checking data baseConnected successfully! Sample Image
  •  

ವಚನ ಆಕರಗಳು (15ನೆ ಶತಮಾನ)

search:
search:
ಭವಬಂಧನ ದುರಿತಂಗಳ ಗೆಲುವಡೆ
ಓಂ ನಮಃ ಶಿವಶರಣೆಂದಡೆ ಸಾಲದೆ
ಹರ ಹರ ಶಂಕರ, ಶಿವ ಶಿವ ಶಂಕರ,
ಜಯ ಜಯ ಶಂಕರ ಶರಣೆನುತ್ತಿದ್ದೇನೆ.
ಎನ್ನ ಪಾತಕ ಪರಿಹರ,
ಕೂಡಲಸಂಗಮದೇವಾ ಶರಣೆನುತ್ತಿದ್ದೇನೆ.
79.01 71
A71
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಎನ್ನ ಮನದಲ್ಲಿ ಮತ್ತೊಂದನರಿಯೆನಯ್ಯಾ,
ಓಂ ನಮಃ ಶಿವಾಯ, ಓಂ ನಮಃ ಶಿವಾಯ
ಎನಗಿದೆ ಮಂತ್ರ, ಇದೇ ಜಪ.
ಕೂಡಲಸಂಗಮದೇವಾ ನೀನೆ ಬಲ್ಲೆ, ಎಲೆ ಲಿಂಗವೆ.
80.01 72
A72
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಅಂದಂದಿಗೆ ನೂರು ತುಂಬಿತ್ತೆಂಬ ದಿಟವಿರಬೇಕು.
ಸಂದ ಪುರಾತನರ ನೆನೆಯುತ್ತಿರಬೇಕು.
ಜಂಗಮ ಮಠಕ್ಕೆ ಬಂದಡೆ, ವಂಚನೆಯಿಲ್ಲದೆ ಮಾಡಬೇಕು.
ಎನಗಿದೇ ವರವನೀವುದು, ಬಸವಪ್ರಿಯ ಕೂಡಲಚನ್ನಸಂಗಮದೇವಾ.
271.09 73
A73
ಸಂಗಮೇಶ್ವರದಅಪ್ಪಣ್ಣ ಬಸವಪ್ರಿಯ ಕೂಡಲಚನ್ನಸಂಗಮದೇವಾ.
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಹೊಲಬುಗೆಟ್ಟ ಶಿಶು ತನ್ನ ತಾಯ ಬಯಸುವಂತೆ,
ಬಳಿದಪ್ಪಿದ ಪಶು ತನ್ನ ಹಿಂಡನರಸುವಂತೆ,
ಬಯಸುತ್ತಿರ್ದೆನಯ್ಯಾ ನಿಮ್ಮ ಶರಣರ ಬರವನು.
ಬಯಸುತ್ತಿರ್ದೆನಯ್ಯಾ ನಿಮ್ಮ ಭಕ್ತರ ಬರವನು.
ದಿನಕರನುದಯಕ್ಕೆ ಕಮಳ ವಿಕಸಿತವಾದಂತೆ
ಎನಗೆ ನಿಮ್ಮ ಶರಣರ ಬರವು, ಕೂಡಲಸಂಗಮದೇವಾ.
366.01 74
A74
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಮಹದೇವಯ್ಯನ ಶೂನ್ಯಸಂಪಾದನೆ 677
ಲಿಂಗವ ಪೂಜಿಸುತ್ತ ಜಂಗಮದ ಮುಖವ ನೋಡುತ್ತಿಪ್ಪ
ಸುಖವ ಕೊಡು, ಕಂಡಾ ಲಿಂಗವೆ,
ಪರಮಸುಖವ ಕೊಡು, ಕಂಡಾ ಲಿಂಗವೆ.
ಕೂಡಲಸಂಗಮದೇವಾ, ಇದೇ ವರವ ನಿಮ್ಮಲ್ಲಿ ಬೇಡುವೆ.
373.01 75
A75
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಮಾಘಮಾಸದ ನವಿಲಿನಂತಾದೆ ನೋಡವ್ವಾ !
ಇರುಳು ತೊಳಲುವ ಜಕ ೈವಕ್ಕಿ ಯಂತೆ ಹಲುಬುತಿರ್ದೆ ನೋಡವ್ಹಾ .
ಮಾಗಿಯಯಂತೆ ನೋಡವ್ಹಾ |
ಮಹಾಲಿಂಗ ಗಜೇಶ್ವ ರನ ಅನುಭಾವ ಸಂಬಂಧಿಗಳೆ ಬರವು
ಎನ್ನ ಪ್ರಾಣದ ಬರವು ನೋಡವ್ಹಾ !
248.07 76
A76
ಗಜೇಶಮಸಣಯ್ಯ ಮಹಾಲಿಂಗ ಗಜೇಶ್ವರ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಇಂದೆನ್ನ ಮನೆಗೆ ಪ್ರಮಥರು ಬಂದಾರೆಂದು
ಗುಡಿ ತೋರಣವ ಕಟ್ಟಿ, ಷಡುಸಮ್ಮಾರ್ಜನೆಯ ಮಾಡಿ,
ರಂಗವಾಲಿಯನಿಕ್ಕಿ `ಉಘೇ, ಚಾಂಗು ಭಲಾ' ಎಂದೆಂಬೆ.
ಕೂಡಲಸಂಗನ ಶರಣರು
ತಮ್ಮ ಒಕ್ಕುದನಿಕ್ಕಿ ಸಲಹುವರಾಗಿ.
377.01 77
A77
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಆವನಾದಡೇನು ಶ್ರೀಮಹಾದೇವನ ನೆನೆವನ
ಬಾಯ ತಂಬುಲವ ಮೆಲುವೆ, ಬೀಳುಡೆಯ ಹೊದೆವೆ,
ಪಾದರಕ್ಷೆಯ ಕಾಯ್ದು ಬದುಕುವೆ,
ಕೂಡಲಸಂಗಮದೇವಾ.
464.01 78
A78
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಆವಾವ ಭಾವದಲ್ಲಿ ಮಾಡಿ ಕೂಡಿಹೆನೆಂಬವರ
ಬಾಗಿಲ ತೋರಯ್ಯಾ.
ತನುವನೊಪ್ಪಿಸಿದವರ, ಮನವನೊಪ್ಪಿಸಿದವರ, ಧನವನೊಪ್ಪಿಸಿದವರ
ಬಾಗಿಲ ತೋರಯ್ಯಾ.
ಇವೆಲ್ಲವನೊಪ್ಪಿಸಿ ಜಂಗಮವೆನ್ನವರೆನ್ನವರೆಂಬವರ
ಕೆರಹ ಹೊತ್ತಿರಿಸೆನ್ನನು, ಕೂಡಲಸಂಗಮದೇವಾ.
363.01 79
A79
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಅಡಿಗಡಿಗೆ ನಿಮ್ಮ ಶರಣರಡಿಗೆರಗಿ ಶರಣೆಂಬೆ.
ನುಡಿಯ ಬೋಧೆಯ ಮಾತು,
ಅನ್ಯನುಡಿ ಸಮನಿಸದು.
ಓಡುದೇಹದ ಶಿರಬಿಗಿದು, ಮಡುಗಟ್ಟಿ ಕಂಬನಿಯ ಕಡಲೊಳಗೆ
ತೇಲಾಡುತೆಂದಿಪ್ಪೆನೊ ?
ಮೃಡ ಶರಣು ಶರಣೆಂಬೆ ಶಬ್ದ ಒಡಲುಗೊಂಡು
ಶಂಭುಜಕ್ಕೇಶ್ವರದೇವರಿಗೆ
ಶರಣೆನುತ ಮೈಮರೆದೆಂದಿಪ್ಪೆನೊ ?
1206.05 80
A80
ಸತ್ಯಕ್ಕ ಶಂಭುಕೇಶ್ವರ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ

ಟಿಪ್ಪಣಿ; * ಪುಟ ಸಂಖ್ಯೆವಚನ ಸಂಖ್ಯೆ

[ಮೊದಲ ಪುಟ]  12345678910ಮುಂದಿನ 10 » [ಕೊನೆ ಪುಟ]


ಸಿಕ್ಕ ಪಲಿತಾಂಶಗಳು 427 ಇದು ಪುಟ 8 ಈ ಪುಟದಲ್ಲಿ ಪಲಿತಾಂಶಗಳು 71 ರಿಂದ 80 ವರೆಗೆ