checking data baseConnected successfully! Sample Image
  •  

ವಚನ ಆಕರಗಳು (15ನೆ ಶತಮಾನ)

search:
search:
ಕಾಳಿಯ ಕಂಕಾಳದಿಂದ ಮುನ್ನ
ತ್ರಿಪುರಸಂಹಾರದಿಂದ ಮುನ್ನ
ಹರಿ ವಿರಿಂಚಿಗಳಿಂದ ಮುನ್ನ
ಉಮೆಯ ಕಲ್ಯಾಣದಿಂದ ಮುನ್ನ
ಮುನ್ನ ಮುನ್ನ ಮುನ್ನ-
ಅಂದಿಂಗೆಳೆಯ ನೀನು ಹಳೆಯ ನಾನು
ಮಹಾದಾನಿ ಕೂಡಲಸಂಗಮದೇವಾ.
2.01 11
A11
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಮೂರ್ತಿಯ ಮುಂದಣ ಮೂವರದೇನೊ
ಸನಕ ಸನಂದಾದಿಗಳಿಂದತ್ತತ್ತಲು ನೋಡಾ.
ಕೂಡಲಸಂಗಮದೇವಾ
ನಾನಾಳು ನೀನಾಳ್ದ ಕಂಡಯ್ಯಾ.
1321.01 12
A12
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಅಯ್ಯಾ, ನೀನು ನಿರಾಕಾರವಾಗಿರ್ದಲ್ಲಿ
ನಾನು ಜ್ಞಾನವೆಂಬ ವಾಹನವಾಗಿರ್ದೆ ಕಾಣಾ.
ಅಯ್ಯಾ, ನೀನು ನಾಟ್ಯಕ್ಕೆ ನಿಂದಲ್ಲಿ
ನಾನು ಚೈತನ್ಯವೆಂಬ ವಾಹನವಾಗಿರ್ದೆ ಕಾಣಾ.
ಅಯ್ಯಾ, ನೀನು ಆಕಾರವಾಗಿರ್ದಲ್ಲಿ
ನಾನು ವೃಷಭನೆಂಬ ವಾಹನವಾಗಿರ್ದೆ ಕಾಣಾ,
ಅಯ್ಯಾ, ನೀನೆನ್ನ ಭವವ ಕೊಂದೆಹೆನೆಂದು
ಜಂಗಮಲಾಂಛನವಾಗಿ ಬಂದಡೆ
ನಾನು ಭಕ್ತನೆಂಬ ವಾಹನವಾಗಿರ್ದೆ ಕಾಣಾ
ಕೂಡಲಸಂಗಮದೇವಾ.
3.01 13
A13
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಅಯ್ಯಾ, ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ ಬಾರದಿರ್ದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ !
ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ.
ಪ್ರಥಮಭವಾಂತರದಲ್ಲಿ
ಶಿಲಾದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಭೃತ್ಯನ ಮಾಡಿ ಎನನ್ನಿರಿಸಿಕೊಂಡಿರ್ದಿರಯ್ಯಾ.
ಎರಡನೆಯ ಭವಾಂತರದಲ್ಲಿ
ಸ್ಕಂದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಕಾರುಣ್ಯವ ಮಾಡಿರಿಸಿಕೊಂಡಿರ್ದಿರಯ್ಯಾ.
ಮೂರನೆಯ ಭವಾಂತರದಲ್ಲಿ
ನೀಲಲೋಹಿತನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಲೀಲಾವಿನೋದದಿಂದಿರಿಸಿಕೊಂಡಿರ್ದಿರಯ್ಯಾ.
ನಾಲ್ಕನೆಯ ಭವಾಂತರದಲ್ಲಿ
ಮನೋಹರನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಮನಃಪ್ರೇರಕನಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಐದನೆಯ ಭವಾಂತರದಲ್ಲಿ
ಕಾಲಲೋಚನನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ಸರ್ವಕಾಲಸಂಹಾರವ ಮಾಡಿಸುತ್ತಿರ್ದಿರಯ್ಯಾ.
ಆರನೆಯ ಭವಾಂತರದಲ್ಲಿ
ವೃಷಭನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮಗೇರಲು ವಾಹನವಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಏಳನೆಯ ಭವಾಂತರದಲ್ಲಿ
ಬಸವದಣ್ಣಾಯಕನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಒಕ್ಕುದ ಮಿಕ್ಕುದಕ್ಕೆ ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಇದು ಕಾರಣ ಕೂಡಲಸಂಗಮದೇವಾ,
ನೀವು ಬರಿಸಿದ ಭವಾಂತರದಲ್ಲಿ ನಾನು ಬರುತಿರ್ದೆನಯ್ಯಾ.
4.01 14
A14
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಮಹದೇವಯ್ಯನ ಶೂನ್ಯಸಂಪಾದನೆ 1311
ಹಲಗೆಯಾರ್ಯನ ಶೂನ್ಯಸಂಪಾದನೆ 1201
ಅಯ್ಯಾ ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ
ನೆನೆದು ಸುಖಿಯಾಗಿ ಆನು ಬದುಕಿದೆಯಾ
ಅದೇನು ಕಾರಣ ತಂದೆಯೆಂದರಿದೆನಯ್ಯಾ
ಎನ್ನ ಕಾರಣ ತಂದೆಯೆಂದರಿದೆನಯ್ಯಾ
ಅರಿದರಿದು ನಿಮ್ಮ ಶರಣನು ಆಚರಿಸುವ ಆಚರಣೆಯ ಕಂಡು
ಕಣ್ಣೆರೆದೆನಯ್ಯಾ ಕೂಡಲಸಂಗಮದೇವಾ
5.01 15
A15
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಹಲಗೆಯಾರ್ಯನ ಶೂನ್ಯಸಂಪಾದನೆ 303
ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ
ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯಾ .
ಇಂದೆನ್ನ ದೇಹಕ್ಕೆ ಗ್ರಹಣವಾಯಿತ್ತು
ಇನ್ನೆಂದಿಂಗೆ ಮೋಕ್ಷವಹುದೊ ಕೂಡಲಸಂಗಮದೇವಾ
9.01 16
A16
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಲಿಂಗಲೀಲಾವಿಲಾಸ ಚಾರಿತ್ರ 9501
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ
ಇದಾವಾವ ಪರಿಯಲ್ಲಿ ಕಾಡಿಹಿತು ಮಾಯೆ.
ಈ ಮಾಯೆಯ ಕಳೆವಡೆ ಎನ್ನಳವಲ್ಲ
ನೀವೆ ಬಲ್ಲಿರಿ ಕೂಡಲಸಂಗಮದೇವಾ !
15.01 17
A17
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಒಂದು ಯೋನಿಯಲ್ಲಿ ಬಂದ ದುಃಖವ ನಾನು ಎಂದೆಂದಿಗೂ ಕಳೆಯಲಾರೆ
ಇನ್ನು ಎಂಬತ್ತುನಾಲ್ಕುಲಕ್ಷವೆಂದರೆ ನಾನಿನ್ನೇವೆನಯ್ಯಾ?
ಒಂದುವನರಿಯದ ಶಿಶು ನಾ ನೊಂದೆನಯ್ಯಾ!
ಎನ್ನ ಕಂದ ಬಾ ಎಂದು
ಕಂಬನಿಯ ತೊಡೆದೆತ್ತಿ ಆನಂದದಿಂದ ಕಣ್ದೆರೆ ಉಳಿಯುಮೇಶ್ವರಾ.
1634.06 18
A18
ಉಳಿಯುಮೇಶ್ವರಚಿಕ್ಕಣ್ಣ ಉಳಿಯುಮೇಶ್ವರಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಲಿಂಗಲೀಲಾವಿಲಾಸ ಚಾರಿತ್ರ 10320
ಗುಬ್ಬಿ ಮಲ್ಲಣ್ಣನ ಗಣಭಾಷಿತ ರತ್ನಮಾಲೆ 49
ಸಂಸಾರವೆಂಬ ಬಲೆಯಲ್ಲಿ ಸಿಲುಕಿದೆನಯ್ಯಾ
ಎನ್ನುವನು ಕಾಯಯ್ಯಾ ಕಾಯಯ್ಯಾ.
ಹುರುಳಿಲ್ಲ ! ಹುರುಳಿಲ್ಲ !
ಕೂಡಲಸಂಗಮದೇವಾ ಶಿವಧೋ ! ಶಿವಧೋ !
13.01 19
A19
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಸಂಸಾರವೆಂಬ ರಾಹುವಿನ ಅಣಲೊಳಗೆ ಇದ್ದೆನಯ್ಯಾ
ಆವಾಗ ನುಂಗೀತೆಂದರಿಯೆ ಆವಾಗ ಉಗುಳೀತೆಂದರಿಯೆನಯ್ಯಾ.
ಅದರ ಬಾಯಿಂದೆನ್ನ ತೆಗೆದು ಕಾಯಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನಾ
1054.04 20
A20
ಸಿದ್ಧರಾಮ ಕಪಿಲಸಿದ್ಧಮಲ್ಲಿಕಾರ್ಜುನಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಗುಬ್ಬಿ ಮಲ್ಲಣ್ಣನ ಗಣಭಾಷಿತ ರತ್ನಮಾಲೆ 23

ಟಿಪ್ಪಣಿ; * ಪುಟ ಸಂಖ್ಯೆವಚನ ಸಂಖ್ಯೆ

[ಮೊದಲ ಪುಟ]  12345678910ಮುಂದಿನ 10 » [ಕೊನೆ ಪುಟ]


ಸಿಕ್ಕ ಪಲಿತಾಂಶಗಳು 427 ಇದು ಪುಟ 2 ಈ ಪುಟದಲ್ಲಿ ಪಲಿತಾಂಶಗಳು 11 ರಿಂದ 20 ವರೆಗೆ