checking data baseConnected successfully!
| ಮೇಲಿನ ವಚನ ಕಾಣಿಸಿಕೊಳ್ಳುವ ಆಕರಗಳು | ||||||
| ವಚನ ಸಂಖ್ಯೆ: 192 (ಸಮಗ್ರ ವಚನ ಸಂಪುಟ 3) | ಸರ್ವವೂ ಶಿವನಿಂದ ಉದ್ಭವಿಸುವವೆಂದರೆ, ಉದ್ಭವಿಸುವವೆಲ್ಲವೂ ಶಿವನೆ? ಸಕಲ ಬೀಜವ ಬಿತ್ತುವನೊಕ್ಕಲಿಗನೆಂದರೆ ಆ ಬೆಳೆ ತಾನೊಕ್ಕಲಿಗನೆ? ಮಡಕೆಯ ಕುಂಬಾರ ಮಾಡುವನೆಂದರೆ, ಆ ಮಡಕೆ ತಾ ಕುಂಬಾರನೆ? ಕಬ್ಬುನವ ಕಮ್ಮಾರ ಮಾಡುವನೆಂದರೆ, ಆ ಕಬ್ಬುನ ತಾ ಕಮ್ಮಾರನೆ? ಆ ಪರಿಯಲಿ ಸಕಲ ಜಗತ್ತಿನ ಸಚರಾಚರವನು ಮಾಡುವನೆಂದರೆ, ಆ ಸಚರಾಚರವು ಶಿವನೆ? ಅಹಂಗಾದರೆ ಅಷ್ಟಾದಶವರ್ಣವೇಕಾದವು? ಚೌರಾಸಿಲಕ್ಷ ಜೀವರಾಶಿಗಳೇಕಾದವು? ಸುಖ-ದುಃಖ ಸ್ವರ್ಗ-ನರಕಂಗಳೇಕಾದವು? ಉತ್ತಮ-ಮಧ್ಯಮ-ಕನಿಷ್ಠಂಗಳೇಕಾದವು? ಪುಣ್ಯ-ಪಾಪ, ಭವಿ-ಭಕ್ತರೆಂದೇಕಾದವು? ಇದು ಕಾರಣ ಸದಾಚಾರ ಸದ್ಭಕ್ತಿಯಲ್ಲಿಪ್ಪಾತನೆ ಶಿವ. ಅಂತಲ್ಲದೆ ಸರ್ವವೂ ಶಿವನೆಂದರೆ ಅಘೋರ ನರಕ ಕೂಡಲಚೆನ್ನಸಂಗಯ್ಯಾ. |
|||||
| ಏಕೋತ್ತರ ಶತಸ್ಥಲ ಜಕ್ಕಣ, ವಚನ ಸಂ 220 ಸರ್ವವೂ ಶಿವನಿಂದ ಉದ್ಭವಿಸಿದವೆಂದರೆ, ಉದ್ಭವಿಸಿದವೆಲ್ಲಾ ಶಿವನೆ? ಸಕಲ ಬೀಜವ ಬಿತ್ತುವನೊಕ್ಕಲಿಗನೆ೦ದರೆ, ಆ ಬೆಳೆ ತಾನೊಕ್ಕಲಿಗನೆ? ಮಡಕೆಯ ಕುಂಬಾಱ ಮಾಡುವನೆಂದಡೆ, ಆ ಮಡಕೆ ತಾ ಕು೦ಬಾಱನೆ? ಕಬ್ಬುನವ ಕಮ್ಮಾಱ ಮಾಡುವನೆಂದರೆ, ಆ ಕಬ್ಬುನ ತಾ ಕಮ್ಮಾಱನೆ? ಈ ಪರಿಯಲ್ಲಿ ಸಕಲ ಜಗತ್ತು ಸಚರಾಚರವನು ಶಿವ ಮಾಡಿದನೆ೦ದಡೆ, ಆ ಸಚರಾಚರವೆಲ್ಲವು ಶಿವನೆ? ಅಹಂಗಾದಡೆ ಅಷ್ಟಾದಶ ವರ್ಣ೦ಗಳೇಕಾದವು? ಚೌರಾಸಿಲಕ್ಷ ಜೀವರಾಶಿಗಳೇಕಾದವು? ಸುಖ ದುಃಖ ಸ್ವರ್ಗ ನರಕಂಗಳೇಕಾದವು? ಆಚಾರ ಅನಾಚಾರಂಗಳೇಕಾದವು? ಪುಣ್ಯ ಪಾಪ ಭವಿ ಭಕ್ತರೆಂದೇಕಾದವು? ಇದು ಕಾರಣ ಸದ್ಭಕ್ತಿ ಸದಾಚಾರದಲ್ಲಿಪ್ಪನು. ಅ೦ತಲ್ಲದೆ ಸರ್ವವೂ ಶಿವನೆಂದಡೆ ಅಘೋರ ನಾಯಕನರಕ ಕೂಡಲಚೆನ್ನಸಂಗಯ್ಯಾ
×
ಪಠ್ಯಗಳಲ್ಲಿನ ವ್ಯತ್ಯಾಸ
|
| ವಚನ ಆಕರಗಳ ಬಗೆಗೆಆಕರಗಳ ಕಾಲಮಾನ:15ನೇ ಶತಮಾನದ ವಚನ ಆಕರಗಳು ಇಂದು ತಿಳಿದಂತೆ ತೀರ ಹಿಂದಿನ ಪ್ರತಿ ಎಂದರೆ 1412ರ ಜಕ್ಕಣನ ಏಕೋತ್ತರಶತಸ್ಥಲ (ಕಲಬುರ್ಗಿ, ಸಮಗ್ರ ಸಾಹಿತ್ಯ, ಪು 425, 2020??). ಲಿಂಗಲೀಲಾವಿಲಾಸಚಾರಿತ್ರ ಹಾಗೂ ಮಹದೇವಯ್ಯನವರ ಶೂನ್ಯಸಂಪಾದನೆ ಗಳೆರಡನ್ನೂ ಸುಮಾರು 15ನೆಯ ಶತಮಾನದ ನಡುವಿಗೆ ಇರಿಸಲಾಗುತ್ತದೆ (1430). ಸಕಲ ಪುರಾತನರ ವಚನಗಳುನ ಮೂರುಕಟ್ಟುಗಳ ಕಾಲಮಾನವನ್ನು 15ನೆಯ ಶತಮಾನದ ಕೊನೆಗೆ ಎನ್ನುತ್ತಾರೆ ವೀರಣ್ಣ ರಾಜೂರ (ಪು.xxx, ಎಲ್ಲ ಪುರಾತನರ ವಚನಗಳು, 2006; 1420 ರಿಂದ 1495ರ ನಡುವೆ ಎನ್ನುತ್ತಾರೆ ಅವರು ). ನಂತರದ ಶತಮಾನದ ಆಕರಗಳಲ್ಲಿ ಗುಬ್ಬಿ ಮಲ್ಲಣ್ಣನ ಗಣಭಾಷಿತರತ್ನಮಾಲೆ ಮತ್ತು ಹಲಗೆಯಾರ್ಯನ ಶೂನ್ಯಸಂಪಾದನೆ ಬರುತ್ತವೆ (ಇವುಗಳ ಬಗೆಗೆ ವೀರಶೈವಾಮೃತ ಪುರಾಣದ ಕಾಲಮಾನವೇ 1530 ಆಧಾರ. ಹೀಗಾಗಿ ಗುಬ್ಬಿ ಮಲ್ಲಣ್ಣ ರಚಯತನ ತಾತನಾದ್ದರಿಂದ ಅವನನ್ನು 15ನೆಯ ಶತಮಾನದಲ್ಲಿ ಇರಿಸ ಬಹುದು. ಆದರೆ ಹಲಗೆಯಾರ್ಯನದು 15ರ ಕೊನೆ ಅಥವಾ 16ನೇ ಶತಮಾನದ ಆರಂಭ ಎನ್ನಲಾಗಿದೆ ) ಇಲ್ಲಿ ಕೆಲವು ಜನಪ್ರಿಯ ಕೃತಿಗಳನ್ನು ತೆಗೆದುಕೊಳ್ಳಲಾಗಿದೆ. ಇತರ ವಚನ ಹೊತ್ತಿಗೆಗಳನ್ನು ಸೇರಿಸಿಕೊಳ್ಳ ಬೇಕಿದೆ. |