checking data baseConnected successfully!
| ಮೇಲಿನ ವಚನ ಕಾಣಿಸಿಕೊಳ್ಳುವ ಆಕರಗಳು | ||||||
| ವಚನ ಸಂಖ್ಯೆ: 430 (ಸಮಗ್ರ ವಚನ ಸಂಪುಟ 9) | ದಾಸ ವಸ್ತ್ರವನಿತ್ತ ಠಾವು ಲೇಸಾಯಿತ್ತು. ತವನಿದ್ಥಿಯ ಪಡೆದ ಠಾವು ಹೊಲ್ಲೆಹವಾಯಿತ್ತು . ಸಿರಿಯಾಳ ಮಗನನಿತ್ತ ಠಾವು ಲೇಸಾಯಿತ್ತು . ಮರಳಿ ಬೇಡಿದ ಠಾವು ಹೊಲ್ಲೆಹವಾಯಿತ್ತು . ಬಲ್ಲಾಳ ವಧುವಿನಿತ್ತ ಠಾವು ಲೇಸಾಯಿತ್ತು. ಸ್ವಯಲಿಂಗವಾದ ಠಾವು ಹೊಲೆಹವಾಯಿತ್ತು . ಇವರೆಲ್ಲರೂ ಸಕಳೇಶ್ವರದೇವರಲ್ಲಿ ಅಪೇಕ್ಷಿತರಲ್ಲದೆ, ನಿರಪೇಕ್ಷಿತರಾರೂ ಇಲ್ಲ . |
|||||
| ಏಕೋತ್ತರ ಶತಸ್ಥಲ ಜಕ್ಕಣ, ವಚನ ಸಂ 136 ದಾಸ ವಸ್ತ್ರವನಿತ್ತ ಠಾವು ಲೇಸಾಯಿತ್ರು; ತವನಿಧಿಯ ಪಡೆದ ಠಾವು ಹೊಲ್ಲೆಹವಾಯಿತ್ತು. ಸಿರಿಯಾಳ ಮಗನನಿತ್ತ ಠಾವು ಲೇಸಾಯಿತ್ತು; ಮರಳಿ ಬೇಡಿದ ಠಾವು ಹೊಲ್ಲೆಹವಾಯಿತ್ತು. ಬಲ್ಲಾಳ ವಧುವನಿತ್ತ ಠಾವು ಲೇಸಾಯಿತ್ತು: ಸ್ವಯಲಿಂಗವಾದ ಠಾವು ಹೊಲ್ಲೆಹವಾಯಿತ್ತು. ಇವರೆಲ್ಲರೂ ಸಕಳೇಶ್ವರದೇವರಲ್ಲಿ ಅಪೇಕ್ಷಿತರಲ್ಲದೆ ನಿರಪೇಕ್ಷಿತರಾರೂ ಇಲ್ಲ.
×
ಪಠ್ಯಗಳಲ್ಲಿನ ವ್ಯತ್ಯಾಸ
|
| ವಚನ ಆಕರಗಳ ಬಗೆಗೆಆಕರಗಳ ಕಾಲಮಾನ:15ನೇ ಶತಮಾನದ ವಚನ ಆಕರಗಳು ಇಂದು ತಿಳಿದಂತೆ ತೀರ ಹಿಂದಿನ ಪ್ರತಿ ಎಂದರೆ 1412ರ ಜಕ್ಕಣನ ಏಕೋತ್ತರಶತಸ್ಥಲ (ಕಲಬುರ್ಗಿ, ಸಮಗ್ರ ಸಾಹಿತ್ಯ, ಪು 425, 2020??). ಲಿಂಗಲೀಲಾವಿಲಾಸಚಾರಿತ್ರ ಹಾಗೂ ಮಹದೇವಯ್ಯನವರ ಶೂನ್ಯಸಂಪಾದನೆ ಗಳೆರಡನ್ನೂ ಸುಮಾರು 15ನೆಯ ಶತಮಾನದ ನಡುವಿಗೆ ಇರಿಸಲಾಗುತ್ತದೆ (1430). ಸಕಲ ಪುರಾತನರ ವಚನಗಳುನ ಮೂರುಕಟ್ಟುಗಳ ಕಾಲಮಾನವನ್ನು 15ನೆಯ ಶತಮಾನದ ಕೊನೆಗೆ ಎನ್ನುತ್ತಾರೆ ವೀರಣ್ಣ ರಾಜೂರ (ಪು.xxx, ಎಲ್ಲ ಪುರಾತನರ ವಚನಗಳು, 2006; 1420 ರಿಂದ 1495ರ ನಡುವೆ ಎನ್ನುತ್ತಾರೆ ಅವರು ). ನಂತರದ ಶತಮಾನದ ಆಕರಗಳಲ್ಲಿ ಗುಬ್ಬಿ ಮಲ್ಲಣ್ಣನ ಗಣಭಾಷಿತರತ್ನಮಾಲೆ ಮತ್ತು ಹಲಗೆಯಾರ್ಯನ ಶೂನ್ಯಸಂಪಾದನೆ ಬರುತ್ತವೆ (ಇವುಗಳ ಬಗೆಗೆ ವೀರಶೈವಾಮೃತ ಪುರಾಣದ ಕಾಲಮಾನವೇ 1530 ಆಧಾರ. ಹೀಗಾಗಿ ಗುಬ್ಬಿ ಮಲ್ಲಣ್ಣ ರಚಯತನ ತಾತನಾದ್ದರಿಂದ ಅವನನ್ನು 15ನೆಯ ಶತಮಾನದಲ್ಲಿ ಇರಿಸ ಬಹುದು. ಆದರೆ ಹಲಗೆಯಾರ್ಯನದು 15ರ ಕೊನೆ ಅಥವಾ 16ನೇ ಶತಮಾನದ ಆರಂಭ ಎನ್ನಲಾಗಿದೆ ) ಇಲ್ಲಿ ಕೆಲವು ಜನಪ್ರಿಯ ಕೃತಿಗಳನ್ನು ತೆಗೆದುಕೊಳ್ಳಲಾಗಿದೆ. ಇತರ ವಚನ ಹೊತ್ತಿಗೆಗಳನ್ನು ಸೇರಿಸಿಕೊಳ್ಳ ಬೇಕಿದೆ. |