checking data baseConnected successfully!
| ಮೇಲಿನ ವಚನ ಕಾಣಿಸಿಕೊಳ್ಳುವ ಆಕರಗಳು | ||||||
| ವಚನ ಸಂಖ್ಯೆ: 1325 (ಸಮಗ್ರ ವಚನ ಸಂಪುಟ 6) | ಆ ಜನ್ಮಾಂತರದ ಯೋನಿಗಳೊಳು ಜನಿಸದಾತನೆ ಯೋಗಿ. ಆ ಯೋಗಿ ಜನ್ಮಾಂತರ ಕಳೆದಹನು ಹೇಗೆಂದಡೆ: ಶ್ರೀ ಗುರುಕರಪಲ್ಲವದಿಂದ ಬೆಸಲಾಯಿತ್ತಾಗಿ ನ ಮುಕ್ತಿರ್ನ ಚ ಧರ್ಮಶ್ಚ ನ ಪುಣ್ಯಂ ಚ ನ ಪಾಪಕಂ ನ ಕರ್ಮಜನ್ಮ ನೇಚ್ಛಾ ವೈ ಗುರೋಃ ಪಾದನಿರೀಕ್ಷಣಾತ್ ಎಂದುದಾಗಿ ಇಂತು ಯೋನಿಜನ್ಮಾಂತರವ ಕಳೆದ ಶರಣಂಗೆ ಮತ್ತ |
|||||
| ಏಕೋತ್ತರ ಶತಸ್ಥಲ ಜಕ್ಕಣ, ವಚನ ಸಂ 28 ಎ೦ಬತ್ತುನಾಲ್ಕುಲಕ್ಷ ಜೀವರಾಶಿಂಯೊಳು ಜನಿಸುವುದೆ ಜನಿತವೆಲ್ಲರಿಗೆ. ಆ ಜನ್ಮಾಂತರಯೋನಿಯೊಳು ಜನಿಸದಾತನೆ ಶಿವಯೋಗಿ; ಆ ಯೋನಿ ಜನ್ಮಾಂತರವ ಕಳೆದನೆ, ಹೇಗೆಂದಡೆ-ಶ್ರೀಗುರುಕಾರುಣ್ಯಕರಪಲ್ಲವದೊಳಗೆ ಬೆಸಲಾಯಿತ್ತಾಗಿ. ಅಂಥ ಯೋನಿಮುಖ ಜನ್ಮಾಂತರವ ಕಳೆದ ಶರಣಂಗೆ ಭವಮಾಲೆಯುಂಟೆ ಉರಿಲಿಂಗಪೆದ್ದಿಪ್ರಿಯ ಎಶ್ವೇಶ್ವರಾ?
×
ಪಠ್ಯಗಳಲ್ಲಿನ ವ್ಯತ್ಯಾಸ
| ||||||
| ಲಿಂಗಲೀಲಾವಿಲಾಸಚಾರಿತ್ರ, ಕಲ್ಲುಮಠದ ಪ್ರಭುದೇವ ಪು ಸಂ‖ ವಚನ ಸಂಖ್ಯೆ 147‖72 ಎಂಬತ್ತುನಾಲ್ಕು ಲಕ್ಷಜೀವರಾಶಿಗಳೊಳು ಜನಿಸುವುದೇ ಜನಿತವೆಲ್ಲರಿಗೆ. ಆ ಜನ್ಮಾಂತರದ ಯೋನಿಗಳೊಳು ಜನಿಸದಾತನೆ ಯೋಗಿ ಆ ಯೋಗಿಯ ಜನ್ಮಾಂತರವ ಕಳೆದ ಪರಿಯೆಂತೆಂದಡೆ : ಶ್ರೀಗುರು ಕಾರುಣ್ಯಕರಪಲ್ಲವಕ್ಕೆ ಬೆಸಲಾಯಿತ್ತಾಗಿ. ಅಂಥಾ ಯೋನಿಮುಖಿ: ಜನ್ಮಾಂತರವ ಕಳೆದ ಶರಣಂಗೆ ಭವಮಾಲೆಯುಂಟೇ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ ಗಮನಿಸಿ:
×
ಪಠ್ಯಗಳಲ್ಲಿನ ವ್ಯತ್ಯಾಸ
|
| ವಚನ ಆಕರಗಳ ಬಗೆಗೆಆಕರಗಳ ಕಾಲಮಾನ:15ನೇ ಶತಮಾನದ ವಚನ ಆಕರಗಳು ಇಂದು ತಿಳಿದಂತೆ ತೀರ ಹಿಂದಿನ ಪ್ರತಿ ಎಂದರೆ 1412ರ ಜಕ್ಕಣನ ಏಕೋತ್ತರಶತಸ್ಥಲ (ಕಲಬುರ್ಗಿ, ಸಮಗ್ರ ಸಾಹಿತ್ಯ, ಪು 425, 2020??). ಲಿಂಗಲೀಲಾವಿಲಾಸಚಾರಿತ್ರ ಹಾಗೂ ಮಹದೇವಯ್ಯನವರ ಶೂನ್ಯಸಂಪಾದನೆ ಗಳೆರಡನ್ನೂ ಸುಮಾರು 15ನೆಯ ಶತಮಾನದ ನಡುವಿಗೆ ಇರಿಸಲಾಗುತ್ತದೆ (1430). ಸಕಲ ಪುರಾತನರ ವಚನಗಳುನ ಮೂರುಕಟ್ಟುಗಳ ಕಾಲಮಾನವನ್ನು 15ನೆಯ ಶತಮಾನದ ಕೊನೆಗೆ ಎನ್ನುತ್ತಾರೆ ವೀರಣ್ಣ ರಾಜೂರ (ಪು.xxx, ಎಲ್ಲ ಪುರಾತನರ ವಚನಗಳು, 2006; 1420 ರಿಂದ 1495ರ ನಡುವೆ ಎನ್ನುತ್ತಾರೆ ಅವರು ). ನಂತರದ ಶತಮಾನದ ಆಕರಗಳಲ್ಲಿ ಗುಬ್ಬಿ ಮಲ್ಲಣ್ಣನ ಗಣಭಾಷಿತರತ್ನಮಾಲೆ ಮತ್ತು ಹಲಗೆಯಾರ್ಯನ ಶೂನ್ಯಸಂಪಾದನೆ ಬರುತ್ತವೆ (ಇವುಗಳ ಬಗೆಗೆ ವೀರಶೈವಾಮೃತ ಪುರಾಣದ ಕಾಲಮಾನವೇ 1530 ಆಧಾರ. ಹೀಗಾಗಿ ಗುಬ್ಬಿ ಮಲ್ಲಣ್ಣ ರಚಯತನ ತಾತನಾದ್ದರಿಂದ ಅವನನ್ನು 15ನೆಯ ಶತಮಾನದಲ್ಲಿ ಇರಿಸ ಬಹುದು. ಆದರೆ ಹಲಗೆಯಾರ್ಯನದು 15ರ ಕೊನೆ ಅಥವಾ 16ನೇ ಶತಮಾನದ ಆರಂಭ ಎನ್ನಲಾಗಿದೆ ) ಇಲ್ಲಿ ಕೆಲವು ಜನಪ್ರಿಯ ಕೃತಿಗಳನ್ನು ತೆಗೆದುಕೊಳ್ಳಲಾಗಿದೆ. ಇತರ ವಚನ ಹೊತ್ತಿಗೆಗಳನ್ನು ಸೇರಿಸಿಕೊಳ್ಳ ಬೇಕಿದೆ. |