checking data baseConnected successfully! Sample Image
  •  

ವಚನ ಆಕರಗಳು (15ನೆ ಶತಮಾನ)

search:
search:
ಮಹಾಕಾಲದಲ್ಲಿ ನಿಮ್ಮಿಂದ ನೀವೆ ಸ್ವಯಂಭುವಾಗಿರ್ದಿರಯ್ಯಾ
ಒಂದನಂತಕಾಲ.
ಮಹವು ಮಹಾನಂದದಲಕ್ಕಾಡಿ, ಮತ್ತಲ್ಲಿಯೆ ಲೀಯವಾಗಿರ್ದುದು
ಒಂದನಂತಕೋಟಿ ವರುಷ
ಕೂಡಲಚೆನ್ನಸಂಗಮದೇವ ವಿಪರೀತಚಾರಿತ್ರ.
1464.03 281
B16
ಚೆನ್ನಬಸವಣ್ಣ ಕೂಡಲಚೆನ್ನಸಂಗಮದೇವ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 1708
ತನಗೆ ತಾನೆ ಹುಟ್ಟಿದನಾಗಿ, ತಾನೆ ಸ್ಥಾವರವಾದ ಆ ಲಿಂಗವು,
ತನ್ನಲ್ಲಿರ್ದ ರುಚಿಯ ಅವ್ಯಕ್ತಕ್ರೀಯಿಂದ
ಮನವೆ ಬಾಯಾಗಿ ಉಂಬ ಲಿಂಗವು,
ಇತರರ ಸುಖವ ಬಲ್ಲುದೆ, ಕೂಡಲಚೆನ್ನಸಂಗಮದೇವಾ
1238.03 282
B17
ಚೆನ್ನಬಸವಣ್ಣ ಕೂಡಲಚೆನ್ನಸಂಗಮದೇವಾ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 1809
ತಾಯಿ_ತಂದೆಯಿಲ್ಲದ ಕಂದಾ,
ನಿನಗೆ ನೀನೆ ಹುಟ್ಟಿ ಬೆಳೆದೆಯಲ್ಲಾ !
ನಿನ್ನ ಪರಿಣಾಮವೆ ನಿನಗೆ ಪ್ರಾಣತೃಪ್ತಿಯಾಗಿರ್ದೆಯಲ್ಲಾ !
ಭೇದಕರಿಗೆ ಅಭೇದ್ಯನಾಗಿ ನಿನ್ನ ನೀನೆ ಬೆಳಗುತ್ತಿರ್ದೆಯಲ್ಲಾ !
ನಿನ್ನ ಚರಿತ್ರ ನಿನಗೆ ಸಹಜ ಗುಹೇಶ್ವರಾ
1249.02 283
B18
ಅಲ್ಲಮ ಗುಹೇಶ್ವರಾ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 1810
ಕಾಲ ಕಲ್ಪಿತಂಗಳಿಲ್ಲದೆ ನಿಮ್ಮಿಂದ ನೀವೇ ಸ್ವಯಂಭುವಾಗಿರ್ದಿರಯ್ಯಾ.
ನಿಮ್ಮ ಪರಮಾನಂದ ಪ್ರಭಾವದ ಪರಿಣಾಮದಲ್ಲಿ ಅನಂತಕಾಲವಿರ್ದಿರಲ್ಲಾ !
ನಿಮ್ಮ ಆದ್ಯಂತವ ನೀವೇ ಅರಿವುತಿದ್ದಿರಲ್ಲಾ,
ನಿಮ್ಮ ನಿಜದುದಯವ ನೀವೇ ಬಲ್ಲಿರಿ
ಕೂಡಲಚೆನ್ನಸಂಗಮದೇವಾ
1115.03 284
B19
ಚೆನ್ನಬಸವಣ್ಣ ಕೂಡಲಚೆನ್ನಸಂಗಮದೇವಾ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 1911
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಪರಮೇಶ್ವರರೆಂಬ ಸಂದಣಿ
ತಲೆದೋರದ ಮುನ್ನ_ಅಲ್ಲಿಂದತ್ತ ಬಯಲೆ ಸ್ವರೂಪವಾಯಿತ್ತು.
ಆ ಸ್ವರೂಪಿನ ಘನತೆಯ ಉಪಮಿಸಬಾರದು.
ನೋಡಬಾರದ ಬೆಳಗು, ಕೂಡಬಾರದ ಮೂರ್ತಿ,
ಅಖಂಡ ಅಪ್ರತಿಮ ನಮ್ಮ ಗುಹೇಶ್ವರಲಿಂಗದ ಬೆಳ(ಬೆಡ?)ಗಿನ ಮೂಲವ
ಲಿಂಗಸಂಗಿಗಳಲ್ಲದೆ ಮಿಕ್ಕಿನ ಅಂಗವಿಕಾರಿಗಳೇನ ಬಲ್ಲರೊ ?
1405.02 285
B20
ಅಲ್ಲಮ ಗುಹೇಶ್ವರ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 1920
«ಲಿ» ಕಾರವೆ ಶೂನ್ಯ, ಬಿಂದುವೆ ಲೀಲೆ, «ಗ» ಕಾರವೆ ಚಿತ್ತು.
ಈ ತ್ರಿವಿಧದೊಳಗಿದೆ ಲಿಂಗವೆಂಬ ಸಕೀಲ.
ಇದರ ಸಂಚವನಾವಾತ ಬಲ್ಲ ಆತನೆ ಲಿಂಗಸಂಗಿ.
ಇದು ಕಾರಣ ಲಿಂಗಾನುಭವಿಗಳ ಶ್ರೀಚರಣಕ್ಕೆ
ನಮೋ ನಮೋ ಎಂಬೆ ಕೂಡಲಚೆನ್ನಸಂಗಮದೇವಾ
1547.03 286
B21
ಚೆನ್ನಬಸವಣ್ಣ ಕೂಡಲಚೆನ್ನಸಂಗಮದೇವಾ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 2013
ಲಿಂಗವೆಂಬುದು ಪರಶಕ್ತಿಯುತ ಪರಶಿವನ ನಿಜದೇಹ,
ಲಿಂಗವೆಂಬುದು ಪರಶಿವನ ಘನತೇಜ,
ಲಿಂಗವೆಂಬುದು ಪರಶಿವನ ನಿರತಿಶಯಾನಂದಸುಖವು,
ಲಿಂಗವೆಂಬುದು ಪರಶಿವನ ಪರಮಜ್ಞಾನ,
ಲಿಂಗವೆಂಬುದು ಷಡಧ್ವಮಯ ಜಗಜ್ಜನ್ಮಭೂಮಿ,
ಲಿಂಗವೆಂಬುದು ಅಖಂಡಿತವೇದ ಪಂಚಸಂಜ್ಞೆ,
ಲಿಂಗವೆಂಬುದು ತಾ ಹರಿಬ್ರಹ್ಮರ ನಡುಮನೆಗಳ ಜ್ಯೋತಿರ್ಲಿಂಗ,
ಅಖಿಲಾರ್ಣವಾ ಲಯಾನಾಂ ಲಿಂಗಂ ಮುಖ್ಯಂ ಪರಂ ತಥಾ
ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾದಿವತ್
ಯದಾದ್ಯಮೈಶ್ವರಂ ತೇಜಸ್ತಲ್ಲಿಂಗಂ ಪಂಚಸಂಜ್ಞಕಂ
ಎಂದಿದು ಲಿಂಗದ ಮರ್ಮ.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
ಲಿಂಗದೊಳಿದ ತಿಳಿಯಬಲ್ಲವನೇ ಬಲ್ಲವನು.
1524.06 287
B22
ಉರಿಲಿಂಗಪೆದ್ದಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 2014
ಚಿತ್ತುವೆಂಬ ಬಿತ್ತು ಬಲಿದು ಎರಡಾದಲ್ಲಿ,
ಲಿಂಗವೆಂಬ ಕಳೆ ಅಂಕುರಿಸಿ ಮೂರ್ತಿಯಾಯಿತ್ತು.
ಆ ಮೂರ್ತಿಯ ಘನತೆಯ ಏನೆಂದೂ ಉಪಮಿಸಬಾರದು !
ನೋಡಿದಡೆ ಮೂರ್ತಿ ಹಿಡಿದಡೆ ಬಯಲು !
ಆ ಮೂರ್ತಿಯೊಳಗದೆ ಈರೇಳು ಲೋಕದ ಪ್ರಾಣಕಳೆ.
ಆ ಕಳೆಯ ಬೆಳಗು ತಾನೆ ನಮ್ಮ ಗುಹೇಶ್ವರಲಿಂಗದಲ್ಲಿ
ಲೀಲಾಮೂಲದ ಪ್ರಥಮ ಭಿತ್ತಿ.
1187.02 288
B23
ಅಲ್ಲಮ ಗುಹೇಶ್ವರ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 3001
ಮರನೊಳಗಣ ಪತ್ರೆ ಫಲಂಗಳು, ಮರಕಾಲವಶದಲ್ಲಿ ತೋರುವಂತೆ,
ಹರನೊಳಗಣ ಪ್ರಕೃತಿಸ್ವಭಾವಂಗಳು, ಹರಭಾವದಿಚ್ಛೆಗೆ
ತೋರುವವು.
ಲೀಲೆಯಾದಡೆ ಉಮಾಪತಿ, ಲೀಲೆ ತಪ್ಪಿದಡೆ ಸ್ವಯಂಭು ಗುಹೇಶ್ವರಾ.
145.02 289
B24
ಅಲ್ಲಮ ಗುಹೇಶ್ವರಾ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 3102
ಶಿವಶಕ್ತಿ ಸಂಪುಟವೆಂಬುದೆಂತು ಹೇಳಿರಣ್ಣಾ;
ಶಿವನೆ ಚೈತನ್ಯಾತ್ಮಕನು, ಶಕ್ತಿಯೆ ಚಿತ್ತು.
ಇಂತು_ಚೈತನ್ಯಾತ್ಮಕನೆ ಚಿತ್‍ಸ್ವರೂಪನೆಂದರಿಯ ಬಲ್ಲಡೆ
ಆತನೆ ಶರಣ ಗುಹೇಶ್ವರಾ.
589.02 290
B25
ಅಲ್ಲಮ ಗುಹೇಶ್ವರಾ
ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 3103

ಟಿಪ್ಪಣಿ; * ಪುಟ ಸಂಖ್ಯೆವಚನ ಸಂಖ್ಯೆ

[ಮೊದಲ ಪುಟ]  « ಹಿಂದಿನ 1021222324252627282930ಮುಂದಿನ 10 » [ಕೊನೆ ಪುಟ]


ಸಿಕ್ಕ ಪಲಿತಾಂಶಗಳು 427 ಇದು ಪುಟ 29 ಈ ಪುಟದಲ್ಲಿ ಪಲಿತಾಂಶಗಳು 281 ರಿಂದ 290 ವರೆಗೆ