ವಚನ ಆಕರಗಳು (15ನೆ ಶತಮಾನ)
ಮಹಾಕಾಲದಲ್ಲಿ ನಿಮ್ಮಿಂದ ನೀವೆ ಸ್ವಯಂಭುವಾಗಿರ್ದಿರಯ್ಯಾ
ಒಂದನಂತಕಾಲ.
ಮಹವು ಮಹಾನಂದದಲಕ್ಕಾಡಿ, ಮತ್ತಲ್ಲಿಯೆ ಲೀಯವಾಗಿರ್ದುದು
ಒಂದನಂತಕೋಟಿ ವರುಷ
ಕೂಡಲಚೆನ್ನಸಂಗಮದೇವ ವಿಪರೀತಚಾರಿತ್ರ. |
1464.03 |
281 B16 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಮದೇವ |
| ಆಕರ ಗ್ರಂಥಗಳು |
ಲಿಂಗಲೀಲಾವಿಲಾಸ ಚಾರಿತ್ರ 17‖08
|
ತನಗೆ ತಾನೆ ಹುಟ್ಟಿದನಾಗಿ, ತಾನೆ ಸ್ಥಾವರವಾದ ಆ ಲಿಂಗವು,
ತನ್ನಲ್ಲಿರ್ದ ರುಚಿಯ ಅವ್ಯಕ್ತಕ್ರೀಯಿಂದ
ಮನವೆ ಬಾಯಾಗಿ ಉಂಬ ಲಿಂಗವು,
ಇತರರ ಸುಖವ ಬಲ್ಲುದೆ, ಕೂಡಲಚೆನ್ನಸಂಗಮದೇವಾ |
1238.03 |
282 B17 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಮದೇವಾ |
| ಆಕರ ಗ್ರಂಥಗಳು |
ಲಿಂಗಲೀಲಾವಿಲಾಸ ಚಾರಿತ್ರ 18‖09
|
ತಾಯಿ_ತಂದೆಯಿಲ್ಲದ ಕಂದಾ,
ನಿನಗೆ ನೀನೆ ಹುಟ್ಟಿ ಬೆಳೆದೆಯಲ್ಲಾ !
ನಿನ್ನ ಪರಿಣಾಮವೆ ನಿನಗೆ ಪ್ರಾಣತೃಪ್ತಿಯಾಗಿರ್ದೆಯಲ್ಲಾ !
ಭೇದಕರಿಗೆ ಅಭೇದ್ಯನಾಗಿ ನಿನ್ನ ನೀನೆ ಬೆಳಗುತ್ತಿರ್ದೆಯಲ್ಲಾ !
ನಿನ್ನ ಚರಿತ್ರ ನಿನಗೆ ಸಹಜ ಗುಹೇಶ್ವರಾ |
1249.02 |
283 B18 |
ಅಲ್ಲಮ | ಗುಹೇಶ್ವರಾ |
| ಆಕರ ಗ್ರಂಥಗಳು |
ಲಿಂಗಲೀಲಾವಿಲಾಸ ಚಾರಿತ್ರ 18‖10
|
ಕಾಲ ಕಲ್ಪಿತಂಗಳಿಲ್ಲದೆ ನಿಮ್ಮಿಂದ ನೀವೇ ಸ್ವಯಂಭುವಾಗಿರ್ದಿರಯ್ಯಾ.
ನಿಮ್ಮ ಪರಮಾನಂದ ಪ್ರಭಾವದ ಪರಿಣಾಮದಲ್ಲಿ ಅನಂತಕಾಲವಿರ್ದಿರಲ್ಲಾ !
ನಿಮ್ಮ ಆದ್ಯಂತವ ನೀವೇ ಅರಿವುತಿದ್ದಿರಲ್ಲಾ,
ನಿಮ್ಮ ನಿಜದುದಯವ ನೀವೇ ಬಲ್ಲಿರಿ
ಕೂಡಲಚೆನ್ನಸಂಗಮದೇವಾ |
1115.03 |
284 B19 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಮದೇವಾ |
| ಆಕರ ಗ್ರಂಥಗಳು |
ಲಿಂಗಲೀಲಾವಿಲಾಸ ಚಾರಿತ್ರ 19‖11
|
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಪರಮೇಶ್ವರರೆಂಬ ಸಂದಣಿ
ತಲೆದೋರದ ಮುನ್ನ_ಅಲ್ಲಿಂದತ್ತ ಬಯಲೆ ಸ್ವರೂಪವಾಯಿತ್ತು.
ಆ ಸ್ವರೂಪಿನ ಘನತೆಯ ಉಪಮಿಸಬಾರದು.
ನೋಡಬಾರದ ಬೆಳಗು, ಕೂಡಬಾರದ ಮೂರ್ತಿ,
ಅಖಂಡ ಅಪ್ರತಿಮ ನಮ್ಮ ಗುಹೇಶ್ವರಲಿಂಗದ ಬೆಳ(ಬೆಡ?)ಗಿನ ಮೂಲವ
ಲಿಂಗಸಂಗಿಗಳಲ್ಲದೆ ಮಿಕ್ಕಿನ ಅಂಗವಿಕಾರಿಗಳೇನ ಬಲ್ಲರೊ ? |
1405.02 |
285 B20 |
ಅಲ್ಲಮ | ಗುಹೇಶ್ವರ |
| ಆಕರ ಗ್ರಂಥಗಳು |
ಲಿಂಗಲೀಲಾವಿಲಾಸ ಚಾರಿತ್ರ 19‖20
|
«ಲಿ» ಕಾರವೆ ಶೂನ್ಯ, ಬಿಂದುವೆ ಲೀಲೆ, «ಗ» ಕಾರವೆ ಚಿತ್ತು.
ಈ ತ್ರಿವಿಧದೊಳಗಿದೆ ಲಿಂಗವೆಂಬ ಸಕೀಲ.
ಇದರ ಸಂಚವನಾವಾತ ಬಲ್ಲ ಆತನೆ ಲಿಂಗಸಂಗಿ.
ಇದು ಕಾರಣ ಲಿಂಗಾನುಭವಿಗಳ ಶ್ರೀಚರಣಕ್ಕೆ
ನಮೋ ನಮೋ ಎಂಬೆ ಕೂಡಲಚೆನ್ನಸಂಗಮದೇವಾ |
1547.03 |
286 B21 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಮದೇವಾ |
| ಆಕರ ಗ್ರಂಥಗಳು |
ಲಿಂಗಲೀಲಾವಿಲಾಸ ಚಾರಿತ್ರ 20‖13
|
ಲಿಂಗವೆಂಬುದು ಪರಶಕ್ತಿಯುತ ಪರಶಿವನ ನಿಜದೇಹ,
ಲಿಂಗವೆಂಬುದು ಪರಶಿವನ ಘನತೇಜ,
ಲಿಂಗವೆಂಬುದು ಪರಶಿವನ ನಿರತಿಶಯಾನಂದಸುಖವು,
ಲಿಂಗವೆಂಬುದು ಪರಶಿವನ ಪರಮಜ್ಞಾನ,
ಲಿಂಗವೆಂಬುದು ಷಡಧ್ವಮಯ ಜಗಜ್ಜನ್ಮಭೂಮಿ,
ಲಿಂಗವೆಂಬುದು ಅಖಂಡಿತವೇದ ಪಂಚಸಂಜ್ಞೆ,
ಲಿಂಗವೆಂಬುದು ತಾ ಹರಿಬ್ರಹ್ಮರ ನಡುಮನೆಗಳ ಜ್ಯೋತಿರ್ಲಿಂಗ,
ಅಖಿಲಾರ್ಣವಾ ಲಯಾನಾಂ ಲಿಂಗಂ ಮುಖ್ಯಂ ಪರಂ ತಥಾ
ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾದಿವತ್
ಯದಾದ್ಯಮೈಶ್ವರಂ ತೇಜಸ್ತಲ್ಲಿಂಗಂ ಪಂಚಸಂಜ್ಞಕಂ
ಎಂದಿದು ಲಿಂಗದ ಮರ್ಮ.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
ಲಿಂಗದೊಳಿದ ತಿಳಿಯಬಲ್ಲವನೇ ಬಲ್ಲವನು. |
1524.06 |
287 B22 |
ಉರಿಲಿಂಗಪೆದ್ದಿ | ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ |
| ಆಕರ ಗ್ರಂಥಗಳು |
ಲಿಂಗಲೀಲಾವಿಲಾಸ ಚಾರಿತ್ರ 20‖14
|
ಚಿತ್ತುವೆಂಬ ಬಿತ್ತು ಬಲಿದು ಎರಡಾದಲ್ಲಿ,
ಲಿಂಗವೆಂಬ ಕಳೆ ಅಂಕುರಿಸಿ ಮೂರ್ತಿಯಾಯಿತ್ತು.
ಆ ಮೂರ್ತಿಯ ಘನತೆಯ ಏನೆಂದೂ ಉಪಮಿಸಬಾರದು !
ನೋಡಿದಡೆ ಮೂರ್ತಿ ಹಿಡಿದಡೆ ಬಯಲು !
ಆ ಮೂರ್ತಿಯೊಳಗದೆ ಈರೇಳು ಲೋಕದ ಪ್ರಾಣಕಳೆ.
ಆ ಕಳೆಯ ಬೆಳಗು ತಾನೆ ನಮ್ಮ ಗುಹೇಶ್ವರಲಿಂಗದಲ್ಲಿ
ಲೀಲಾಮೂಲದ ಪ್ರಥಮ ಭಿತ್ತಿ. |
1187.02 |
288 B23 |
ಅಲ್ಲಮ | ಗುಹೇಶ್ವರ |
| ಆಕರ ಗ್ರಂಥಗಳು |
ಲಿಂಗಲೀಲಾವಿಲಾಸ ಚಾರಿತ್ರ 30‖01
|
ಮರನೊಳಗಣ ಪತ್ರೆ ಫಲಂಗಳು, ಮರಕಾಲವಶದಲ್ಲಿ ತೋರುವಂತೆ,
ಹರನೊಳಗಣ ಪ್ರಕೃತಿಸ್ವಭಾವಂಗಳು, ಹರಭಾವದಿಚ್ಛೆಗೆ
ತೋರುವವು.
ಲೀಲೆಯಾದಡೆ ಉಮಾಪತಿ, ಲೀಲೆ ತಪ್ಪಿದಡೆ ಸ್ವಯಂಭು ಗುಹೇಶ್ವರಾ. |
145.02 |
289 B24 |
ಅಲ್ಲಮ | ಗುಹೇಶ್ವರಾ |
| ಆಕರ ಗ್ರಂಥಗಳು |
ಲಿಂಗಲೀಲಾವಿಲಾಸ ಚಾರಿತ್ರ 31‖02
|
ಶಿವಶಕ್ತಿ ಸಂಪುಟವೆಂಬುದೆಂತು ಹೇಳಿರಣ್ಣಾ;
ಶಿವನೆ ಚೈತನ್ಯಾತ್ಮಕನು, ಶಕ್ತಿಯೆ ಚಿತ್ತು.
ಇಂತು_ಚೈತನ್ಯಾತ್ಮಕನೆ ಚಿತ್ಸ್ವರೂಪನೆಂದರಿಯ ಬಲ್ಲಡೆ
ಆತನೆ ಶರಣ ಗುಹೇಶ್ವರಾ. |
589.02 |
290 B25 |
ಅಲ್ಲಮ | ಗುಹೇಶ್ವರಾ |
| ಆಕರ ಗ್ರಂಥಗಳು |
ಲಿಂಗಲೀಲಾವಿಲಾಸ ಚಾರಿತ್ರ 31‖03
|
ಟಿಪ್ಪಣಿ; * ಪುಟ ಸಂಖ್ಯೆ ‖ ವಚನ ಸಂಖ್ಯೆ [ಮೊದಲ ಪುಟ] « ಹಿಂದಿನ 10 21 22 23 24 25 26 27 28 29 30 ಮುಂದಿನ 10 » [ಕೊನೆ ಪುಟ]
ಸಿಕ್ಕ ಪಲಿತಾಂಶಗಳು 427 ಇದು ಪುಟ 29 ಈ ಪುಟದಲ್ಲಿ ಪಲಿತಾಂಶಗಳು 281 ರಿಂದ 290 ವರೆಗೆ |
|
|