ವಚನ ಆಕರಗಳು (15ನೆ ಶತಮಾನ)
ಲಿಂಗವಿಕಾರಿಗೆ ಅಂಗವಿಕಾರವೆಂಬುದಿಲ್ಲ, ಜಂಗಮವಿಕಾರಿಗೆ ಧನವಿಕಾರವೆಂಬುದಿಲ್ಲ, ಪ್ರಸಾದವಿಕಾರಿಗೆ ಮನೋವಿಕಾರವೆಂಬುದಿಲ್ಲ. ಇಂತೀ ತ್ರಿವಿಧ ಗುಣವನರಿದಾತನು ಅಚ್ಚ ಲಿಂಗೈಕ್ಯನು ಕೂಡಲಸಂಗಮದೇವಾ. |
796.01 |
101 A101 |
ಬಸವಣ್ಣ | ಕೂಡಲಸಂಗಮದೇವಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಲಿಂಗಕ್ಕಲ್ಲದೆ ಮಾಡೆನೀ ಮನವನು,
ಜಂಗಮಕ್ಕಲ್ಲದೆ ಮಾಡೆನೀ ಧನವನು,
ಪ್ರಸಾದಕ್ಕಲ್ಲದೆ ಮಾಡೆನೀ ತನುವನು,
ಲಿಂಗಜಂಗಮಪ್ರಸಾದಕ್ಕಲ್ಲದೆ ಬಾಯ್ದೆರೆಯೆನೆಂಬುದೆನ್ನ ಭಾಷೆ.
ಅನರ್ಪಿತವಾದಡೆ ತಪ್ಪೆನ್ನದು,
ಮೂಗ ಕೊಯಿ, ಕೂಡಲಸಂಗಮದೇವಾ. |
728.01 |
103 A103 |
ಬಸವಣ್ಣ | ಕೂಡಲಸಂಗಮದೇವಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಗುರುವಿಂಗೆ ತನುವ ಕೊಟ್ಟು, ಲಿಂಗಕ್ಕೆ ಮನವ ಕೊಟ್ಟು,
ಜಂಗಮಕ್ಕೆ ಧನವ ಕೊಟ್ಟು,
ಇಂತೀ ತ್ರಿವಿಧಕ್ಕೆ ತ್ರಿವಿಧವ ಕೊಟ್ಟು ನಾನು ಶುದ್ಧನಾದೆನು
ಕಾಣಾ, ಕೂಡಲಸಂಗಮದೇವಾ. |
1176.01 |
104 A104 |
ಬಸವಣ್ಣ | |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಲಿಂಗ ಪ್ರಣಾಮವ ಮಾಡುವೆ, ಲಿಂಗಾಲೋಕನವ ಮಾಡುವೆ.
ಜಂಗಮ ಪ್ರಣಾಮವ ಮಾಡುವೆ, ಜಂಗಮಸಂಭಾಷಣೆಯ ಮಾಡುವೆ,
ಪ್ರಸಾದ ಪ್ರಣಾಮವ ಮಾಡುವೆ, ಪ್ರಸಾದಭೋಗವ ಮಾಡುವೆ.
ಈ ತ್ರಿವಿಧಾಲೋಕನವ ಮಾಡುವೆ,
ಕೂಡಲಚೆನ್ನಸಂಗಾ ನೀ ಮಾಡಿಸಲು |
105.03 |
105 A105 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ,
ಈ ತ್ರಿವಿಧ ನಿಕ್ಷೇಪ. ಇದು ಕಾರಣ ಕೂಡಲಚನ್ನಸಂಗಾ
[ಲಿಂಗ ತ್ರಿವಿಧದಲ್ಲಿ] ಪ್ರಸಾದ ತ್ರಿವಿಧನೆನಿಸುವನು ನಿಮ್ಮ ಪ್ರಸಾದಿ.
|
97.03 |
106 A106 |
ಚೆನ್ನಬಸವಣ್ಣ | ಕೂಡಲಚನ್ನಸಂಗಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಆಚಾರವಂಗಸಂಬಂಧವಾದಲ್ಲಿ ಶ್ರೀಗುರುಲಿಂಗ ಸನ್ನಿಹಿತ,
ಅರಿವು ಮನಸಂಬಂಧವಾದಲ್ಲಿ ಶಿವಲಿಂಗ ಸನ್ನಿಹಿತ,
ಉಭಯ ಲಿಂಗಸಂಬಂಧವಾದಲ್ಲಿ ಜಂಗಮಲಿಂಗ ಸನ್ನಿಹಿತ.
ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ
ಲಿಂಗತ್ರಿವಿಧಸಂಪನ್ನ ಶರಣ.
|
116.03 |
107 A107 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಯ್ಯ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಗುರುವೆನ್ನ ತನುವ ಬೆರಸಿದ ಕಾರಣ,
ಗುರುವಿನ ತನುವ ನಾ ಬೆರಸಿದ ಕಾರಣ, ಗುರು ಶುದ್ಧನಾದನಯ್ಯಾ.
ಲಿಂಗವೆನ್ನ ಮನವ ಬೆರಸಿದ ಕಾರಣ,
ಲಿಂಗದ ಮನವ ನಾ ಬೆರಸಿದ ಕಾರಣ, ಲಿಂಗ ಶುದ್ಧವಾದನಯ್ಯಾ.
ಜಂಗಮವೆನ್ನ ಜಿಹ್ವೆಯ ಬೆರಸಿದ ಕಾರಣ,
ಜಂಗಮದ ಜಿಹ್ವೆಯ ನಾ ಬೆರಸಿದ ಕಾರಣ
ಜಂಗಮ ಶುದ್ಧನಾದನಯ್ಯಾ
ಈ ಮೂವರು ತಮ್ಮಿಂದ ತಾವಾಗಲರಿಯದೆ
ಎನ್ನ ಮುಟ್ಟಿ ಶುದ್ಧವಾದರು ಕಾಣಾ,
ಕೂಡಲಚೆನ್ನಸಂಗಮದೇವಾ |
225.03 |
108 A108 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಮದೇವಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಗುರುಸ್ವರೂಪನಾಗಿ ಮಹಾಸ್ಥಾನದಲ್ಲಿರುತ್ತಿದ್ದೆ,
ಲಿಂಗಸ್ವರೂಪನಾಗಿ ಭ್ರೂಮಧ್ಯದಲ್ಲಿರುತ್ತಿದ್ದೆ,
ಜಂಗಮಸ್ವರೂಪನಾಗಿ ಹೃದಯಕಮಲಮಧ್ಯದಲ್ಲಿರುತ್ತಿದ್ದೆ,
ಈ ಪರಿಯಲ್ಲಿ ಅಂತರಂಗದಲ್ಲಿ ಭರಿತನಾಗಿದ್ದೆಯಯ್ಯಾ.
ಬಹಿರಂಗದಲ್ಲಿ, ಶ್ರೀಗುರುಲಿಂಗವಾಗಿ ದೀಕ್ಷಿಸಿ ರಕ್ಷಿಸಿದೆ,
ಶಿವಲಿಂಗವಾಗಿ ಕರಸ್ಥಲದಲ್ಲಿ ಪೂಜೆಗೊಂಡು ರಕ್ಷಿಸಿದೆ,
ಜಂಗಮಲಿಂಗವಾಗಿ ಅವಗುಣಂಗಳೆಲ್ಲವನೂ ಕಳೆದು ಶಿಕ್ಷಿಸಿ ರಕ್ಷಿಸಿದೆ.
ಇಂತೀ ತ್ರಿವಿಧವು ಒಂದೇ ರೂಪಾಗಿ,
ಎನ್ನ ಅಂತರಂಗಬಹಿರಂಗಭರಿತನಾಗಿ
ಪ್ರಸಾದವ ಕರುಣಿಸಿ ಮುಕ್ತನ ಮಾಡಿದೆಯಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. |
1376.06 |
109 A109 |
ಉರಿಲಿಂಗಪೆದ್ದಿ | ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ನವಸಾರ ಅಷ್ಟಸಾರ ದಶಸಾರ
ಪಂಚಸಾರ ಚತುಸ್ಸಾರ ಏಕಸಾರ.
ಇಂತಿವನತಿಗಳೆದ ಮಹಾಮಹಿಮನ ನಿಲವು,
ಲಿಂಗದಲ್ಲಿ ಸಂಪೂರ್ಣ, ಜಂಗಮದಲ್ಲಿ ಅತಿಸಹಜ,
ಪ್ರಸಾದದಲ್ಲಿ ತದ್ಗತ.
ಇಂತು ಸರ್ವಾಂಗದಲ್ಲಿ ಸಂಪೂರ್ಣನಾದ ನಿಜೈಕ್ಯನ ನಿಲವು ಸುಜ್ಞಾನ.
ಸುಜ್ಞಾನಸಿಂಹಾಸನದ ಮೇಲೆಯಿದ್ದು
ನಿಶ್ಚಿಂತನಾಗಿ ಇಪ್ಪುದು, ಕಲಿದೇವಯ್ಯ. |
639.08 |
110 A110 |
ಮಡಿವಾಳಮಾಚಿದೇವ | ಕಲಿದೇವಯ್ಯ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಟಿಪ್ಪಣಿ; * ಪುಟ ಸಂಖ್ಯೆ ‖ ವಚನ ಸಂಖ್ಯೆ [ಮೊದಲ ಪುಟ] « ಹಿಂದಿನ 10 11 12 13 14 15 16 17 18 19 20 ಮುಂದಿನ 10 » [ಕೊನೆ ಪುಟ]
ಸಿಕ್ಕ ಪಲಿತಾಂಶಗಳು 427 ಇದು ಪುಟ 11 ಈ ಪುಟದಲ್ಲಿ ಪಲಿತಾಂಶಗಳು 101 ರಿಂದ 110 ವರೆಗೆ |
|
|