checking data baseConnected successfully! Sample Image
  •  

ವಚನ ಆಕರಗಳು (15ನೆ ಶತಮಾನ)

search:
search:
ಒಡೆಯರು ಬಂದಡೆ ಗುಡಿ ತೋರಣವ ಕಟ್ಟಿ,
ನಂಟರು ಬಂದಡೆ ಸಮಯವಿಲ್ಲೆನ್ನಿ.
ಅಂದೇಕೆ ಬಾರರು
ನೀರಿಂಗೆ ನೇಣಿಂಗೆ ಹೊರಗಾದಂದು, ಸಮಯಾಚಾರಕ್ಕೆ ಒಳಗಾದಂದು.
ಪರುಷ ಮುಟ್ಟಲು ಕಬ್ಬುನ ಸುವರ್ಣವಾಯಿತ್ತು.
ಬಳಿಕ ಬಂಧುಗಳುಂಟೆ, ಕೂಡಲಸಂಗಮದೇವಾ
449.01 191
A191
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಪೂರ್ವಾಶ್ರಯ ಪೂರ್ವಾಶ್ರಯವೆಂದೆಂಬರು,
ಪೂರ್ವಾಶ್ರಯವಾವುದೆಂದರಿಯರು.
ಪೂರ್ವವೆಂಬುದೆ ಬಂದ ಬಟ್ಟೆ, ಆಶ್ರಯವೆಂಬುದೆ ಕರಣಾದಿ ಗುಣಂಗಳು.
ಈ ಉಭಯವಳಿದು ಕೂಡಲಚೆನ್ನಸಂಗನಲ್ಲಿಪ್ಪ
ಶರಣಂಗೆ ಶರಣೆಂಬೆ.
569.03 192
A192
ಚೆನ್ನಬಸ‌ವಣ್ಣ ಕೂಡಲಚೆನ್ನಸಂಗ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಇದು ವಚನ ಸಂಪುಟದಲ್ಲಿ ಇಲ್ಲ 4.00 193
A193
ಸೊಡ್ಡಳಬಾಚರಸ ಸೊಡ್ಡಳ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ
ರಾಗ ದ್ವೇಷವೆನಿಪ ಒಡಲಿರೆ,
ರಾಗ ದ್ವೇಷ ಗಮಾನಾಗಮನಂಗಳಿರುತ್ತಿರೆ,
ಬ್ರಹ್ಮವಾನೆಂಬ ಬರಿಯ ವಾಗದ್ವೈತದಲ್ಲಿ ಫಲವಿಲ್ಲ.
ನಂಬು, ಸುಖಸಾಗರವನ?,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ.
1357.06 194
A194
ಉರಿಲಿಂಗಪೆದ್ದಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಶೂನ್ಯವ ನುಡಿದು ದುರ್ಗತಿಗಿಳಿದವರ,
ಅದ್ವೈತವ ನುಡಿದು ಅಹಂಕಾರಿಗಳಾದವರ,
ಬ್ರಹ್ಮವ ನುಡಿದು ಭ್ರಮಿತರಾದವರ,
ತ್ರಿಕಾಲ ಲಿಂಗಪೂಜೆಯ ಮಾಡದವರ
ಬ್ರಹ್ಮದ ಅನವರತ ಮಾತ ಕೇಳಿ
ಹಿಡಿದ ವ್ರತನೇಮಗಳ ಬಿಡುವವರ_
ಈ ದುರಾಚಾರಿಗಳ ಮೆಚ್ಚ, ಕೂಡಲಚೆನ್ನಸಂಗಾ ನಿಮ್ಮ ಶರಣ
1611.03 195
A195
ಚೆನ್ನಬಸವಣ್ಣ ಕೂಡಲಚೆನ್ನಸಂಗಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಅದ್ವೈತಿಗಳು ಲಿಂಗಾರಾಧನೆ ಹುಸಿಯೆಂದು ಬುದ್ಧಿಗೆಟ್ಟರು
ಆಗಮವನರಿಯದೆ ಬೊಮ್ಮನ ನೆರೆದಡೆ
ಬ್ರಹ್ಮನ ಶಿರವ ಕೊಂಡುದನರಿಯಿರೊ !
ಬೊಮ್ಮವಾದಿಗಳೆಲ್ಲ ಲಿಂಗಕ್ಕೆ ದೂರವಾದರು.
ನಮ್ಮ ಕೂಡಲಚೆನ್ನಸಂಗನ ಶರಣರು ಜಗದ್ವಂದ್ಯರಾದರು.
898.03 196
A196
ಚೆನ್ನಬಸವಣ್ಣ ಕೂಡಲಚೆನ್ನಸಂಗ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಹೊನ್ನ ತೂಗಿದ ತ್ರಾಸುಕಟ್ಟಳೆ ಹೊನ್ನಿಂಗೆ ಸರಿಯುಪ್ಪುದೆ?
ಸನ್ನಹಿತರಾದೆವೆಂಬ ನುಡಿಗೆ ನಾಚರು ನೋಡಾ,
ಕನ್ನದಲಿ ಸವೆದ ಕಬ್ಬುನದಂತೆ,
ಮುನ್ನ ಹೋದ ಹಿರಿಯರು ಲಿಂಗದ ಸುದ್ದಿಯನರಿಯರು.
ಇನ್ನಾರು ಬಲ್ಲರು ಹೇಳಾ ಗುಹೇಶ್ವರಾ?
490.02 197
A197
ಅಲ್ಲಮ ಗುಹೇಶ್ವರಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಬಯಲಬೊಮ್ಮವ ನುಡಿವ,
ಆ ನುಡಿಯ ಬಯಲಭ್ರಮೆಯಲ್ಲಿ ಬಿದ್ದ ಜಡರುಗಳು
ಬಲ್ಲರೆ, ಶಿವನಡಿಗಳ?
ಗುರುಲಿಂಗಜಂಗಮದ ಪಾದೋದಕ ಪ್ರಸಾದವೆಂಬ
ಪರಮಾಮೃತವ ಸವಿದು, ಪರವಶನಾದ ಪರಮಮುಗ್ಧಂಗಲ್ಲದೆ
ಪರವು ಸಾಧ್ಯವಾಗದು,
ಮಹಾಲಿಂಗ ಕಲ್ಲೇಶ್ವರನ ಶರಣ ಪೂರ್ವಾಚಾರಿ ಬಸವಣ್ಣಂಗಲ್ಲದೆ.
1157.09 198
A198
ಹಾವಿನಾಳಕಲ್ಲಯ್ಯ ಮಹಾಲಿಂಗ ಕಲ್ಲೇಶ್ವರ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಆಧಾರ ಸ್ವಾಧಿಷ್ಠಾನ ಮಣಿಪೂರಕ
ವಿಶುದ್ಧಿ ಆಜ್ಞೇಯವ ನುಡಿದಡೇನು
ಆದಿ ಅನಾದಿಯ ಸುದ್ದಿಯ
ಕೇಳಿದಡೇನು ಹೇಳಿದಡೇನು
ತನ್ನಲ್ಲಿದ್ದುದ ತಾನರಿಯದನ್ನಕ್ಕರ.
ಉನ್ಮನಿಯ ರಭಸದ ಮನ ಪವನದ ಮೇಲೆ ಚೆನ್ನಮಲ್ಲಿಕಾರ್ಜುನಯ್ಯನ
ಭೇದಿಸಲರಿಯರು.
60.05 199
A199
ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ನಡೆ ನುಡಿ ಚೈತನ್ಯಹರಣವುಳ್ಳನ್ನಕ್ಕ ಕ್ರೀಯೆಂತಂತೆ ನಡೆವುದು.
ಉರವಣೆ ಬೇಡ ಕಂಡಾ ಮನವೆ.
ಹೂಮಿಡಿ ಹರಿದಡೆ, ಹಣ್ಣಹವೆ, ಎಲೆ ಮರುಳೆ?
ಲಿಂಗದಲ್ಲಿ ಮನ ಲೀಯವಾಗದನ್ನಕ್ಕ ಸಕಳೇಶ್ವರದೇವ ಮೆಚ್ಚುವನೆ?
439.09 200
A200
ಸಕಳೇಶಮಾದರಸ ಸಕಳೇಶ್ವರದೇವ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ

ಟಿಪ್ಪಣಿ; * ಪುಟ ಸಂಖ್ಯೆವಚನ ಸಂಖ್ಯೆ

[ಮೊದಲ ಪುಟ]  « ಹಿಂದಿನ 1011121314151617181920ಮುಂದಿನ 10 » [ಕೊನೆ ಪುಟ]


ಸಿಕ್ಕ ಪಲಿತಾಂಶಗಳು 427 ಇದು ಪುಟ 20 ಈ ಪುಟದಲ್ಲಿ ಪಲಿತಾಂಶಗಳು 191 ರಿಂದ 200 ವರೆಗೆ