ವಚನ ಆಕರಗಳು (15ನೆ ಶತಮಾನ)
ಸರ್ವಗತಶಿವನೆಂಬುದೀ ಲೋಕವೆಲ್ಲಾ.
ಶಿವಶಿವಾ ನಿರ್ಬುದ್ಧಿ ಜನಂಗಳನೇನೆಂಬೆ!
ಸರ್ವವೆಲ್ಲವೂ ಶಿವನಾದರೆ ಹಿಂದಣ ಯುಗ ಪ್ರಳಯಂಗಳೇಕಾದವು?
ಸರ್ವವೆಲ್ಲವೂ ಶಿವನಾದರೆ ಚೌರಾಸಿಲಕ್ಷ ಜೀವರಾಶಿಗಳೇಕಾದವು?
ಸೂತ್ರಧಾರಿ, ನರರಿಗಾಗಿ ಯಂತ್ರವನಾಡಿಸುವಲ್ಲಿ
ಹೊರಗಿದ್ದಾಡಿಸುವನಲ್ಲದೆ ತಾನೊಳಗಿದ್ದಾಡಿಸುವನೆ?
ಅಹಂಗೆ ಶಿವನು ತನ್ನಾಧೀನವಾಗಿಪ್ಪ ತ್ರಿಜಗದ ಸಚರಾಚರಂಗಳ
ತಾನು ಯಂತ್ರವಾಹಕನಾಗಿ ಆಡಿಸುವನಲ್ಲದೆ, ತಾನಾಡುವನೆ?
ಸರ್ವಯಂತ್ರವೂ ತಾನಾದರೆ ಸಕಲತೀರ್ಥಕ್ಷೇತ್ರಯಾತ್ರೆಗೆ ಹೋಗಲೇಕೊ ?
ಇದು ಕಾರಣ ಸರ್ವವೂ ಶಿವನೆನಲಾಗದು.
ಸದಾಚಾರ ಸದ್ಭಕ್ತಿ ಸನ್ನಿಹಿತ ಲಿಂಗಜಂಗಮದೊಳಗಿಪ್ಪ,
ಮತ್ತೆಲ್ಲಿಯೂ ಇಲ್ಲ, ಕೂಡಲಚೆನ್ನಸಂಗಯ್ಯಾ |
194.03 |
221 A221 |
ಚೆನ್ನಬಸವಣ್ಣ | ಕೂಡಲಚೆನ್ನಸಂಗ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
«ಅಣೋರಣೀಯಾನ್ ಮಹತೋ ಮಹೀಯಾನ್'» ಎಂಬ ಶ್ರುತಿ ಹುಸಿ.
ಲಿಂಗವಿದ್ದಠಾವಿಂಗ್ಞೆ(ಠಾವಿನಲ್ಲಿ?) ಪ್ರಳಯವುಂಟೆ?
ಭಕ್ತರ ಭಾವದಲ್ಲಿರ್ಪನಲ್ಲದೆ, ಮತ್ತೆಲ್ಲಿಯೂ ಇಲ್ಲ ಗುಹೇಶ್ವರನು. |
77.02 |
222 A222 |
ಅಲ್ಲಮ | ಗುಹೇಶ್ವರ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಯತ್ರ ಜೀವಸ್ತ್ರ ಶಿವನೆಂಬ ಬಾಲಭಾಷೆಯ ಕೇಳಲಾಗದು
ಶಿವಶಿವಾ ಯತ್ರಜೀವಸ್ತತ್ರ ಶಿವನಾದರೆ ಜೀವಂಗೆ ಮರಣವೇಕೋ?
ಯತ್ರ ಜೀವಸ್ತತ್ರ ಶಿವನಾದರೆ ಜನನ ಸ್ಥಿತಿ
ಮರಣ ರುಜೆ ಸಂಸಾರ ಬಂಧನವೇಕೋ?
ಯತ್ರ ಜೀವಸ್ತತ್ರ ಶಿವನಾದರೆ ಪುಣ್ಯಪಾಪ ಪ್ರಳಯಕಾಲ ಕಲ್ಪಿತವೇಕೊ?
ಇದು ಕಾರಣ ಯತ್ರ ಜೀವಸ್ತತ್ರ ಶಿವನಲ್ಲ,
ಉತ್ಪತ್ತಿ ಸ್ಥಿತಿ ಪ್ರಳಯರಹಿತನು ಸದ್ಭಕ್ತರಲ್ಲಿಪ್ಪನಲ್ಲದೆ ಮತ್ತೆಲ್ಲಿಯೂ ಇಲ್ಲ,
ಕೂಡಲಚೆನ್ನಸಂಗಮದೇವ.
|
193.03 |
223 A223 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಮದೇವ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಪರುಷದ ಪುತ್ಥಳಿಗೆ ಕಬ್ಬುನದ ಆಭರಣಗಳುಂಟೆ ಅಯ್ಯಾ ?
ಲೋಕದೊಳಗೆ ಲಿಂಗ, ಲಿಂಗದೊಳಗೆ ಲೋಕವಾದಡೆ
ಹಿಂದಣ ಪ್ರಳಯಂಗಳೆಂತಾದವು ?
ಇನ್ನು ಮುಂದಣ ಪ್ರಳಯಗಳಿಗಿನ್ನೆಂತೊ ?
ಲೋಕವು ಲೋಕದಂತೆ, ಲಿಂಗವು ಲಿಂಗದಂತೆ,
ಈ ಉಭಯ ಭೇದವ ಗುಹೇಶ್ವರಾ ನಿಮ್ಮ ಶರಣ ಬಲ್ಲ |
1345.02 |
224 A224 |
ಅಲ್ಲಮ | ಗುಹೇಶ್ವರಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಮಾಂಸಪಿಂಡವೆಂದೆನಿಸದೆ ಮಂತ್ರಪಿಂಡವೆಂದೆನಿಸಿದ ಬಸವಣ್ಣ.
ವಾಯುಪ್ರಾಣಿಯೆಂದೆನಿಸದೆ ಲಿಂಗಪ್ರಾಣಿಯೆಂದೆನಿಸಿದ ಬಸವಣ್ಣ,
ಜಗಭರಿತನೆಂಬ ಶಬ್ದಕ್ಕೆ ಅಂಗವಿಸದೆ, ಶರಣಭರಿತ ಲಿಂಗವೆನಿಸಿದ
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನು. |
24.03 |
225 A225 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಯ್ಯ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಶಿವ ತನ್ನ ವಿನೋದಕ್ಕೆ ರಚಿಸಿದನು, ಅನಂತ ವಿಶ್ವವನು.
ರಚಿಸಿದವನು ವಿಶ್ವಕ್ಕೆ ಹೊರಗಾಗಿರ್ದನೆ ? ಇಲ್ಲ.
ವಿಶ್ವಮಯ ತಾನಾದನು, ವಿಶ್ವವೆಲ್ಲವೂ ತಾನಾದಡೆ
ವಿಶ್ವದುತ್ಪತ್ತಿಸ್ಥಿತಿಲಯಕ್ಕೊಳಗಾದನೇ ? ಇಲ್ಲ.
ಅದೇನು ಕಾರಣವೆಂದಡೆ;
ಅಜಾತನಾಗಿ ಉತ್ಪತ್ತಿ ಇಲ್ಲ, ಕರ್ಮರಹಿತನಾಗಿ ಸ್ಥಿತಿಗೊಳಗಲ್ಲ.
ಮರಣರಹಿತನಾಗಿ ಲಯಕ್ಕೊಳಗಲ್ಲ, ಇಂತೀ ಗುಣತ್ರಯಂಗಳ ಹೊದ್ದಲರಿಯ.
ತಾನಲ್ಲದೆ ವಿಶ್ವಕ್ಕಾಧಾರವಿಲ್ಲಾಗಿ ದೂರಸ್ಥನಲ್ಲ.
ತನ್ನಲ್ಲಿ ತಾನಲ್ಲದ ಅನ್ಯವು ತೋರಲರಿಯದಾಗಿ, ಇದಿರಿಲ್ಲ.
ಇದಿರಿಲ್ಲಾಗಿ ವಿಶ್ವಮಯ ತಾನಾದುದೇ ಸತ್ಯ.
ಅರಸು ಕಾಲಾಳಾಗಬಲ್ಲ ತನ್ನ ವಿನೋದಕ್ಕೆ,
ಮರಳಿ ಅರಸಾಗಬಲ್ಲ.
ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು,
ಜಗವಾಗಲೂ ಬಲ್ಲ, ಜಗವಾಗದಿರಲೂ ಬಲ್ಲನಯ್ಯ. |
1554.06 |
226 A226 |
ಉರಿಲಿಂಗಪೆದ್ದಿ | ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ ಲಿಂಗಲೀಲಾವಿಲಾಸ ಚಾರಿತ್ರ 48‖06
|
ಘನಗಂಭೀರ ಮಹಾ ವಾರುಧಿಯಲ್ಲಿ
ಫೇನ ತರಂಗ ಬುದ್ಬುದಂಗಳಾದವಲ್ಲದೆ ಬೇರಾಗಬಲ್ಲವೆ?
ಆತ್ಮನೆಂಬ ಅಂಬುಧಿಯಲ್ಲಿ
ಸಕಲ ಬ್ರಹ್ಮಾಂಡಕೋಟಿಗಳಾದವಲ್ಲದೆ ಬೇರಾಗಬಲ್ಲವೆ?
ಇದ ಬೇರೆಂಬ ಅರೆಮರುಳುಗಳ ನಾನೇನೆಂಬೆ?
ವಿಶ್ವವನರಿದು ನೋಡಲು
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗ ಬೇರಿಲ್ಲ |
597.07 |
227 A227 |
ಚಂದಿಮರಸ | ಸಿಮ್ಮಲಿಗೆಯ ಚೆನ್ನರಾಮ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ ಲಿಂಗಲೀಲಾವಿಲಾಸ ಚಾರಿತ್ರ 48‖07
|
ಶಿವ ಜಗವಾಗಲ್ಲ, ಶಿವ ಜಗವಾಗದಿರಲೂ ಬಲ್ಲ.
ಶಿವ ರೂಪಾಗಬಲ್ಲ, ಶಿವ ರೂಪಾಗದಿರಲೂ ಬಲ್ಲ.
ಶಿವ ಅಜಾಂಡಕೋಟಿಗಳ ಮಾಡಬಲ್ಲ, ಮಾಡದಿರಲೂ ಬಲ್ಲ.
ಶಿವ ಕೆಡಿಸಬಲ್ಲ, ಕೆಡಿಸದಿರಲೂ ಬಲ್ಲ.
ಶಿವ ಜಂಗಮವಾಗಿ ಪೂಜಿಸಬಲ್ಲ.
ಶಿವ ಲಿಂಗವಾಗಿ ತಾನೇ ಪೂಜೆಯ ಕೊಳಲೂ ಬಲ್ಲ.
ಶಿವ ಹೊರಗಾಗಿ ಮತ್ತನ್ಯವಿಲ್ಲವೆಂಬ ವೇದ ಉಂಟೇ ?
ಎಂದೆಡೆ ಉಂಟು.
ಅಥರ್ವವೇದ:
`ಶಿವೋ ಉಮಾ ಪಿತರೌ ಎಂದುದಾಗಿ
ದೇವನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು,
ನಮಗೆಲ್ಲ ಮಾತಾಪಿತನು. |
1553.06 |
228 A228 |
ಉರಿಲಿಂಗಪೆದ್ದಿ | ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ ಲಿಂಗಲೀಲಾವಿಲಾಸ ಚಾರಿತ್ರ 49‖08
|
ಜಗದೊಳಗೆ ಸೂರ್ಯನಂತಿರ್ಪನಯ್ಯ ಶಿವನು.
ಲೋಕಾದಿ ಲೋಕಂಗಳೊಳಗಿರ್ದಡೇನು,
ಜಗದ ಪುಣ್ಯ, ಪಾಪ, ಸ್ವರ್ಗ, ನರಕ, ಬಂಧ, ಮೋಕ್ಷಕ್ಕೊಳಗಾದಾತನೇ ಅಲ್ಲ.
ಅದೆಂತೆಂದಡೆ,
ಜಲದೊಳಗಣ ಪ್ರಕೃತಿ ವಿಕೃತಿಗಳು ಜಲಕ್ಕಲ್ಲದೆ ಸೂರ್ಯಂಗಿಲ್ಲವಾಗಿ,
ಲೋಕದ ಸ್ಥಿತಿಗತಿ ಲೋಕಕ್ಕಲ್ಲದೆ, ಶಿವನಿಗಿಲ್ಲವಾಗಿ.
ಅನಂತಕೋಟಿ ಬ್ರಹ್ಮಾಂಡಗಳು ತನ್ನ ಒಡಲೊಳಗೆ ಅಡಗಿದವೆಂದಡೆ
ತಾ ಹೊರಗಾಗಿ ಅಡಗಲೆಡೆ ಏನುಂಟು?
ಇದು ಕಾರಣ,
ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು
ವಿಶ್ವದೊಳಗೆ ಹೊದ್ದಿಯೂ ಹೊದ್ದದಿರಬಲ್ಲ,
ವಿಶ್ವಾಧಿಪತಿಯಾಗಲೂ ಬಲ್ಲ. |
1387.06 |
229 A229 |
ಉರಿಲಿಂಗಪೆದ್ದಿ | ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ,
ಸಕಲವಿಸ್ತಾರದ ರೂಹು ನೀನೇ ದೇವಾ,
«ವಿಶ್ವತಶ್ಚಕ್ಷು» ನೀನೆ ದೇವಾ,
«ವಿಶ್ವತೋಮುಖ» ನೀನೆ ದೇವಾ,
«ವಿಶ್ವತೋಬಾಹು» ನೀನೇ ದೇವಾ,
«ವಿಶ್ವತಃಪಾದ ನೀನೆ ದೇವಾ, ಕೂಡಲಸಂಗಮದೇವಾ.
|
533.01 |
230 A230 |
ಬಸವಣ್ಣ | ಕೂಡಲಸಂಗಮದೇವಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಟಿಪ್ಪಣಿ; * ಪುಟ ಸಂಖ್ಯೆ ‖ ವಚನ ಸಂಖ್ಯೆ [ಮೊದಲ ಪುಟ] « ಹಿಂದಿನ 10 21 22 23 24 25 26 27 28 29 30 ಮುಂದಿನ 10 » [ಕೊನೆ ಪುಟ]
ಸಿಕ್ಕ ಪಲಿತಾಂಶಗಳು 427 ಇದು ಪುಟ 23 ಈ ಪುಟದಲ್ಲಿ ಪಲಿತಾಂಶಗಳು 221 ರಿಂದ 230 ವರೆಗೆ |
|
|