ವಚನ ಆಕರಗಳು (15ನೆ ಶತಮಾನ)
ಕೆರೆಯಲುಂಡು ತೊರೆಯ ಹೊಗಳುವರು.
ಅತ್ಯುತ್ಕಟದ ಪರಬ್ರಹ್ಮವನೆ ನುಡಿವರು.
ಸಹಜ ಪಿನಾಕಿಯ ಬಲೆಯಲ್ಲಿ ಸಿಲುಕಿ
ಭವವ ಹರಿಯಲರಿಯರು.
ರುದ್ರನ ಛತ್ರವನುಂಡು ಇಲ್ಲವೆಯ ನುಡಿವ ಹಿರಿಯರಿಗೆ
ಮಹದ ಮಾತೇಕೋ ಗುಹೇಶ್ವರಾ? |
613.02 |
201 A201 |
ಅಲ್ಲಮ | ಗುಹೇಶ್ವರಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಹವಣಲ್ಲದ ಶಾಖೆಯ ಕಪಿ ಹಿಡಿಯಲೊಲ್ಲದು.
ಗಮನವಿಲ್ಲದ ಪಿಕಶಿಶು ನುಡಿಯಲರಿಯದು.
ಪ್ರಭಾವಿಸಿದಲ್ಲದೆ ಉಲಿಯದು ಕುಕ್ಕಟ.
ಇಂತೀ ತ್ರಿವಿಧದ ಭೇದವ ನೋಡಿರೆ ಭಕ್ತರಪ್ಪಡೆ !
ಹೂ ಮಿಡಿಯ ಹರಿದಡೆ ಹಣ್ಣಪ್ಪುದೆ?
ಹಸಿವು ತೃಷೆ ವಿಷಯ ಉಳ್ಳನ್ನಕ್ಕ ಅದ್ವೈತ ಉಂಟೆ ಜಗದೊಳಗೆ?
ತನ್ನ ಮರೆದು ಲಿಂಗವ ಮರೆವುದು,
ತನ್ನ ಮರೆಯದೆ ಲಿಂಗವ ಮರೆವ ಯೋಗವಿನ್ನೆಂತಾದುದೊ?
ಸುಡು, ಸುಡು, ಅವಂದಿರು ಗುರುದ್ರೋಹಿಗಳು ಆಚಾರಭ್ರಷ್ಟರು.
ಈ ಉಭಯ ತನುಗುಣ ನಾಸ್ತಿಯಾಗದನ್ನಕ್ಕ;
ಸತ್ಕ್ರಿಯೆಯಿಂದ ಮಾಡುವುದು ಲಿಂಗದಾಸೋಹವ.
ಭಯಭಕ್ತಿಯಿಂದ ಮಾಡುವುದು ಜಂಗಮದಾಸೋಹವ.
ತನು ಕರಗದೆ ಮನ ಬೆರಸದೆ ನಿಮಗೆ ಮಾಡುವ ವ್ರತಗೇಡಿಗಳ
ಎನಗೆ ತೋರದಿರಾ ಗುಹೇಶ್ವರ. |
1611.02 |
203 A203 |
ಅಲ್ಲಮ | ಗುಹೇಶ್ವರ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ವಿಷಮದಶ ಪದನವನು ವಶಕ್ಕೆ ತಂದು ನಿಲಿಸಿ
ಸುಷುಮ್ನ ಸುಸರದ ಊದ್ರ್ವಪಥವನರಿದೆವೆಂದು
ರವಿಯ ನಾಲಗೆಯನಲನ ಕೊನೆಯ ಲಂಬಿಕಾಸ್ಥಾನವಾಗಿ
ಶಶಿಯಮೃತವನುಂಡು ಸುಖಿಯಾದೆನೆಂಬರು.
ಇವರೆಲ್ಲರು ಉಪಾಧಿಯನರಿಯದೆ ಹೋದರು.
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ
ಬಯಲದ್ವೈತವ ನುಡಿವರು. |
675.07 |
204 A204 |
ಚಂದಿಮರಸ | ಸಿಮ್ಮಲಿಗೆಯ ಚೆನ್ನರಾಮ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಗುರುಸಾಧಕರ ಕಾಣೆನಯ್ಯ, ಬಲ್ಲೆನೆಂಬರು ಹೊಲಬುಗೆಟ್ಟರು.
ಲಿಂಗಸಾಧಕರ ಕಾಣೆನಯ್ಯ, ಬಲ್ಲೆನೆಂಬರು ಹೊಲಬುಗೆಟ್ಟರು,
ಜಂಗಮಸಾಧಕರ ಕಾಣೆನಯ್ಯ, ಬಲ್ಲೆನೆಂಬರು ಹೊಲಬುಗೆಟ್ಟರು.
ಪಾದೋದಕ ಪ್ರಸಾದ ಉಭಯದಲ್ಲಿ ನಿಂದ ಕಾರಣ
ಕೂಡಲಚೆನ್ನಸಂಗಯ್ಯಾ,
ಈ ವಚನಸಾಧಕರ ಕಂಡು ಮನ ನಾಚಿತ್ತು. |
246.03 |
205 A205 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಯ್ಯಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಜಗ[ದ್]ವಂದ್ಯರೆಂದು ನುಡಿದು ನಡೆವರು ನೋಡಾ.
ಭವಬಂಧನದ ಕುಣಿಕೆಯ ಕಳೆಯಲರಿಯರು ನೋಡಾ.
ಭವ ತಮ್ಮ ತುಳಿ ತುಳಿದು ಕೊಂದಿತ್ತು ನೋಡಾ !
ಶಬ್ದವೇದಿಗಳೆಂದು ನುಡಿದು ನಡೆವರು ನೋಡಾ,
ನಿಃಶಬ್ದ ವೇದಿಸದಿರ್ದಡೆ, ಗುಹೇಶ್ವರ ನೋಡಿ ನಗುತ್ತಿಪ್ಪನೋಡಾ ! |
483.02 |
206 A206 |
ಅಲ್ಲಮ | ಗುಹೇಶ್ವರ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಕಾಣದುದನೆಲ್ಲವ ಕಾಣಲಾರೆನಯ್ಯಾ,
ಕೇಳದುದನೆಲ್ಲವ ಕೇಳಲಾರೆನಯ್ಯಾ.
ದ್ರೋಹವಿಲ್ಲ ಎಮ್ಮ ಶಿವನಲ್ಲಿ, ಸೀಮೆಯಯ್ಯಾ.ಷ
ಒಲೆಯ ಮುಂದಿದ್ದು ಮಾಡದ ಕನಸ ಕಾಂಬವರನೊಲ್ಲನಯ್ಯಾ
ಕೂಡಲಸಂಗಮದೇವ. |
266.01 |
207 A207 |
ಬಸವಣ್ಣ | ಕೂಡಲಸಂಗಮದೇವ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಪಂಚಭೂತದ ಸೂತಕದ ಬಳಿವಿಡಿದು
ಪ್ರಜ್ವಲಿಸುವ ಆತ್ಮಜ್ಯೋತಿಯೆಂಬ ಮಾತಿನೊಳಗಲ್ಲ.
ನಾದ ಬಿಂದು ಕಳಾತೀತನೆಂದು ನುಡಿವರು.
ಹೆಸರಿಲ್ಲದ ಬಯಲ ತಮ್ಮ ತಮ್ಮ ಮುಖಕ್ಕೆ ಹೆಸರಿಟ್ಟುಷ
ತಮ ತಮಗೆ ಕರತಳಾಮಳಕವೆಂಬರು.
ಅದರಾದಿಯಂತ್ಯವನರಿಯರು
ಎಂತು ಬಲ್ಲರು ಸಿಮ್ಮಲಿಗೆಯ ಚೆನ್ನರಾಮನೆಂಬ
ಶಬ್ದ ಉದ್ದೇಶಿಗಳು? |
641.07 |
208 A208 |
ಚಂದಿಮರಸ | ಸಿಮ್ಮಲಿಗೆಯ ಚೆನ್ನರಾಮ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ನಿತ್ಯ ಪರಿಪೂರ್ಣನೆಂದು ಪ್ರತ್ಯಕ್ಷ ಶ್ರುತಿ ಸಾರುತ್ತಿರಲು
ಮತ್ತೆ ಪರಿಭಾವಿಸಲೇನುಂಟು ಹೇಳಾ?
ಕರೆದಡೆ ಬಂದಿತ್ತು, ಕಳೆದಡೆ ಹೋಯಿತ್ತು.
ಎಂಬ ಕರ್ಮಕೌಟಿಲ್ಯದಲ್ಲಿ ಬಂದವನಲ್ಲ.
ಪ್ರತಿ ವ್ಯತಿರಿಕ್ತ ಗತಿ ಬಿಡದು.
ಸಿಮ್ಮಲಿಗೆ ಚೆನ್ನರಾಮನೆಂಬ ಲಿಂಗವುಷ
ಜಡರುಗಳಿಗೆಲ್ಲಿಯದೊ? |
630.07 |
209 A209 |
ಚಂದಿಮರಸ | ಸಿಮ್ಮಲಿಗೆ ಚೆನ್ನರಾಮ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಆಹ್ವಾನವಿಲ್ಲ ಪ್ರಾಣಲಿಂಗವಾಗಿ,
ವಿಸರ್ಜನವಿಲ್ಲ ಲಿಂಗ ನೆಲೆಗೊಂಡಿಪ್ಪುದಾಗಿ.
ಇದು ಕಾರಣ, ಆಹ್ವಾನ ವಿಸರ್ಜನವಿಲ್ಲ, ಶರಣನ ಪರಿ ಬೇರೆ;
ಅಂಗಸಂಗವೆ ಲಿಂಗ, ಲಿಂಗಸಂಗವೆ ಮನ,
ಕೂಡಲಸಂಗನ ಶರಣ ಸುಯಿಧಾನಿ. |
1057.01 |
210 A210 |
ಬಸವಣ್ಣ | ಕೂಡಲಸಂಗ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಟಿಪ್ಪಣಿ; * ಪುಟ ಸಂಖ್ಯೆ ‖ ವಚನ ಸಂಖ್ಯೆ [ಮೊದಲ ಪುಟ] « ಹಿಂದಿನ 10 21 22 23 24 25 26 27 28 29 30 ಮುಂದಿನ 10 » [ಕೊನೆ ಪುಟ]
ಸಿಕ್ಕ ಪಲಿತಾಂಶಗಳು 427 ಇದು ಪುಟ 21 ಈ ಪುಟದಲ್ಲಿ ಪಲಿತಾಂಶಗಳು 201 ರಿಂದ 210 ವರೆಗೆ |
|
|