checking data baseConnected successfully! Sample Image
  •  

ವಚನ ಆಕರಗಳು (15ನೆ ಶತಮಾನ)

search:
search:
ಶಿಲೆಯೊಳಗಣ ಪಾವಕನಂತೆ ಉದಕದೊಳಗಣ ಪ್ರತಿಬಿಂಬದಂತೆ
ಬೀಜದೊಳಗಣ ವೃಕ್ಷದಂತೆ ಶಬ್ದದೊಳಗಣ ನಿಶ್ಶಬ್ದದಂತೆ
ಗುಹೇಶ್ವರಾ ನಿಮ್ಮ ಶರಣಸಂಬಂಧ
1.02 1
A1
ಅಲ್ಲಮ ಗುಹೇಶ್ವರಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಮಹದೇವಯ್ಯನ ಶೂನ್ಯಸಂಪಾದನೆ 1
ಹಲಗೆಯಾರ್ಯನ ಶೂನ್ಯಸಂಪಾದನೆ 1
ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು
ಸಸಿಯೊಳಗಣ ರಸದ ರುಚಿಯಂತಿದ್ದಿತ್ತು
ನನೆಯೊಳಗಣ ಪರಿಮಳದಂತಿದ್ದಿತ್ತು
ಕೂಡಲಸಂಗಮದೇವ ಕನ್ನೆಯ ಸ್ನೇಹದಂತಿದ್ದಿತ್ತು.
1.01 2
A2
ಬಸವಣ್ಣ ಕೂಡಲಸಂಗಮದೇವ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಲಿಂಗಲೀಲಾವಿಲಾಸ ಚಾರಿತ್ರ 7103
ಫಲದೊಳಗಣ ಮಧುರಗೋಪ್ಯದಂತಿದ್ದಿತ್ತು
ಚಂದ್ರಕಾಂತದ ಉದಕದ ತೆರನಂತಿದ್ದಿತ್ತು
ಮಯೂರನ ತತ್ತಿಯ ಚಿತ್ರದಂತಿದ್ದಿತ್ತು
ಶಿಶುಕಂಡ ಕನಸಿನ ಪರಿಯಂತಿದ್ದಿತ್ತು
ಕೂಡಲಚೆನ್ನಸಂಗಯ್ಯಾ [ನಿಮ್ಮ ನಿಲವು] ಫ
ಸದ್ಗುರುಚಿತ್ತದ ಪದದಂತಿದ್ದಿತ್ತು.
1.03 3
A3
ಚೆನ್ನಬಸವಣ್ಣ ಕೂಡಲಚೆನ್ನಸಂಗಯ್ಯಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಮರೀಚಿಯೊಳಡಗಿದ ಬಿಸಿಲಿನಂತಿದ್ದಿತ್ತು
ಕ್ಷೀರದೊಳಡಗಿದ ತುಪ್ಪದಂತಿದ್ದಿತ್ತು
ಚಿತ್ರಕನೊಳಡಗಿದ ಚಿತ್ರದಂತಿದ್ದಿತ್ತು
ಆಲಿಯೊಳಡಗಿದ ತೇಜದಂತಿದ್ದಿತ್ತು
ನುಡಿಯೊಳಡಗಿದ ಅರ್ಥದಂತಿದ್ದಿತ್ತು
ಕೂಡಲಚೆನ್ನಸಂಗಯ್ಯಾ ನಿಮ್ಮ ನಿಲವು.
1458.03 4
A4
ಚೆನ್ನಬಸವಣ್ಣ ಕೂಡಲಚೆನ್ನಸಂಗಯ್ಯಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಲಿಂಗಲೀಲಾವಿಲಾಸ ಚಾರಿತ್ರ 7204
ಕಲ್ಲೊಣಗಣ ಕಿಚ್ಚು ಉರಿಯದಂತೆ, ಬೀಜದೊಳಗಣ ವೃಕ್ಷ ಉಲಿಯದಂತೆ, ತೋರಲಿಲ್ಲಾಗಿ ಬೀರಲಿಲ್ಲಾರಿಗೆಯು, ಗುಹೇಶ್ವರ ನಿಂದ ನಿಲವ ಅನುಭ(ಭಾ?)ವ ಸುಖ ಬಲ್ಲ . 2.02 5
A5
ಅಲ್ಲಮ ಗುಹೇಶ್ವರ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಮಹದೇವಯ್ಯನ ಶೂನ್ಯಸಂಪಾದನೆ 2
ಹಲಗೆಯಾರ್ಯನ ಶೂನ್ಯಸಂಪಾದನೆ 2
ಅಂಕುರ ಪಲ್ಲವ ತರು ಕುಸುಮಫಲರಸಸಾರಾಯ ಇನಿತಿನಿತೆಲ್ಲಿದುದೊ,
ಬೀಜ ಮೊಳೆದೋರದಂದು?
ನಾಭಿಗಳೆಯದ ಪಶುವಿನ ಅಮೃತವೆಲ್ಲಿದ್ದುದೊ, ವೃಷಭ ಮುಟ್ಟದಂದು?
ಘನಕುಚ ಯೌವನೆಯರ ರಜಪ್ರಶ್ನೆಯಲ್ಲಿ
ಒದಗಿದ ಹಸುಗೂಸು ಎಲ್ಲಿದ್ದುದೂ, ಕೊಡಗೂಸು ಕನ್ಯೆಯಳಿಯದಂದು?
ತ್ರಿಜಗದ ಉತ್ಪತ್ಯ, ಸಚರಾಚರದ ಗಂಭೀರವೆಲ್ಲಿದ್ದುದೊ,
ಶಿವನ ಅಷ್ಟತನುಮೂರ್ತಿಗಳಿಲ್ಲದಂದು?
ಸಪ್ತಸ್ವರ ಬಾವನ್ನಕ್ಷರವೆಲ್ಲಿದ್ದುದೊ, ಜ್ಞಾನ ಉದಯಿಸದಂದು?
ಶರಧಿಯೊಳಗಣ ರತ್ನವೆಲ್ಲಿದ್ದುದೊ, ಸ್ವಾತಿಯ ಸಲಿಲವೆರಗದಂದು?
ಶರಣಪಥ ಲಿಂಗೈಕ್ಯವೆಲ್ಲಿದ್ದುದೊ,
ಆರಾಧ್ಯ ಸಕಳೇಶ್ವರದೇವರು ಕರುಣಿಸಿ ಕಣ್ದೆರೆದು ತೋರದಂದು?
369.09 6
A6
ಸಕಳೇಶಮಾದರಸ ಸಕಳೇಶದೇವರು
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಅಂಡಜ ಪೃಥ್ವಿ ಉದಯಿಸದಂದು
ಭೂಮಂಡಲವಾಗದಂದು
ಪಿಂಡಜ ಬೀಜವ ನವಬ್ರಹ್ಮರು ತಾರದಂದು
ನವಖಂಡವ ರಚಿಸದಂದು
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ
ಪಂಚಭೂತಾದಿ [ಸ್ಥ]ಳವಿಡದಂದು
ಅನುಕರಿಸದಂದು, ರೂಹಿಸದಂದು
ಅತಿಮಥನ ಒಡ್ಡದಂದು
ಇಪ್ಪತ್ತೈದರ ಸ್ಥಳವ ಹೆಸರುಗೊಂಡು ಕರೆಯದಂದು
ಎನಗೆ ತನಗೆಂಬಿಚ್ಫೆ ತನ್ನ ತಲೆದೋರದಂದು
ಋಷಿಗಳಾಶ್ರಯ ಲೋಕದಲ್ಲಿ ಹರಿಯದಂದು
ಅಂದು ಬಸವನಿದ್ದ ಕಾಣಾ, ರೇಕಣ್ಣಪ್ರಿಯ ನಾಗಿನಾಥಾ.
126.08 7
A7
ಬಹುರೂಪಿಚೌಡಯ್ಯ ರೇಕಣ್ಣಪ್ರಿಯ ನಾಗಿನಾಥಾ.
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಸರ್ಪನ ಮೇಲೆ ಪೃಥ್ವಿ ರಚಿಸದಂದು
ಸಮುದ್ರಂಗಳೇಳು ಹಾಸದಂದು
ಅಷ್ಟದಿಗುದಂತಿಗಳು ಹುಟ್ಟದಂದು
ಶಂಖು ಶಲಾಕೆಯಿಲ್ಲದಂದು
ಗಂಗೆ ಗೌರೀವಲ್ಲಭರಿಲ್ಲದಂದು
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಈ ಐವರೂ
ಹುಟ್ಟದಂದು
ಈ ಐವರ ತಾಯಿತಂದೆ ಇಲ್ಲದಂದು
ನಿಜಗುರು ಕಪಿಲಸಿದ್ಧಮಲ್ಲೇಶ್ವರಾ ನಿಮ್ಮ ಹೆಸರೇ
1076.04 8
A8
ಸಿದ್ಧರಾಮ ಕಪಿಲಸಿದ್ಧಮಲ್ಲೇಶ್ವರಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಲಿಂಗಲೀಲಾವಿಲಾಸ ಚಾರಿತ್ರ 1010
ಹಲಗೆಯಾರ್ಯನ ಶೂನ್ಯಸಂಪಾದನೆ 245
ಕಾಳಾಂಧರ ಧರೆ ವಾರುಧಿ ಸಹಿತ ಏನೂ ಏನೂ ಇಲ್ಲದಂದು ಪ್ರಮಥನೊಬ್ಬನಿದ್ದ ನೊಂದನಂತಕಾಲ, ನಿರವಯ ನಿರ್ಮಾಯನಾಗಿದ್ದನೊಂದು ಕೋಟ್ಯಾನುಕೋಟಿ ವರುಷ. ಅಲ್ಲಿ ಅನಾಗತವುಂಟು. ಮನವು ಮಹದಲ್ಲಿ ನಿಂದು ಉತ್ಪತ್ಯವೆ೦ದರೆ, ಬಯಲು ಬೆಸಲಾಯಿತ್ತು. ನರರು ಸುರರು ಮೊದಲಾದ ಚೌರಾಸಿ ಜೀವಂಗಳು ಉದಿಸಿದವಯ್ಯಾ-ಇಂತಿವೆಲ್ಲವೂ, ಕೂಡಲಚೆನ್ನಸಂಗಾ, ನಮ್ಮ ಬಸವಣ್ಣ ನೆನೆದಡೆ. 4.03 9
A9
ಚೆನ್ನಬಸವಣ್ಣ ಕೂಡಲಚೆನ್ನಸಂಗಯ್ಯಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಅಯ್ಯಾ ನೀನು ನಿರಾಳ ನಿರ್ಮಾಯನಾಗಿಪ್ಪೆಯಾಗಿ
ಆಕಾಶ ಪ್ರಕಾಶವಿಲ್ಲದಂದು, ಸಾಕ್ಷಿ ಸಭೆಗಳಿಲ್ಲದಂದು
ಸಚರಾಚರವೆಲ್ಲ ರಚನೆಗೆ ಬಾರದಂದು;
ಆಧಾರದೊಳಗಣ ವಿಭೂತಿಯನೆ ತೆಗೆದು, ಭೂಮಿಯ ನೆಲೆಗೊಳಿಸಿ (ಸೆ?)
ಪಂಚಾಶತ್‍ಕೋಟಿ ವಿಸ್ತೀರ್ಣ ಭೂಮಂಡಲಕ್ಕೆ
ಸುತ್ತಿ ಹರಿದವು ಸಪ್ತಸಾಗರಂಗಳು.
ಎಂಬತ್ತಾರು ಕೋಟಿಯ (ಯುಂ?) ತೊಂಬತ್ತೇಳುಲಕ್ಷ ಕಾಲ
ಭವನ ಮಂಡಲಕ್ಕೆ ಉದಯ ಬ್ರಹ್ಮಾಂಡ.
ಅರುವತ್ತಾರು ಕೋಟಿ ತಾರಾಮಂಡಲವೆಂದೆಡೆ,
ಬೆಳಗಿ ತೋರಿದ ಹನ್ನೆರಡು ಜ್ಯೋತಿಯ
ನಿಲಿಸಿ ತೋರಿದ ಹದಿನಾಲ್ಕು ಭುವನವ
ಈ ಜಗದ ಜಂಗುಳಿಯ ಕಾವ ಗೋವಳ ತಾನಾಗಿ
ಚೌರಾಸಿಲಕ್ಷ ಜೀವರಾಶಿಗಳಿಗೆ ರಾಶಿವಾಳ ತಾನಾಗಿ
ಸಕಲದ ಅಳಿವಿನ ಉಳಿವಿನ ನಿಜದ ನಿಲವ ನೋಡಿ ಕಂಡೆನು.
ಗುಹೇಶ್ವರಾ, ನಿಮ್ಮ ಶ್ರೀಪಾದಕೆ ನಮೋ ನಮೋ ಎನುತಿರ್ದೆನು.
8.02 10
A10
ಅಲ್ಲಮ ಗುಹೇಶ್ವರಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ

ಟಿಪ್ಪಣಿ; * ಪುಟ ಸಂಖ್ಯೆವಚನ ಸಂಖ್ಯೆ

[ಮೊದಲ ಪುಟ]  12345678910ಮುಂದಿನ 10 » [ಕೊನೆ ಪುಟ]


ಸಿಕ್ಕ ಪಲಿತಾಂಶಗಳು 427 ಇದು ಪುಟ 1 ಈ ಪುಟದಲ್ಲಿ ಪಲಿತಾಂಶಗಳು 1 ರಿಂದ 10 ವರೆಗೆ