checking data baseConnected successfully!
| ಮೇಲಿನ ವಚನ ಕಾಣಿಸಿಕೊಳ್ಳುವ ಆಕರಗಳು | ||||||
| ವಚನ ಸಂಖ್ಯೆ: 1603 (ಸಮಗ್ರ ವಚನ ಸಂಪುಟ 3) | ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ನಾದಬಿಂದುಕಲಾತೀತಂ ಗುರುಣಾ ಲಿಂಗಮುದ್ಭವಂ ಎಂದುನಾಗಿ, ಸದ್ಗುರುವಿನಿಂದ ಉರಿಲಿಂಗ ಉತ್ಪತ್ತಿ, ಲಿಂಗದಿಂದವು ಜಂಗಮ ಉತ್ಪತ್ತಿ, ಜಂಗಮದಿಂದವು ಪ್ರಸಾದೋತ್ಪತ್ತಿ, ಪ್ರಸಾದದಿಂದವು ಭಕ್ತಿ ಉತ್ಪತ್ತಿ, ಭಕ್ತಿ ಪ್ರಸಾದದಿಂದವೂ ಸಕಲೋತ್ಪತ್ತಿ. ಇದು ಕಾರಣ, ಪ್ರಸಾದವುಳ್ಳವಂಗೆ ಭಕ್ತಿ ಉಂಟು, ಯುಕ್ತಿಯುಳ್ಳವಂಗೆ ಜಂಗಮ ಉಂಟು, ಜಂಗಮವುಳ್ಳವಂಗೆ ಲಿಂಗ ಉಂಟು. ಲಿಂಗವುಳ್ಳವಂಗೆ ಸದ್ಗುರು ಉಂಟು. ಇದು ಕಾರಣ, ಸದ್ಗುರುವೇ ಕಾರಣವು ಗುರುಣಾ ದೀಯತೇ ಲಿಂಗಂ ಗುರುಣಾ ದೀಯತೇ ಕ್ರಿಯಾ ಗುರುಣಾ ದೀಯತೇ ಮಂತ್ರಂ ಸದ್ಗುರುಸ್ಸರ್ವಕಾರಣಂ ಎಂದುದಾಗಿ, ಸದ್ಗುರುವೆ ಸರ್ವಶ್ರೇಷ*ನು, ಸದ್ಗುರುವೆ ಸರ್ವಪೂಜ್ಯನು, ಸದ್ಗುರುವೆ ಸರ್ವಕಾರಣವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ. |
|||||
| ಏಕೋತ್ತರ ಶತಸ್ಥಲ ಜಕ್ಕಣ, ವಚನ ಸಂ 260 ಸದ್ಗುರುವಿನಿಂದವೆ ಮಹತ್ತಪ್ಪ ಲಿಂಗೋತ್ಪತ್ತಿ. ಲಿಂಗದಿ೦ದವೆ ಮಹತ್ತಪ್ಪ ಜ೦ಗಮೋತ್ಪತ್ತಿ. ಜಂಗಮದಿಂದವೆ ಮಹತ್ತಪ್ಪ ಪ್ರಸಾದೋತ್ಪತ್ತಿ. ಪ್ರಸಾದದಿಂದವೆ ಭಕ್ತಿಯುತ್ಪತ್ತಿ, ಭಕ್ತಿ ಪ್ರಸಾದದಿ೦ದವೆ ಸಕಲೋತ್ಪತ್ತಿ. ಇದು ಕಾರಣ, ಪ್ರಸಾದವುಳ್ಳವಂಗೆ ಭಕ್ತಿಯುಂಟು. ಭಕ್ತಿಯುಳ್ಳವಂಗೆ ಜಂಗಮವುಂಟು. ಜಂಗಮವುಳ್ಳವಂಗೆ ಲಿಂಗವು೦ಟು. ಲಿಂಗವುಳ್ಳವಂಗೆ ಸದ್ಗುರುವುಂಟು. ಇದು ಕಾರಣ, ಸದ್ಗುರುವೆ ಕಾರಣವು. ಶ್ರುತಿ: «ಸದ್ಗುರುರ್ದೀಯತೇ ಲಿಂಗಂ ಸದ್ಗುರುರ್ದೀಯತೇ ಕ್ರಿಯಾಂ ಸದ್ಗುರುರ್ದೀಯತೇ ಮಂತ್ರಂ ಸದ್ಗುರುಃ ಸರ್ವಕಾರಣಂ» ಎಂದುದಾಗಿ, ಸದ್ಗುರುವೆ ಸರ್ವಕ್ಕೆ ಶ್ರೇಷ್ಠನು. ಸದ್ಗುರುವೆ ಸರ್ವಕ್ಕೆ ಪೂಜ್ಯನು. ಸದ್ಗುರುವೆ ಸರ್ವಕ್ಕೆ ಕಾರಣವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
×
ಪಠ್ಯಗಳಲ್ಲಿನ ವ್ಯತ್ಯಾಸ
|
| ವಚನ ಆಕರಗಳ ಬಗೆಗೆಆಕರಗಳ ಕಾಲಮಾನ:15ನೇ ಶತಮಾನದ ವಚನ ಆಕರಗಳು ಇಂದು ತಿಳಿದಂತೆ ತೀರ ಹಿಂದಿನ ಪ್ರತಿ ಎಂದರೆ 1412ರ ಜಕ್ಕಣನ ಏಕೋತ್ತರಶತಸ್ಥಲ (ಕಲಬುರ್ಗಿ, ಸಮಗ್ರ ಸಾಹಿತ್ಯ, ಪು 425, 2020??). ಲಿಂಗಲೀಲಾವಿಲಾಸಚಾರಿತ್ರ ಹಾಗೂ ಮಹದೇವಯ್ಯನವರ ಶೂನ್ಯಸಂಪಾದನೆ ಗಳೆರಡನ್ನೂ ಸುಮಾರು 15ನೆಯ ಶತಮಾನದ ನಡುವಿಗೆ ಇರಿಸಲಾಗುತ್ತದೆ (1430). ಸಕಲ ಪುರಾತನರ ವಚನಗಳುನ ಮೂರುಕಟ್ಟುಗಳ ಕಾಲಮಾನವನ್ನು 15ನೆಯ ಶತಮಾನದ ಕೊನೆಗೆ ಎನ್ನುತ್ತಾರೆ ವೀರಣ್ಣ ರಾಜೂರ (ಪು.xxx, ಎಲ್ಲ ಪುರಾತನರ ವಚನಗಳು, 2006; 1420 ರಿಂದ 1495ರ ನಡುವೆ ಎನ್ನುತ್ತಾರೆ ಅವರು ). ನಂತರದ ಶತಮಾನದ ಆಕರಗಳಲ್ಲಿ ಗುಬ್ಬಿ ಮಲ್ಲಣ್ಣನ ಗಣಭಾಷಿತರತ್ನಮಾಲೆ ಮತ್ತು ಹಲಗೆಯಾರ್ಯನ ಶೂನ್ಯಸಂಪಾದನೆ ಬರುತ್ತವೆ (ಇವುಗಳ ಬಗೆಗೆ ವೀರಶೈವಾಮೃತ ಪುರಾಣದ ಕಾಲಮಾನವೇ 1530 ಆಧಾರ. ಹೀಗಾಗಿ ಗುಬ್ಬಿ ಮಲ್ಲಣ್ಣ ರಚಯತನ ತಾತನಾದ್ದರಿಂದ ಅವನನ್ನು 15ನೆಯ ಶತಮಾನದಲ್ಲಿ ಇರಿಸ ಬಹುದು. ಆದರೆ ಹಲಗೆಯಾರ್ಯನದು 15ರ ಕೊನೆ ಅಥವಾ 16ನೇ ಶತಮಾನದ ಆರಂಭ ಎನ್ನಲಾಗಿದೆ ) ಇಲ್ಲಿ ಕೆಲವು ಜನಪ್ರಿಯ ಕೃತಿಗಳನ್ನು ತೆಗೆದುಕೊಳ್ಳಲಾಗಿದೆ. ಇತರ ವಚನ ಹೊತ್ತಿಗೆಗಳನ್ನು ಸೇರಿಸಿಕೊಳ್ಳ ಬೇಕಿದೆ. |