checking data baseConnected successfully!
| ಮೇಲಿನ ವಚನ ಕಾಣಿಸಿಕೊಳ್ಳುವ ಆಕರಗಳು | ||||||
| ಲಿಂಗಲೀಲಾವಿಲಾಸಚಾರಿತ್ರ, ಕಲ್ಲುಮಠದ ಪ್ರಭುದೇವ ಪು ಸಂ‖ ವಚನ ಸಂಖ್ಯೆ 59‖08 ಗಗನದ ಮೇಲೊಂದು ಅಭಿನವ ಗಿಳಿ ಹುಟ್ಟಿ ಸಯ ಸಂಭ್ರಮದಲ್ಲಿ ಮನೆಯ ಮಾಡಿತ್0. ಒಂದು ಗಿಳಿ ಇಪ್ಪತೈದು ಗಿಳಿಯಾಯಿತ್ತು. ಬ್ರಹ್ಮನಾ ಗಿಳಿಗೆ ಪಂಜರವಾದ, ವಿಷ್ಣು ಆ ಗಿಳಿಗೆ ಕೊಱೆಕೂಳಾದ ರುದ್ರನಾ ಗಿಳಿಗೆ ತಾ |ಕೋಳುವೋದ‖ ಕೊಳುವಾಯಿದ| ಇಂತೀ ಮೂವರ ಮುಂದಣ ಕಂದನ ನುಂಗಿ ದೃಷ್ಟನಾಮ ನಷ್ಟವಾಯಿತ್ತುಇದೆಂತೊ ಗುಹೇಶ್ವರಾ ಗಮನಿಸಿ:
×
ಪಠ್ಯಗಳಲ್ಲಿನ ವ್ಯತ್ಯಾಸ
| ||||||
| ಮಹದೇವಯ್ಯನ 'ಶೂನ್ಯ ಸಂಪಾದನೆ', ವಚನ ಸಂ 17 ಗಗನದ ಮೇಲೊಂದು ಅಭಿನವದ ಗಿಣಿ ಹುಟ್ಟಿ-ಸಯಸಂಭ್ರಮದಲ್ಲಿ ಮನೆಯ ಮಾಡಿತ್ತು. ಒಂದು ಗಿಣಿ ಇಪ್ಪತ್ತೈದು ಗಿಣಿಯಾಯಿತ್ತು. ಬ್ರಹ್ಮನಾ ಗಿಣಿಗೆ ಹ೦ಜರವಾದ, ವಿಷ್ಣುವಾ ಗಿಣಿಗೆ ಕೊಱೆಯ ಕೂಳಾದ, ರುದ್ರನಾ ಗಿಣಿಗೆ ತಾ ಕೋಲಾದ! ಇಂತೀ ಮೂವರ ಮುಂದಣ ಕ೦ದನ ನುಂಗಿ-ದೃಷ್ಟ ನಾಮ ನಷ್ಟವಾಯಿತ್ತು ಕಾಣಾ ಗೊಗೇಶ್ವರ.
×
ಪಠ್ಯಗಳಲ್ಲಿನ ವ್ಯತ್ಯಾಸ
|
| ವಚನ ಆಕರಗಳ ಬಗೆಗೆಆಕರಗಳ ಕಾಲಮಾನ:15ನೇ ಶತಮಾನದ ವಚನ ಆಕರಗಳು ಇಂದು ತಿಳಿದಂತೆ ತೀರ ಹಿಂದಿನ ಪ್ರತಿ ಎಂದರೆ 1412ರ ಜಕ್ಕಣನ ಏಕೋತ್ತರಶತಸ್ಥಲ (ಕಲಬುರ್ಗಿ, ಸಮಗ್ರ ಸಾಹಿತ್ಯ, ಪು 425, 2020??). ಲಿಂಗಲೀಲಾವಿಲಾಸಚಾರಿತ್ರ ಹಾಗೂ ಮಹದೇವಯ್ಯನವರ ಶೂನ್ಯಸಂಪಾದನೆ ಗಳೆರಡನ್ನೂ ಸುಮಾರು 15ನೆಯ ಶತಮಾನದ ನಡುವಿಗೆ ಇರಿಸಲಾಗುತ್ತದೆ (1430). ಸಕಲ ಪುರಾತನರ ವಚನಗಳುನ ಮೂರುಕಟ್ಟುಗಳ ಕಾಲಮಾನವನ್ನು 15ನೆಯ ಶತಮಾನದ ಕೊನೆಗೆ ಎನ್ನುತ್ತಾರೆ ವೀರಣ್ಣ ರಾಜೂರ (ಪು.xxx, ಎಲ್ಲ ಪುರಾತನರ ವಚನಗಳು, 2006; 1420 ರಿಂದ 1495ರ ನಡುವೆ ಎನ್ನುತ್ತಾರೆ ಅವರು ). ನಂತರದ ಶತಮಾನದ ಆಕರಗಳಲ್ಲಿ ಗುಬ್ಬಿ ಮಲ್ಲಣ್ಣನ ಗಣಭಾಷಿತರತ್ನಮಾಲೆ ಮತ್ತು ಹಲಗೆಯಾರ್ಯನ ಶೂನ್ಯಸಂಪಾದನೆ ಬರುತ್ತವೆ (ಇವುಗಳ ಬಗೆಗೆ ವೀರಶೈವಾಮೃತ ಪುರಾಣದ ಕಾಲಮಾನವೇ 1530 ಆಧಾರ. ಹೀಗಾಗಿ ಗುಬ್ಬಿ ಮಲ್ಲಣ್ಣ ರಚಯತನ ತಾತನಾದ್ದರಿಂದ ಅವನನ್ನು 15ನೆಯ ಶತಮಾನದಲ್ಲಿ ಇರಿಸ ಬಹುದು. ಆದರೆ ಹಲಗೆಯಾರ್ಯನದು 15ರ ಕೊನೆ ಅಥವಾ 16ನೇ ಶತಮಾನದ ಆರಂಭ ಎನ್ನಲಾಗಿದೆ ) ಇಲ್ಲಿ ಕೆಲವು ಜನಪ್ರಿಯ ಕೃತಿಗಳನ್ನು ತೆಗೆದುಕೊಳ್ಳಲಾಗಿದೆ. ಇತರ ವಚನ ಹೊತ್ತಿಗೆಗಳನ್ನು ಸೇರಿಸಿಕೊಳ್ಳ ಬೇಕಿದೆ. |