checking data baseConnected successfully! Sample Image
  •  

MY REF NO: 382374.02

ಮೇಲಿನ ವಚನ ಕಾಣಿಸಿಕೊಳ್ಳುವ ಆಕರಗಳು
ಮಹದೇವಯ್ಯನ 'ಶೂನ್ಯ ಸಂಪಾದನೆ', ವಚನ ಸಂ 74
ಪರಮತತ್ವ ಪರಮಾರ್ಥ ಪರಾಪರ ವಾಜ್ಮನಕ್ಕಗೋಚರ, ಶಬ್ದಗ೦ಭೀರ, ಉಪಮಾತೀತ, ಉನ್ನತ ಪರಶಿವ ಜ್ಞಾನಜ್ಯೋತಿ ಸುಜ್ಜಾನ ಪ್ರಭೆಯ ಬೆಳಗಿನೊಳಗೆ ಸುಳಿದಾಡುವ ಮಹಾಮಹಿಮಂಗೆ ಜ್ಞಾನವೆ ಶೃಂಗಾರ, ಮಹಾಬೆಳಗೆ ವಿಭೂತಿ, ಪಂಚಬ್ರಹ್ಮವೆ ದರ್ಶನ, ಗಗನಸ್ಥಾನವೆ ಕಂಥೆ, ಆಕಾಶವೆ ಠೊಪ್ಪರ, ಅಜಾಂಡ- ಬ್ರಹ್ಮಾಂಡಗಳೆ ಕರ್ಣಕು೦ಡಲ, ಆದಿಯಾಧಾರವೆ ಕಕ್ಷಪಾಳ, ಅನಾಹತವೆ ಒಡ್ಯಾಣ, ಅದ್ವಯವೆ ಯೋಗಟವಟ್ಟಿಗೆ, ಅಗಮ್ಯವೆ ಯೋಗವಾವುಗೆ, ಅಚಲಿತವೆ ಖರ್ಪರ, ಅಪ್ರಮಾಣವೆ ಲಾಕುಳ, ಅವಿಚಾರವೆ ಸುಳುಹು, ಅಕಲ್ಪಿತವೆ ಭಿಕ್ಷ. ಕೊಂಡುದೆ ಗಮನ, ನಿ೦ದುದೆ ನಿವಾಸ, ನಿಶ್ಚಿಂತವೆಂಬ ಆಶ್ರಮದೊಳಗೆ ನಿರಾಕುಳವೆಂಬ ಸಿ೦ಹಾಸನವನಿಕ್ಕಿ ಗಗನ ಗ೦ಭೀರದ ಬಾವಿಯೊಳಗೆ ಅಗೋಚರದ ಅಗ್ಘವಣಿಯಂ ತಂದು ಮಹಾಘನಪ್ರಾಣಲಿಂಗಕ್ಕೆ ಮಂಗಳದ ಬೆಳಗೆ ಮಜ್ಜನ, ಬಿ೦ದ್ವಾಕಾಶವೆ ಗಂಧ, ಮಹದಾಕಾಶವೆ ಅಕ್ಷತೆ, ಪರಾಪರವೆ ಪತ್ರೆ-ಪುಷ್ಪ, ನಿರ್ಮಳವೆ ಲಿಂಗಾರ್ಚನೆ, ಮಹಾಪ್ರಕಾಶವೆ ಪೂಜೆ, ನಿತ್ಯ ನಿರಂಜನವೆ ಧೂಪಾರತಿ, ಸಕಲಭುವನಾದಿ ಭುವನ೦ಗಳೆ ಸಯಧಾನ, ಆಚಾರವೆ ಅರ್ಪಿತ, ಮಹಾಸ್ಥಳವೆ |ಸೀತಾಳ‖ ಶೀತಾಳ [ಶ್ರೀತಾಳ] |, ಅಖಂಡಿತವೆ. ಅಡಕೆ ಏಕೋಭಾವವೆ ಎಲೆ, ಶುದ್ಧ ಶಿವಾಚಾರವೆ ಸುಣ್ಣ, ಎವೇಕವಿಚಾರದಿ೦ ತಾ೦ಬೂಲಮಂ ಸ್ವೀಕರಿಸಿ ಮಹಾಲಿಂಗದ ಪರಿಣಾಮವೆ ಪ್ರಸಾದ, ಸಮ್ಯಗ್‌ಜ್ಞಾನವೆ ಸಂತೋಷ, ಸಹಜ ನಿರಾಭಾರಿ |ಗಳ‖ಗಣ | ಮೇಳದಿ೦ ನಿಸ್ಸೀಮದ ನಿಭ್ರಾಂತಿನ ಸ೦ಗದಲ್ಲಿ, ನಿರಾಶಾಸ್ಪದವೆ ಅನುಕೂಲ, ನಿಶ್ಯಬ್ದಾನುಭಾವದ ಅನುಪಮದ ನಿಶ್ಯೂನ್ಯವೆ ವಿಶ್ರಾಮ, ನಿರಾಕಾರವೆ. ಗಮನ, ನಿರಂತರ ಪಾತಾಳೋರ್ಧ್ವಪವನ ತ್ರಿಭುವನ ಗಿರಿಯೆ೦ಬ ಪರ್ವತವನೇಱೆ, ಕಾಯವೆಂಬ ಕದಳಿಯ ಗೆಲಿದು ಹೊಕ್ಕು ಸುಳಿದಾಡುವ ಮಹಾಮಹಿಮಂಗೆ ಇಹಲೋಕವೇನು? ಪರಲೋಕವೇನು? ಅಲ್ಲಿ೦ದತ್ತತ್ತ ಅಗಮ್ಯನಿರಾಳ, ಪರಮಜ್ಜಾನ ಸಿದ್ಧಿ, ಮಹಾಲಿಂಗದ ಬೆಳಗು! ಗೊಗೇಶ್ವರ, ನಿಮ್ಮ ನಿಜವನಱಿದ ಮಹಾಮಹಿಮಂಗೆ ನಮೋ ನಮೋ ಎಂಬೆನು.

ವಚನ ಆಕರಗಳ ಬಗೆಗೆ

  • ★ ಏಕೋತ್ತರಶತಸ್ಥಲ, ಭಂಡಾರಿ ಜಕ್ಕಣಂಗಳು ಸೇರಿಸಿದ,ಸಂ. ಕಲಬುರ್ಗಿ ಎಂ. ಎಂ., ರಾಜೂರ ವೀರಣ್ಣ, ಲಿಂಗಾಯತ ಅಧ್ಯಯನ ಸಂಸ್ಥೆ, ಲಿಂಗಾಯತ ಅಧ್ಯಯನ ಸಂಸ್ಥೆ, ಯೆಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ, 2014 (ಮರು ಮುದ್ರಣ: ಡಾ. ಎಂ. ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ, ಸಂ. 14, ವಚನ ಸಾಹಿತ್ಯ ಭಾಗ 6, ವಿಜಯಪುರ)
  • ★ ಲಿಂಗಲೀಲಾವಿಲಾಸಚಾರಿತ್ರ ಕಲ್ಲುಮಠದ ಪ್ರಭುದೇವರು ವಿರಚಿಸಿದ, ಸಂ. ಭೂಸನೂರಮಠ ಸಂ. ಶಿ., ಶ್ರೀ ನಿ. ಪ್ರ. ಸ್ವ. ಮೃತ್ಯುಂಜಯ ಮಹಾಸ್ವಾಮಿಗಳು, ಮುರುಘಾಮಠ, ಧಾರವಾಡ, 1956
  • ★ ಪ್ರಭುದೇವರ ಶೂನ್ಯಸಂಪಾದನೆ ಶಿವಗಣಪ್ರಸಾದಿ ಮಹದೇವಯ್ಯನ, ಬಸವರಾಜು ಎಲ್., ಸಪ್ನ ಬುಕ್ ಹೌಸ್, ಬೆಂಗಳೂರು, 2017
  • ★ ಎಲ್ಲ ಪುರಾತರನ ವಚನಗಳು ಭಾಗ. 1 ಕೋಲಶಾಂತಯನ್ನ ವಚನಗಳಿಂದ ಆರಂಭವಾಗುವ ಸಂಪುಟ, ರಾಜೂರ ವೀರಣ್ಣ, ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು, 2006
  • ★ ಎಲ್ಲ ಪುರಾತರನ ವಚನಗಳು ಭಾಗ. 2 ಗೊಗ್ಗವೆಯ್ಯರ ವಚನಗಳಿಂದ ಆರಂಭವಾಗುವ ಸಂಪುಟ, ಶಿರೂರ ಬಿ. ವ್ಹಿ., ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು, 2006
  • ★ ಎಲ್ಲ ಪುರಾತರನ ವಚನಗಳು ಭಾಗ. 3 ಬಸವಣ್ಣನವರ ವಚನಗಳಿಂದ ಆರಂಭವಾಗುವ ಸಂಪುಟ, ಮಧು ವೆಂಕಾರೆಡ್ಡಿ, ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು, 2006
  • ★ ಗಣಭಾಷಿತ ರತ್ನಮಾಲೆಗುಬ್ಬಿ ಮಲ್ಲಣ್ಣ ಕವಿ ವಿರಚಿತ, ಸಂ. ವಿರಕ್ತಮಠ ಪ್ರಭುಸ್ವಾಮಿಗಳು, ಶ್ರೀ ಮು. ನಿ. ಪ್ರ. ಮುತ್ಯುಂಜಯ ಸ್ಮಾಮಿಗಳು, ಮುರುಘಾ ಮಠ, ಧಾರವಾಡ, 1948
  • ★ ಹಲಗೆಯಾರ್ಯನ ಶೂನ್ಯಸಂಪಾದನೆ, ಸಂ. ವಿದ್ಯಾಶಂಕರ ಎಸ್., ಸಿದ್ಧಲಿಂಗಯ್ಯ ಜಿ. ಎಸ್., ಪ್ರಿಯದರ್ಶಿನ ಪ್ರಕಾಶನ, ಬೆಂಗಳೂರು, 1998

ಆಕರಗಳ ಕಾಲಮಾನ:15ನೇ ಶತಮಾನದ ವಚನ ಆಕರಗಳು ಇಂದು ತಿಳಿದಂತೆ ತೀರ ಹಿಂದಿನ ಪ್ರತಿ ಎಂದರೆ 1412ರ ಜಕ್ಕಣನ ಏಕೋತ್ತರಶತಸ್ಥಲ (ಕಲಬುರ್ಗಿ, ಸಮಗ್ರ ಸಾಹಿತ್ಯ, ಪು 425, 2020??). ಲಿಂಗಲೀಲಾವಿಲಾಸಚಾರಿತ್ರ ಹಾಗೂ ಮಹದೇವಯ್ಯನವರ ಶೂನ್ಯಸಂಪಾದನೆ ಗಳೆರಡನ್ನೂ ಸುಮಾರು 15ನೆಯ ಶತಮಾನದ ನಡುವಿಗೆ ಇರಿಸಲಾಗುತ್ತದೆ (1430). ಸಕಲ ಪುರಾತನರ ವಚನಗಳುನ ಮೂರುಕಟ್ಟುಗಳ ಕಾಲಮಾನವನ್ನು 15ನೆಯ ಶತಮಾನದ ಕೊನೆಗೆ ಎನ್ನುತ್ತಾರೆ ವೀರಣ್ಣ ರಾಜೂರ (ಪು.xxx, ಎಲ್ಲ ಪುರಾತನರ ವಚನಗಳು, 2006; 1420 ರಿಂದ 1495ರ ನಡುವೆ ಎನ್ನುತ್ತಾರೆ ಅವರು ). ನಂತರದ ಶತಮಾನದ ಆಕರಗಳಲ್ಲಿ ಗುಬ್ಬಿ ಮಲ್ಲಣ್ಣನ ಗಣಭಾಷಿತರತ್ನಮಾಲೆ ಮತ್ತು ಹಲಗೆಯಾರ್ಯನ ಶೂನ್ಯಸಂಪಾದನೆ ಬರುತ್ತವೆ (ಇವುಗಳ ಬಗೆಗೆ ವೀರಶೈವಾಮೃತ ಪುರಾಣದ ಕಾಲಮಾನವೇ 1530 ಆಧಾರ. ಹೀಗಾಗಿ ಗುಬ್ಬಿ ಮಲ್ಲಣ್ಣ ರಚಯತನ ತಾತನಾದ್ದರಿಂದ ಅವನನ್ನು 15ನೆಯ ಶತಮಾನದಲ್ಲಿ ಇರಿಸ ಬಹುದು. ಆದರೆ ಹಲಗೆಯಾರ್ಯನದು 15ರ ಕೊನೆ ಅಥವಾ 16ನೇ ಶತಮಾನದ ಆರಂಭ ಎನ್ನಲಾಗಿದೆ )

ಇಲ್ಲಿ ಕೆಲವು ಜನಪ್ರಿಯ ಕೃತಿಗಳನ್ನು ತೆಗೆದುಕೊಳ್ಳಲಾಗಿದೆ. ಇತರ ವಚನ ಹೊತ್ತಿಗೆಗಳನ್ನು ಸೇರಿಸಿಕೊಳ್ಳ ಬೇಕಿದೆ.

Sample Image