್ನಿಯು, ಪ್ರಾಣದಲ್ಲಿ ವಾಯು, ನಾಭಿಯಲ್ಲಿ ಅಂತರಿಕ್ಷವೊ. ಶಿರದಲುದಯ ತೆತ್ತೀಸಕೋಟಿ ದೇವರ್ಕಳು. ಪಾದ ತಳದಲ್ಲಿ ಭೂಮಿಜನನವು. ಶ್ರೋತ್ರದಲ್ಲಿ |ದಶದಿಕ್ಕು‖ದಶದಿಕ್ಕುವೊ|. ಜಗವ ನಿಕ್ಷೇಪಿಸಿದ ಕುಕ್ಷಿಯೊಳಕ್ಷಯನಗಣಿತ ನೀನು. ಸಾಸಿರ ಮುಖ, ಸಾಸಿರ ಕಣ್ಣು, ಭಜ ಸಾಸಿರ ಸಾಸಿರ ಪಾದ. ಸಾಸಿರ ಸಂನಿಹಿತ ನಮ್ಮ ಕೂಡಲಸಂಗಯ್ಯ 535.01 303
4503*/B38
ಬಸವಣ್ಣ ಕೂಡಲಸಂಗಯ್ಯ
ಅವನಿಯಂಬರ ಉದಯಿಸದಂದು ಒಂದು ತುಂಬಿದ ಕೊಡನ ಕಂಡೆ. ಆ ಕೊಡನನೆತ್ತಿದವರಿಲ್ಲ, ಇಳುಹಿದವರಿಲ್ಲ. ಆ ಕೊಡ ತುಳುಕಿದಲ್ಲಿ ಒಂದು ಬಿಂದು |ಕೆಲಕ್ಕೆ‖ಕಡೆಗೆ| ಸಿಡಿಯಿತ್ತು ಕಂಡೆ. ಆ ಬಿಂದುವಿನಲ್ಲಿ ಅನಂತ ದೇವತಾಮೂರ್ತಿಗಳು ಹುಟ್ಟಿತ್ತ ಕಂಡೆ ಇದು ಕಾರಣ, ಚಿಕ್ಕಯ್ಯಪ್ರಿಯ ಸಿದ್ಧಲಿಂಗನ ಲೀಲಾಮೂಲವ ಕಂಡು ಇಲ್ಲ ಇಲ್ಲವೆನುತಿರ್ದೆನು. 415.07 304
4604*/B39
ಘಟಿವಾಳಯ್ಯ ಚಿಕ್ಕಯ್ಯಪ್ರಿಯ ಸಿದ್ಧಲಿಂಗ
ಆದಿಪುರುಷನ ಮನವು |ಮಹವನಕ್ಕಾಡಿ‖ಮಹವಲಕ್ಕಾಡಿ|, ಮತ್ತಲ್ಲಿಯೆ ಆನಂದದಿಂದ ಆ ನಿರವಯವು ಬೆಸಲಾಯಿತ್ತು. ಧರೆ, ಅಂಬರ, ವಾರುಧಿ ಸಹಿತ, ಜಾರೆಯೆಂದಡೆ ಜಗದಲ್ಲಿ ನಿಂದವು ಚೌರಾಸಿಲಕ್ಷ ಜೀವಜಾಲಗಳು. ಹಾರೆಯೆಂದಡೆ ಆಕಾಶದಲ್ಲಿ ನಿಂದರು ಗರುಡ ಗಂಧರ್ವ ಸಿದ್ಧ ವಿದ್ಯಾಧರ ದೇವರ್ಕಳು ಮೊದಲಾದ ದೇವಸಮೂಹಂಗಳೆಲ್ಲಾ ಕೂಡಲಸಂಗಮದೇವಾ, ನೀವು ಮನದಲ್ಲಿ ಸಂಕಲ್ಪಿಸಿ ಆಗೆಂದಡೆ ಆದವು. 1040.01 305
4705*/B40
ಬಸವಣ್ಣ ಕೂಡಲಸಂಗಮದೇವಾ
ಶಿವ ತನ್ನ ವಿನೋದಕ್ಕೆ ರಚಿಸಿದನನಂತ ವಿಶ್ವವ. ರಚಿಸಿ ಏನು ವಿಶ್ವಕ್ಕೆ ಹೊಱಗಾಗಿದ್ದನೇ ? ಇಲ್ಲ. ವಿಶ್ವಮಯ ತಾನಾದನು. ವಿಶ್ವವೆಲ್ಲವೂ ತಾನಾದನೆಂದರೆ ವಿಶ್ವದ ಉತ್ಪತ್ಯ ಸ್ಥಿತಿ ಲಯಕ್ಕೊಳಗಾದಾತನೇ? ಅಲ್ಲ. ಅದೇನು ಕಾರಣವೆಂದಡೆ; ಅಜಾತನಾಗಿ ಉತ್ಪತ್ಯನಲ್ಲ. ಸ್ಥಿತಿ ಕರ್ಮ ರಹಿತವಾಗಿ ಸ್ಥಿತಿಗೊಳಗಲ್ಲ. ಮರಣ ವಿರಹಿತನಾಗಿ ಲಯಕ್ಕೆ ಒಳಗಲ್ಲ, ಇಂತೀ ಗುಣತ್ರಯಂಗಳು ಹೊದ್ದಲಱಿಯವು. ತಾನಲ್ಲದೆ ವಿಶ್ವಕ್ಕಾಧಾರವಿಲ್ಲಾಗಿ ದೂರಸ್ಥನಲ್ಲ. ತನ್ನಲ್ಲಿ ತಾನಲ್ಲದೆ ಅನ್ಯವು ತೋಱಲಱಿಯದಾಗಿ, ಇದಿರಿಲ್ಲ. ಇದಿರಿಲ್ಲವಾಗಿ ವಿಶ್ವಮಯವು ತಾನಾದುದೇ ಸತ್ಯ. ಅರಸು ಕಾಲಾಳಾಗಬಲ್ಲ ತನ್ನ ವಿನೋದಕ್ಕೆ, ಮರಳಿ ಅರಸಾಗಬಲ್ಲ. ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು, ಜಗವಾಗಲೂ ಬಲ್ಲ, ಜಗವಾಗದಿರಲೂ ಬಲ್ಲನಯ್ಯ. 1554.06 226
4806*/A226
ಉರಿಲಿಂಗಪೆದ್ದಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
ಇತರ ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ 4806
ಘನಗಂಭೀರ ಮಹಾವಾರುಧಿಯಲ್ಲಿ ನೊರೆ ತೆರೆ ಬುದ್ಬುದ ಫೇನತಂಗಗಳು ತೋಱಿತ್ತಲ್ಲಾ ಎಂದಡೆ ಆವು ಬೇಱಾಗಬಲ್ಲವೇ? ಪರ ಶಿವನೆಂಬ ಅಂಬುಧಿಯಲ್ಲಿ ಸಕಲ ಬ್ರಹ್ಮಾಂಡಕೋಟಿಗಳಾದವಲ್ಲದೆ ಬೇಱಾಗಬಲ್ಲವೆ? ಇದ ಬೇಱೆಂಬ ಅಱುಮರುಳುಗಳ ನಾನೇನೆಂಬೆ? ವಿಶ್ವವ ತಿಳಿದು ನೋಡಲು ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು ತಾನೇ 597.07 227
4807*/A227
ಚಂದಿಮರಸ ಸಿಮ್ಮಲಿಗೆಯ ಚೆನ್ನರಾಮ
ಇತರ ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ 4807
ಶಿವ ಜಗವಾಗಬಲ್ಲ, ಶಿವ ಜಗವಾಗದಿರಲೂ ಬಲ್ಲ. ಶಿವ ರೂಪಾಗಬಲ್ಲ, ಶಿವ ರೂಪಾಗದಿರಲೂ ಬಲ್ಲ. ಶಿವನಜಾಂಡಕೋಟಿಗಳ ಮಾಡಬಲ್ಲ, ಮಾಡದಿರಲೂ ಬಲ್ಲ. ಶಿವ ಕೆಡಿಸಬಲ್ಲ, ಕೆಡಿಸದಿರಲೂ ಬಲ್ಲ. ಶಿವ ಜಂಗಮವಾಗಿ ಶಿವನ ಪೂಜಿಸಬಲ್ಲ. ಶಿವ ಲಿಂಗವಾಗಿ ತಾನೇ ಪೂಜಿಸಿಕೊಳ್ಳಬಲ್ಲ. ಶಿವ ಹೊಱಗಾಗಿ ಅನ್ಯವಿಲ್ಲವೆಂಬ ವೇದವುಟೇ? ಇಲ್ಲ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವಕೆಲ್ಲ ಮಾತಾಪಿತನು. 1553.06 228
4908*/A228
ಉರಿಲಿಂಗಪೆದ್ದಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
ಇತರ ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ 4908
ಹರಿ ಬ್ರಹ್ಮ ಧರೆಯಾಕಾಶವಿಲ್ಲದ ಭಸ್ಮಕ್ಕೆ ಸ್ಥಲವದು. ಆದಾದಿ ನೋಡಯ್ಯಾ. ಭಸ್ಮವನೆ ಮಸುಳಿಸಿ, ಲೋಕಂಗಳನೆ ಪಡೆದು, ಸಕಲ ಜೀವರನಿಂತು ಮಾಡಿದರೊಳರೆ? ನಿನ್ನಿಚ್ಛೆ ನಿನಗೆ. ಸ್ವಯಂಭು ನೀನೆಯಾಗಿರ್ದೆಯಯ್ಯಾ, ಕಪಿಲಸಿದ್ಧಮ್ಲನಾಥಯ್ಯಾ. 1133.04 306
4909*/B41
ಸಿದ್ಧರಾಮ ಕಪಿಲಸಿದ್ಧಮ್ಲನಾಥ
ಒಂದೆರಡಾದುದನಾರೂ ಅಱಿಯರು ಆಒಂದು ಒಂದೆಯಾಯಿತ್ತು, ತ್ರಿತತ್ತ್ವವವಾಯಿತ್ತು, ವೇದಾತೀತವಾಯಿತ್ತು, ಭರಿತವಾಯಿತ್ತು, ಪ್ರಾದೇಶಿಕವಾಯಿತ್ತು, ಭಕ್ತಿಗೆ ಸಾಧ್ಯವಾಯಿತ್ತು. ಅದಕ್ಕೆ ಆಧಾರ ದೇಹವಾಯಿತ್ತು. ಅದು ಅಷ್ಟವಿಗ್ರಹ ಸ್ವರೂಪವಾಗಿರುತ್ತಿಪ್ಪುದು. ಮತ್ತಿದ್ದ ಒಂದು ಮಾಯಾಶಕ್ತಿಯಂ ಕೂಡಿ, ಗುಣತ್ರಯಂಗಳಂ ಕೂಡಿ, ನಾನಾತ್ಮನೆನಿಸಿಕೊಂಡು ವಿಷಯಾತ್ಮ ಇಂದ್ರಿಯಾತ್ಮ ಭೂತಾತ್ಮ ಜೀವಾತ್ಮ ಪರಮಾತ್ಮನೆನಿಸಿಕೊಂಡು, ಪ್ರಾಣಾದಿವಾಯುಗಳಂ ಕೂಡಿಕೊಂಡು ಜಡಪ್ರಕೃತಿಗಳಂ ಹೊತ್ತುಕೊಂಡು ಸಂಕಲ್ಪ_ವಿಕಲ್ಪವೆಂಬ ಉಭಯ ಕರ್ಮಂಗಳಂ ಕಲ್ಪಿಸಿ ನಾನಾಯೋನಿ ಪ್ರಾಪ್ತವಾಗುತ್ತಿರ್ದು, ಲೋಕಾದಿ ಲೋಕಂಗಳೊಳು ತೊಳಲಿ ಬಳಲಿ ತನ್ನ ಮೊದಲ ಕೂಡುವ ಪ್ರಕಾರಮಂ ಬಯಸಿ ನಾನಾ ಪಥದಿಂದ ಅಱಸಿ ಹರಿವುತ್ತಿಪ್ಪರಖಿಳ ಜೀವಿಗಳೆಲ್ಲರು. ಇದ ಬೆರಸದೆ ಬೆರಸಿದ ಸಂಗನಬಸವಣ್ಣನ ನೆನೆದವಂಗೆ ಶರಣೆಂದು ಶುದ್ಧನಾದೆನು ಕಾಣಾ ಗುಹೇಶ್ವರಾ. 1016.02 307
5010*/B42
ಅಲ್ಲಮ ಗುಹೇಶ್ವರಾ
ಅಸ್ತಿ ಭಾತಿಯೆಂಬ ಎನ್ನ ಸತ್ಯದಲ್ಲಿ ನಾಮ ರೂಪೆಂಬ ಹುಸಿಯೆಂತು ಜನಿಸಿತ್ತೆಂದರಿಯೆನಯ್ಯ. ಇಲ್ಲದ ಹೆಸರುಳ್ಳ ಭಿತ್ತಿಯ ಚಿತ್ತಾರದಂತೆ, ದೇಹ ನಾಮವೀ ತೆಱನೆಂದಱಿಯದೆ ತೊಳಲಿ ಬಳಲುತ್ತಿರ್ದೆನಯ್ಯಾ, ಕೂಡಲ ಚೆನ್ನಸಂಗಯ್ಯಾ, ಸಂಸಾರಬಂಧನಯೆನಗಿದೆ ಕಂಡಯ್ಯಾ. 18.03 308
5111*/B43
ಚೆನ್ನಬಸವಣ್ಣ ಕೂಡಲಚೆನ್ನಸಂಗ

ಟಿಪ್ಪಣಿ; * ಪುಟ ಸಂಖ್ಯೆವಚನ ಸಂಖ್ಯೆ

[ಮೊದಲ ಪುಟ]  12345678[ಕೊನೆ ಪುಟ]


ಸಿಕ್ಕ ಪಲಿತಾಂಶಗಳು 75 ಇದು ಪುಟ 5 ಈ ಪುಟದಲ್ಲಿ ಪಲಿತಾಂಶಗಳು 41 ರಿಂದ 50 ವರೆಗೆ