ವಚನ ಆಕರಗಳು (15ನೆ ಶತಮಾನ)
ಎನಗೆ ನಿಮ್ಮ ನೆನಹಾದಾಗ ಉದಯ,
ಎನಗೆ ನಿಮ್ಮ ಮರಹಾದಾಗ ಅಸ್ತಮಾನ.
ಎನಗೆ ನಿಮ್ಮ ನೆನೆಹವೆ ಜೀವನ,
ಎನಗೆ ನಿಮ್ಮ ನೆನಹವೆ ಪ್ರಾಣ, ಕಾಣಾ ತಂದೆ.
ಸ್ವಾಮಿ, ಎನ್ನ ಹೃದಯದಲ್ಲಿ ನಿಮ್ಮ ಚರಣದುಂಡಿಗೆಯನೊತ್ತಯ್ಯಾ,
ವದನದಲಿ ಷಡಕ್ಷರಿಯ ಬರೆಯಯ್ಯಾ ಕೂಡಲಸಂಗಮದೇವಾ |
498.01 |
171 A171 |
ಬಸವಣ್ಣ | ಕೂಡಲಸಂಗಮದೇವಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ನೆನಹಿನ ನಲ್ಲನು ಮನೆಗೆ ಬಂದಡೆ ನೆನೆವುದಿನ್ನಾರ ಹೇಳವ್ವಾ.
ನೆರೆವ ಕ್ರೀಯಲ್ಲಿ ಸುಖಿಸುವದಲ್ಲದೆ, ನೆನೆವುದಿನ್ನಾರ ಹೇಳವ್ವಾ.
ನೆನೆದೆನೆಂಬ ಭರವೇಕವ್ವಾ.
ಮಹಾಲಿಂಗ ಗಜೇಶ್ವರದೇವರ ಕಂಡಲ್ಲಿ ಅಗಲಿದಡೆ
ಕರೆಗೊಂಬಲ್ಲಿ ನಾನೇನು ಕಲುಮನದವಳೆ ಕೇಳವ್ವಾ. |
234.07 |
172 A172 |
ಗಣೇಶಮಸಣಯ್ಯ | ಮಹಾಲಿಂಗ ಗಜೇಶ್ವರದೇವ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಎತ್ತೆತ್ತ ನೋಡಿದಡತ್ತತ್ತ ನಿಮ್ಮನೆ ಕಾಬೆ.
ಎದ್ದು ನೋಡಿ ನಿಮ್ಮನೆ ಕಾಬೆ, ನಿದ್ರೆಗೆಯ್ದು ನಿಮ್ಮನೆ ಕಾಬೆ.
ಅಹೋರಾತ್ರಿಯಲ್ಲಿ ನಿಮ್ಮ ಧ್ಯಾನದಲ್ಲಿರಿಸು, ಮಹಾಲಿಂಗ ಕಲ್ಲೇಶ್ವರಾ |
1117.09 |
173 A173 |
ಹಾವಿನಾಳಕಲ್ಲಯ್ಯ | ಮಹಾಲಿಂಗ ಕಲ್ಲೇಶ್ವರಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಮನಕ್ಕೆ ಮನೋಹರವಲ್ಲದ ಗಂಡರು
ಮನಕೆ ಬಾರರು, ಕೇಳವ್ವಾ ಕೆಳದೀ,
ಪನ್ನಗಭೂಷಣರಲ್ಲದ ಗಂಡರು
ಇನ್ನೆನಗಾಗದ ಮೊರೆ, ನೋಡವ್ವಾ.
ಕನ್ನೆಯಂದಿನ ಕೂಟ, ಚಿಕ್ಕಂದಿನ ಬಾಳುವೆ,
ನಿಮ್ಮಾಣೆಯಯ್ಯಾ, ಕೂಡಲಸಂಗಮದೇವಾ |
503.01 |
174 A174 |
ಬಸವಣ್ಣ | ಕೂಡಲಸಂಗಮದೇವಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ತಂದೆ ನೀನು ತಾಯಿ ನೀನು, ಬಂಧು ನೀನು ಬಳಗ ನೀನು.
ನೀನಲ್ಲದೆ ಮತ್ತಾರೂ ಇಲ್ಲಯ್ಯಾ,
ಕೂಡಲಸಂಗಮದೇವಾ,
ಹಾಲಲದ್ದು, ನೀರಲದ್ದು. |
481.01 |
175 A175 |
ಬಸವಣ್ಣ | ಕೂಡಲಸಂಗಮದೇವಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ವಾರವೆಂದರಿಯೆ, ದಿನವೆಂದರಿಯೆ,
ಏನೆಂದರಿಯೆನಯ್ಯಾ.
ಇರುಳೆಂದರಿಯೆ, ಹಗಲೆಂದರಿಯೆ,
ಏನೆಂದರಿಯೆನಯ್ಯಾ.
ನಿಮ್ಮ ಪೂಜಿಸಿ ಎನ್ನುವ ಮರೆದೆ
ಕೂಡಲಸಂಗಮದೇವಾ.
|
490.01 |
177 A177 |
ಬಸವಣ್ಣ | ಕೂಡಲಸಂಗಮದೇವಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಮಚ್ಚಿ ಗ್ರಾಹಿಗೊಂಡೆನು ನಿಮಗಾನು,
ನಲ್ಲನೆ, ಒಚ್ಚತವೋದವಳನುಳಿವರೆ?
ವಿಕಳಗೊಂಡೆನು ಶಿವಶಿವಾ,
ಪ್ರಾಣಪದವಲ್ಲದೆ ಮತ್ತೊಂದನರಿಯೆನು
ಮನ ವಚನ ಕಾಯದಲ್ಲಿ.
ಉಚಿತವೆ ನಿಮಗೆ? ಪುರುಷಲಕ್ಷಣವೆ?
ಅತಃಪರಗಂಡರ ನಾನು ಬಲ್ಲಡೆ ಕರ್ತು ನಿಮ್ಮಾಣೆಯಯ್ಯಾ
ಶಂಭುಜಕ್ಕೇಶ್ವರಾ. |
1227.05 |
178 A178 |
ಸತ್ಯಕ್ಕ | ಶಂಭುಜಕ್ಕೇಶ್ವರಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ನಲ್ಲನ ಕೂಡುವ ಸುಖಭೋಗದ್ರವ್ಯವನೆಲ್ಲಿಂದ ತಪ್ಪೆನು ಹೇಳಾ ಕೆಳದಿ?
ನಲ್ಲನ ಬೇಡಲು ನಾಚಿಕೆ ಎನಗೆ, ಮತ್ತೆಲ್ಲಿಯು ನಿಲ್ಲೆನು.
ಕೂಡುವ [ಶಕ್ತಿ]ಯ ತಾನರಿದಿಹನು ಕೇಳಾ ಕೆಳದಿ.
ಹೆಣ್ಣು ಹೆಣ್ಣ ಕೂಡುವ ಸುಖವ ಮಣ್ಣಿನಲ್ಲಿ ನೆರಹುವೆನು,
ಉರಿಲಿಂಗದೇವನ ಕೂಡುವೆನು. |
1249.06 |
179 A179 |
ಉರಿಲಿಂಗದೇವ | ಉರಿಲಿಂಗದೇವ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ನಲ್ಲನ ಕೂಡೆಹೆನೆಂದು ನೆನೆವನ್ನಬರ
ತವಕದಿಂದ ಮೇಲುವಾಯ್ದೆ ನೋಡವ್ವಾ.
ಮನದೊಳಗೆ ಮನವಾಗಿ, ಪ್ರಾಣದೊಳಗೆ ಪ್ರಾಣವಾಗಿ,
ಕಾಯದೊಳಗೆ ಕಾಯವಾಗಿ,
ತವಕಕ್ಕೆ ತವಕ ಮಿಗೆ ಮೇಲುವರಿದು ಕೂಡಿದಂತೆ
ಕೂಡುವೆ ಉರಿಲಿಂಗದೇವನ. |
1250.06 |
180 A180 |
ಉರಿಲಿಂಗದೇವ | ಉರಿಲಿಂಗದೇವ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಟಿಪ್ಪಣಿ; * ಪುಟ ಸಂಖ್ಯೆ ‖ ವಚನ ಸಂಖ್ಯೆ [ಮೊದಲ ಪುಟ] « ಹಿಂದಿನ 10 11 12 13 14 15 16 17 18 19 20 ಮುಂದಿನ 10 » [ಕೊನೆ ಪುಟ]
ಸಿಕ್ಕ ಪಲಿತಾಂಶಗಳು 427 ಇದು ಪುಟ 18 ಈ ಪುಟದಲ್ಲಿ ಪಲಿತಾಂಶಗಳು 171 ರಿಂದ 180 ವರೆಗೆ |
|
|