ವಚನ ಆಕರಗಳು (15ನೆ ಶತಮಾನ)
ಅರ್ಪಿತ ಅನರ್ಪಿತವನಾರುಬಲ್ಲರಯ್ಯಾ?
ಅರ್ಪಿಸಿ ಕೊಂಬುದು ಅನರ್ಪಿತ
ಅರ್ಪಿಸದೆ ಕೊಂಬುದೂ ಮುನ್ನವೆ ಅನರ್ಪಿತ.
ಅರ್ಪಿಸಿ ಅರ್ಪಿಸದೆ ಕೊಳಬಲ್ಲ
ಗುಹೇಶ್ವರಾ ನಿಮ್ಮ ಶರಣ. |
846.02 |
371 C60 |
ಅಲ್ಲಮ | ಗುಹೇಶ್ವರಾ |
| ಆಕರ ಗ್ರಂಥಗಳು |
ಮಹದೇವಯ್ಯನ ಶೂನ್ಯಸಂಪಾದನೆ 63
|
ತನುವ ತಾಗದ ಮುನ್ನ, ಮನವ ತಾಗದ ಮುನ್ನ,
ಅಪ್ಯಾಯನ ಬಂದು ಎಡೆಗೊಳ್ಳದ ಮುನ್ನ_ಅರ್ಪಿತವ ಮಾಡಬೇಕು.
ಗುರುವಿನ ಕೈಯಲ್ಲಿ ಎಳತಟವಾಗದ ಮುನ್ನ_ಅರ್ಪಿತವ ಮಾಡಬೇಕು.
ಎಡದ ಕೈಯಲ್ಲಿ ಕಿಚ್ಚು, ಬಲದ ಕೈಯಲ್ಲಿ ಹುಲ್ಲು,
ಉರಿ ಹತ್ತಿತ್ತು ಗುಹೇಶ್ವರಾ ನಿಮ್ಮ ಪ್ರಸಾದಿಯ ! |
165.02 |
372 C61 |
ಅಲ್ಲಮ | ಗುಹೇಶ್ವರಾ |
| ಆಕರ ಗ್ರಂಥಗಳು |
ಮಹದೇವಯ್ಯನ ಶೂನ್ಯಸಂಪಾದನೆ 64
|
ಉದಕ ಮೂರುತಿಯಾಗಿ ಉದಯವಾಯಿತ್ತು ಪಿಂಡಿಗೆಯಲ್ಲಿ.
ಅಲ್ಲಿಯೆ ಮೂಲಸ್ಥಾನ ಸ್ಥಾಪ್ಯವಾಯಿತ್ತು ಸ್ವದೇಹ ಶಿವಪುರದಲ್ಲಿ.
ವಾಯು ಪೂಜಾರಿಯಾಗಿ, ಪರಿಮಳದಿಂಡೆಯ ಕಟ್ಟಿ,
ಪೂಜಿಸುತಿರ್ದುದು_ಓ ನವದ್ವಾರಶಿವಾಲಯದ ಆದಿ ಮಧ್ಯಸ್ಥಾನದಲ್ಲಿ!
ಗುಹೇಶ್ವರನೆಂಬುದಲ್ಲಿಯೇ ನಿಂದಿತ್ತು. |
193.02 |
373 C62 |
ಅಲ್ಲಮ | ಗುಹೇಶ್ವರ |
| ಆಕರ ಗ್ರಂಥಗಳು |
ಮಹದೇವಯ್ಯನ ಶೂನ್ಯಸಂಪಾದನೆ 65
|
ಕಂಗಳ ಬೆಳಗ ಕಲ್ಪಿಸಬಾರದು, ಕರ್ಣದ ನಾದವ ವರ್ಣಿಸಬಾರದು.
ಜಿಹ್ವೆಯ ರುಚಿಗೆ ಪ್ರತಿಯಿಲ್ಲವೆಂದಿತ್ತು.
ಮತಿಗೆ ಮಹಾಘನವಪ್ಪ ಸುಷುಮ್ನನಾಳದ ಸುಯಿಧಾನವ,
ಪ್ರಮಾಣಿಸಬಾರದು,
ಅಣು ರೇಣು ತೃಣ ಕಾಷ*ದೊಳಗೆ ಭರಿತ ಮನೋಹರ,
ನಿಂದ ನಿರಾಳ ಗುಹೇಶ್ವರಾ. |
273.02 |
374 C63 |
ಅಲ್ಲಮ | ಗುಹೇಶ್ವರಾ |
| ಆಕರ ಗ್ರಂಥಗಳು |
ಮಹದೇವಯ್ಯನ ಶೂನ್ಯಸಂಪಾದನೆ 66
|
ಕಂಗಳಾಲಿಯ ಕರಿಯ ನಾಳದಲ್ಲಿ, ಈರೇಳು ಭುವನಂಗಳಡಗಿದವು!
ನಾಟಕ ನಾಟಕವ ರಚಿಸುತ್ತ, ಆಡಿಸುವ ಸೂತ್ರದ ಪರಿ,
ಗುಹೇಶ್ವರಲಿಂಗ ನಿರಾಳಚೈತನ್ಯ. |
44.02 |
375 C64 |
ಅಲ್ಲಮ | ಗುಹೇಶ್ವರ |
| ಆಕರ ಗ್ರಂಥಗಳು |
ಮಹದೇವಯ್ಯನ ಶೂನ್ಯಸಂಪಾದನೆ 67
|
ನೆನಹು ಸತ್ತಿತ್ತು ಭ್ರಾಂತು ಬೆಂದಿತ್ತು.
ಅರಿವು ಮರೆಯಿತ್ತು ಕುರುಹುಗೆಟ್ಟಿತ್ತು.
ಗತಿಯನರಸಲುಂಟೆ? ಮತಿಯನರಸಲುಂಟೆ?
ಅಂಗವೆಲ್ಲ ನಷ್ಟವಾಗಿ ಲಿಂಗಲೀಯವಾಯಿತ್ತು.
ಕಂಗಳಂಗದ ಕಳೆಯ ಬೆಳಗಿನ ಭಂಗ ಹಿಂಗಿತ್ತು ಗುಹೇಶ್ವರಾ. |
298.02 |
376 C65 |
ಅಲ್ಲಮ | ಗುಹೇಶ್ವರಾ |
| ಆಕರ ಗ್ರಂಥಗಳು |
ಮಹದೇವಯ್ಯನ ಶೂನ್ಯಸಂಪಾದನೆ 68
|
ಉಪಾಧಿಕ ಮನವು!
ಉಪಾಧಿಕರಹಿತನ ಮನ ನಿಂದಲ್ಲಿ ನಿವಾತವಾಗಿತ್ತು.
ಆನಂದದ ಭಾವವು!
ಬಿಂದು ತಾನುಳಿದು ನಿಂದಲ್ಲಿ ನಿವಾತವಾಯಿತ್ತು.
ಲಿಂಗೋದಯ ಪ್ರಜ್ವಲಿಸುತ್ತಿದೆ,
ಗುಹೇಶ್ವರಲಿಂಗವು ತಾನೆಯಾಗಿ! |
669.02 |
377 C66 |
ಅಲ್ಲಮ | ಗುಹೇಶ್ವರ |
| ಆಕರ ಗ್ರಂಥಗಳು |
ಮಹದೇವಯ್ಯನ ಶೂನ್ಯಸಂಪಾದನೆ 69
|
ತಲೆಯ ಮೇಲೆ ತಲೆಯಿದ್ದಿತ್ತಲ್ಲಾ !
ಆ ತಲೆಯಾತಲೆ ನುಂಗಿತ್ತಲ್ಲಾ !
ಸತ್ತು ಹಾಲ ಸವಿಯ ಬಲ್ಲಡೆ,
ರಥದ ಕೀಲ ಬಲ್ಲಡೆ_ಅದು ಯೋಗ!
ಶಿಶು ಕಂಡ ಕನಸಿನಲುಳ್ಳ ತೃಪ್ತಿ ನಿನ್ನಲ್ಲಿ ಉಂಟೆ ಗುಹೇಶ್ವರಾ? |
581.02 |
378 C67 |
ಅಲ್ಲಮ | ಗುಹೇಶ್ವರಾ |
| ಆಕರ ಗ್ರಂಥಗಳು |
ಮಹದೇವಯ್ಯನ ಶೂನ್ಯಸಂಪಾದನೆ 70
|
ನಿರ್ವಿಕಲ್ಪಿತವೆಂಬ ನಜದೊಳಗಯ್ಯಾ,
ನಿರಹಂಭಾವದಲ್ಲಿ ನಾನಿದ್ದೆನಯ್ಯಾ (ನೀ ನಿದ್ದೆಯಯ್ಯಾ?)
ನೋಡಿಹೆನೆಂದಡೆ ನೋಡಲಿಲ್ಲ, ಕೇಳಿಹೆನೆಂದಡೆ ಕೇಳಲಿಲ್ಲ.
ಘನನಿರಂಜನದ ಬೆಳಗಿಂಬಾದುದನೇನೆಂಬೆ ಗುಹೇಶ್ವರಾ?
|
692.02 |
380 C69 |
ಅಲ್ಲಮ | ಗುಹೇಶ್ವರಾ |
| ಆಕರ ಗ್ರಂಥಗಳು |
ಮಹದೇವಯ್ಯನ ಶೂನ್ಯಸಂಪಾದನೆ 72
|
ಟಿಪ್ಪಣಿ; * ಪುಟ ಸಂಖ್ಯೆ ‖ ವಚನ ಸಂಖ್ಯೆ [ಮೊದಲ ಪುಟ] « ಹಿಂದಿನ 10 31 32 33 34 35 36 37 38 39 40 ಮುಂದಿನ 10 » [ಕೊನೆ ಪುಟ]
ಸಿಕ್ಕ ಪಲಿತಾಂಶಗಳು 427 ಇದು ಪುಟ 38 ಈ ಪುಟದಲ್ಲಿ ಪಲಿತಾಂಶಗಳು 371 ರಿಂದ 380 ವರೆಗೆ |
|
|