checking data baseConnected successfully!
| ಮೇಲಿನ ವಚನ ಕಾಣಿಸಿಕೊಳ್ಳುವ ಆಕರಗಳು | ||||||
| ವಚನ ಸಂಖ್ಯೆ: 1627 (ಸಮಗ್ರ ವಚನ ಸಂಪುಟ 6) | ಹೊನ್ನು, ಹೆಣ್ಣು, ಮಣ್ಣು, ಅನ್ನ, ಉದಕ, ದ್ರವ್ಯಂಗಳು ಧರ್ಮದಾಸೆಯ ಕಾರಣ, ಅರ್ಥದಾಸೆಯ ಕಾರಣ, ಕಾಮದಾಸೆಯ ಕಾರಣ, ಮೋಕ್ಷದಾಸೆಯ ಕಾರಣ, ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯದಾಸೆಯ ಕಾರಣ, ಪಂಚಮಹಾಪಾತಕಂಗಳ ಮಾಡಿದ ದೋಷಂಗಳ ಕಾರಣ, ಅಧಿಕಾರಣ, ವ್ಯಾಧಿಕಾರಣ, ಕೀರ್ತಿಕಾರಣ, ವಾರ್ತೆಕಾರಣ, ಸರ್ವವನು ನಿರಂತರ ಕೊಡುವರು. ನಿಷ್ಕಾರಣವಾಗಿ ನಿರುಪಾಧಿಕರಾಗಿ, ನಿರಾಶ್ರಿತರಾಗಿ ಶ್ರೀಗುರುಕಾರಣವಾಗಿ, ಲಿಂಗಕಾರಣವಾಗಿ, ಜಂಗಮಕಾರಣವಾಗಿ, ಪ್ರಸಾದಕಾರಣವಾಗಿ, ಈ ನಾಲ್ಕನು ಒಂದು ಮಾಡಿ, ಸದ್ಭಕ್ತಿಯಿಂದ ದ್ವಿವಿಧವು ಪರಿಣಾಮಿಸುವಂತೆ, ಕ್ಷಣಮಾತ್ರದಲ್ಲಿ ಅಣುಮಾತ್ರದ್ರವ್ಯವ ಕೊಡುವವರಾರನು ಕಾಣೆ, ನಿರ್ವಂಚಕರಾಗಿ. ಆನು ವಂಚಕನು, ಎನಗೆ ಭಕ್ತಿ ಇಲ್ಲ. ಶಿವ ಶಿವಾ, ಸಂಗನಬಸವಣ್ಣ ನಿರ್ವಂಚಕನು, ನಿರಾಶಾಭರಿತನು, ಸುಚರಿತ್ರನು, ಸದ್ಭಕ್ತಿಪುರುಷನು, ಮಹಾಪುರುಷನು. ಎನಗೆ ಮಹಾ ಶ್ರೀಗುರುಲಿಂಗಜಂಗಮಪ್ರಸಾದ. ಈ ಚತುರ್ವಿಧವು ಬಸವಣ್ಣನು. ಈ ಬಸವಣ್ಣನ ಭೃತ್ಯರ ಭೃತ್ಯನಾಗಿ ಎನ್ನನಿರಿಸಯ್ಯ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. |
|||||
| ಏಕೋತ್ತರ ಶತಸ್ಥಲ ಜಕ್ಕಣ, ವಚನ ಸಂ 137 ಹೊನ್ನು ಹೆಣ್ಣು ಮಣ್ಣು ಅನ್ನ ಉದಕ ವಸ್ತ್ರಂಗಳನೂ ಧರ್ಮದಾಸೆ ಕಾರಣ, ಅರ್ಥದಾಸೆ ಕಾರಣ,,ಕಾಮದಾಸೆ ಕಾರಣ, ಮೋಕ್ಷದಾಸೆ ಕಾರಣ, ಸಾಲೋಕ್ಕ ಸಾಮೀಪ್ಯ, ಸಾರೂಪ್ಯ ಸಾಯಜ್ಯದಾಸೆ ಕಾರಣ, ಪಂಚಮಹಾಪಾತಕ೦ಗಳ ಮಾಡಿದ ದೋಷ ಕಾರಣ, ಆಧಿ ಕಾರಣ, ವ್ಯಾಧಿ ಕಾರಣ, ಕೀರ್ತಿ ಕಾರಣ, ವಾರ್ತೆ ಕಾರಣ, ಸರ್ವವನೂ ನಿರಂತರ ಕೊಡುವರು. ನಿಃಕಾರಣವಾಗಿ, ನಿರುಪಾಧಿಕರಾಗಿ, ನಿರಾಶ್ರಿತರಾಗಿ, ಶ್ರೀಗುರುಕಾರಣ ಲಿ೦ಗ ಕಾರಣವಾಗಿ, ಜಂಗಮ ಕಾರಣವಾಗಿ, ಪ್ರಸಾದ ಕಾರಣವಾಗಿ-ಈ ನಾಲ್ಕನೂ ಒಂದು ಮಾಡಿ, ಸದ್ಭಕ್ತಿಯಿಂದ ದ್ವಿವಿಧವೂ ಪರಿಣಾಮಿಸುವಂತೆ, ಅಣುಮಾತ್ರ ದ್ರವ್ಯವ ಕ್ಷಣಮಾತ್ರದಲ್ಲಿ ಕೊಡುವವರನಾರನೂ ಕಾಣೆನು ನಿರ್ವಂಚಕರಾಗಿ. ಆನು ವಂಚಕನು, ಎನಗೆಯೂ ಭಕ್ತಿಯಿಲ್ಲದೆ ನಾನು, ಶಿವ ಶಿವಾ। ಸಂಗನಬಸವಣ್ಣನು ನಿರ್ವಂಚಕನು, ನಿರಾಶಾಭರಿತನು, ಸುಚಾರಿತ್ರನು, ಸದ್ಭಕ್ತಿಪರುಷನು, ಮಹಾಪುರುಷನು. ಎನಗೆಯೂ ಶ್ರೀ ಗುರು ಲಿಂಗ ಜಂಗಮ ಪ್ರಸಾದ ಈ ಚತುರ್ವಿಧವೂ ಬಸವಣ್ಣನು. ಈ ಬಸವಣ್ಣನ ಭೃತ್ಯರ ಭೃತ್ಯರ ತದ್ಬೃತ್ಯನಾಗಿ ಎನ್ನನಿರಿಸಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
×
ಪಠ್ಯಗಳಲ್ಲಿನ ವ್ಯತ್ಯಾಸ
|
| ವಚನ ಆಕರಗಳ ಬಗೆಗೆಆಕರಗಳ ಕಾಲಮಾನ:15ನೇ ಶತಮಾನದ ವಚನ ಆಕರಗಳು ಇಂದು ತಿಳಿದಂತೆ ತೀರ ಹಿಂದಿನ ಪ್ರತಿ ಎಂದರೆ 1412ರ ಜಕ್ಕಣನ ಏಕೋತ್ತರಶತಸ್ಥಲ (ಕಲಬುರ್ಗಿ, ಸಮಗ್ರ ಸಾಹಿತ್ಯ, ಪು 425, 2020??). ಲಿಂಗಲೀಲಾವಿಲಾಸಚಾರಿತ್ರ ಹಾಗೂ ಮಹದೇವಯ್ಯನವರ ಶೂನ್ಯಸಂಪಾದನೆ ಗಳೆರಡನ್ನೂ ಸುಮಾರು 15ನೆಯ ಶತಮಾನದ ನಡುವಿಗೆ ಇರಿಸಲಾಗುತ್ತದೆ (1430). ಸಕಲ ಪುರಾತನರ ವಚನಗಳುನ ಮೂರುಕಟ್ಟುಗಳ ಕಾಲಮಾನವನ್ನು 15ನೆಯ ಶತಮಾನದ ಕೊನೆಗೆ ಎನ್ನುತ್ತಾರೆ ವೀರಣ್ಣ ರಾಜೂರ (ಪು.xxx, ಎಲ್ಲ ಪುರಾತನರ ವಚನಗಳು, 2006; 1420 ರಿಂದ 1495ರ ನಡುವೆ ಎನ್ನುತ್ತಾರೆ ಅವರು ). ನಂತರದ ಶತಮಾನದ ಆಕರಗಳಲ್ಲಿ ಗುಬ್ಬಿ ಮಲ್ಲಣ್ಣನ ಗಣಭಾಷಿತರತ್ನಮಾಲೆ ಮತ್ತು ಹಲಗೆಯಾರ್ಯನ ಶೂನ್ಯಸಂಪಾದನೆ ಬರುತ್ತವೆ (ಇವುಗಳ ಬಗೆಗೆ ವೀರಶೈವಾಮೃತ ಪುರಾಣದ ಕಾಲಮಾನವೇ 1530 ಆಧಾರ. ಹೀಗಾಗಿ ಗುಬ್ಬಿ ಮಲ್ಲಣ್ಣ ರಚಯತನ ತಾತನಾದ್ದರಿಂದ ಅವನನ್ನು 15ನೆಯ ಶತಮಾನದಲ್ಲಿ ಇರಿಸ ಬಹುದು. ಆದರೆ ಹಲಗೆಯಾರ್ಯನದು 15ರ ಕೊನೆ ಅಥವಾ 16ನೇ ಶತಮಾನದ ಆರಂಭ ಎನ್ನಲಾಗಿದೆ ) ಇಲ್ಲಿ ಕೆಲವು ಜನಪ್ರಿಯ ಕೃತಿಗಳನ್ನು ತೆಗೆದುಕೊಳ್ಳಲಾಗಿದೆ. ಇತರ ವಚನ ಹೊತ್ತಿಗೆಗಳನ್ನು ಸೇರಿಸಿಕೊಳ್ಳ ಬೇಕಿದೆ. |