ವಚನ ಆಕರಗಳು (15ನೆ ಶತಮಾನ)
ಎನ್ನಲ್ಲಿ ಭಕ್ತಿ ಸಾಸವೆಯ ಷಡ್ಯಾಗದನಿತಿಲ್ಲ . ಎನ್ನ ಭಕ್ತನೆಂಬರು , ಎನ್ನ ಸಮಯಾಚಾರಿಯೆಂಬರು ನಾನೇನು ಪಾಪವ ಮಾಡಿದೆನೊ . ಬೆಳೆಯದ ಮುನ್ನ ವೆ ಕೊಯ್ದರೆ ? ಹೇಳಯ್ಯಾ . ಇರಿಯದ ವೀರ, ಇಲ್ಲದ ಸೊಬಗು ! ಎಲ್ಲಾ ಒಡೆಯರೂ ಏರಿಸಿ ನುಡಿವರು, ಎನಗಿದು ವಿಧಿಯೆ , ಕೂಡಲಸಂಗಮದೇ |
386.01 |
81 A81 |
ಬಸವಣ್ಣ | ಕೂಡಲಸಂಗಮದೇವಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಅರಸರ ಮನೆಯಲ್ಲಿ ಅರಸಿಯಾಗಿಪ್ಪುದರಿಂದ, ಭಕ್ತರ ಮನೆಯ ತೊತ್ತಾಗಿಪ್ಪುದು ಕರ ಲೇಸಯ್ಯಾ. `ತಾರೌ ಅಗ್ಘವಣಿ, ನೀಡೌ ಪತ್ರೆಯ, ಲಿಂಗಕ್ಕೆ ಬೋನವ ಹಿಡಿಯೌ ಎಂಬರು. `ಕೂಡಲಸಂಗನ ಮಹಾಮನೆಯಲ್ಲು ಒಕ್ಕುದನುಣೌ ತೊತ್ತೇ ಎಂಬರು |
356.01 |
82 A82 |
ಬಸವಣ್ಣ | ಕೂಡಲಸಂಗಮದೇವಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಎನ್ನನು ಭಕ್ತನೆಂಬರು-ಎನ್ನ ಹೊಱಹೊ೦ಪು, ಒಳಬೋಳೆತನ ವನಱೆಯರಾಗಿ, ಎನ್ನಮಾನಾಪಮಾನವು ಶರಣರಲ್ಲಿ ! ಜಾತಿ-ವಿಜಾತಿಯೂ ಶರಣರಲ್ಲಿ! ತನುಮನಧನವೂ ಶರಣರಲ್ಲಿ! ವಂಚನೆಯುಳ್ಳ ಡಂಭಕ ನಾನು. ಶಿವ ಶಿವಾ! ತಲೆಯೊಡೆಯಂಗೆ ಕಣ್ಣ ಬೈಚಿಡುವೆ,ಕೂಡಲಸಂಗನೆಂತೊಲಿವ |
306.01 |
83 A83 |
ಬಸವಣ್ಣ | ಕೂಡಲಸಂಗಮದೇವಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಆತ್ಮಸ್ತುತಿ ಪರನಿಂದೆಯ ಕೇಳಿಸದಿರಯ್ಯಾ, ನಿಮ್ಮ ಧರ್ಮ ಆನು ಭಕ್ತನೆನ್ನಲ್ಲಿ ಲೇಸುಂಟೆಂದು ಪರಿಣಾಮಿಸಿದಡೆ ನಿಮಗಾನು ದ್ರೋಹಿಯಯ್ಯಾ. ಕೂಡಲಸಂಗಮದೇವಾ, ನಿಮ್ಮ ಶರಣರ ಲೇಸೇ ಎನ್ನ ಲೇಸಯ್ಯಾ. |
408.01 |
84 A84 |
ಬಸವಣ್ಣ | ಕೂಡಲಸಂಗಮದೇವಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಮನ ಮನ ಬೆರಸಿದಲ್ಲಿ ತನು ಕರಗದಿದ್ದಡೆ, ಸೋಂಕಿನಲ್ಲಿ ಪುಳಕಂಗಳು ಹೊರಹೊಮ್ಮದಿದ್ದಡೆ, ಕಂಡಾಗಳಶ್ರುಜಲಂಗಳು ಸುರಿಯದಿದ್ದಡೆ, ನುಡಿವಲ್ಲಿ ಗದ್ಗದಂಗಳು ಪೊಣ್ಮದಿದ್ದಡೆ, ಕೂಡಲಸಂಗಮದೇವರ ಭಕ್ತಿಗಿದು ಚಿಹ್ನ ಎನ್ನಲ್ಲಿ ಇವಿಲ್ಲಾಗಿ, ಆನು ಡಂಬಕ ಕಾಣಿರೇ. |
379.01 |
85 A85 |
ಬಸವಣ್ಣ | ಕೂಡಲಸಂಗಮದೇವಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಗತಿಪದಮುಕ್ತಿಯ ಬಯಸಿ ಮಾಡುವಾತ ಭಕ್ತನಲ್ಲ,
ಜೀವನೋಪಾಯಕ್ಕೆ ಬೇಡುವಾತ ಜಂಗಮವಲ್ಲ.
ಗತಿಪದ ಮುಕ್ತಿಸೂತಕವಿರಹಿತ ಭಕ್ತ,
ಹಮ್ಮು ಬಿಮ್ಮು ಗಮನನಾಸ್ತಿ ಜಂಗಮ.
ಮಾಡುವಡೆ ಭಕ್ತ ಮಾಟದೊಳಗಿಲ್ಲದಿರಬೇಕು,
ಬೇಡುವಡೆ ಜಂಗಮ ಕೊಂಬುದರೊಳಗಿಲ್ಲದಿರಬೇಕು.
ಪ್ರಾಣವಿಲ್ಲದ ಭಕ್ತ ರೂಹಿಲ್ಲದ ಜಂಗಮ,
ಉಭಯಕುಳ ಸಂದಳಿದಂದು
ಕೂಡಲಚೆನ್ನಸಂಗನಲ್ಲಿ ಭಕ್ತಜಂಗಮವೆಂಬೆ |
508.03 |
87 A87 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಯ್ಯಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಭಕ್ತನ ಮಠಕ್ಕೆ ಜಂಗಮ ಬಂದು, ಆ ಭಕ್ತ ಮಾಡಿದಂತೆ ಭಕ್ತಿಯ ಮಾಡಿಸಿಕೊಂಡು, ಕ್ಷಮಿಸಬಲ್ಲಡೆ ಜಂಗಮ ಆ ಕ್ಷಮೆಯೊಳಗೆ ಮಗ್ನನಾಗಬಲ್ಲಡೆ ಭಕ್ತ. ಉಪಾಧಿಯಾಗಿ ಹೇಳಿ ಮಾಡಿಸಿಕೊಂಬನ್ನಬರ ಭೂತಪ್ರಾಣಿ: ಬಂದ ಪರಿಯಲ್ಲಿ ಪರಿಣಾಮಿಸಬಲ್ಲಡೆ ಲಿಂಗಪ್ರಾಣಿ. ಬೇಡಿದಲ್ಲದೆ ಮಾಡೇನೆಂಬೆನ್ನಕ್ಕರ ಫಲದಾಯಕ
| 246.07 |
88 A88 |
ಗಜೇಶಮಸಣಯ್ಯ | ಮಹಾಲಿಂಗ ಗಜೇಶ್ವರ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ನ್ಮನಿಯ ಲೌಕಿಕದನುಸಂಧಾನವ ಪರಿಹರಿಸಲ್ಕೆ,
ತನುವಿನ ಕೊರತೆಯ ಕಳೆಯಲ್ಕೆ
ಸ್ಥಾವರವಾಯಿತ್ತು,
ಮನದ ಕೊರತೆಯ ಕಳೆಯಲ್ಕೆ
ಜಂಗಮವಾಯಿತ್ತು.
`ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ'
ಇಂತೆಂಬ ವಚನವು ಕೂಡಲಚೆನ್ನಸಂಗಯ್ಯನಲ್ಲಿ
ಸಮಯಾಚಾರಿಗಲ್ಲದೆ ಎಲ್ಲರಿಗೆಲ್ಲಿಯದೊ? |
1028.03 |
89 A89 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಯ್ಯಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಟಿಪ್ಪಣಿ; * ಪುಟ ಸಂಖ್ಯೆ ‖ ವಚನ ಸಂಖ್ಯೆ [ಮೊದಲ ಪುಟ] 1 2 3 4 5 6 7 8 9 10 ಮುಂದಿನ 10 » [ಕೊನೆ ಪುಟ]
ಸಿಕ್ಕ ಪಲಿತಾಂಶಗಳು 427 ಇದು ಪುಟ 9 ಈ ಪುಟದಲ್ಲಿ ಪಲಿತಾಂಶಗಳು 81 ರಿಂದ 90 ವರೆಗೆ |
|
|