checking data baseConnected successfully! Sample Image
  •  

ವಚನ ಆಕರಗಳು (15ನೆ ಶತಮಾನ)

search:
search:
ಶೂನ್ಯ ಹುಟ್ಟದಂದು, ನಿಶ್ಶೂನ್ಯವಿಲ್ಲದಂದು,
ಬ್ರಹ್ಮ ವಿಷ್ಣು ಮಹೇಶ್ವರರಿಲ್ಲದಂದು,
ಹದಿನಾಲ್ಕು ದಿಗುವಳಯವಿಲ್ಲದಂದು,
ಕೂಡಲಚೆನ್ನಸಂಗಯ್ಯನೆಂಬ ಹೆಸರು ಮುನ್ನಿಲ್ಲದಂದು
830.03 271
B5
ಚೆನ್ನಬಸವಣ್ಣ ಕೂಡಲಚೆನ್ನಸಂಗಯ್ಯ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 907
ದೇವಿಯರಿಬ್ಬರಿಲ್ಲದಂದು,
ಪ್ರಧಾನಿಮಂತ್ರಿಗಳಿಲ್ಲದಂದು,
ಆರಾರೂ ಇಲ್ಲದಂದು ನೀನಾಮುಖಶೂನ್ಯನಯ್ಯಾ.
ಅರ್ಥಾಂತಾನ್ವಯಕೆ ನೀ ಮೂಲನೆಂಬೆ.
ನಿನ್ನೊಡನೆ ಬಂದಾತ ಬಸವಣ್ಣ.
ನೀನು ತಮಂಧದಲ್ಲಿ ಜ್ಞಾನಭಾಸ್ಕರದೀಪ್ತಿಯಂ
ಪ್ರವೇಶಿಸಲುಪಟ್ಟಡೆ,
ನೀ ಸಕಲವನು ನಿಃಕಲವನು ಪ್ರಾಪಂಚಿಕವನು ತಾತ್ಪರ್ಯವ
ಮಾಡುವಾಗ
ನೀನೆ ಎಂದೆಂಬೆ, ಅದು ಬಸವಣ್ಣನನುಮತ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ನೀನನಾದಿಮೂಲದೊಡೆಯನೆಂದೆಂಬೆ.
ನಿಮ್ಮ ಬಲ್ಲಾತ ಬಸವಣ್ಣ;
ಗುರು-ಲಿಂಗ-ಜಂಗಮತ್ರಯವು ಬಸವಣ್ಣನಂಶಿಕವು.
659.04 272
B6
ಸಿದ್ಧರಾಮ ಕಪಿಲಸಿದ್ಧಮಲ್ಲಿಕಾರ್ಜುನ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 908
ದ್ವೀಪಾದ್ವೀಪವಿಲ್ಲದಲ್ಲಿಂದತ್ತತ್ತ,
ಕಾಲಕರ್ಮವಿಲ್ಲದಲ್ಲಿಂದತ್ತತ್ತ,
ಮಾಯಾಮೋಹವಿಲ್ಲದಲ್ಲಿಂದತ್ತತ್ತ,
ಏನೂ ಏನೂ ಇಲ್ಲದಲ್ಲಿಂದತ್ತತ್ತ,
ಆದಿಮೂವರಿಲ್ಲದಲ್ಲಿಂದತ್ತತ್ತ,
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವಿಲ್ಲದಲ್ಲಿಂದತ್ತತ್ತ!
625.07 273
B8
ಚಂದರಸ ಸಿಮ್ಮಲಿಗೆಯ ಚೆನ್ನರಾಮ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 1011
ಅಪರವಿಲ್ಲದಂದು, ಪರಬ್ರಹ್ಮವಿಲ್ಲದಂದು
ಆದಿಯಿಲ್ಲದಂದು ಅನಾದಿಯಿಲ್ಲದಂದು
ಸದಾಶಿವನಿಲ್ಲದಂದು ಶಿವನಿಲ್ಲದಂದು
ಆನು ನೀನೆಂಬುದು ತಾನಿಲ್ಲದಂದು
ಕೂಡಲಚೆನ್ನಸಂಗಯ್ಯ ಏನೂ ಎನ್ನದಿರ್ದನಂದು
911.03 274
B9
ಚೆನ್ನಬಸವಣ್ಣ ಕೂಡಲಚೆನ್ನಸಂಗಯ್ಯ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 1012
ಏನೂ ಏನೂ ಇಲ್ಲದ ಬಯಲೊಳಗೊಂದು
ಬಗೆಗೊಳಗಾದ ಬಣ್ಣ ತಲೆದೋರಿತ್ತು.
ಆ ಬಣ್ಣವು ಆ ಬಯಲ ಶೃಂಗರಿಸಲು,
ಬಯಲು ಸ್ವರೂಪಗೊಂಡಿತ್ತು.
ಅಂತಪ್ಪ ಸ್ವರೂಪಿನ ಬೆಡಗು ತಾನೆ,
ನಮ್ಮ ಗುಹೇಶ್ವರಲಿಂಗದ ಪ್ರಥಮ ಭಿತ್ತಿ
1000.02 275
B10
ಅಲ್ಲಮ ಗುಹೇಶ್ವರ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 1401
ಒಂದು ಇಲ್ಲದ ಬಿಂದುವ, ತಂದೆಯಿಲ್ಲದ ಕಂದನ,
ಮಾತೆ ಇಲ್ಲದ ಜಾತನ, ಗಮನವಿಲ್ಲದ ಗಮ್ಯನ,
ಮೂವರರಿಯದ ಮುಗ್ಧನಠಾವ ತೋರಿಸು ಗುಹೇಶ್ವರಾ
457.02 276
B11
ಅಲ್ಲಮ ಗುಹೇಶ್ವರಾ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 1502
ಹುಟ್ಟು ಮೆಟ್ಟೆಂಬುದು ನಿಮಗಿಲ್ಲವಯ್ಯಾ;
ನಿಮ್ಮಿಂದ ನೀವೆ ಸ್ವಯಂಭುವಯ್ಯಾ.
ಇಂತಾರಯ್ಯಾ, ಹರುಷದಿಂದ ನೀವಿಂತಾದಿರಯ್ಯಾ.
ನಿಮ್ಮ ಮಹಾತ್ಮೆಯ ನೀವೆ ಬಲ್ಲಿರಯ್ಯಾ,
ನಿಜಗುರು ಕಪಿಲಸಿದ್ಧಮಲ್ಲಿಕಾರ್ಜುನಾ.
1158.04 277
B12
ಸಿದ್ಧರಾಮ ಕಪಿಲಸಿದ್ಧಮಲ್ಲಿಕಾರ್ಜುನಾ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 1600
ಅಮೂಲ್ಯನಪ್ರಮಾಣನಗೋಚರಲಿಂಗ,
ಆದಿಮಧ್ಯಾವಸಾನಗಳಿಲ್ಲದ ಸ್ವತಂತ್ರಲಿಂಗ,
ನಿತ್ಯನಿರ್ಮಳಲಿಂಗ,
ಅಯೋನಿಸಂಭವ ನಮ್ಮ ಕೂಡಲಸಂಗಮದೇವರು.
982.01 278
B13
ಬಸವಣ್ಣ ಕೂಡಲಸಂಗಮದೇವ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 1605
ತರುಗಳ ಮುರಿದು ಗಗನಕ್ಕೀಡಾಡುವ
ಅನಿಲ ರೂಪೋ ನಿರೂಪೋ? ಬಲ್ಲಡೆ ನೀವು ಹೇಳಿ ಭೋ!
ಗಜ ಸಿಂಹ ಶಾರ್ದೂಲವೆಂಬ ಅಧಿಕ ಮೃಗಂಗಳ ಮುರಿದೊತ್ತಿ
ಕೆಡಹುತಿಪ್ಪ
ವ್ಯಾಧಿ ರೂಪೋ ನಿರೂಪೋ? ಬಲ್ಲಡೆ ನೀವು ಹೇಳಿ ಭೋ!
ಕಾಣಲೀಯದೆ ಕೇಳಲೀಯದೆ ಅವಧಾನಂಗಳ ಕೆಡಿಸುತ್ತಿರ್ಪ
ನಿದ್ರೆ ರೂಪೋ ನಿರೂಪೋ? ಬಲ್ಲಡೆ ನೀವು ಹೇಳಿ ಭೋ!
ಇಂತು ಆಳಿನಾಳಿನ ಅಂತಸ್ಥವನಾರಿಗೂ ಅರಿಯಬಾರದು.
ಅನಾದಿಮೂಲದೊಡೆಯನ ಬಲ್ಲೆನೆಂಬ ಪರಿ ಎಂತೋ?
ರೂಪೆಂದಡೆ ಶಬ್ದ, ನಿರೂಪೆಂದಡೆ ಶೂನ್ಯ;
ಈ ಎರಡರ ಆದಿಯಿಂದತ್ತತ್ತ ಕಾಣಾ.
ಎನ್ನ ತಂದೆ ಕಪಿಲಸಿದ್ಧಮಲ್ಲಿಕಾರ್ಜುನಲಿಂಗವು
ಗುರುಕಾರುಣ್ಯವುಳ್ಳವರಿಗಲ್ಲದೆ ಅರಿಯಬಾರದು.
606.04 279
B14
ಸಿದ್ಧರಾಮ ಕಪಿಲಸಿದ್ಧಮಲ್ಲಿಕಾರ್ಜುನ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 1606
ನಿಮ್ಮ ತೇಜವ ನೋಡಲೆಂದು ಹೆರಸಾರಿ ನೋಡುತ್ತಿರಲು ಶತಕೋಟಿ ಸೂರ್ಯರು ಮೂಡಿದಂತೆ ಇರ್ದುದಯ್ಯಾ ! ಮಿಂಚಿನಬಳ್ಳಿಯ ಸಂಚವ ಕಂಡಡೆ, ಎನಗಿದು ಸೋಜಿಗವಾಯಿತ್ತು ! ಗುಹೇಶ್ವರಾ ನೀನು ಜ್ಯೋತಿರ್ಲಿಂಗವಾದಡೆ ಉಪಮಿಸಿ ನೋಡಬಲ್ಲವರಿಲ್ಲಯ್ಯಾ. 1302.02 280
B15
ಅಲ್ಲಮ ಗುಹೇಶ್ವರಾ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 1707

ಟಿಪ್ಪಣಿ; * ಪುಟ ಸಂಖ್ಯೆವಚನ ಸಂಖ್ಯೆ

[ಮೊದಲ ಪುಟ]  « ಹಿಂದಿನ 1021222324252627282930ಮುಂದಿನ 10 » [ಕೊನೆ ಪುಟ]


ಸಿಕ್ಕ ಪಲಿತಾಂಶಗಳು 427 ಇದು ಪುಟ 28 ಈ ಪುಟದಲ್ಲಿ ಪಲಿತಾಂಶಗಳು 271 ರಿಂದ 280 ವರೆಗೆ