ವಚನ ಆಕರಗಳು (15ನೆ ಶತಮಾನ)
ಹಸ್ತಕಡಗ ಕೈಗಧಿಕ ನೋಡಾ ಕೊಡಲಹುದು ಕೊಳಲಾಗದು, ಬಾಹುಬಳೆ ತೋಳಿಗಂಧಿಕ ನೋಡಾ ಪರವಧುವನಪ್ಪಲಾಗದು, ಕರ್ಣಕುಂಡಲ ಕಿವಿಗಧಿಕ ನೋಡಾ ಶಿವನಿಂದೆಯ ಕೇಳಲಾಗದು, ಕಂಠಮಾಲೆ ಕೊರಳಿಂಗಧಿಕ ನೋಡಾ ಅನ್ಯದೈವಕ್ಕೆ ತಲೆವಾಗಲಾಗದು. ಆಗಳೂ ನಿಮ್ಮುವ ನೆನೆದು, ಕೂಡಲಸಂಗಮದೇವಾ, ನಿಮ್ಮುವನೆ ಪೂಜಿಸಿ ಸದಾ ಸನ್ನಿಹಿತನಾಗ |
1402.01 |
61 A61 |
ಬಸವಣ್ಣ | ಕೂಡಲಸಂಗಮದೇವಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ವಿಪುಳ ವೇದವೇದಾಂತಸಾರ, ಸಕಲಲೋಕಜನಹಿತಾಧಾರ, ಸಪ್ತಕೋಟಿ ಮಹಾಮಂತ್ರಂಗಳ ತವರುಮನೆ, ಭಕ್ತಜನಜೀವಾನಂದ, ಅಖಿಳಾಗಮ ಸಂತಾನದ ಹರಣ, ಮುಕ್ತಿಗೆ ಕಾರಣ ಸೋಪಾನ, ಪ್ರಣವಾಂಕುರ ಪಲ್ಲವ ಫಲರೂಪು, ತ್ರಿಣಯನೊಲಿಸುವ ಕರ್ಣಾಭರಣ, ಹರನ ನಾಮದ ಸಾಕಾರದ ನಿಲವು, ಪರಮಪಂಚಬ್ರಹ್ಮಾನಂದ, ಪರತತ್ತ್ವದ ನಿತ್ಯದ ನೆಲೆ, ಹ |
291.06 |
62 A62 |
ಅಗ್ಘವಣ್ಣಿಹಂಪಯ್ಯ | ಚೆನ್ನಹಂಪೆಯ ವಿರುಪಯ್ಯ???? |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ ಲಿಂಗಲೀಲಾವಿಲಾಸ ಚಾರಿತ್ರ 144‖64
|
ಪಂಚಾಕ್ಷರಿಯೆ ಸರ್ವಮಂತ್ರವೆಲ್ಲವಕ್ಕೆಯು, ಉತ್ಪತ್ತಿ, ಸ್ಥಿತಿ, ಲಯಸ್ಥಾನ, ಸರ್ವಕಾರಣವೆಲ್ಲವಕ್ಕೆಯು ಮೂಲ. ಅದೆಂತೆಂದಡೆ: ಸಪ್ತಕೋಟಿ ಮಹಾಮಂತ್ರಂ ಉಪಮಂತ್ರಸ್ತನೇಕತಃ ಪಂಚಾಕ್ಷರ ಪ್ರತಿಲೀಯಂತೇ ಪುನಸ್ತಸ್ಯವಸರ್ಗತಃ ತಸ್ಮಿನ್ ವೇದಶ್ಚ ಶಾಸ್ತ್ರಾಣಿ ಮಂತ್ರೇ ಪಂಚಾಕ್ಷರಿ ಸ್ಥಿತಂ |
1431.06 |
63 A63 |
ಉರಿಲಿಂಗಪೆದ್ದಿ | ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ ಲಿಂಗಲೀಲಾವಿಲಾಸ ಚಾರಿತ್ರ 143‖63
|
ಭಕ್ತಿಯ ನಂದವನದಲ್ಲಿ ಜ್ಞಾನಾಂಕುರವ ಮೆಲಿದು ಆನಂದವೆಂಬ ಜಲವನೀಂಟಿ ಸಮತೆಯೆಂಬ ನೆಳಲಲ್ಲಿರ್ಪುದ ನೆನೆಯಾ ಮನವೆ! ಮಹಾಮಂತ್ರ ಶಿವಧ್ಯಾನವನೆ ಸವಿದು, ಮೆಲುಕುತ್ತಿರ್ಪುದು. ಧರ್ಮಾರ್ಥಕಾಮಮೋಕ್ಷವೆಂಬ ಮೊಲೆ ತೊರೆಯಲು ಹಂಪೆಯ ವಿರುಪನ ಕರೆವ ಕಾಮಧೇನು ಪಂಚಾಕ್ಷರಿಯೆಂಬುದು. |
290.06 |
64 A64 |
ಅಗ್ಘವಣ್ಣಿಹಂಪಯ್ಯ | ಚೆನ್ನಹಂಪೆಯ ವಿರುಪಯ್ಯ???? |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಸದ್ಗುರುಶ್ಶಿವಲಿಂಗಂ ಚ ಜಂಗಮಶ್ಚ ಪ್ರಸಾದಕಂ
ಚತುರ್ವಿಧಃ ಷಡಕ್ಷರೋ ಮಂತ್ರಸ್ಸಾಕ್ಷಾತ್ಪರಶ್ಶಿವಃ
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಓಂ ನಮಃ ಶಿವಾಯ ಎಂದೆನ್ನದಿರೆ ಬಂಧನ,
ಓಂ ನಮಃ ಶಿವಾಯ ಎಂದೆನಲು ಮೋಕ್ಷ.
ಷಡಕ್ಷರಜಪಾನ್ನಾಸ್ತಿ ಸರ್ವೆಷಾಂ ಬಂಧನಂ ತಥಾ
ತನ್ಮಂತ್ರಂ ಚ ಜಪನ್ ಭಕ್ತ್ಯಾ ಸದ್ಯೋನ್ಮುಕ್ತೋ ನ ಸಂಶಯಃ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. |
1605.06 |
65 A65 |
ಉರಿಲಿಂಗಪೆದ್ದಿ | ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಅಂತ್ಯಜನಾಗಲಿ, ಅಗ್ರಜನಾಗಲಿ
ಮೂರ್ಖನಾಗಲಿ, ಪಂಡಿತನಾಗಲಿ
ಜಪಿಸುವುದು ಶ್ರೀ ಪಂಚಾಕ್ಷರಿಯ.
ಆ ಜಪದಿಂದ ರುದ್ರನಪ್ಪುದು ತಪ್ಪದು.
ಅದೆಂತೆಂದಡೆ:ಲೈಂಗೇ
ಅಂತ್ಯಜೋಪ್ಯಗ್ರಜೋ ವಾಪಿ ಮೂರ್ಖೋ ವಾ ಪಂಡಿತೋಪಿ ವಾ
ಪಂಚಾಕ್ಷರೀಂ ಜಪೇನ್ನಿತ್ಯಂ ಸ ರುದ್ರೋ ನಾತ್ರ ಸಂಶಯಃ
ಇಂತೆಂದುದಾಗಿ,
ಇದು ಸತ್ಯ, ಇದು ಸತ್ಯ, ಇದು ಸತ್ಯ ಜಪಿಸುವುದು,
ಶಪಥ ಮಾಡಿದೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. |
1272.06 |
66 A66 |
ಉರಿಲಿಂಗಪೆದ್ದಿ | ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ ಲಿಂಗಲೀಲಾವಿಲಾಸ ಚಾರಿತ್ರ 144‖65
|
ಓಂ ನಮಃ ಶಿವಾಯ ಎಂಬುದೆ ವೇದ, ಓಂ ನಮಃ ಶಿವಾಯ ಎಂಬುದೆ ಶಾಸ್ತ್ರ, ಓಂ ನಮಃ ಶಿವಾಯ ಎಂಬುದೆ ಪುರಾಣ, ಓಂ ನಮಃ ಶಿವಾಯ ಎಂಬುದೆ ಆಗಮ, ಓಂ ನಮಃ ಶಿವಾಯ ಎಂಬುದೆ ಸಕಲಕಲೆ. ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂದೆನಲು ಸರ್ವಜ್ಞ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. |
1352.06 |
67 A67 |
ಉರಿಲಿಂಗಪೆದ್ದಿ | ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ವಶ್ಯವ ಬಲ್ಲೆವೆಂದೆಂಬಿರಯ್ಯಾ, ಬುದ್ಧಿಯನರಿಯದ ಮನುಜರು ಕೇಳಿರಯ್ಯಾ. ವಶ್ಯವಾವುದೆಂದರಿಯದೆ ಮರುಳುಗೊಂಬಿರಿ, ಎಲೆ ಗಾವಿಲ ಮನುಜರಿರಾ. ಓಂ ನಮಃ ಶಿವಾಯ ಎಂಬ ಮಂತ್ರ ಸರ್ವಜನವಶ್ಯ ಕೂಡಲಸಂಗಮದೇವಾ. |
78.01 |
68 A68 |
ಬಸವಣ್ಣ | ಕೂಡಲಸಂಗಮದೇವಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂಬುದೆ ಛಂದ. . ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂಬುದೆ ಋಷಿ ತಾನು. ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂಬುದೆ ಅಧಿದೇವತೆ. ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂದೆನಲು ಸದ್ಯೋನ್ಮುಕ್ತಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ |
1350.06 |
69 A69 |
ಉರಿಲಿಂಗಪೆದ್ದಿ | ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಅಕಟಕಟಾ ಬೆಡಗು ಬಿನ್ನಾಣವೆಂಬುದೇನೊ ! ಓಂ ನಮಃ ಶಿವಾಯ ಎಂಬುದೇ ಮಂತ್ರ, ಓಂ ನಮಃ ಶಿವಾಯ ಎಂಬುದೇ ತಂತ್ರ, ನಮ್ಮ ಕೂಡಲಸಂಗಮದೇವರ ನೆನೆವುದೆ ಮಂತ್ರ. |
77.01 |
70 A70 |
ಬಸವಣ್ಣ | ಕೂಡಲಸಂಗಮದೇವಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಟಿಪ್ಪಣಿ; * ಪುಟ ಸಂಖ್ಯೆ ‖ ವಚನ ಸಂಖ್ಯೆ [ಮೊದಲ ಪುಟ] 1 2 3 4 5 6 7 8 9 10 ಮುಂದಿನ 10 » [ಕೊನೆ ಪುಟ]
ಸಿಕ್ಕ ಪಲಿತಾಂಶಗಳು 427 ಇದು ಪುಟ 7 ಈ ಪುಟದಲ್ಲಿ ಪಲಿತಾಂಶಗಳು 61 ರಿಂದ 70 ವರೆಗೆ |
|
|