checking data baseConnected successfully!
| ಮೇಲಿನ ವಚನ ಕಾಣಿಸಿಕೊಳ್ಳುವ ಆಕರಗಳು | ||||||
| ವಚನ ಸಂಖ್ಯೆ: 421 (ಸಮಗ್ರ ವಚನ ಸಂಪುಟ 1) | ಮರಕ್ಕೆ ಬೇರು ಬಾಯೆಂದು ತಳುಂಕೆ ನೀರನೆರೆದಡೆ ಮೇಲೆ ಪಲ್ಲವಿಸಿತ್ತು ನೋಡಾ. ಲಿಂಗದ ಬಾು ಜಂಗಮವೆಂದು ಪಡಿಪದಾರ್ಥವ ನೀಡಿದಡೆ ಮುಂದೆ ಸಕಳಾರ್ಥವನೀವನು. ಆ ಜಂಗಮವ ಹರನೆಂದು ಕಂಡು, ನರನೆಂದು ಭಾವಿಸಿದಡೆ ನರಕ ತಪ್ಪದು, ಕಾಣಾ ಕೂಡಲಸಂಗಮದೇವಾ. |
|||||
| ಏಕೋತ್ತರ ಶತಸ್ಥಲ ಜಕ್ಕಣ, ವಚನ ಸಂ 130 ಮರಕ್ಕೆ ಬೇರು ಬಾಯೆಂದು, ತಳಕ್ಕೆ ನೀರನೆಱೆದಡೆ ಮೇಲೆ ಪಲ್ಲವಿಸಿತ್ತು ಲಿಂಗಕ್ಕೆ ಜಂಗಮ ಬಾಯಿಯೆಂದು ಪಡಿಪದಾರ್ಥವ ನೀಡಿದಡೆ, ಮು೦ದೆ ಚತುರ್ವಿಧಪುರುಷಾರ್ಥವನೀವುದು. ಹರನೆಂದು ಭಾವಿಸಿ, ನರನೆ೦ದು ಕಂಡಡೆ, ನರಕ ತಪ್ಪದು ಕೂಡಲಸಂಗಮದೇವಾ.
×
ಪಠ್ಯಗಳಲ್ಲಿನ ವ್ಯತ್ಯಾಸ
|
| ವಚನ ಆಕರಗಳ ಬಗೆಗೆಆಕರಗಳ ಕಾಲಮಾನ:15ನೇ ಶತಮಾನದ ವಚನ ಆಕರಗಳು ಇಂದು ತಿಳಿದಂತೆ ತೀರ ಹಿಂದಿನ ಪ್ರತಿ ಎಂದರೆ 1412ರ ಜಕ್ಕಣನ ಏಕೋತ್ತರಶತಸ್ಥಲ (ಕಲಬುರ್ಗಿ, ಸಮಗ್ರ ಸಾಹಿತ್ಯ, ಪು 425, 2020??). ಲಿಂಗಲೀಲಾವಿಲಾಸಚಾರಿತ್ರ ಹಾಗೂ ಮಹದೇವಯ್ಯನವರ ಶೂನ್ಯಸಂಪಾದನೆ ಗಳೆರಡನ್ನೂ ಸುಮಾರು 15ನೆಯ ಶತಮಾನದ ನಡುವಿಗೆ ಇರಿಸಲಾಗುತ್ತದೆ (1430). ಸಕಲ ಪುರಾತನರ ವಚನಗಳುನ ಮೂರುಕಟ್ಟುಗಳ ಕಾಲಮಾನವನ್ನು 15ನೆಯ ಶತಮಾನದ ಕೊನೆಗೆ ಎನ್ನುತ್ತಾರೆ ವೀರಣ್ಣ ರಾಜೂರ (ಪು.xxx, ಎಲ್ಲ ಪುರಾತನರ ವಚನಗಳು, 2006; 1420 ರಿಂದ 1495ರ ನಡುವೆ ಎನ್ನುತ್ತಾರೆ ಅವರು ). ನಂತರದ ಶತಮಾನದ ಆಕರಗಳಲ್ಲಿ ಗುಬ್ಬಿ ಮಲ್ಲಣ್ಣನ ಗಣಭಾಷಿತರತ್ನಮಾಲೆ ಮತ್ತು ಹಲಗೆಯಾರ್ಯನ ಶೂನ್ಯಸಂಪಾದನೆ ಬರುತ್ತವೆ (ಇವುಗಳ ಬಗೆಗೆ ವೀರಶೈವಾಮೃತ ಪುರಾಣದ ಕಾಲಮಾನವೇ 1530 ಆಧಾರ. ಹೀಗಾಗಿ ಗುಬ್ಬಿ ಮಲ್ಲಣ್ಣ ರಚಯತನ ತಾತನಾದ್ದರಿಂದ ಅವನನ್ನು 15ನೆಯ ಶತಮಾನದಲ್ಲಿ ಇರಿಸ ಬಹುದು. ಆದರೆ ಹಲಗೆಯಾರ್ಯನದು 15ರ ಕೊನೆ ಅಥವಾ 16ನೇ ಶತಮಾನದ ಆರಂಭ ಎನ್ನಲಾಗಿದೆ ) ಇಲ್ಲಿ ಕೆಲವು ಜನಪ್ರಿಯ ಕೃತಿಗಳನ್ನು ತೆಗೆದುಕೊಳ್ಳಲಾಗಿದೆ. ಇತರ ವಚನ ಹೊತ್ತಿಗೆಗಳನ್ನು ಸೇರಿಸಿಕೊಳ್ಳ ಬೇಕಿದೆ. |