ವಚನ ಆಕರಗಳು (15ನೆ ಶತಮಾನ)
ಗುರುವೊಂದೆ ಬಸಿರು, ಲಿಂಗ ಒಂದೆ ಬಸಿರು
ಜಂಗಮ ಒಂದೆ ಬಸಿರು ಪ್ರಸಾದ ಒಂದೆ ಬಸಿರು
ಇದನಾರಯ್ಯಾ ಅಮಳೋಕ್ಯವ ಮಾಡಿ ತೋರಿದವರು?
ಇದನಾರಯ್ಯಾ ಪ್ರಜ್ವಲಿತವ ಮಾಡಿ ಬೇರೆ ತೋರಿದವರು.?
ಪೂರ್ವಾಚಾರಿ ಭಕ್ತಿಭಾಂಡಾರಿ ಬಸವಣ್ಣಾ
ಎನಗೆ ನೀನು ಗುಹೇಶ್ವರಲಿಂಗವ ತೋರಿದೆಯಾಗಿ
ಲೋಕಾದಿಲೋಕವೆಲ್ಲವು ಎನಗೆ ಕಿಂಚಿತ್. |
1173.02 |
121 A121 |
ಅಲ್ಲಮ | ಗುಹೇಶ್ವರಲಿಂಗ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಲಿಂಗಸ್ಥಲವಿಲ್ಲದವರ ಭಕ್ತರೆಂಬೆ,
ಗುರುಸ್ಥಲವಿಲ್ಲದವರ ಪ್ರಸಾದಿಗಳೆಂಬೆ (ಶಿಷ್ಯರೆಂಬೆ?),
ಪ್ರಸಾದಿಸ್ಥಲವಿಲ್ಲದವರ ಜಂಗಮವೆಂಬೆ,
ಈ ತ್ರಿವಿಧಸ್ಥಲವಿಲ್ಲದವರ ಶರಣರೆಂಬೆ.
ಇದು ಕಾರಣ, ಕೂಡಲಚೆನ್ನಸಂಗನಲ್ಲಿ
ಭವಿಸಹಿತವಾಗಿದ್ದಾತನ ಲಿಂಗೈಕ್ಯನೆಂಬೆ. |
778.03 |
122 A122 |
ಚೆನ್ನಬಸವಣ್ಣ | ಕೂಡಲಚೆನ್ನಸಂಗ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಶ್ರೀಗುರು ಲಿಂಗ ಜಂಗಮಕ್ಕೆ ಅರ್ಚನೆ ಪೂಜನೆ ದಾಸೋಹವನು
ಧರ್ಮವ ಕಾಮಿಸಿ ಮಾಡಿದರೆ ಧರ್ಮವಪ್ಪುದು,
ಅರ್ಥವ ಕಾಮಿಸಿ ಮಾಡಿದರೆ ಅರ್ಥವಪ್ಪುದು,
ಕಾಮವ ಕಾಮಿಸಿ ಮಾಡಿದರೆ ಕಾಮವಪ್ಪುದು,
ಮೋಕ್ಷವ ಕಾಮಿಸಿ ಮಾಡಿದರೆ ಮೋಕ್ಷವಪ್ಪುದು,
ಸಾಲೋಕ್ಯವ ಕಾಮಿಸಿ ಮಾಡಿದರೆ ಸಾಲೋಕ್ಯವಪ್ಪುದು,
ಸಾಮೀಪ್ಯವ ಕಾಮಿಸಿ ಮಾಡಿದರೆ ಸಾಮೀಪ್ಯವಪ್ಪುದು
ಸಾರೂಪ್ಯವ ಕಾಮಿಸಿ ಮಾಡಿದರೆ ಸಾರೂಪ್ಯವಪ್ಪುದು,
ಸಾಯುಜ್ಯವ ಕಾಮಿಸಿ ಮಾಡಿದರೆ ಸಾಯುಜ್ಯವಪ್ಪುದು,
ಕಾಮಧೇನುವ ಕಾಮಿಸಿ ಮಾಡಿದರೆ ಕಾಮಧೇನುವಪ್ಪುದು,
ಕಲ್ಪತರುವ ಕಾಮಿಸಿ ಮಾಡಿದರೆ ಕಲ್ಪತರುವಪ್ಪುದು,
ಪರುಷವ ಕಾಮಿಸಿ ಮಾಡಿದರೆ ಪರುಷವಪ್ಪುದು,
ಆವುದನಾವುದ ಕಾಮಿಸಿದರೆ ಕಾಮಿಸಿದ ಫಲ ತಪ್ಪದು.
ಕಾಮಿಸದ ನಿಷ್ಕಾಮದಾಸೋಹ
ಕೂಡಲಚನ್ನಸಂಗಾ ನಿಮ್ಮ ಶರಣಂಗೆ. |
122.03 |
123 A123 |
ಚೆನ್ನಬಸವಣ್ಣ | ಕೂಡಲಚನ್ನಸಂಗಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಹೊಡವಡಲೇಕೆ, ಹಿಡಿದು ಪೂಜಿಸಲೇಕೆ,
ಎಡೆಯಾಡಲೇಕೆ ದೇಗುಲಕ್ಕಯ್ಯಾ?
ಬಡವರಂಧಕರಿಂಗೆ ಒಡಲಿಗನ್ನವನಿಕ್ಕಿದಡೆ,
ಹೊಡವಂಟನಾದ ಮೂರು ಲೋಕಕ್ಕೆ[ಯಿದೆ].
ಬಡವರಂಧಕರಿಗೆ ಒಡಲಿಗನ್ನವನಿಕ್ಕದಿದ್ದರೆ,
ಹೊಡೆವಡಲಿಕೆ ಹುರುಳಿಲ್ಲವೆಂದನಂಬಿಗ ಚೌಡಯ್ಯ. |
288.06 |
125 A125 |
ಅಂಬಿಗರಚೌಡಯ್ಯ | ಅಂಬಿಗರ ಚೌಡಯ್ಯ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ದೇಹಾರವ ಮಾಡುವಣ್ಣಗಳಿರಾ, ಒಂದು ತುತ್ತು ಆಹಾರವನಿಕ್ಕಿರೆ.
ದೇಹಾರಕ್ಕೆ ಆಹಾರವೆ ನಿಚ್ಚಣಿಗೆ.
ದೇಹಾರವ ಮಾಡುತ್ತ ಆಹಾರವನಿಕ್ಕದಿರ್ದಡೆ, ಆ ಹರನಿಲ್ಲೆಂದನಂಬಿಗ
ಚೌಡಯ್ಯ.
|
166.06 |
126 A126 |
ಅಂಬಿಗರಚೌಡಯ್ಯ | ಅಂಬಿಗರ ಚೌಡಯ್ಯ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಗಾಳಿಯ ಹಡೆದಲ್ಲಿ ತೂರಿಕೊಳ್ಳಯ್ಯಾ,
ಗಾಳಿ ನಿನ್ನಾಧೀನವಲ್ಲಯ್ಯಾ.
ನಾಳೆ ತೂರಿಹೆನೆಂದಡೆ ಇಲ್ಲಯ್ಯಾ.
ಶಿವಶರಣೆಂಬುದೊಂದು ಗಾಳಿಯ ಹಡೆದಲ್ಲಿ,
ಬೇಗ ತೂರೆಂದನಂಬಿಗ ಚೌಡಯ್ಯ. |
132.06 |
127 A127 |
ಅಂಬಿಗರಚೌಡಯ್ಯ | ಅಂಬಿಗರ ಚೌಡಯ್ಯ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಅನ್ನವನಿಕ್ಕಿದರೆ ಪುಣ್ಯವಹುದು, ವಸ್ತ್ರವ ಕೊಟ್ಟರೆ ಧರ್ಮವಹುದು,
ಹಣವ ಕೊಟ್ಟರೆ ಶ್ರೀಯಹುದು.
ತ್ರಿಕರಣ ಶುದ್ಧವಾಗಿ ನೆನದರೆ ಮುಕ್ತಿಯಹುದು,
ಕೂಡಲಚೆನ್ನಸಂಗಯ್ಯನ[ಲ್ಲಿ] |
56.03 |
128 A128 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಯ್ಯ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಮಾಡುವ ಭಕ್ತಂಗೆಯೂ ಕೊಡುವ ದೇವಂಗೆಯೂ
ಎಂದೆಂದಿಗೂ ಕೇಡಿಲ್ಲ.
ಮಾಡಿ ಭೋ, ಮಾಡಿ ಭೋ.
ಎನಗೆ ಲೇಸಾಯಿತ್ತು , ಹೋಯಿತ್ತೆಂಬ ಚಿಂತೆ ಬೇಡ,
ಇದಿತ್ತೆಂಬ ಸಂತೋಷ ಬೇಡ,
ಸಕಳೇಶ್ವರದೇವನವರನರಿದು ಸಲಹುವನಾಗಿ. |
462.09 |
129 A129 |
ಸಕಳೇಶಮಾದರಸ | ಸಕಳೇಶ್ವರದೇವ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಮರಕ್ಕೆ ಬೇರು ಬಾಯೆಂದು ತಳುಂಕೆ ನೀರನೆರೆದಡೆ
ಮೇಲೆ ಪಲ್ಲವಿಸಿತ್ತು ನೋಡಾ.
ಲಿಂಗದ ಬಾು ಜಂಗಮವೆಂದು ಪಡಿಪದಾರ್ಥವ ನೀಡಿದಡೆ
ಮುಂದೆ ಸಕಳಾರ್ಥವನೀವನು.
ಆ ಜಂಗಮವ ಹರನೆಂದು ಕಂಡು, ನರನೆಂದು ಭಾವಿಸಿದಡೆ
ನರಕ ತಪ್ಪದು, ಕಾಣಾ ಕೂಡಲಸಂಗಮದೇವಾ. |
421.01 |
130 A130 |
ಬಸವಣ್ಣ | ಕೂಡಲಸಂಗಮದೇವಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಟಿಪ್ಪಣಿ; * ಪುಟ ಸಂಖ್ಯೆ ‖ ವಚನ ಸಂಖ್ಯೆ [ಮೊದಲ ಪುಟ] « ಹಿಂದಿನ 10 11 12 13 14 15 16 17 18 19 20 ಮುಂದಿನ 10 » [ಕೊನೆ ಪುಟ]
ಸಿಕ್ಕ ಪಲಿತಾಂಶಗಳು 427 ಇದು ಪುಟ 13 ಈ ಪುಟದಲ್ಲಿ ಪಲಿತಾಂಶಗಳು 121 ರಿಂದ 130 ವರೆಗೆ |
|
|