checking data baseConnected successfully! Sample Image
  •  

ವಚನ ಆಕರಗಳು (15ನೆ ಶತಮಾನ)

search:
search:
ಎನಗೆ ನಿಮ್ಮ ನೆನಹಾದಾಗ ಉದಯ,
ಎನಗೆ ನಿಮ್ಮ ಮರಹಾದಾಗ ಅಸ್ತಮಾನ.
ಎನಗೆ ನಿಮ್ಮ ನೆನೆಹವೆ ಜೀವನ,
ಎನಗೆ ನಿಮ್ಮ ನೆನಹವೆ ಪ್ರಾಣ, ಕಾಣಾ ತಂದೆ.
ಸ್ವಾಮಿ, ಎನ್ನ ಹೃದಯದಲ್ಲಿ ನಿಮ್ಮ ಚರಣದುಂಡಿಗೆಯನೊತ್ತಯ್ಯಾ,
ವದನದಲಿ ಷಡಕ್ಷರಿಯ ಬರೆಯಯ್ಯಾ ಕೂಡಲಸಂಗಮದೇವಾ
498.01 171
A171
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ನೆನಹಿನ ನಲ್ಲನು ಮನೆಗೆ ಬಂದಡೆ ನೆನೆವುದಿನ್ನಾರ ಹೇಳವ್ವಾ.
ನೆರೆವ ಕ್ರೀಯಲ್ಲಿ ಸುಖಿಸುವದಲ್ಲದೆ, ನೆನೆವುದಿನ್ನಾರ ಹೇಳವ್ವಾ.
ನೆನೆದೆನೆಂಬ ಭರವೇಕವ್ವಾ.
ಮಹಾಲಿಂಗ ಗಜೇಶ್ವರದೇವರ ಕಂಡಲ್ಲಿ ಅಗಲಿದಡೆ
ಕರೆಗೊಂಬಲ್ಲಿ ನಾನೇನು ಕಲುಮನದವಳೆ ಕೇಳವ್ವಾ.
234.07 172
A172
ಗಣೇಶಮಸಣಯ್ಯ ಮಹಾಲಿಂಗ ಗಜೇಶ್ವರದೇವ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಎತ್ತೆತ್ತ ನೋಡಿದಡತ್ತತ್ತ ನಿಮ್ಮನೆ ಕಾಬೆ.
ಎದ್ದು ನೋಡಿ ನಿಮ್ಮನೆ ಕಾಬೆ, ನಿದ್ರೆಗೆಯ್ದು ನಿಮ್ಮನೆ ಕಾಬೆ.
ಅಹೋರಾತ್ರಿಯಲ್ಲಿ ನಿಮ್ಮ ಧ್ಯಾನದಲ್ಲಿರಿಸು, ಮಹಾಲಿಂಗ ಕಲ್ಲೇಶ್ವರಾ
1117.09 173
A173
ಹಾವಿನಾಳಕಲ್ಲಯ್ಯ ಮಹಾಲಿಂಗ ಕಲ್ಲೇಶ್ವರಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಮನಕ್ಕೆ ಮನೋಹರವಲ್ಲದ ಗಂಡರು
ಮನಕೆ ಬಾರರು, ಕೇಳವ್ವಾ ಕೆಳದೀ,
ಪನ್ನಗಭೂಷಣರಲ್ಲದ ಗಂಡರು
ಇನ್ನೆನಗಾಗದ ಮೊರೆ, ನೋಡವ್ವಾ.
ಕನ್ನೆಯಂದಿನ ಕೂಟ, ಚಿಕ್ಕಂದಿನ ಬಾಳುವೆ,
ನಿಮ್ಮಾಣೆಯಯ್ಯಾ, ಕೂಡಲಸಂಗಮದೇವಾ
503.01 174
A174
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ತಂದೆ ನೀನು ತಾಯಿ ನೀನು, ಬಂಧು ನೀನು ಬಳಗ ನೀನು.
ನೀನಲ್ಲದೆ ಮತ್ತಾರೂ ಇಲ್ಲಯ್ಯಾ,
ಕೂಡಲಸಂಗಮದೇವಾ,
ಹಾಲಲದ್ದು, ನೀರಲದ್ದು.
481.01 175
A175
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಕಂಡ ಕನಸು ನಿಧಾನವ ಕಂಡೆನಯ್ಯಾ,
ಬಿಡಲಾರದ ನಿಧಾನವ ಕಂಡೆನಯ್ಯಾ,
ಕೂಡಲಸಂಗಯ್ಯನೆಂಬ ನಿಧಾನವ ಕಂಡು
501.01 176
A176
ಬಸ‌ವಣ್ಣ ಕೂಡಲಸಂಗಯ್ಯ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ವಾರವೆಂದರಿಯೆ, ದಿನವೆಂದರಿಯೆ,
ಏನೆಂದರಿಯೆನಯ್ಯಾ.
ಇರುಳೆಂದರಿಯೆ, ಹಗಲೆಂದರಿಯೆ,
ಏನೆಂದರಿಯೆನಯ್ಯಾ.
ನಿಮ್ಮ ಪೂಜಿಸಿ ಎನ್ನುವ ಮರೆದೆ
ಕೂಡಲಸಂಗಮದೇವಾ.
490.01 177
A177
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಮಚ್ಚಿ ಗ್ರಾಹಿಗೊಂಡೆನು ನಿಮಗಾನು,
ನಲ್ಲನೆ, ಒಚ್ಚತವೋದವಳನುಳಿವರೆ?
ವಿಕಳಗೊಂಡೆನು ಶಿವಶಿವಾ,
ಪ್ರಾಣಪದವಲ್ಲದೆ ಮತ್ತೊಂದನರಿಯೆನು
ಮನ ವಚನ ಕಾಯದಲ್ಲಿ.
ಉಚಿತವೆ ನಿಮಗೆ? ಪುರುಷಲಕ್ಷಣವೆ?
ಅತಃಪರಗಂಡರ ನಾನು ಬಲ್ಲಡೆ ಕರ್ತು ನಿಮ್ಮಾಣೆಯಯ್ಯಾ
ಶಂಭುಜಕ್ಕೇಶ್ವರಾ.
1227.05 178
A178
ಸತ್ಯಕ್ಕ ಶಂಭುಜಕ್ಕೇಶ್ವರಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ನಲ್ಲನ ಕೂಡುವ ಸುಖಭೋಗದ್ರವ್ಯವನೆಲ್ಲಿಂದ ತಪ್ಪೆನು ಹೇಳಾ ಕೆಳದಿ?
ನಲ್ಲನ ಬೇಡಲು ನಾಚಿಕೆ ಎನಗೆ, ಮತ್ತೆಲ್ಲಿಯು ನಿಲ್ಲೆನು.
ಕೂಡುವ [ಶಕ್ತಿ]ಯ ತಾನರಿದಿಹನು ಕೇಳಾ ಕೆಳದಿ.
ಹೆಣ್ಣು ಹೆಣ್ಣ ಕೂಡುವ ಸುಖವ ಮಣ್ಣಿನಲ್ಲಿ ನೆರಹುವೆನು,
ಉರಿಲಿಂಗದೇವನ ಕೂಡುವೆನು.
1249.06 179
A179
ಉರಿಲಿಂಗದೇವ ಉರಿಲಿಂಗದೇವ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ನಲ್ಲನ ಕೂಡೆಹೆನೆಂದು ನೆನೆವನ್ನಬರ
ತವಕದಿಂದ ಮೇಲುವಾಯ್ದೆ ನೋಡವ್ವಾ.
ಮನದೊಳಗೆ ಮನವಾಗಿ, ಪ್ರಾಣದೊಳಗೆ ಪ್ರಾಣವಾಗಿ,
ಕಾಯದೊಳಗೆ ಕಾಯವಾಗಿ,
ತವಕಕ್ಕೆ ತವಕ ಮಿಗೆ ಮೇಲುವರಿದು ಕೂಡಿದಂತೆ
ಕೂಡುವೆ ಉರಿಲಿಂಗದೇವನ.
1250.06 180
A180
ಉರಿಲಿಂಗದೇವ ಉರಿಲಿಂಗದೇವ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ

ಟಿಪ್ಪಣಿ; * ಪುಟ ಸಂಖ್ಯೆವಚನ ಸಂಖ್ಯೆ

[ಮೊದಲ ಪುಟ]  « ಹಿಂದಿನ 1011121314151617181920ಮುಂದಿನ 10 » [ಕೊನೆ ಪುಟ]


ಸಿಕ್ಕ ಪಲಿತಾಂಶಗಳು 427 ಇದು ಪುಟ 18 ಈ ಪುಟದಲ್ಲಿ ಪಲಿತಾಂಶಗಳು 171 ರಿಂದ 180 ವರೆಗೆ