ವಚನ ಆಕರಗಳು (15ನೆ ಶತಮಾನ)
ಹುಟ್ಟಿದೆ ಶ್ರೀಗುರುವಿನ ಹಸ್ತದಲ್ಲಿ,
ಬೆಳೆದೆನು ಅಸಂಖ್ಯಾತರ ಕರುಣದೊಳಗೆ.
ಭಾವವೆಂಬ ಹಾಲು, ಸುಜ್ಞಾನವೆಂಬ ತುಪ್ಪ,
ಪರಮಾರ್ಥವೆಂಬ ಸಕ್ಕರೆಯನಿಕ್ಕಿದರು ನೋಡಾ.
ಇಂತಪ್ಪ ತ್ರಿವಿಧಾಮೃತವನು ದಣಿಯಲೆರೆದು ಸಲಹಿದಿರೆನ್ನ.
ವಿವಾಹವ ಮಾಡಿದಿರಿ, ಸಯವಪ್ಪ ಗಂಡಂಗೆ ಕೊಟ್ಟಿರಿ,
ಕೊಟ್ಟ ಮನೆಗೆ ಕಳುಹಲೆಂದು
ಅಸಂಖ್ಯಾತರೆಲ್ಲರೂ ನೆರೆದು ಬಂದಿರಿ.
ಬಸವಣ್ಣ ಮೆಚ್ಚಲು ಒಗತನವ ಮಾಡುವೆ.
ಚೆನ್ನಮಲ್ಲಿಕಾರ್ಜುನನ ಕೈವಿಡಿದು
ನಿಮ್ಮ ತಲೆಗೆ ಹೂವ ತಹೆನಲ್ಲದೆ ಹುಲ್ಲ ತಾರೆನು.
ಅವಧರಿಸಿ, ನಿಮ್ಮಡಿಗಳೆಲ್ಲರೂ ಮರಳಿ ಬಿಯಂಗೈವುದು, ಶರಣಾರ್ಥಿ. |
426.05 |
41 A41 |
ಅಕ್ಕಮಹಾದೇವಿ | ಚೆನ್ನಮಲ್ಲಿಕಾರ್ಜುನ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಅಂಗದಾಶ್ರಯವ ಕಳೆದು ಲಿಂಗದಾಶ್ರಯವ ಮಾಡಿದ ಗುರುವೆ ಶರಣು ಶ್ರೀಗುರುಲಿಂಗವೆ ಶರಣು ಪರಮಸುಖವ ತೋರಿದೆಯಾಗಿ. ಮಹಾಘನ ಸೋಮೇಶ್ವರನ ಸಾಹಿತ್ಯವ ಮಾಡಿ ನಿಜ ನಿವಾಸದಲ್ಲಿರಿಸಿದೆಯಾಗಿ ಗುರುವೆ ಶರಣು. |
299.06 |
42 A42 |
ಅಜಗಣ್ಣ | ಮಹಾಘನ ಸೋಮೇಶ್ವರ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಹುಟ್ಟಿದ ಶಿಶು ಧರಣಿಯ ಮೇಲೆ ಬಿದ್ದಂತೆವಿಭೂತಿಯ ಪಟ್ಟವಂ ಕಟ್ಟಿ, ಲಿಂಗಸ್ವಾಯತವ ಮಾಡಿಪ್ರಸಾದದೆಣ್ಣೆ ಬೆಣ್ಣೆ ಹಾಲನೆರೆದು ಸಲಹೂದೆ ಅದು ಸದಾಚಾರ.ಆ ಮಗುವಿಂಗೆ ಈರಿಲು [ಗಾಳಿ]ಭೂತ ಸೋಂಕಿತ್ತೆಂದು ಮಾಡುವ ಭಕ್ತಂಗೆಗುರುವಿಲ್ಲ, ಲಿಂಗವಿಲ್ಲ, ಅವ ಪಂಚಮಹಾಪಾತಕ ನೋಡಾ.ಇದನರಿದಾತ ಎನ್ನ ಮ |
188.03 |
43 A43 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಯ್ಯಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಹುಟ್ಟಿದ ಮಕ್ಕಳು ಪ್ರಬುದ್ಧರಾದಲ್ಲದೆ ಲಿಂಗಸ್ವಾಯತವ ಮಾಡಬಾರದೆಂಬ ಯುಕ್ತಿಶೂನ್ಯರ ನೋಡಿರೇ. ಅಳುಪಿ ತಾಯಿ ತಂದೆ ಅವರೊಡನುಂಡರೆ ಅವರನಚ್ಚ ವ್ರತಗೇಡಿಗಳೆಂಬೆ ಕೂಡಲಚೆನ್ನಸಂಗಯ್ಯಾ. |
187.03 |
44 A44 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಯ್ಯಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಬೀದಿಯ ಬಸವಂಗೆ ದೇವಾಲಯದ ಪಶುವಿಂಗೆ ಹುಟ್ಟಿದ ಕರು, ಬಸವಗಳಪ್ಪುವೆ, ಲಿಂಗಮುದ್ರೆಯನೊತ್ತದನ್ನಕ್ಕ? ಭಕ್ತಂಗೆ ಭಕ್ತೆಗೆ ಹುಟ್ಟಿದರೆಂದರೆ ಬರಿಯ ಗುರುಕಾರುಣ್ಯದಲ್ಲಿ ಭಕ್ತರಪ್ಪರೆ, ಅಂಗದ ಮೇಲೆ ಲಿಂಗವಿಲ್ಲದನ್ನಕ್ಕ? ಅವರನೊಳಗಿಟ್ಟುಕೊಂಡು ನಡೆದರೆ ಭಕ್ತಿಹೀನರೆನಿಸಿತ್ತು, ಕೂಡಲಚೆನ್ನಸಂಗನ ವಚನ. |
186.03 |
45 A45 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಯ್ಯಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಲಿಂಗವಿಲ್ಲದೆ ನಡೆವನ, ಲಿಂಗವಿಲ್ಲದೆ ನುಡಿವನ, ಲಿಂಗವಿಲ್ಲದವನಂಗ ಸೂತಕ. ಲಿಂಗಾಂಗಿ, ಲೌಕಿಕವ ಮುಟ್ಟಲಾಗದು. ಲಿಂಗವಿಲ್ಲದೆ ಗಮಿಸಿದಡೆ ಆ ನಡೆನುಡಿ ಗೊಂಪೆ ಪಾತಕ. ಲಿಂಗವಿಲ್ಲದೆ ನುಡಿವ ಶಬ್ದವ ಕೇಳಲಾಗದು, ಶಿವಶಿವಾ! ಲಿಂಗವಿಲ್ಲದೆ ಉಗುಳು ನುಂಗಿದರೆ ಕಿಲ್ಬಿಷ, ಕೂಡಲಚೆನ್ನಸಂಗಮದೇವಾ. |
204.03 |
46 A46 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಯ್ಯಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಗುರು ಕರುಣವ ಹಡೆದುದಕ್ಕೆ ಚಿಹ್ನವಾವುದೆಂದಡೆ: ಅಂಗದ ಮೇಲೆ ಲಿಂಗಸ್ವಾಯತವಾಗಿರಬೇಕು. ಅಂಗದ ಮೇಲೆ ಲಿಂಗ ಸ್ವಾಯತವಿಲ್ಲದೆ ಬರಿದೆ ಗುರುಕರಣವಾಯಿತ್ತೆಂದಡೆ ಅದೆಂತೊ? ಲಿಂಗವಿಹೀನವಾಗಿ ಗುರುಕರುಣವುಂಟೆ? ಇಲ್ಲ. ಆ ಮಾತ ಕೇಳಲಾಗದು. ಇದು ಕಾರಣ, ಲಿಂಗಧಾರಣವುಳ್ಳುದೆ ಸದಾಚಾರ, ಇಲ್ಲದಿರೆ, ಅನಾಚಾ |
1045.07 |
47 A47 |
ತೆಲುಗೇಶಮಸಣಯ್ಯ | ತೆಲುಗೇಶ್ವರಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ ಲಿಂಗಲೀಲಾವಿಲಾಸ ಚಾರಿತ್ರ 116‖09
|
ಕಾಂಚನಕ್ಕೆ ಕೈಯಾನದಿರ್ದಡೆ ಕರಸ್ಥಲದಲ್ಲಿ ಧರಿಸುವುದಯ್ಯಾ ಶಿವಲಿಂಗವ. ಕಾಂಕ್ಷೆಯಿಲ್ಲದಿರ್ದಡೆ ಕಕ್ಷೆಯಲ್ಲಿ ಧರಿಸುವುದಯ್ಯಾ ಶಿವಲಿಂಗವ. ಅಪ್ಪಿಲ್ಲದಿರ್ದಡೆ ಉರಸೆಜ್ಜೆಯಲ್ಲಿ ಧರಿಸುವುದಯ್ಯಾ ಶಿವಲಿಂಗವ. ಅನ್ನಪಾನಾದಿಗಳಿಗೆ ಬಾಯ್ದೆರೆಯದಿರ್ದಡೆ, ಅಮಳೋಕ್ಯದಲ್ಲಿ ಧರಿಸುವುದಯ್ಯಾ ಶಿವಲಿಂಗವ. ಭಿನ್ನ |
1099.03 |
49 A49 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಯ್ಯಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಅಂಗದ ಮೇಲೆ ಲಿಂಗವಿದ್ದ ಬಳಿಕ, ಲಿಂಗಹೀನರ ಬೆರಸಲಾಗದು. ಅಂಗದ ಮೇಲೆ ಲಿಂಗವಿದ್ದ ಬಳಿಕ, ಲಿಂಗ ಮುಂತಾಗಿ ಎಲ್ಲಾ ಕ್ರೀಗಳನೂ ಗಮಿಸಬೇಕಲ್ಲದೆ, ಅಂಗ ಮುಂತಾಗಿ ಗಮನಿಸಲಾಗದು. ಲಿಂಗಸಂಬಂಧಿಯಾಗಿ ಅಂಗ ಮುಂತಾಗಿಪ್ಪವರು ಲಿಂಗಕ್ಕೆ ದೂರವಯ್ಯಾ, ನಾಗಪ್ರಿಯ ಚೆನ್ನರಾಮೇಶ್ವರಾ. |
133.09 |
50 A50 |
ಶಿವನಾಗಮಯ್ಯ | ನಾಗಪ್ರಿಯ ಚೆನ್ನರಾಮೇಶ್ವರಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಟಿಪ್ಪಣಿ; * ಪುಟ ಸಂಖ್ಯೆ ‖ ವಚನ ಸಂಖ್ಯೆ [ಮೊದಲ ಪುಟ] 1 2 3 4 5 6 7 8 9 10 ಮುಂದಿನ 10 » [ಕೊನೆ ಪುಟ]
ಸಿಕ್ಕ ಪಲಿತಾಂಶಗಳು 427 ಇದು ಪುಟ 5 ಈ ಪುಟದಲ್ಲಿ ಪಲಿತಾಂಶಗಳು 41 ರಿಂದ 50 ವರೆಗೆ |
|
|