ವಚನ ಆಕರಗಳು (15ನೆ ಶತಮಾನ)
ಮನಸುಖವನರಿಯನಾಗಿ ಲಿಂಗವೆಂದರಿದನು.
ಧನಸುಖವನರಿಯನಾಗಿ ಜಂಗಮವೆಂದರಿದನು.
ತನುಸುಖವನರಿಯನಾಗಿ ಪ್ರಸಾದವೆಂದರಿದನು.
ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣ
ಸ್ವಯಲಿಂಗವಾದ ಕಾರಣ. |
1451.02 |
111 A111 |
ಅಲ್ಲಮ | ಗುಹೇಶ್ವರಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಹರ ತನ್ನ ರೂಪ ತೋರಬೇಕೆಂದು, ಗುರುರೂಪಾಗಿ ಬಂದು
ಮನಸ್ಥಲಕ್ಕೆ ಮಂತ್ರವಾದ, ತನುಸ್ಥಲಕ್ಕೆ ಪ್ರಸಾದವಾದ, ಕರಸ್ಥಲಕ್ಕೆ
ಲಿಂಗವಾದ
ಇಂತೀ ತ್ರಿವಿಧದಲ್ಲಿ ತ್ರಿವಿಧ ಸಾಹಿತ್ಯವಾದನಯ್ಯಾ
ಕೂಡಲಚೆನ್ನಸಂಗನ[ಲ್ಲಿ] ಬಸವಣ್ಣನು.
|
22.03 |
112 A112 |
ಚೆನ್ನಬಸವಣ್ಣ | ಕೂಡಲಚೆನ್ನಸಂಗ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಗುರುವಿನಲ್ಲಿ ಗುಣಸಂಪಾದನೆಯ ಮಾಡುವನ್ನಕ್ಕ
ಗುರುಸಂಬಂಧಿಯಲ್ಲ.
ಲಿಂಗದಲ್ಲಿ ಸ್ಥಲಸಂಪಾದನೆಯ ಮಾಡುವನ್ನಕ್ಕ
ಲಿಂಗಸಂಬಂಧಿಯಲ್ಲ.
ಜಂಗಮದಲ್ಲಿ ಜಾತಿಸಂಪಾದನೆಯ ಮಾಡುವನ್ನಕ್ಕ
ಜಂಗಮಸಂಬಂಧಿಯಲ್ಲ.
ಪ್ರಸಾದದಲ್ಲಿ ರುಚಿಸಂಪಾದನೆಯ ಮಾಡುವನ್ನಕ್ಕ
ಪ್ರಸಾದಸಂಬಂಧಿಯಲ್ಲ.
ಇದು ಕಾರಣ-ಕೂಡಲಚೆನ್ನಸಂಗಯ್ಯಾ
ಮಜ್ಜನಕ್ಕೆರೆವ ಭವಿಗಳನೇನೆಂಬೆ? |
1182.03 |
113 A113 |
ಚೆನ್ನಬಸವಣ್ಣ | |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ತನುವಿಡಿದಿಹುದು ಪ್ರಕೃತಿ, ಪ್ರಕೃತಿವಿಡಿದಿಹುದು ಪ್ರಾಣ,
ಪ್ರಾಣವಿಡಿದಿಹುದು ಜ್ಞಾನ, ಜ್ಞಾನವಿಡಿದಿಹುದು ಗುರು.
ಇಂತೀ ಗುರುಲಿಂಗಜಂಗಮಪ್ರಸಾದವ
ಸಗುಣವೆಂದು ಹಿಡಿದು ನಿರ್ಗುಣವೆಂದು ಕಂಡ
ಸಂದೇಹಿ ವ್ರತಗೇಡಿಗಳನೇನೆಂಬೆ
ಅಂತವರ ಮುಖವ ತೋರದಿರು ಕೂಡಲಸಂಗಮದೇವಾ. |
1202.01 |
114 A114 |
ಬಸವಣ್ಣ | ಕೂಡಲಸಂಗಮದೇವಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ದಾಸೋಹವೆಂಬ ಸೋಹೆಗೊಂಡು ಹೋಗಿ,
ಗುರುವ ಕಂಡೆ, ಲಿಂಗವ ಕಂಡೆ, ಜಂಗಮವ ಕಂಡೆ, ಪ್ರಸಾದವ ಕಂಡೆ.
ಇಂತೀ ಚತುರ್ವಿಧಸಂಪನ್ನನಾದೆ ಕಾಣಾ,
ಕೂಡಲಸಂಗಮದೇವಾ.
|
779.01 |
115 A115 |
ಬಸವಣ್ಣ | ಕೂಡಲಸಂಗಮದೇವಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಗುರುವಿನಲ್ಲಿ ಸ್ವಾಯತ,
ಲಿಂಗದಲ್ಲಿ ಸನ್ನಿಹಿತ,
ಜಂಗಮದಲ್ಲಿ ಸದರ್ಥನು,
ಪ್ರಸಾದದಲ್ಲಿ ಪರಿಣಾಮಿ.
ಇಂತೀ ಚತುರ್ವಿಧದಲ್ಲಿ ಸನ್ಮತನು,
ಕೂಡಲಸಂಗಯ್ಯನಲ್ಲಿ ಚೆನ್ನಬಸವಣ್ಣನು. |
1178.01 |
117 A117 |
ಬಸವಣ್ಣ | ಕೂಡಲಸಂಗಯ್ಯ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಇದು ಗುರು, ಇದು ಲಿಂಗ, ಇದು ಜಂಗಮ, ಇದು ಪ್ರಸಾದ.
ಇಂತೀ ಚತುರ್ವಿಧಸ್ಥಲವನೊಂದುಮಾಡಿ ತೋರಿ,
ಸಮತೆ ಸೈರಣೆಯೆಂಬ ಭಕ್ತಿಪ್ರಭೆಯೊಳಗಿರಿಸಿ,
ಗತಿಯತ್ತ ಹೊದ್ದಲೀಯದೆ, ಲಿಂಗದ ವ್ಯಾವರ್ಣನೆಯ ತೋರಿ,
ಜಂಗಮವ ನಿರಾಕಾರಲಿಂಗವೆಂದು ತೋರಿ,
ಆ ಜಂಗಮದ ಪ್ರಸಾದವ ತೋರಿದನು.
ನಿರವಯದ ಹಾದಿಯ, ಬಸವಣ್ಣನಿಂದ ಕಂಡೆ ಕಾಣಾ
ಕಲಿದೇವಯ್ಯ. |
509.08 |
118 A118 |
ಮಡಿವಾಳಮಾಚಿದೇವ | ಕಲಿದೇವಯ್ಯಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಗುರು ಸ್ವಾಯತವಾದ ಬಳಿಕ ಗುರುವ ಮರೆಯಬೇಕಯ್ಯಾ,
ಲಿಂಗ ಸ್ವಾಯತವಾದ ಬಳಿಕ ಲಿಂಗವ ಮರೆಯಬೇಕಯ್ಯಾ,
ಜಂಗಮಸ್ವಾಯತವಾದ ಬಳಿಕ ಜಂಗಮವ ಮರೆಯಬೇಕಯ್ಯಾ,
ಪ್ರಸಾದ ಸ್ವಾಯತವಾದ ಬಳಿಕ ಪ್ರಸಾದವ ಮರೆಯಬೇಕಯ್ಯಾ.
ಇಂತೀ ಗುರುಲಿಂಗಜಂಗಮಪ್ರಸಾದದಲ್ಲಿ ಪರಿಣಾಮಿಯಾಗಿ,
ಸಮಯಭಕ್ತಿಯಲ್ಲಿ ಸಂತೋಷಿಯಾಗಿ ಬದುಕಿದೆನು ಕಾಣಾ,
ಕೂಡಲಸಂಗಮದೇವಾ.
|
1180.01 |
119 A119 |
ಬಸವಣ್ಣ | |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಗುರುವಿಂಗೆ ಗುರುವಾಗಿ ಗುರುಪ್ರಸಾದವ ಕೊಂಬುದು,
ಲಿಂಗಕ್ಕೆ ಲಿಂಗವಾಗಿ ಲಿಂಗಪ್ರಸಾದವ ಕೊಂಬುದು,
ಜಂಗಮಕ್ಕೆ ಜಂಗಮವಾಗಿ ಜಂಗಮಪ್ರಸಾದವ ಕೊಂಬುದು,
ಪ್ರಸಾದಕ್ಕೆ ಪ್ರಸಾದವಾಗಿ ಪ್ರಸಾದವನೆ ಕೊಂಬುದು.
ಈ ಚತುರ್ವಿಧಸ್ಥಲಕ್ಕೆ ಚತುರ್ವಿಧವಾಗಬಲ್ಲಡೆ,
ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು. |
631.03 |
120 A120 |
ಚೆನ್ನಬಸವಣ್ಣ | |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಟಿಪ್ಪಣಿ; * ಪುಟ ಸಂಖ್ಯೆ ‖ ವಚನ ಸಂಖ್ಯೆ [ಮೊದಲ ಪುಟ] « ಹಿಂದಿನ 10 11 12 13 14 15 16 17 18 19 20 ಮುಂದಿನ 10 » [ಕೊನೆ ಪುಟ]
ಸಿಕ್ಕ ಪಲಿತಾಂಶಗಳು 427 ಇದು ಪುಟ 12 ಈ ಪುಟದಲ್ಲಿ ಪಲಿತಾಂಶಗಳು 111 ರಿಂದ 120 ವರೆಗೆ |
|
|