checking data baseConnected successfully! Sample Image
  •  

ವಚನ ಆಕರಗಳು (15ನೆ ಶತಮಾನ)

search:
search:
ಓಂಕಾರ ಪ್ರಥಮದಲ್ಲಿ ದಿವ್ಯನಿರಾಲಂಬಮೂರ್ತಿ
ಜಗಹಿತಾರ್ಥವಾಗಿ ತತ್ತಾದಲ್ಲಿ
ಪಂಚಬ್ರಹ್ಮ ಸಾಕಾರಮೂರ್ತಿ ಲೀಲಾಸಂಭವವಾದಲ್ಲಿ
ಅಣುವಿಂಗಣು, ಮಹತ್ತಿಗೆ ಮಹತ್ತಾದಲ್ಲಿ
ಅಂಗಕರಂಡ ಆತ್ಮ ಸುಗಂಧ ನೀನಾದೆಯಲ್ಲಾ
ಏಣಾಂಕಧರ ಸೋಮೇಶ್ವರಲಿಂಗ.
291.08 301
B36
ಬಿಬ್ಗಿ ಬಾಚಯ್ಯ ಸೋಮೇಶ್ವರಲಿಂಗ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 4401
ನಿಜವಸ್ತುವೊಂದೆ,
ಎರಡಾಗಬಲ್ಲುದದೊಂದೆ,
ಬೇರೆ ತೋರಬಲ್ಲುದದೊಂದೆ,
ತನ್ನ ಮರೆಯಬಲ್ಲುದದೊಂದೆ,
ಆ ಮರವೆಯ ಬಲ್ಲುದದೊಂದೆ,
ತಾನಲ್ಲದನ್ಯವಿಲ್ಲೆಂದರಿದರಿವು ತಾನೇ,
ಸಿಮ್ಮಲಿಗೆಯ ಚೆನ್ನರಾಮಾ.
ಸಿಮ್ಮಲಿಗೆಯ ಚೆನ್ನರಾಮಾ.
629.07 302
B37
ಚಂದಿಮರಸ ಸಿಮ್ಮಲಿಗೆಯ ಚೆನ್ನರಾಮಾ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 4502
ರುದ್ರ ಮುಖದಲ್ಲಿ ವಿಷ್ಣು ಭುಜದಲ್ಲಿ,
ಜಂಘೆಯಲ್ಲಿ ಅಜ ಜನನವೊ.
ಇಂದ್ರ ಪಾದದಲ್ಲಿ ಚಂದ್ರ ಮನದಲ್ಲಿ,
ಚಕ್ಷುವಿನಲ್ಲಿ ಸೂರ್ಯ ಜನನವೊ.
ಮುಖದಲ್ಲಿ ಅಗ್ನಿಯು ಪ್ರಾಣದಲ್ಲಿ ವಾಯು
ನಾಭಿಯಲ್ಲಿ ಅಂತರಿಕ್ಷವೊ.
ಸಿರದಲುದಯ ತೆತ್ತೀಸಕೋಟಿ ದೇವತೆಗಳು
ಪಾದತಳದಲ್ಲಿ ಭೂಮಿ ಜನನವೊ.
ಶ್ರೋತ್ರದಲ್ಲಿ ದಶದಿಕ್ಕುವೊ.
ಜಗವ ನಿಕ್ಷೇಪಿಸಿದ ಕುಕ್ಷಿಯಲ್ಲಿ, ಅಕ್ಷಯನಗಣಿತನು.
ಸಾಸಿರ ತಲೆ, ಸಾಸಿರ ಕಣ್ಣು, ಸಾಸಿರ ಕೈ, ಸಾಸಿರ ಪಾದ.
ಸಾಸಿರ ಸನ್ನಿಹಿತ ನಮ್ಮ ಕೂಡಲಸಂಗಯ್ಯ
535.01 303
B38
ಬಸವಣ್ಣ ಕೂಡಲಸಂಗಯ್ಯ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 4503
ಅವನಿ ಅಂಬರ ಉದಯಿಸದಂದು
ಒಂದು ತುಂಬಿದ ಕೊಡನ ಕಂಡೆ.
ಆ ಕೊಡನನೆತ್ತಿದವರಿಲ್ಲ, ಇಳುಹಿದವರಿಲ್ಲ.
ಆ ಕೊಡ ತುಳುಕಿದಲ್ಲಿ ಒಂದು ಬಿಂದು ಕೆಲಕ್ಕೆ ಸಿಡಿಯಿತ್ತ ಕಂಡೆ.
ಆ ಬಿಂದುವಿನಲ್ಲಿ ಅನಂತ ದೇವತಾಮೂರ್ತಿಗಳು ಹುಟ್ಟಿತ್ತ ಕಂಡೆ
ಇದು ಕಾರಣ, ಚಿಕ್ಕಯ್ಯಪ್ರಿಯ ಸಿದ್ಧಲಿಂಗನ
ಲೀಲಾಮೂಲವ ಕಂಡು ಇಲ್ಲ ಇಲ್ಲವೆನುತಿರ್ದೆನು.
415.07 304
B39
ಘಟಿವಾಳಯ್ಯ ಚಿಕ್ಕಯ್ಯಪ್ರಿಯ ಸಿದ್ಧಲಿಂಗ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 4604
ಆದಿಪುರುಷನ ಮನವು ಮಹವನಕ್ಕಾಡೆ,
ಮತ್ತಲ್ಲಿಯೆ ಆನಂದದಿಂದ ಆ ನಿರವಯವು ಬೆಸಲಾಯಿತ್ತು.
ಧರೆ, ಅಂಬರ, ವಾರುಧಿ ಸಹಿತ,
ಜಾರೆಯೆಂದಡೆ ಜಗದಲ್ಲಿ ನಿಂದವು ಚೌರಾಸಿಲಕ್ಷ ಜೀವಜಾಲಗಳು.
ಹೋರೆಯೆಂದಡೆ ಆಕಾಶದಲ್ಲಿ ನಿಂದರು
ಗರುಡಗಂಧರ್ವಸಿದ್ಧ ವಿದ್ಯಾಧರದೇವರ್ಕಳು-
ಮೊದಲಾದ ದೇವಸಮೂಹಂಗಳೆಲ್ಲ
ಕೂಡಲಸಂಗಮದೇವಾ,
ನೀವು ಮನದಲ್ಲಿ ಸಂಕಲ್ಪಿಸಿ ಆಗೆಂದಡೆ ಆದವು.
1040.01 305
B40
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 4705
ಹರಿ ಬ್ರಹ್ಮ ಧರೆ ಆಕಾಶವಿಲ್ಲದ ಭಸ್ಮಕ್ಕೆ
ಸ್ಥಲವದು ಆದಿ ನೋಡಯ್ಯಾ.
ಭಸ್ಮವನೆ ಮಸುಳಿಸಿ, ಲೋಕಂಗಳನೆ ಹಡೆದು,
ಸಕಲ ಜೀವರನಿಂತು ಮಾಡಿದರೊಳರೆ?
ನಿನ್ನಿಚ್ಛೆ ನಿನಗೆ:ಸ್ವಯಂಭು ನೀನೆಯಾಗಿರ್ದೆಯಯ್ಯಾ,
ಕಪಿಲಸಿದ್ಧಮ್ಲನಾಥಯ್ಯಾ.
1133.04 306
B41
ಸಿದ್ಧರಾಮ ಕಪಿಲಸಿದ್ಧಮ್ಲನಾಥ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 4909
ಒಂದೆರಡಾದುದನಾರೂ ಅರಿಯರು:
ಆ `ಒಂದು' ಒಂದೆ ಆಯಿತ್ತು, ತ್ರಿತತ್ವವಾಯಿತ್ತು, ವೇದಾತೀತವಾಯಿತ್ತು,
ಭರಿತವಾಯಿತ್ತು, ಪ್ರಾದೇಶಿಕವಾಯಿತ್ತು, ಭಕ್ತಿಗೆ ಸಾಧ್ಯವಾಯಿತ್ತು.
ಅದಕ್ಕೆ ಆಧಾರ ದೇಹವಾಯಿತ್ತು.
ಅದು ಅಷ್ಟವಿಗ್ರಹ ಸ್ವರೂಪವಾಗಿರುತ್ತಿಪ್ಪುದು.
ಮತ್ತಿರುತಿರ್ದ ಒಂದು ಮಾಯಾಶಕ್ತಿಯಂ ಕೂಡಿ,
ಗುಣತ್ರಯಂಗಳಂ ಕೂಡಿ, ನಾನಾತ್ಮನೆನಿಸಿಕೊಂಡು_
ವಿಷಯಾತ್ಮ ಇಂದ್ರಿಯಾತ್ಮ ಭೂತಾತ್ಮ ಜೀವಾತ್ಮ ಪರಮಾತ್ಮನೆನಿಸಿಕೊಂಡು,
ಪ್ರಾಣಾದಿವಾಯುಗಳಂ ಕೂಡಿಕೊಂಡು ಜಡಪ್ರಕೃತಿಗಳಂ ಹೊತ್ತುಕೊಂಡು
ಸಂಕಲ್ಪ_ವಿಕಲ್ಪವೆಂಬ ಉಭಯ ಕರ್ಮಂಗಳಂ ಕಲ್ಪಿಸಿ
ನಾನಾಯೋನಿ ಪ್ರಾಪ್ತವಾಗುತ್ತಿರ್ದು,
ಲೋಕಾದಿಲೋಕಂಗಳೊಳು ತೊಳಲಿ ಬಳಲಿ
ತನ್ನ ಮೊದಲ ಕೂಡುವ ಪ್ರಕಾರಮಂ ಬಯಸಿ
ನಾನಾ ವಿಧದಿಂದ ಅರಸಿ ಹರಿವುತ್ತಿಪ್ಪರು ಅಖಿಳ ಜೀವಿಗಳೆಲ್ಲರು.
ಇದ ಬೆರಸದೆ; ಬೆರಸಿದ ಸಂಗನಬಸವಣ್ಣನ ನೆನೆನೆನೆದು
ಶರಣೆಂದು ಶುದ್ಧನಾದೆನು ಕಾಣಾ ಗುಹೇಶ್ವರಾ.
1016.02 307
B42
ಅಲ್ಲಮ ಗುಹೇಶ್ವರಾ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 5010
ಅಸ್ತಿ ಭಾತಿಯೆಂಬ ಎನ್ನ ಸತ್ಯದಲ್ಲಿ,
ನಾಮ ರೂಪೆಂಬ ಹುಸಿಯೆಂತು ಜನಿಸಿತೆಂದರಿಯೆನಯ್ಯಾ!
ಇಲ್ಲದ ಹೆಸರುಳ್ಳ ಚಿತ್ತಾರದಂತೆ, ದೇಹ ನಾಮವೀತೆರನೆಂದರಿಯದೆ
ತೊಳಲಿ ಬಳಲುತ್ತಿದ್ದೆನಯ್ಯಾ, ಕೂಡಲಚೆನ್ನಸಂಗಯ್ಯಾ,
ಸಂಸಾರಬಂಧನಯೆನಗಿದೇ ಕಂಡಯ್ಯಾ.
18.03 308
B43
ಚೆನ್ನಬಸವಣ್ಣ ಕೂಡಲಚೆನ್ನಸಂಗ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 5111
ಪರಶಿವನ ಚಿತ್ಕಲೆ ಜಗತ್ತಿನ ಶಿರೋಮಧ್ಯಕ್ಕೆ ಬಿಂಬಿಸಿ,
ಅದಕ್ಕೆ ಚೈತನ್ಯಗೊಳಿಸಿದಲ್ಲಿ, ಅದೇ ಪರಮಾತ್ಮನಾಯಿತ್ತು.
ಆ ಪರಮಾತ್ಮನೆ ಜಗತ್ತಿನ ಭ್ರೂಮಧ್ಯಕ್ಕೆ ಬಿಂಬಿಸಿದಲ್ಲಿ,
ಅದೇ ಅಂತರಾತ್ಮನಾಯಿತ್ತು.
ಆ ಅಂತರಾತ್ಮನೇ ಜಗತ್ತಿನ ಹೃದಯಕ್ಕೆ ಬಿಂಬಿಸಿದಲ್ಲಿ,
ಅದೇ ಜೀವಾತ್ಮನಾಯಿತ್ತು.
ಆ ಜೀವಾತ್ಮನೇ ಘಟ, ಅಂತಾರಾತ್ಮನೇ ಪ್ರಾಣ, ಪರಮಾತ್ಮನೇ ಸರ್ವಸಾಕ್ಷಿಕ.
ಆ ಸಾಕ್ಷಿಕನೇ ವಸ್ತು, ಆ ಪರಸ್ತು. ಈ ಜೀವಾಂತರಾದಿಗಳೆಂಬ ಅಂಗಪ್ರಾಣಕ್ಕೆ
ಪಂಚವಿಂಶತಿತತ್ವಂಗಳೆಂಬ ಪಾಶವಂ ತೊಡಿಸಿ, ಅಂತದನೇ ಪಶುವೆನಿಸಿ,
ತಾನದಕ್ಕೆ ಪತಿಯಾಗಿ, ಅಲ್ಲಿ ನಾನಾ ವಿನೋದಂಗಳಂ ವಿನೋದಿಸಿತ್ತು.
ಅದೆಂತೆಂದಡೆ :
«ವಿದ್ಯುದ್ರೂಪಮಿವಾಕಾಶೇ ಪ್ರತ್ಯಕ್ಷಂ ಸರ್ವತೋಮುಖ್ಯೆಃ |
ಶಿವತತ್ತ್ವಮಿದಂ ಪ್ರೋಕ್ತಂ ಸರ್ವತತ್ತ್ವಾಲಯಂ ವಿದುಃ ||
ಜೀವಾಂತರಪರಾತ್ಮೇತಿ ತ್ರಿಭಿರ್ನಾಮಭಿರುಚ್ಯತೇ |
ಆತ್ಮಸ್ವಜೀವ ಸಂಬಂಧಶ್ಚಾಂತರಃ ಪ್ರಾಣಸಂಯುತಃ ||
ಪರಮಾತ್ಮಾ ತತ್ತ್ವಸಂಯುಕ್ತಃ ಆತ್ಮತ್ರಯಮಿದಂ ಶೃಣು |»
ಎಂದುದಾಗಿ, ಬಸವಪ್ರಿಯ ಕೂಡಲಚೆನ್ನಸಂಗಯ್ಯನು
ಇಂತೀ ಪರಿಯಲ್ಲಿ ಅಡಗಿರ್ದ, ಸರ್ವಜಗತ್ತನ್ನು.
322.09 309
B44
ಸಂಗಮೇಶ್ವರದ ಅಪ್ಪಣ್ಣ ಬಸವಪ್ರಿಯ ಕೂಡಲಚೆನ್ನಸಂಗಯ್ಯ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 5601
ಅಕಲ್ಪಿತ ನಿತ್ಯ ನಿರಂಜನ ನಿಃಸೀಮ ನಿರವಯ
ಅಖಂಡ ಪರಿಪೂರ್ಣ ಪರಂಜ್ಯೋತಿಯಾದ
ಮಹಾ ಘನವಸ್ತುವಿನಲ್ಲಿ ಪರಮಾತ್ಮನುತ್ಪತ್ತಿ.
ಆ ಪರಮಾತ್ಮನಿಂದ ಅಂತರಾತ್ಮನುತ್ಪತ್ತಿ.
ಆ ಅಂತರಾತ್ಮನಿಂದ ಜೀವಾತ್ಮನುತ್ಪತ್ತಿ.
ಈ ತ್ರಯಾತ್ಮರೊಳಗೆ ಜೀವ_ಅಂತರಾತ್ಮಾದಿಗಳೆ ಪಾಶಬದ್ಧರು
ಪರಮಾತ್ಮನೆ ಪಾಶಮುಕ್ತನು.
ಈ ಸಂಚವನರಿದ ದ್ವಂದ್ವರಹಿತ ತಾನೆ
ನಮ್ಮ ಗುಹೇಶ್ವರಲಿಂಗದಲ್ಲಿ ಯಂತ್ರವಾಹಕನೆನಿಸುವನು.
741.02 310
B45
ಅಲ್ಲಮ ಗುಹೇಶ್ವರ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 5602

ಟಿಪ್ಪಣಿ; * ಪುಟ ಸಂಖ್ಯೆವಚನ ಸಂಖ್ಯೆ

[ಮೊದಲ ಪುಟ]  « ಹಿಂದಿನ 1031323334353637383940ಮುಂದಿನ 10 » [ಕೊನೆ ಪುಟ]


ಸಿಕ್ಕ ಪಲಿತಾಂಶಗಳು 427 ಇದು ಪುಟ 31 ಈ ಪುಟದಲ್ಲಿ ಪಲಿತಾಂಶಗಳು 301 ರಿಂದ 310 ವರೆಗೆ