ವಚನ ಆಕರಗಳು (15ನೆ ಶತಮಾನ)
ಅಣುರೇಣು ಮಹಾತ್ಮನೆಂದೆಂಬರು.
ಅಣುರೇಣು ತೃಣಕಾಷದೊಳಗಿರ್ಪನೆಂಬರು.
ಅಮ್ಮೆನಯ್ಯಾ, ನಾನೆನಲಮ್ಮೆನಯ್ಯಾ.
ಶರಣಸನ್ನಹಿತನು, ಭಕ್ತಕಾಯ ಮಮಕಾಯನು,
ದಾಸೋಹ ಪರಿಪೂರ್ಣನು,
ಸದುಹೃದಯದಲ್ಲಿ ಸಿಂಹಾಸನವಾಗಿ ಅಗಲದಿರ್ಪನು
ಕಲಿದೇವಯ್ಯ. |
453.08 |
231 A231 |
ಮಡಿವಾಳಮಾಚಿದೇವ | ಕಲಿದೇವಯ್ಯ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ವೇದದಲುಳ್ಳಡೆ ಪ್ರಾಣಿವಧೆಯಪ್ಪುದೆ ?
ಶಾಸ್ತ್ರದಲುಳ್ಳಡೆ ಸಮಯವಾದವಪ್ಪುದೆ ?
ಪರ್ವತದಲುಳ್ಳಡೆ ಹೋದವರು ಬಹರೆ ?
ನಿರ್ಬುದ್ಧಿ ಮಾನವರನೇನೆಂಬೆ!
ಮನ, ವಚನ, ಕಾಯಶುದ್ಧಿಯಾಗಿಪ್ಪಾತನ ಹೃದಯದಲಿ ನಿಮ್ಮ
ಕಂಡೆನೆಂದನಂಬಿಗ ಚೌಡಯ್ಯ. |
252.06 |
232 A232 |
ಅಂಬಿಗರಚೌಡಯ್ಯ | ಅಂಬಿಗ ಚೌಡಯ್ಯ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ತನುವೆಂತಿರ್ದಡೇನಯ್ಯಾ ಮನ ನಿರ್ಮಳವಾಗಿರ್ದಡೆ ಸಾಲದೆ
ಎಂತಿರ್ದಡೇನು ಲಿಂಗಭಕ್ತ ಎಂತಿರ್ದಡೇನು ಲಿಂಗಶರಣ
ಎಂತಿರ್ದಡೇನು ನೋಡಯ್ಯಾ.
ಶಿಶು ನೊಂದಡೆ ತಾಯಿ ನೊಂದಂತೆ ಕೂಡಲಸಂಗಮದೇವಾ. |
1203.01 |
233 A233 |
ಬಸವಣ್ಣ | ಕೂಡಲಸಂಗಮದೇವಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಹಾವು, ಕಿಚ್ಚ ಮುಟ್ಟಿಹ ಶಿಶುವೆಂದು
ಹೆತ್ತತಾಯಿ ಮಗನ ಬೆಂಬತ್ತಿ ಬಪ್ಪಂತೆ ಇಪ್ಪ ನೋಡಾ,
ಎನ್ನೊಡನೊಡನೆ ಕೂಡಲಸಂಗಮದೇವ ಕಾಯ್ದುಕೊಂಡಿಪ್ಪನಾಗಿ. |
1407.01 |
234 A234 |
ಬಸವಣ್ಣ | ಕೂಡಲಸಂಗಮದೇವ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಹುತ್ತ ಹೋರಿನೊಳಗೆ ಕೈಯನಿಕ್ಕುವನೆನ್ನ ಶಿಶುವೆಂದು,
ಹೆತ್ತ ತಾಯಿ ಮಗನ ಬೆಂಬತ್ತಿ ಬಪ್ಪಂತೆ, ಬೆಂಬತ್ತಿ ಬಿಡಂ ಭೋ.
ಅಯ್ಯಾ ಎಂದಡೆ ಓ ಎಂಬೆ.
ಅನ್ಯವಿಷಯಕೆನ್ನ ಹತ್ತಲೀಯದೆ, ಎತ್ತೆತ್ತ
ನೋಡಿದಡತ್ತತ್ತ ಸೊಡ್ಡಳ. |
829.09 |
235 A235 |
ಸೊಡ್ಡಳಬಾಚರಸ | ಸೊಡ್ಡಳ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಪರುಷದ ಪರ್ವತದಲ್ಲಿ ಕಬ್ಬುನಂಗಳುಂಟೆ ?
ಅಷ್ಟವಿಧಾರ್ಚನೆ ಷೋಡಶೋಪಚಾರ ಸನ್ನಿಹಿತಂಗೆ
ಅವಗುಣಂಗಳುಂಟೆ ?
ಭಕ್ತಕಾಯ ಮಮಕಾಯ
ಕೂಡಲಚೆನ್ನಸಂಗಮದೇವ. |
48.03 |
236 A236 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಮದೇವ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಪ್ರಸಾದ ಕಾಯವಾದ ಬಳಿಕ ಸರ್ವಾಂಗ ಉತ್ತಮಾಂಗ.
ಪ್ರಾಣ ಲಿಂಗವಾದ ಬಳಿಕ ಸದಾ ಸನ್ನಿಹಿತ ಲಿಂಗ.
ಶರಣನಲ್ಲಿ ಭಾವ ಭೇದವಿಲ್ಲ ನಿರಂತರ ಲಿಂಗಸಂಗಿ.
«ಅಕಾಯೋ ಭಕ್ತಕಾಯಸ್ತು» ಎಂದುದು
ಕೂಡಲಚೆನ್ನಸಂಗನ ವಚನ. |
546.03 |
237 A237 |
ಚೆನ್ನಬಸವಣ್ಣ | ಕೂಡಲಚೆನ್ನಸಂಗ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಲಿಂಗವೆ ಪ್ರಾಣವಾಯಿತ್ತಾಗಿ ಆಚಾರವಿಲ್ಲಯ್ಯಾ,
ಪ್ರಸಾದವೆ ಕಾಯವಾಯಿತ್ತಾಗಿ ರಜ ತಮ ಸತ್ವ ಕ್ರೋಧವಿಲ್ಲಯ್ಯಾ.
ಜಂಗಮಮುಖ ಲಿಂಗವಾದ ಕಾರಣ
ಲಿಂಗದಲನುಭಾವಿಸಿ ನೋಡುತ್ತಿದ್ದೆನಯ್ಯಾ.
ಭಕ್ತಕಾಯ ಮಮಕಾಯವಾಗಿ ಕೂಡಲಚೆನ್ನಸಂಗನಲ್ಲಿ ಸುಖಿಯಾಗಿದ್ದೆ
ನಾನಯ್ಯಾ |
396.03 |
238 A238 |
ಚೆನ್ನಬಸವಣ್ಣ | ಕೂಡಲಚೆನ್ನಸಂಗ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ನೆಲನನೊಳಕೊಂಡ ಸಲಿಲ, ಸಲಿಲವನೊಳಕೊಂಡ ಅನಲ
ಅನಲನನೊಳಕೊಂಡ ಅನಿಲ, ಅನಿಲನನೊಳಕೊಂಡ ಆಕಾಶ
ಆಕಾಶವನೊಳಕೊಂಡ ಮನ, ಮನವನೊಳಕೊಂಡ ಬುದ್ಧಿ
ಬುದ್ಧಿಯನೊಳಕೊಂಡ ಪ್ರಕೃತಿ,
ಪ್ರಕೃತಿಪುರುಷಜಗವೆಲ್ಲನೊಳಕೊಂಡ
ವಿಶುದ್ಧಕಾಯನು ಭಕ್ತದೇಹಿಕದೇವನು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ |
1425.06 |
239 A239 |
ಉರಿಲಿಂಗಪೆದ್ದಿ | ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಭಾವಮೂರ್ತಿಯಾಗಬೇಕು ಆದಿಲಿಂಗಕ್ಕೆ.
ಅರಿವುಮೂರ್ತಿಯಾಗಬೇಕು ದಾಸೋಹಕ್ಕೆ.
ಹರಿವುಮೂರ್ತಿಯಾಗಬೇಕು ಜಂಗಮಲಿಂಗಕ್ಕೆ.
ಭಕ್ತಿಮೂರ್ತಿಯಾಗಬೇಕು ಪ್ರಸಾದಕ್ಕೆ.
ನಿರ್ಭಾವಮೂರ್ತಿಯಾಗಬೇಕು ಅನುಭಾವಕ್ಕೆ.
ಜ್ಞಾನಮೂರ್ತಿಯಾಗಬೇಕು ಸ್ವಾನುಭಾವಕ್ಕೆ.
ಇಂತೀ ಪ್ರಜ್ವಲಿತವಾದ ತನುವಿನ ಸಂಗದಲಿರ್ಪ,
ಕಲಿದೇವಯ್ಯ. |
703.08 |
240 A240 |
ಮಡಿವಾಳಮಾಚಿದೇವ | ಕಲಿದೇವಯ್ಯ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಟಿಪ್ಪಣಿ; * ಪುಟ ಸಂಖ್ಯೆ ‖ ವಚನ ಸಂಖ್ಯೆ [ಮೊದಲ ಪುಟ] « ಹಿಂದಿನ 10 21 22 23 24 25 26 27 28 29 30 ಮುಂದಿನ 10 » [ಕೊನೆ ಪುಟ]
ಸಿಕ್ಕ ಪಲಿತಾಂಶಗಳು 427 ಇದು ಪುಟ 24 ಈ ಪುಟದಲ್ಲಿ ಪಲಿತಾಂಶಗಳು 231 ರಿಂದ 240 ವರೆಗೆ |
|
|