checking data baseConnected successfully! Sample Image
  •  

ವಚನ ಆಕರಗಳು (15ನೆ ಶತಮಾನ)

search:
search:
ಎನ್ನಲ್ಲಿ ಭಕ್ತಿ ಸಾಸವೆಯ ಷಡ್ಯಾಗದನಿತಿಲ್ಲ .
ಎನ್ನ ಭಕ್ತನೆಂಬರು , ಎನ್ನ ಸಮಯಾಚಾರಿಯೆಂಬರು
ನಾನೇನು ಪಾಪವ ಮಾಡಿದೆನೊ .
ಬೆಳೆಯದ ಮುನ್ನ ವೆ ಕೊಯ್ದರೆ ? ಹೇಳಯ್ಯಾ .
ಇರಿಯದ ವೀರ, ಇಲ್ಲದ ಸೊಬಗು !
ಎಲ್ಲಾ ಒಡೆಯರೂ ಏರಿಸಿ ನುಡಿವರು,
ಎನಗಿದು ವಿಧಿಯೆ , ಕೂಡಲಸಂಗಮದೇ
386.01 81
A81
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಅರಸರ ಮನೆಯಲ್ಲಿ ಅರಸಿಯಾಗಿಪ್ಪುದರಿಂದ,
ಭಕ್ತರ ಮನೆಯ ತೊತ್ತಾಗಿಪ್ಪುದು ಕರ ಲೇಸಯ್ಯಾ.
`ತಾರೌ ಅಗ್ಘವಣಿ, ನೀಡೌ ಪತ್ರೆಯ,
ಲಿಂಗಕ್ಕೆ ಬೋನವ ಹಿಡಿಯೌ ಎಂಬರು.
`ಕೂಡಲಸಂಗನ ಮಹಾಮನೆಯಲ್ಲು
ಒಕ್ಕುದನುಣೌ ತೊತ್ತೇ ಎಂಬರು
356.01 82
A82
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಎನ್ನನು ಭಕ್ತನೆಂಬರು-ಎನ್ನ ಹೊಱಹೊ೦ಪು, ಒಳಬೋಳೆತನ
ವನಱೆಯರಾಗಿ, ಎನ್ನಮಾನಾಪಮಾನವು ಶರಣರಲ್ಲಿ !
ಜಾತಿ-ವಿಜಾತಿಯೂ ಶರಣರಲ್ಲಿ! ತನುಮನಧನವೂ ಶರಣರಲ್ಲಿ!
ವಂಚನೆಯುಳ್ಳ ಡಂಭಕ ನಾನು.
ಶಿವ ಶಿವಾ! ತಲೆಯೊಡೆಯಂಗೆ
ಕಣ್ಣ ಬೈಚಿಡುವೆ,ಕೂಡಲಸಂಗನೆಂತೊಲಿವ
306.01 83
A83
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಆತ್ಮಸ್ತುತಿ ಪರನಿಂದೆಯ ಕೇಳಿಸದಿರಯ್ಯಾ, ನಿಮ್ಮ ಧರ್ಮ
ಆನು ಭಕ್ತನೆನ್ನಲ್ಲಿ ಲೇಸುಂಟೆಂದು ಪರಿಣಾಮಿಸಿದಡೆ
ನಿಮಗಾನು ದ್ರೋಹಿಯಯ್ಯಾ.
ಕೂಡಲಸಂಗಮದೇವಾ,
ನಿಮ್ಮ ಶರಣರ ಲೇಸೇ ಎನ್ನ ಲೇಸಯ್ಯಾ.
408.01 84
A84
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಮನ ಮನ ಬೆರಸಿದಲ್ಲಿ ತನು ಕರಗದಿದ್ದಡೆ,
ಸೋಂಕಿನಲ್ಲಿ ಪುಳಕಂಗಳು ಹೊರಹೊಮ್ಮದಿದ್ದಡೆ,
ಕಂಡಾಗಳಶ್ರುಜಲಂಗಳು ಸುರಿಯದಿದ್ದಡೆ,
ನುಡಿವಲ್ಲಿ ಗದ್ಗದಂಗಳು ಪೊಣ್ಮದಿದ್ದಡೆ,
ಕೂಡಲಸಂಗಮದೇವರ ಭಕ್ತಿಗಿದು ಚಿಹ್ನ
ಎನ್ನಲ್ಲಿ ಇವಿಲ್ಲಾಗಿ, ಆನು ಡಂಬಕ ಕಾಣಿರೇ.
379.01 85
A85
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಸಸಿಯ ಮೇಲೆ ಸಾಗರವರಿದಂತಾಯಿತ್ತಯ್ಯಾ, ಎನ್ನ ಭಕ್ತಿ.
ಆನಂದದಿಂದ ನಲಿನಲಿದಾಡುವೆನು.
ಆನಂದದಿಂದ ಕುಣಿಕುಣಿದಾಡುವೆನು.
ಕೂಡಲಸಂಗನ ಶರಣರು ಬಂದಡೆ,
ಉಬ್ಬಿ, ಕೊಬ್ಬಿ, ಹರುಷದಲೋಲಾಡುವೆ.
378.01 86
A86
ಬಸವಣ್ಣ ಕೂಡಲಸಂಗಮದೇವಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಮಹದೇವಯ್ಯನ ಶೂನ್ಯಸಂಪಾದನೆ 420
ಗತಿಪದಮುಕ್ತಿಯ ಬಯಸಿ ಮಾಡುವಾತ ಭಕ್ತನಲ್ಲ,
ಜೀವನೋಪಾಯಕ್ಕೆ ಬೇಡುವಾತ ಜಂಗಮವಲ್ಲ.
ಗತಿಪದ ಮುಕ್ತಿಸೂತಕವಿರಹಿತ ಭಕ್ತ,
ಹಮ್ಮು ಬಿಮ್ಮು ಗಮನನಾಸ್ತಿ ಜಂಗಮ.
ಮಾಡುವಡೆ ಭಕ್ತ ಮಾಟದೊಳಗಿಲ್ಲದಿರಬೇಕು,
ಬೇಡುವಡೆ ಜಂಗಮ ಕೊಂಬುದರೊಳಗಿಲ್ಲದಿರಬೇಕು.
ಪ್ರಾಣವಿಲ್ಲದ ಭಕ್ತ ರೂಹಿಲ್ಲದ ಜಂಗಮ,
ಉಭಯಕುಳ ಸಂದಳಿದಂದು
ಕೂಡಲಚೆನ್ನಸಂಗನಲ್ಲಿ ಭಕ್ತಜಂಗಮವೆಂಬೆ
508.03 87
A87
ಚೆನ್ನಬಸವಣ್ಣ ಕೂಡಲಚೆನ್ನಸಂಗಯ್ಯಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಭಕ್ತನ ಮಠಕ್ಕೆ ಜಂಗಮ ಬಂದು,
ಆ ಭಕ್ತ ಮಾಡಿದಂತೆ ಭಕ್ತಿಯ ಮಾಡಿಸಿಕೊಂಡು,
ಕ್ಷಮಿಸಬಲ್ಲಡೆ ಜಂಗಮ
ಆ ಕ್ಷಮೆಯೊಳಗೆ ಮಗ್ನನಾಗಬಲ್ಲಡೆ ಭಕ್ತ.
ಉಪಾಧಿಯಾಗಿ ಹೇಳಿ ಮಾಡಿಸಿಕೊಂಬನ್ನಬರ ಭೂತಪ್ರಾಣಿ:
ಬಂದ ಪರಿಯಲ್ಲಿ ಪರಿಣಾಮಿಸಬಲ್ಲಡೆ ಲಿಂಗಪ್ರಾಣಿ.
ಬೇಡಿದಲ್ಲದೆ ಮಾಡೇನೆಂಬೆನ್ನಕ್ಕರ ಫಲದಾಯಕ
246.07 88
A88
ಗಜೇಶಮಸಣಯ್ಯ ಮಹಾಲಿಂಗ ಗಜೇಶ್ವರ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ನ್ಮನಿಯ ಲೌಕಿಕದನುಸಂಧಾನವ ಪರಿಹರಿಸಲ್ಕೆ,
ತನುವಿನ ಕೊರತೆಯ ಕಳೆಯಲ್ಕೆ
ಸ್ಥಾವರವಾಯಿತ್ತು,
ಮನದ ಕೊರತೆಯ ಕಳೆಯಲ್ಕೆ
ಜಂಗಮವಾಯಿತ್ತು.
`ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ'
ಇಂತೆಂಬ ವಚನವು ಕೂಡಲಚೆನ್ನಸಂಗಯ್ಯನಲ್ಲಿ
ಸಮಯಾಚಾರಿಗಲ್ಲದೆ ಎಲ್ಲರಿಗೆಲ್ಲಿಯದೊ?
1028.03 89
A89
ಚೆನ್ನಬಸವಣ್ಣ ಕೂಡಲಚೆನ್ನಸಂಗಯ್ಯಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ
ಲಿಂಗದಲುದಯ, ಜಂಗಮದಲನುಭಾವ.
ಮತ್ತೊಂದ ಮತ್ತೊಂದನರಿಯನಯ್ಯಾ, ಶರಣ.
ಕೂಡಲಚೆನ್ನಸಂಗಯ್ಯನಲ್ಲಿ ದ್ವಿವಿಧಸಂಪನ್ನನಾಗಿ ಅಯ್ಯಾ.
103.03 90
A90
ಚೆನ್ನಬಸವಣ್ಣ ಕೂಡಲಚೆನ್ನಸಂಗಯ್ಯಾ
ಆಕರ ಗ್ರಂಥಗಳು
ಜಕ್ಕಣ್ಣನ ಏಕೋತ್ತರಶತಸ್ಥಲ

ಟಿಪ್ಪಣಿ; * ಪುಟ ಸಂಖ್ಯೆವಚನ ಸಂಖ್ಯೆ

[ಮೊದಲ ಪುಟ]  12345678910ಮುಂದಿನ 10 » [ಕೊನೆ ಪುಟ]


ಸಿಕ್ಕ ಪಲಿತಾಂಶಗಳು 427 ಇದು ಪುಟ 9 ಈ ಪುಟದಲ್ಲಿ ಪಲಿತಾಂಶಗಳು 81 ರಿಂದ 90 ವರೆಗೆ