checking data baseConnected successfully!
| ಮೇಲಿನ ವಚನ ಕಾಣಿಸಿಕೊಳ್ಳುವ ಆಕರಗಳು | ||||||
| ವಚನ ಸಂಖ್ಯೆ: 475 (ಸಮಗ್ರ ವಚನ ಸಂಪುಟ 3) | ಆಹ್ವಾನಿಸುವಲ್ಲಿ ಪ್ರಸೂತಿಕಾಯ, ಸ್ವತಂತ್ರನೆಂತೆಂಬೆ ? ವಿಸರ್ಜಿಸುವಲ್ಲಿ ಲಿಂಗಸಂತುಷ್ಟನೆಂತೆಂಬೆ ? ಆಧಾರಾಧೇಯದ ಸುಳುಹಲ್ಲ, ಆಧಾರಾಧೇಯ[ದ] ಭಾವವಲ್ಲ. ಬಿಂದು ಕ್ರೀಯನುಂಡು ಬಿಂದು ತಾನಾದುದು. ಪ್ರಾಣಾಪಾನದ ಅನುವಿನ ಅನುಸಂಧಾನ[ದ] ಮನವು. ಅಸಮಾನ ತಾಳೋಷ ಶಬ್ದಸಂಚಿತನಲ್ಲ, ಉಭಯಪ್ರಸೂತಿ ವಿರಹಿತ ಕೂಡಲಚೆನ್ನಸಂಗಾ ನಿಮ್ಮ ಶರಣ. |
|||||
| ಏಕೋತ್ತರ ಶತಸ್ಥಲ ಜಕ್ಕಣ, ವಚನ ಸಂ 212 ಆಹ್ಹಾನಿಸುವಲ್ಲಿ ಪ್ರಸೂತಿಕಾಯ ಸ್ವತಂತ್ರನೆಂತೆಂಬೆ? ವಿಸರ್ಜಿಸುವಲ್ಲಿ ಸಂತುಷ್ಟನೆಂತೆಂಬೆ? ಆದಿಯಾಧಾರ ಸುಳುಹಲ್ಲ; ಆಧಾರ ಆಧೇಯದ ಭಾವವಲ್ಲ. ಬಿ೦ದು ಕ್ರೀಯನುಂಡು, ಬಿಂದು ನಾದವು ಪ್ರಾಣೋಪಾನದ ಅನುವಿನ, ಅನುಸಂಧಾನದ, ಅನುಮಾನದ, ತಾಳೋಷ್ಟ್ರಶಬ್ದಸಾರಾಯ ಸಂಚಿತನಲ್ಲ. ಉಭಯ ಪ್ರಸೂತಿಕಾಯ ರಹಿತನು-ಕೂಡಲಚೆನ್ನಸಂಗಾ, ನಿಮ್ಮ ಶರಣನು.
×
ಪಠ್ಯಗಳಲ್ಲಿನ ವ್ಯತ್ಯಾಸ
|
| ವಚನ ಆಕರಗಳ ಬಗೆಗೆಆಕರಗಳ ಕಾಲಮಾನ:15ನೇ ಶತಮಾನದ ವಚನ ಆಕರಗಳು ಇಂದು ತಿಳಿದಂತೆ ತೀರ ಹಿಂದಿನ ಪ್ರತಿ ಎಂದರೆ 1412ರ ಜಕ್ಕಣನ ಏಕೋತ್ತರಶತಸ್ಥಲ (ಕಲಬುರ್ಗಿ, ಸಮಗ್ರ ಸಾಹಿತ್ಯ, ಪು 425, 2020??). ಲಿಂಗಲೀಲಾವಿಲಾಸಚಾರಿತ್ರ ಹಾಗೂ ಮಹದೇವಯ್ಯನವರ ಶೂನ್ಯಸಂಪಾದನೆ ಗಳೆರಡನ್ನೂ ಸುಮಾರು 15ನೆಯ ಶತಮಾನದ ನಡುವಿಗೆ ಇರಿಸಲಾಗುತ್ತದೆ (1430). ಸಕಲ ಪುರಾತನರ ವಚನಗಳುನ ಮೂರುಕಟ್ಟುಗಳ ಕಾಲಮಾನವನ್ನು 15ನೆಯ ಶತಮಾನದ ಕೊನೆಗೆ ಎನ್ನುತ್ತಾರೆ ವೀರಣ್ಣ ರಾಜೂರ (ಪು.xxx, ಎಲ್ಲ ಪುರಾತನರ ವಚನಗಳು, 2006; 1420 ರಿಂದ 1495ರ ನಡುವೆ ಎನ್ನುತ್ತಾರೆ ಅವರು ). ನಂತರದ ಶತಮಾನದ ಆಕರಗಳಲ್ಲಿ ಗುಬ್ಬಿ ಮಲ್ಲಣ್ಣನ ಗಣಭಾಷಿತರತ್ನಮಾಲೆ ಮತ್ತು ಹಲಗೆಯಾರ್ಯನ ಶೂನ್ಯಸಂಪಾದನೆ ಬರುತ್ತವೆ (ಇವುಗಳ ಬಗೆಗೆ ವೀರಶೈವಾಮೃತ ಪುರಾಣದ ಕಾಲಮಾನವೇ 1530 ಆಧಾರ. ಹೀಗಾಗಿ ಗುಬ್ಬಿ ಮಲ್ಲಣ್ಣ ರಚಯತನ ತಾತನಾದ್ದರಿಂದ ಅವನನ್ನು 15ನೆಯ ಶತಮಾನದಲ್ಲಿ ಇರಿಸ ಬಹುದು. ಆದರೆ ಹಲಗೆಯಾರ್ಯನದು 15ರ ಕೊನೆ ಅಥವಾ 16ನೇ ಶತಮಾನದ ಆರಂಭ ಎನ್ನಲಾಗಿದೆ ) ಇಲ್ಲಿ ಕೆಲವು ಜನಪ್ರಿಯ ಕೃತಿಗಳನ್ನು ತೆಗೆದುಕೊಳ್ಳಲಾಗಿದೆ. ಇತರ ವಚನ ಹೊತ್ತಿಗೆಗಳನ್ನು ಸೇರಿಸಿಕೊಳ್ಳ ಬೇಕಿದೆ. |