checking data baseConnected successfully! Sample Image
  •  

MY REF NO: 204675.07

ಮೇಲಿನ ವಚನ ಕಾಣಿಸಿಕೊಳ್ಳುವ ಆಕರಗಳು
ವಚನ ಸಂಖ್ಯೆ: 675 (ಸಮಗ್ರ ವಚನ ಸಂಪುಟ 7)
ವಿಷಮದಶ ಪದನವನು ವಶಕ್ಕೆ ತಂದು ನಿಲಿಸಿ
ಸುಷುಮ್ನ ಸುಸರದ ಊದ್ರ್ವಪಥವನರಿದೆವೆಂದು
ರವಿಯ ನಾಲಗೆಯನಲನ ಕೊನೆಯ ಲಂಬಿಕಾಸ್ಥಾನವಾಗಿ
ಶಶಿಯಮೃತವನುಂಡು ಸುಖಿಯಾದೆನೆಂಬರು.
ಇವರೆಲ್ಲರು ಉಪಾಧಿಯನರಿಯದೆ ಹೋದರು.
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ
ಬಯಲದ್ವೈತವ ನುಡಿವರು.
ಏಕೋತ್ತರ ಶತಸ್ಥಲ ಜಕ್ಕಣ, ವಚನ ಸಂ 204
ವಿಷಮ ದಶ ಪವನವನು ವಶಕ್ಕೆ ತಂದು ನಿಲಿಸಿ, ಸುಷುಮ್ನ ಸುಸರದ ಊರ್ಧ್ವ ಪಥವನಱಿದೆವೆಂದು, ರವಿಯ ನಾಲಗೆಯನಲನ ಕೊನೆಯ ಲಂಬಿಕಾಸ್ಥಾನವ ತಾಗಿ ಶಶಿಯಮ್ರ ಶತವನುಂಡು ಸುಖಿಯಾದೆನೆಂಬರು. ಇವರೆಲ್ಲರು ಉಪಾಧಿಯಾದಿಯನಱಿಯದೆ ಹೋದರು, ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ ಬಯಲದ್ವೈತದ ನುಡಿಯ ನುಡಿವರು.

ವಚನ ಆಕರಗಳ ಬಗೆಗೆ

  • ★ ಏಕೋತ್ತರಶತಸ್ಥಲ, ಭಂಡಾರಿ ಜಕ್ಕಣಂಗಳು ಸೇರಿಸಿದ,ಸಂ. ಕಲಬುರ್ಗಿ ಎಂ. ಎಂ., ರಾಜೂರ ವೀರಣ್ಣ, ಲಿಂಗಾಯತ ಅಧ್ಯಯನ ಸಂಸ್ಥೆ, ಲಿಂಗಾಯತ ಅಧ್ಯಯನ ಸಂಸ್ಥೆ, ಯೆಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ, 2014 (ಮರು ಮುದ್ರಣ: ಡಾ. ಎಂ. ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ, ಸಂ. 14, ವಚನ ಸಾಹಿತ್ಯ ಭಾಗ 6, ವಿಜಯಪುರ)
  • ★ ಲಿಂಗಲೀಲಾವಿಲಾಸಚಾರಿತ್ರ ಕಲ್ಲುಮಠದ ಪ್ರಭುದೇವರು ವಿರಚಿಸಿದ, ಸಂ. ಭೂಸನೂರಮಠ ಸಂ. ಶಿ., ಶ್ರೀ ನಿ. ಪ್ರ. ಸ್ವ. ಮೃತ್ಯುಂಜಯ ಮಹಾಸ್ವಾಮಿಗಳು, ಮುರುಘಾಮಠ, ಧಾರವಾಡ, 1956
  • ★ ಪ್ರಭುದೇವರ ಶೂನ್ಯಸಂಪಾದನೆ ಶಿವಗಣಪ್ರಸಾದಿ ಮಹದೇವಯ್ಯನ, ಬಸವರಾಜು ಎಲ್., ಸಪ್ನ ಬುಕ್ ಹೌಸ್, ಬೆಂಗಳೂರು, 2017
  • ★ ಎಲ್ಲ ಪುರಾತರನ ವಚನಗಳು ಭಾಗ. 1 ಕೋಲಶಾಂತಯನ್ನ ವಚನಗಳಿಂದ ಆರಂಭವಾಗುವ ಸಂಪುಟ, ರಾಜೂರ ವೀರಣ್ಣ, ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು, 2006
  • ★ ಎಲ್ಲ ಪುರಾತರನ ವಚನಗಳು ಭಾಗ. 2 ಗೊಗ್ಗವೆಯ್ಯರ ವಚನಗಳಿಂದ ಆರಂಭವಾಗುವ ಸಂಪುಟ, ಶಿರೂರ ಬಿ. ವ್ಹಿ., ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು, 2006
  • ★ ಎಲ್ಲ ಪುರಾತರನ ವಚನಗಳು ಭಾಗ. 3 ಬಸವಣ್ಣನವರ ವಚನಗಳಿಂದ ಆರಂಭವಾಗುವ ಸಂಪುಟ, ಮಧು ವೆಂಕಾರೆಡ್ಡಿ, ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು, 2006
  • ★ ಗಣಭಾಷಿತ ರತ್ನಮಾಲೆಗುಬ್ಬಿ ಮಲ್ಲಣ್ಣ ಕವಿ ವಿರಚಿತ, ಸಂ. ವಿರಕ್ತಮಠ ಪ್ರಭುಸ್ವಾಮಿಗಳು, ಶ್ರೀ ಮು. ನಿ. ಪ್ರ. ಮುತ್ಯುಂಜಯ ಸ್ಮಾಮಿಗಳು, ಮುರುಘಾ ಮಠ, ಧಾರವಾಡ, 1948
  • ★ ಹಲಗೆಯಾರ್ಯನ ಶೂನ್ಯಸಂಪಾದನೆ, ಸಂ. ವಿದ್ಯಾಶಂಕರ ಎಸ್., ಸಿದ್ಧಲಿಂಗಯ್ಯ ಜಿ. ಎಸ್., ಪ್ರಿಯದರ್ಶಿನ ಪ್ರಕಾಶನ, ಬೆಂಗಳೂರು, 1998

ಆಕರಗಳ ಕಾಲಮಾನ:15ನೇ ಶತಮಾನದ ವಚನ ಆಕರಗಳು ಇಂದು ತಿಳಿದಂತೆ ತೀರ ಹಿಂದಿನ ಪ್ರತಿ ಎಂದರೆ 1412ರ ಜಕ್ಕಣನ ಏಕೋತ್ತರಶತಸ್ಥಲ (ಕಲಬುರ್ಗಿ, ಸಮಗ್ರ ಸಾಹಿತ್ಯ, ಪು 425, 2020??). ಲಿಂಗಲೀಲಾವಿಲಾಸಚಾರಿತ್ರ ಹಾಗೂ ಮಹದೇವಯ್ಯನವರ ಶೂನ್ಯಸಂಪಾದನೆ ಗಳೆರಡನ್ನೂ ಸುಮಾರು 15ನೆಯ ಶತಮಾನದ ನಡುವಿಗೆ ಇರಿಸಲಾಗುತ್ತದೆ (1430). ಸಕಲ ಪುರಾತನರ ವಚನಗಳುನ ಮೂರುಕಟ್ಟುಗಳ ಕಾಲಮಾನವನ್ನು 15ನೆಯ ಶತಮಾನದ ಕೊನೆಗೆ ಎನ್ನುತ್ತಾರೆ ವೀರಣ್ಣ ರಾಜೂರ (ಪು.xxx, ಎಲ್ಲ ಪುರಾತನರ ವಚನಗಳು, 2006; 1420 ರಿಂದ 1495ರ ನಡುವೆ ಎನ್ನುತ್ತಾರೆ ಅವರು ). ನಂತರದ ಶತಮಾನದ ಆಕರಗಳಲ್ಲಿ ಗುಬ್ಬಿ ಮಲ್ಲಣ್ಣನ ಗಣಭಾಷಿತರತ್ನಮಾಲೆ ಮತ್ತು ಹಲಗೆಯಾರ್ಯನ ಶೂನ್ಯಸಂಪಾದನೆ ಬರುತ್ತವೆ (ಇವುಗಳ ಬಗೆಗೆ ವೀರಶೈವಾಮೃತ ಪುರಾಣದ ಕಾಲಮಾನವೇ 1530 ಆಧಾರ. ಹೀಗಾಗಿ ಗುಬ್ಬಿ ಮಲ್ಲಣ್ಣ ರಚಯತನ ತಾತನಾದ್ದರಿಂದ ಅವನನ್ನು 15ನೆಯ ಶತಮಾನದಲ್ಲಿ ಇರಿಸ ಬಹುದು. ಆದರೆ ಹಲಗೆಯಾರ್ಯನದು 15ರ ಕೊನೆ ಅಥವಾ 16ನೇ ಶತಮಾನದ ಆರಂಭ ಎನ್ನಲಾಗಿದೆ )

ಇಲ್ಲಿ ಕೆಲವು ಜನಪ್ರಿಯ ಕೃತಿಗಳನ್ನು ತೆಗೆದುಕೊಳ್ಳಲಾಗಿದೆ. ಇತರ ವಚನ ಹೊತ್ತಿಗೆಗಳನ್ನು ಸೇರಿಸಿಕೊಳ್ಳ ಬೇಕಿದೆ.

Sample Image