ವಚನ ಆಕರಗಳು (15ನೆ ಶತಮಾನ)
ಗುರುವಿನಲ್ಲಿ ಸದಾಚಾರ ಲಿಂಗದಲನುದಿನ ವೇಳೆ. ಜಂಗಮದಲ್ಲನುಭಾವ ಸಮಯಾಚಾರ ಲಿಂಗದಲನುದಿನ ವೇಳೆ. ಈ ಉಭಯಾಚಾರದಿಂದ ತಿಳಿದ ತಿಳಿವು ಲಿಂಗದಲ್ಲಿ ಅನುದಿನ ವೇಳೆ. ಬೇರೆ ತೋರಲಿಲ್ಲ. ಲಿಂಗಜಂಗಮದಲ್ಲಿ ಲೀಯವಾದಾಚಾರ ಸಮಯಾಚಾರ. ಇದು ಕಾರಣ ಕೂಡಲಸಂಗಮದೇವಾ. ಲಿಂಗದಲನುದಿನ ವೇಳೆ. |
820.01 |
91 A91 |
ಬಸವಣ್ಣ | ಕೂಡಲಸಂಗಮದೇವಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಆಚಾರವಿಡಿದು ಲಿಂಗ, ಅನುಭಾವಿಡಿದು ಜಂಗಮ. ತನುವಿನ ಪ್ರಾಣ ಆಚಾರ, ಮನದ ಪ್ರಾಣ ಅನುಭಾವ. ಇದು ಕಾರಣ ಕೂಡಲಚೆನ್ನಸಂಗಮದೇವಾ, ಲಿಂಗವನೂ ಜಂಗಮವನೂ ಬೇರರಸಲಿಲ್ಲ. |
108.03 |
92 A92 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಯ್ಯಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಕಾಯವೂ ಜೀವವೂ, ಜೀವವೂ ಕಾಯವೂ ಎಂತು ಬೆರಸಿಪ್ಪುವಂತೆ ಲಿಂಗದೊಳಗೆ ಜಂಗಮ, ಜಂಗಮದೊಳಗೆ ಲಿಂಗ ಬೆರಸಿಪ್ಪುವು, ಭಿನ್ನಭಾವವಿಲ್ಲದೆ, ನ ಶಿವೇನ ವಿನಾ ಶಕ್ತಿರ್ನ ಶಕ್ತಿರಹಿತಃ ಶಿವಃ ಪುಷ್ಪಗಂಧಾವಿವಾನ್ಯೋನ್ಯಂ ಮಾರುತಾಂಬರಯೋರಿವ ಎಂದುದಾಗಿ_ಭಾವ ಭೇದವಿಲ್ಲ, ಜಂಗಮವೆ ಲಿಂಗ ಕ |
360.03 |
94 A94 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಯ್ಯಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
'ಅಕಾಯೋ ಭಕ್ತಕಾಯಶ್ಚ ಮಮ ಕಾಯಸ್ತು ಭಕ್ತಿಮಾನ್' ಎಂಬ ಶ್ರುತಿಯನೋದುವರೆ ಎಂತೊ ಭಕ್ತಂಗೆ? 'ಮಹಂತೋ ಲಿಂಗರೂಪೇಣ ಮಹಂತೋ ಜಂಗಮಾಸ್ತಥಾ' ಎಂಬ ಶ್ರುತಿಯನೋದುವರೆ ಎಂತೊ ಜಂಗಮಕ್ಕೆ? ಇಂತೆರಡೊಂದಾದರೆ ತೆರಹಿಲ್ಲ ಕೂಡಲಚೆನ್ನಸಂಗಾ ನಿಮ್ಮಲ್ಲಿ. |
137.03 |
95 A95 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಯ್ಯಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಭವವಿಲ್ಲದ ಭಕ್ತನ ಪರಿಯ ನೋಡಾ ! ಮನ ಪ್ರಾಣ ಮುಕ್ತಿಭಾವ ವಿರಹಿತ ಒಡಲಿಲ್ಲದ ಜಂಗಮದ ಪರಿಯ ನೋಡಾ ! ಸಿಡಿಲು ಮಿಂಚಿನ ರೂಹನೊಂದೆಡೆಯಲ್ಲಿ ಹಿಡಿಯಲುಂಟೆ ? ಈ ಉಭಯ ಒಂದಾದವರ ಕಂಡರೆ ನೀವೆಂಬೆನಯ್ಯಾ. ಕೂಡಲಚೆನ್ನಸಂಗಮದೇವಾ. |
757.03 |
96 A96 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಯ್ಯಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ ಕುಲವುಂಟೆ ಜಂಗಮವಿದ್ದೆಡೆಯಲ್ಲಿ ಎಂಜಲುಂಟೆ ಪ್ರಸಾದವಿದ್ದೆಡೆಯಲ್ಲಿ ಅಪವಿತ್ರದ ನುಡಿಯ ನುಡಿವ ಸೂತಕವೆ ಪಾತಕ. ನಿಷ್ಕಳಂಕ ನಿಜೈಕ್ಯ ತ್ರಿವಿಧನಿರ್ಣಯ, ಕೂಡಲಸಂಗಮದೇವಾ, ನಿಮ್ಮ ಶರಣರಿಗಲ್ಲದಿಲ್ಲ. |
770.01 |
99 A99 |
ಬಸವಣ್ಣ | ಕೂಡಲಸಂಗಮದೇವಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ ಲಿಂಗಲೀಲಾವಿಲಾಸ ಚಾರಿತ್ರ 22‖06
|
ಲಿಂಗದಲ್ಲಿ ಸೂತಕವ ಹಿಡಿವನ್ನಕ್ಕ ಪ್ರಾಣಲಿಂಗ ಸಂಬಂಧಿಯೆಂತೆಂಬೆ? ಜಂಗಮದಲ್ಲಿ ಸೂತಕವ ಹಿಡಿವನ್ನಕ್ಕ ಅನುಭಾವಿಯೆಂತೆಂಬೆ? ಪ್ರಸಾದದಲ್ಲಿ ಸೂತಕವ ಹಿಡಿವನ್ನಕ್ಕ ಸ್ವಾಮಿಭೃತ್ಯಸಂಬಂಧಿಯೆಂತೆಂಬೆ? ಭಕ್ತನೆಂತೆಂಬೆ, ಪ್ರಸಾದಿಯೆಂತೆಂಬೆ, ಕೂಡಲಚೆನ್ನಸಂಗನಲ್ಲಿ ಶರಣನೆಂತೆಂಬೆ? |
282.03 |
100 A100 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಯ್ಯಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಟಿಪ್ಪಣಿ; * ಪುಟ ಸಂಖ್ಯೆ ‖ ವಚನ ಸಂಖ್ಯೆ [ಮೊದಲ ಪುಟ] 1 2 3 4 5 6 7 8 9 10 ಮುಂದಿನ 10 » [ಕೊನೆ ಪುಟ]
ಸಿಕ್ಕ ಪಲಿತಾಂಶಗಳು 427 ಇದು ಪುಟ 10 ಈ ಪುಟದಲ್ಲಿ ಪಲಿತಾಂಶಗಳು 91 ರಿಂದ 100 ವರೆಗೆ |
|
|