checking data baseConnected successfully!
| ಮೇಲಿನ ವಚನ ಕಾಣಿಸಿಕೊಳ್ಳುವ ಆಕರಗಳು | ||||||
| ವಚನ ಸಂಖ್ಯೆ: 870 (ಸಮಗ್ರ ವಚನ ಸಂಪುಟ 1) | ಮಣ್ಣ ಮಡಕೆ ಮಣ್ಣಾಗದು ಕ್ರೀಯಳಿದು, ಬೆಣ್ಣೆ ಕರಗಿ ತುಪ್ಪವಾಗಿ ಮರಳಿ ಬೆಣ್ಣೆಯಾಗದು ಕ್ರೀಯಳಿದು, ಹೊನ್ನ ಕಬ್ಬುನವಾಗದು ಕ್ರೀಯಳಿದು, ಮುತ್ತು ನೀರಲ್ಲಿ ಹುಟ್ಟಿ ಮತ್ತೆ ನೀರಾಗದು ಕ್ರೀಯಳಿದು, ಕೂಡಲಸಂಗನ ಶರಣನಾಗಿ ಮರಳಿ ಮಾನವನಾಗ ಕ್ರೀಯಳಿದು. |
|||||
| ಏಕೋತ್ತರ ಶತಸ್ಥಲ ಜಕ್ಕಣ, ವಚನ ಸಂ 190 ಮಣ್ಣ ಮಡಕೆ ಮಣ್ಣಾಗದು-ಕ್ರೀಯಳಿದು. ಬೆಣ್ಣೆ ಕರಗಿ ಮತ್ತೆ ಬೆಣ್ಣೆಯಾಗದು, -ಕ್ರೀಯಳಿದು. ಕಬ್ಬುನ, ಪರುಷ ಮುಟ್ಟಿ ಹೊನ್ನಾದ ಬಳಿಕ ಮರಳಿ ಕಬ್ಬುನವಾಗದು-ಕ್ರೀಯಳಿದು. ಮುತ್ತು ನೀರಲ್ಲಿ ಹುಟ್ಟಿ ಮತ್ತೆ ನೀರಾಗದು-ಕ್ರೀಯಳಿದು. ಕೂಡಲಸಂಗನ ಶರಣನಾಗಿ ಮತ್ತೆ ಮಾನವನಾಗನು- ಶರಣಸ್ಥಲದ ಕ್ರೀಯಳಿದು.
×
ಪಠ್ಯಗಳಲ್ಲಿನ ವ್ಯತ್ಯಾಸ
| ||||||
| ಲಿಂಗಲೀಲಾವಿಲಾಸಚಾರಿತ್ರ, ಕಲ್ಲುಮಠದ ಪ್ರಭುದೇವ ಪು ಸಂ‖ ವಚನ ಸಂಖ್ಯೆ 396‖13 ಮಣ್ಣ ಮಡಕೆ ಮಣ್ಣಾಗದು ಕ್ರೀಯಳಿದು. ಬೆಣ್ಣೆ ಕರಗಿ ತುಪ್ಪವಾಗಿ ಮರಳಿ ಬೆಣ್ಣೆಯಾಗದು ಕ್ರೀಯಳಿದು. ಕಬ್ಬುನ ಹೊನ್ನಾಗಿ? ಹೊನ್ನು ಕಬ್ಬುನವಾಗದು ಕ್ರೀಯಳಿದು. ಮುತ್ತು ನೀರಲ್ಲಿ ಹುಟ್ಟಿ ಮತ್ತೆ ನೀರಾಗದು ಕ್ರೀಯಳಿದು, ಕೂಡಲಸಂಗನ ಶರಣರು ಮರಳಿ ಮಾನವರಾಗರು ಕ್ರೀಯಳಿದು. ಗಮನಿಸಿ:
×
ಪಠ್ಯಗಳಲ್ಲಿನ ವ್ಯತ್ಯಾಸ
|
| ವಚನ ಆಕರಗಳ ಬಗೆಗೆಆಕರಗಳ ಕಾಲಮಾನ:15ನೇ ಶತಮಾನದ ವಚನ ಆಕರಗಳು ಇಂದು ತಿಳಿದಂತೆ ತೀರ ಹಿಂದಿನ ಪ್ರತಿ ಎಂದರೆ 1412ರ ಜಕ್ಕಣನ ಏಕೋತ್ತರಶತಸ್ಥಲ (ಕಲಬುರ್ಗಿ, ಸಮಗ್ರ ಸಾಹಿತ್ಯ, ಪು 425, 2020??). ಲಿಂಗಲೀಲಾವಿಲಾಸಚಾರಿತ್ರ ಹಾಗೂ ಮಹದೇವಯ್ಯನವರ ಶೂನ್ಯಸಂಪಾದನೆ ಗಳೆರಡನ್ನೂ ಸುಮಾರು 15ನೆಯ ಶತಮಾನದ ನಡುವಿಗೆ ಇರಿಸಲಾಗುತ್ತದೆ (1430). ಸಕಲ ಪುರಾತನರ ವಚನಗಳುನ ಮೂರುಕಟ್ಟುಗಳ ಕಾಲಮಾನವನ್ನು 15ನೆಯ ಶತಮಾನದ ಕೊನೆಗೆ ಎನ್ನುತ್ತಾರೆ ವೀರಣ್ಣ ರಾಜೂರ (ಪು.xxx, ಎಲ್ಲ ಪುರಾತನರ ವಚನಗಳು, 2006; 1420 ರಿಂದ 1495ರ ನಡುವೆ ಎನ್ನುತ್ತಾರೆ ಅವರು ). ನಂತರದ ಶತಮಾನದ ಆಕರಗಳಲ್ಲಿ ಗುಬ್ಬಿ ಮಲ್ಲಣ್ಣನ ಗಣಭಾಷಿತರತ್ನಮಾಲೆ ಮತ್ತು ಹಲಗೆಯಾರ್ಯನ ಶೂನ್ಯಸಂಪಾದನೆ ಬರುತ್ತವೆ (ಇವುಗಳ ಬಗೆಗೆ ವೀರಶೈವಾಮೃತ ಪುರಾಣದ ಕಾಲಮಾನವೇ 1530 ಆಧಾರ. ಹೀಗಾಗಿ ಗುಬ್ಬಿ ಮಲ್ಲಣ್ಣ ರಚಯತನ ತಾತನಾದ್ದರಿಂದ ಅವನನ್ನು 15ನೆಯ ಶತಮಾನದಲ್ಲಿ ಇರಿಸ ಬಹುದು. ಆದರೆ ಹಲಗೆಯಾರ್ಯನದು 15ರ ಕೊನೆ ಅಥವಾ 16ನೇ ಶತಮಾನದ ಆರಂಭ ಎನ್ನಲಾಗಿದೆ ) ಇಲ್ಲಿ ಕೆಲವು ಜನಪ್ರಿಯ ಕೃತಿಗಳನ್ನು ತೆಗೆದುಕೊಳ್ಳಲಾಗಿದೆ. ಇತರ ವಚನ ಹೊತ್ತಿಗೆಗಳನ್ನು ಸೇರಿಸಿಕೊಳ್ಳ ಬೇಕಿದೆ. |